Breaking News

ಸಹಕಾರ ಸಂಘದಿಂದ ಸಹಾಯ ಧನ ವಿತರಣೆ.

Distribution of relief funds from the cooperative society.





ಕಾರಟಗಿ: ತಾಲೂಕಿನ ಕುಂಟೋಜಿ ಗ್ರಾಮದ ಲಕ್ಷ್ಮಿ ಕ್ಯಾಂಪ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಬ್ಬಲಕ್ಷ್ಮಿ ಇವರ ಪತಿ ಚೆಕುರಿ ರಾಮರಾವ್ ಇವರು ಶುಕ್ರವಾರ ಮಧ್ಯರಾತ್ರಿ ಅನಾರೋಗ್ಯದಿಂದಾ ನಿದನರಾಗಿರುತ್ತಾರೆ , ಇವರು ಸಂಘದ ಸಕ್ರಿಯವಾಗಿ ಸದಸ್ಯರಾಗಿದ್ದು , ರಾಯಚೂರು,ಬಳ್ಳಾರಿ, ಕೊಪ್ಪಳ ಹಾಗೂ ವಿಜಯ ನಗರ ಜಿಲ್ಲಾ ಒಕ್ಕೂಟದಿಂದ ರೈತರ ಕಲ್ಯಾಣ ಸೇವಾ ಟ್ರಸ್ಟ್ ವತಿಯಿಂದ ಮರಣ ಹೊಂದಿದ ಸದಸ್ಯರ ಕುಟುಂಬಸ್ಥರಿಗೆ ಶನಿವಾರ ಬೆಳಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ 20000 ರೂ/-ನಗದು ಶವ ಸಂಸ್ಕಾರ ಪರಿಹಾರ ಧನವನ್ನು, ಸಂಘದ ವಿಸ್ತರಣಅಧಿಕಾರಿಗಳಾದ ಶ್ರೀ ದೇವೇಂದ್ರ ಇವರ ನೇತೃತ್ವದಲ್ಲಿ ಸಂಘದ ಆಡಳಿತ ಮಂಡಳಿ ಸಮ್ಮುಖದಲ್ಲಿ ವಿತರಿಸಲಾಯಿತು, ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕರು,ಮಾಜಿ ಅಧ್ಯಕ್ಷರು, ನಿರ್ದೇಶಕರು, ಸಂಘದ ಕಾರ್ಯದರ್ಶಿ ಹಾಗೂ ಸಂಘದ ಸರ್ವ ಸದಸ್ಯರು ಗ್ರಾಮದ ಗುರು-ಹಿರಿಯರು ಭಾಗಿಯಾಗಿದ್ದರು.

About Mallikarjun

Check Also

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ರಾಯಭಾರಿಗಳು – ನಾಗರಾಜ್ ಎಸ್ ಗುತ್ತೇದಾರ್

Students are ambassadors of democracy – Nagaraj S. Guttedar ಗಂಗಾವತಿ:ನಗರದ ಪ್ರತಿಷ್ಠಿತ ಸಂಕಲ್ಪ ಪಿಯು ಕಾಲೇಜಿನಲ್ಲಿ ನಡೆದ …

Leave a Reply

Your email address will not be published. Required fields are marked *