Basava Mantapa's Golden Jubilee Celebration on August 3rd

ಬೆಂಗಳೂರು:. ಪರಮಪೂಜ್ಯ ಶ್ರೀ ಮ.ನಿ.ಪ್ರ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿ ಮತ್ತು ಪರಾ ಮಹಾದೇವಿಯವರು ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು, ವಿಶ್ವ ಕಲ್ಯಾಣ ಮಿಷನ್(ರಿ) ಧಾರ್ಮಿಕ ಸಂಸ್ಥೆಯನ್ನು ಸ್ಥಾಪಿಸಿದರು. ವಿಸ್ತಾರವಾಗುತ್ತಿದ್ದ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸ್ವತಂತ್ರವಾದ ಒಂದು ಕಟ್ಟಡದ ಅವಶ್ಯಕತೆ ಬಹಳಷ್ಟಿದೆ ಎಂದು ಕಂಡುಕೊಂಡರು ಆಗ ಚಿತ್ರದುರ್ಗದಲ್ಲಿದ್ದ ಪರಮಪೂಜ್ಯ ಮಾತಾಜಿಯವರ ಪೂರ್ವಾಶ್ರಮದ ತಂದೆಯವರಾದ ಲಿಂಗೈಕ್ಯ ಶರಣ ಡಾ| ಎಸ್.ಆರ್. ಬಸಪ್ಪನವರಿಗೆ ತಮ್ಮ ಮಗಳನ್ನು ವೈದ್ಯಳನ್ನಾಗಿ ಮಾಡಿ, ಆಸ್ಪತ್ರೆ ಕಟ್ಟಿಸಿಕೊಡಬೇಕೆಂಬ ಅಪೇಕ್ಷೆಯಿಂದ, ರಾಜಾಜಿನಗರದಲ್ಲಿ ಒಂದು ಸೈಟ್ ನ್ನು ಕಾಯ್ದಿರಿಸಿದ್ದರು.

ಇದೇ ಸೈಟನ್ನು ಮಾತಾಜಿಯವರ ಪೂರ್ವಾಶ್ರಮದ ಸೋದರರಾದ ಶರಣ ಬಿ ಪ್ರಕಾಶರು ಮತ್ತು ಮಾತೋಶ್ರೀ ಶರಣೆ ಗಂಗಮ್ಮನವರು ರಾಜಾಜಿನಗರದ ಕಾರ್ಡ್ ರಸ್ತೆಯಲ್ಲಿದ್ದ ನಿವೇಶನವನ್ನು ವಿಶ್ವ ಕಲ್ಯಾಣ ಮಿಷನ್ (ರಿ) ಧಾರ್ಮಿಕ ಸಂಸ್ಥೆಗೆ ದಾನ ಮಾಡಲು ಮುಂದಾದರು ಮುಖ್ಯರಸ್ತೆಯಲ್ಲಿದ್ದ ನಿದೇಶನ ಸಿಗುತ್ತಲೇ, ಅತ್ಯಂತ ಸಂತೋಷದಿಂದ ಪ್ರಾರ್ಥನಾ ಮಂದಿರ ಮತ್ತು ಸ್ಥಿರ ಕಾರ್ಯಾಲಯದ ರೂಪುರೇಷೆ ಸಿದ್ದಪಡಿಸಿ, ಬಸವ ಮಂಟಪದ ಕಟ್ಟಡ ನಿರ್ಮಾಣ ಪ್ರಾರಂಭಿಸಿದರು ನಿರ್ಮಾಣದ ಹಂತದಲ್ಲಿದ್ದಾಗ ಪರಮಪೂಜ್ಯ ಅಪ್ಪಾಜಿಯವರು, ಪರಮಪೂಜ್ಯ ಮಾತಾಜಿಯವರು, ಪರಮಪೂಜ್ಯ ಗಂಗಾ ಮಾತಾಜಿಯವರು ಹಾಗೂ ಸಾಧಕರೆಲ್ಲ ಸೇರಿ ಮಣ್ಣು, ಕಲ್ಲು, ಮರಳು, ಗಾರೆ ಹೊತ್ತು ಬಸವ ಮಂಟಪ ಕಟ್ಟಿ ಮುಗಿಸಿದರು! 1975 ರಲ್ಲಿ ಉದ್ಘಾಟನೆಗೆ ತಯಾರಾಗಿ ನಿಂತ ಬಸವ ಮಂಟಪವನ್ನು ಪರಮಪೂಜ್ಯ ಲಿಂಗಾನಂದ ಆಪ್ಪಾಜಿ ಹಾಗೂ ಪರಮಪೂಜ್ಯ ಮಾತಾಜಿಯವರು 04-05-1976 ರ ಬಸವ ಜಯಂತಿಯಂದು ಬಸವಣ್ಣನವರ ವೇಷ ಧರಿಸಿದ್ದ, ಒಬ್ಬ ಪುಟ್ಟ ಬಾಲಕಿಯಿಂದ ಉದ್ಘಾಟನೆ ಮಾಡಿಸಿದರು ಬಸವ ಮಂಟಪ ಲೋಕಾರ್ಪಣೆಯಾದ ನಂತರ ಪರಮಪೂಜ್ಯ ಮಾತಾಜಿಯವರು 14-05-1976 ರಂದು ಇಂಗ್ಲೆಂಡ್ ಪ್ರಯಾಣ ಕೈಗೊಂಡರು. ಸಂಪ್ರದಾಯಕ್ಕಿಂತ ಸತ್ಯ ಶ್ರೇಷ್ಠ; ಸತ್ಯಕ್ಕಿಂತ ಕಲ್ಯಾಣ ಶ್ರೇಷ್ಠ ಎಂಬ ತಾತ್ವಿಕ ಘೋಷಣೆಯನ್ನು ಒಳಗೊಂಡ ಸಂಸ್ಥೆಯ ಲಾಂಛನ(ಲೋಗೊ) ಸಹ ಸಿದ್ಧವಾಯಿತು ಅಂತೂ ಗುರು ಬಸವಣ್ಣನವರ ಸಂಕಲ್ಪದಂತೆ, ಪರಮಪೂಜ್ಯ ಮಾತಾಜಿಯವರು ಲೌಕಿಕ ವೈದ್ಯರಾಗಿ ರೋಗಿಗಳಿಗೆ ಮಾತ್ರೆ, ಇಂಜಕ್ಷನ್ ಕೊಡುವ ಬದಲಿಗೆ, ಭಕ್ತರ ಮತ್ತು ಸಂಸಾರದಲ್ಲಿ ನೊಂದು ಬೆಂದವರ ಕಷ್ಟಗಳನ್ನು ಪರಿಹರಿಸಲು ಬಂದ, ಭವರೋಗ ವೈದ್ಯರಾಗಿ, ಸಮಾಜಕ್ಕೆ, ಮುಖ್ಯವಾಗಿ ಸ್ವೀಕುಲಕ್ಕೆ ಮಾದರಿಯಾಗಿ ಶೋಧಿಸಿದ್ದು ಒಂದು ವಿಶೇಷ!.
ಧರ್ಮ ಸಂಸ್ಕಾರ ಕೊಡಲು ಮತ್ತು ಬಲವಾದ ಸಮಾಜ ಸಂಘಟನೆಗಾಗಿ ಕ್ರೈಸ್ತರಿಗೆ ಚರ್ಚ್. ಮುಸಲ್ಮಾನರಿಗೆ ಮಸೀದಿ, ಒಬ್ಬರಿಗೆ ಗುರುದ್ವಾರ, ಜೈನರಿಗೆ ಬಸದಿ, ಹಿಂದೂಗಳಿಗೆ ಗುಡಿಗುಂಡಾರಗಳಿದ್ದಂತೆ, ಲಿಂಗಾಯತ ಧರ್ಮ ಮತ್ತು ಸಮಾಜ ಸಂಘಟನೆಗೆ ಧರ್ಮಗುರು ಬಸವಣ್ಣನವರ ಹೆಸರಿನಲ್ಲಿ ಬಸವ ಮಂಟಪಗಳಿರಬೇಕೆಂದು ಸಂಕಲ್ಪಿಸಿದರು. ಈ ಸಂಕಲ್ಪದ ಫಲವಾಗಿಯೇ ಬೆಂಗಳೂರಿನ ರಾಜಾಜಿನಗರದಲ್ಲಿ ಮೊಟ್ಟ ಮೊದಲ ಬಸವ ಮಂಟಪ ಉದ್ಘಾಟನೆಯಾಗಿ ತಾಯಿಬೇರಿನಂತೆ, ಬಿತ್ತನೆ ಬೀಜದಂತೆ ಧರ್ಮ ಪ್ರಚಾರದ ಕಾರ್ಯಾರಂಭದೊಂದಿಗೆ ಇತರ ಧಾರ್ಮಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಮಾಡುವ ಯೋಜನೆಗಳನ್ನು ರೂಪಿಸಲಾಯಿತು. ಇದರ ಯಶಸ್ಸಿನ ಪರಿಣಾಮವಾಗಿ ಇಂದು, ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ನವರೇಪಲಿ ಮುಂತಾದ ಕಡೆಯಲೆಲ್ಲ ಹಲವು ಬಸವ ಮಂಟಪಗಳಾಗಿ ಧಾರ್ಮಿಕ ಚಟುವಟಿಕೆಗಳಾದ ವಾರದ ಸಾಮೂಹಿಕ ಪ್ರಾರ್ಥನೆ, ಪ್ರವಚನ, ದಾಸೋಹ, ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಚಿಂತನ ಗೋಷ್ಠಿ, ಬಸವಾದಿ ಶರಣರ ಜಯಂತಿ ಮತ್ತು ಸಂಸ್ಕರಣೆಯ ಕಾರ್ಯಕ್ರಮಗಳಲ್ಲದೆ ಬಸವತತ್ವಾಧಾರಿತ ನಾಮಕರಣ, ಮದುವೆ, ಇಷ್ಟಲಿಂಗ ದೀಕ್ಷೆ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತಿದ್ದು, ಧರ್ಮಸಂಸ್ಕಾರ ಮತ್ತು ರಾಷ್ಟ್ರೀಯ ಬಸವ ದಳಗಳ ಸಹಯೋಗದೊಂದಿಗೆ ಸಮಾಜ ಸಂಘಟನೆಗೆ ಸಾಕ್ಷಿಯಾಗಿದೆ.
ಧನ ಸಹಾಯಕ್ಕೆ ಮನವಿ : ಇಂದಿನ ಬೆಲೆ ಏರಿಕೆಯಲ್ಲಿ ಅಪಾರವಾದ ಖರ್ಚುವೆಚ್ಚಗಳು ಬರುತ್ತವೆ ಮೇಲಾಗಿ 50 ವರ್ಷಗಳಷ್ಟು ಹಳೆಯದಾದ ಕಟ್ಟಡವನ್ನು ನವೀಕರಿಸಬೇಕಾದ ಅಗತ್ಯ ಬಹಳಷ್ಟಿದೆ ಈ ಕಾರಣಕ್ಕಾಗಿ ಇದೇ 2025 ರ ಆಗಸ್ಟ್, 03 ರಂದು ಬಸವ ಮಂಟಪದ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ. , ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರುತ್ತೇನೆ.

–ಪರಮ ಪೂಜ್ಯ ಶ್ರೀ ಮ.ನಿ.ಪ್ರ ಮಹಾಜಗದ್ಗುರು ಮಾತೆಗಂಗಾದೇವಿ, ಪೀಠಾಧ್ಯಕ್ಷ, ಬಸವಧರ್ಮಪೀಠ, ಕೂಡಲಸಂಗಮ