Breaking News

ಕಳ್ಳ ಹೊಕ್ಕ ಮನೆ ಉಳಿಯಬಹುದು ಕೊಳ್ಳಿ ಹೊಕ್ಕ ಮನೆ ಉಳಿಯಲಾರದು : ಶರಣಬಸಪ್ಪ ದಾನಕೈ

A house entered by a thief may survive, but a house entered by a thief cannot survive: Sharanabasappa Danakai

ಜಾಹೀರಾತು

ಕುಕನೂರ : ಕಳ್ಳ ಹೊಕ್ಕ ಮನೆ ಉಳಿಯಬಹುದು ಆದರೆ ಕೋಳ್ಳಿ ಹೋಕ್ಕ ಮನೆ ಉಳಿಯಲಾರದು ಸರಾಯಿ ಮದ್ಯ ಇದು ಕೋಳ್ಳಿ ಇದ್ದಂತೆ ಆದ್ದರಿಂದ ಮದ್ಯಪಾನ ಪ್ರೀಯರು ಇದರಿಂದ ದೂರವಿರಬೇಕು ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ದೀಪ ಬೆಳಗಿಸಿ ಮಾತನಾಡಿದರು. ದುಷ್ಟಚಟಗಳಿಂದ ದೂರವಿದ್ದಾಗ ನೆಮ್ಮದಿ ಕಾಣುವದಕ್ಕೆ ಸಾದ್ಯ ಎಂದು ಪಿಡಿಓ ವೀರನಗೌಡ ಚನ್ನನಗೌಡ್ರ ಅವರು ಮೈಲಾರಲಿಂಗೇಶ್ವರ ದೇವಸ್ಥಾನ ತಳಕಲ್ಲ ಗ್ರಾಮದಲ್ಲಿ ನವಜೀವನೋತ್ಸವ ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯವರಿಗೆ ಸಲಹೆ ನೀಡಿದರು. ಮದ್ಯವ್ಯಸನಿಗಳು ಮೋಜು ಮಸ್ತಿಗಾಗಿ ಕುಡಿದು ನಂತರ ಚಟಕ್ಕೆ ದಾಸರಾಗಿ ಚಟ್ಟ ಕಟ್ಟಿ ಅವರ ಬದುಕು ಕಗ್ಗತ್ತಲಾಗಿ ಅವರ ಕುಟುಂಬ ಬೀದಿಪಾಲಾಗಿ ಹೋಗುತ್ತದೆ ಆದ್ದರಿಂದ ಜಾಗೃತಿವಹಿಸಬೇಕು ಎಂದು ಜನಜಾಗೃತಿ ಸಮಿತಿ ಸದಸ್ಯ ವೀರಣ್ಣ ನಿಂಗೋಜಿ ಅವರು ಮಾತನಾಡಿದರು. ಕುಟುಂಬದಲ್ಲಿ ಮದ್ಯಮಾರಟ ಮಾಡುವ ಸಮಯದಲ್ಲಿ ವಿದ್ಯಾವಂತ ಮಹಿಳೆಯರು ಸಿಲುಕಿ ಕೋರ್ಟ ಕಛೇರಿ ಅಲೆದಾಡುವ ಪ್ರಸಂಗ ಜರುಗಿವೆ ಇದರಿಂದ ಹೊರಬರಲಾರದೆ ಜೀವನದಲ್ಲಿ ಜಿಗುಪ್ಸೆಹೊಂದಿ ತೊಂದರೆ ಅನುಭವಿಸುತ್ತದ್ದಾರೆ ಆದ್ದರಿಂದ ಜಾಗೃತರಾಬೇಕು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯೆ ಸಾವಿತ್ರಿ ಗೋಲ್ಲರ ಅವರು ಮಾತನಾಡಿದರು. ಜೀವನದ ಬದುಕಿನಲ್ಲಿ ಬದಲಾವಣೆ ಪರ್ವ ಜರುಗಿದಾಗ ಹೊಸ ಬದುಕು ನಿರ್ಮಿಸಲು ಸಾದ್ಯ ಎಂದು ಜಿಲ್ಲಾ ಜನಜಾಗೃತಿ ಸಮತಿ ಸದಸ್ಯ ಕರಬಸಯ್ಯ ಬಿನ್ನಾಳ ಅವರು ಮಾತನಾಡಿದರು.ತಳಕಲ್ಲ ನವಜೀವನ ಸಮತಿ ಅಧ್ಯಕ್ಷ ಷಣ್ಮುಖಯ್ಯ ಅವರು ಅದ್ಯಕ್ಷತೆ ವಹಿಸಿ ಮಾತನಾಡಿ ನಮಗೆಲ್ಲರಿಗೂ ಈ ಯೋಜನೆಯಲ್ಲಿ ಗೌರವ ಸ್ಥಾನ ಸಿಗುವದಕ್ಕೆ ಸಾದ್ಯವಾಗಿತು ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.. ಈ ವೇಳೆ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಪ್ರಕಾಶ್ ರಾವ್ , ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ನಾಗೇಶ್ ವಾಯ್ ಎ , ಯಲಬುರ್ಗಾ ಯೋಜನಾದಿಕಾರಿ ಸತೀಶ ಜಿ, ಮುಖಂಡರಾದ ಲಿಂಬನಗೌಡ ಪೋಲಿಸ್ ಪಾಟೀಲ, ಮೇಲ್ವಿಚಾರಕ ಶಿವಪ್ಪ ಪೂಜಾರ, ಸೇವಾಪ್ರತಿನಿಧಿಗಳಾದ ಸುಮಂಗಲಾ,ನೀಲಮ್ಮ,ಸುನಂದಾ ಹಾಗು ಉಡಚಮ್ಮದೇವಿ ನವ ಜೀವನ ಸಮಿತಿ ತಳಕಲ್ಲ ಸಮಿತಿಯ ಸರ್ವ ಪದಾಧಿಕಾರಿಗಳು, ನವಜೀವನ ಪೋಷಕರು ಭಾಗವಹಿಸಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.