Golden Jubilee Logo of Bharatiya Bal Vidyalaya Released by Virupakshappa Singana
ಗಂಗಾವತಿ: ತಾಲೂಕಿನ ಪ್ರಗತಿನಗರದ ಭಾರತೀಯ ಬಾಲ ವಿದ್ಯಾಲಯದಲ್ಲಿ ಫೆಬ್ರವರಿ-೦೮ ಮತ್ತು ೦೯ ಎರಡು ದಿನಗಳ ಕಾಲ ನಡೆಯುವ ಸುವರ್ಣ ಮಹೋತ್ಸವದ ಲೋಗೋ ವನ್ನು ಫೆಬ್ರವರಿ-೦೨ ರವಿವಾರ ಬಿಡುಗಡೆ ಮಾಡಲಾಯಿತು.
ಈ ಲೋಗೊ ಬಿಡುಗಡೆ ಮಾಡಿದ ಸಂಸ್ಥೆಯ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ಫೆಬ್ರವರಿ-೮ ಮತ್ತು ೯ ಎರಡು ದಿನಗಳು ನಡೆಯುವ ಸುವರ್ಣ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಆಚರಿಸೋಣ, ಎಲ್ಲಾ ಹಿರಿಯ ಗುರುಗಳು, ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.
ಈ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಸುಬ್ಬರಾಜು, ಸತೀಶ, ವಿರೇಶ ಹಣವಾಳ, ಶ್ರೀಕಾಂತ ಮರಳಿ, ಮುಖ್ಯ ಗುರುಗಳಾದ ಹೇಮಂತರಾಜ ಕಲ್ಮಂಗಿ ಉಪಸ್ಥಿತರಿದ್ದರು.