Breaking News

ಕೆರೆ ಅಭಿವೃದ್ಧಿಗೆ ಲಂಚ, ಆರ್ ಎಫ್‌ ಒ ಲೋಕಾಯುಕ್ತ ಬಲೆಗೆ.

Bribe for lake development, RFO Lokayukta trap.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು : ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಪಡಿಸಲು ಲಂಚ ಕೇಳಿದ ಆರ್‌ಎಫ್‌ಒ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ. ಮಲೆಮಹದೇಶ್ವರ ವನ್ಯಜೀವಿಧಾಮದ ಕೌದಳ್ಳಿ ಆರ್‌ಎಫ್‌ಒ ಕಾಂತರಾಜ್ ಚೌಹಾಣ್ ಲಂಚ ಕೇಳಿದ ಆರೋಪಿ.

ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ ರೋಡ್ ಅರಣ. ಪ್ರದೇಶ ವ್ಯಾ.ಪಿಯ ಮೊರನೂರು ಹುಣಸೆ ಮರಬಾವಿಯ ಸಮೀಪ 10 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಲ್ಲಿಸಿ, ಅನುಮೋದನೆ ಪಡೆಯಲಾಗಿತ್ತು. ಆದರೆ, ವಲಯ ಅರಣ್ಯಾಧಿಕಾರಿ ಕಾಂತರಾಜ್ ಚೌಹಾಣ್‌ ಕಾಮಗಾರಿ ನಡೆಸಬೇಕಾದರೆ ತನಗೆ 80 ಸಾವಿರ ರೂ. ನೀಡಬೇಕು. ಇಲ್ಲದಿದ್ದರೆ, ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತಮ್ಮ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಗ್ರಾ.ಪಂ. * ಸದಸ್ಯ ಜೋಸೆಫ್ ಆಲ್ಬಗನ್ ದೂರು ನೀಡಿದ್ದರು.

ಜೋಸೆಫ್‌ ಆಳ್ವಗನ್ ಚಾಮರಾಜನಗರ ಲೋಕಾಯುಕ್ತ ಕಚೇರಿಗೆ ದೂರು ನೀಡುವ ವೇಳೆ, ಈಗಾಗಲೇ ವಲಯ ಅರಣ್ಯಾಧಿಕಾರಿಗೆ ಮುಂಗಡ ಹಣವಾಗಿ 20 ಸಾವಿರ ರೂ. ನೀಡಿರುವುದಾಗಿಯೂ ಮಾಹಿತಿ ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಉಳಿದ 60 ಸಾವಿರ ರೂ ನಗದು ಹಣ ನೀಡುವಾಗ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ .

About Mallikarjun

Check Also

ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ, ದಿ, 25.09.25 ರಂದು  ಬೃಹತ್ ಪ್ರತಿಭಟನೆ ನೆಡೆಸಲು ತೀರ್ಮಾನ.

Valmiki Samaj's preliminary meeting, The, decided to hold a massive protest on 25.09.25. ಗಂಗಾವತಿ. ನಗರಸಭೆ …

Leave a Reply

Your email address will not be published. Required fields are marked *