ಮುತ್ತಾಳ ಕ್ರಾಸ್ ಬಳಿ ರಸ್ತೆ ಅಪಘಾತ : ಓರ್ವ ವ್ಯಕ್ತಿ ಮೃತ,,

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Road accident near Muttala Cross: One person died.

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,

ಕೊಪ್ಪಳ : ಕುಕನೂರು ತಾಲೂಕಿನ ಶಿರೂರು ಮುತ್ತಾಳ ಕ್ರಾಸ್ ಬಳಿ ಬಸ್ ಹಾಗೂ ದ್ವಿ ಚಕ್ರ ವಾಹನ ಮುಖಾ ಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಹಿಂಬದಿ ಸವಾರ ಗಂಭೀರ ಗಾಯಗೊಂಡಿದ್ದಾನೆ.

ಕುಕನೂರು ಮಂಗಳೂರ ರಸ್ತೆಯ ಮುತ್ತಾಳ ಕ್ರಾಸ್ ಬಳಿ ಈ ಘಟನೆ ಜರುಗಿದ್ದು, ಕುಕನೂರು ಡಿಪೋಗೆ ಸೇರಿದ ಬಸ್ ಇದಾಗಿದ್ದು ಮಂಗಳೂರಿನಿಂದ ಕುಕನೂರು ಕಡೆಗೆ ಬರುತ್ತಿದ್ದ ಬಸ್ ಹಾಗೂ ಕುಕನೂರು ಕಡೆಯಿಂದ ಮಂಗಳೂರು ಕಡೆಗೆ ಹೊರಟಿದ್ದ ದ್ವಿ ಚಕ್ರ ವಾಹನ ಮುಖಾ ಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ನಿಟ್ಟಾಲಿ ಗ್ರಾಮದ ನಿಂಗಪ್ಪ(45) ಗೂಳರಡ್ಡಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂಬದಿ ಸವಾರ ಕಾರ್ತಿಕ (19) ಇಟಗಿ ಗಂಭೀರ ಗಾಯಗೊಂಡಿದ್ದು ಕುಕನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನಾ ಸ್ಥಳಕ್ಕೆ ಕುಕನೂರು ಠಾಣಾ ಪಿಎಸ್ಐ ಟಿ.ಗುರುರಾಜ ಭೇಟಿ ನೀಡಿ ಪರೀಶಿಲನೆ ನಡೆಸಿದರು ಎನ್ನಲಾಗಿದೆ. ಈ ಕುರಿತು ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Total Views: 0
Share This Article