Breaking News

ಬಾರಿ ಕುತೂಹಲ ಮೂಡಿಸಿದ ಚಿತ್ರದ ಟೀಸರ್ ದಾರಿ ತಪ್ಪಿದ ಮಕ್ಕಳು ಕಿರು ಚಿತ್ರ ನಾಳೆ ರಿಲೀಸ್.

The teaser of the film, which has created a lot of interest, will be released tomorrow

ಜಾಹೀರಾತು

ಮಾನ್ವಿ : ರಾಯಚೂರಿನಲ್ಲಿ ಸಾಕಷ್ಟು ಜನ ಪ್ರತಿಭವಂತ ಕಲಾವಿದರು ಇದ್ದಾರೆ ಆದರೆ ಕಲಾವಿದರಿಗೆ ಸರಿಯಾದ ವೇದಿಕೆ ಸಿಗದೇ ಇರುವುದರಿಂದ ಹಲವಾರು ಕಲಾವಿದರು ಎಲೆ ಮರಿ ಕಾಯಿಯಂತೆ ಮರೆಯಾಗುತ್ತಿದ್ದಾರೆ, ಉತ್ತರ ಕರ್ನಾಟಕದ ಹಲವಾರು ಕಲಾವಿದರು ಚಿತ್ರರಂಗದ ಮುಖ್ಯ ವಾಹಿನಿಗೆ ಹೋಗುವಲ್ಲಿ ವಿಫಲರಾಗುತ್ತಿದ್ದಾರೆ, ಚಿತ್ರರಂಗ ಅನ್ನುವುದು ಸಾಗರದ ಅಲೆಗಳಿದ್ದಂತೆ ಚಿತ್ರವು ಎಲ್ಲರನ್ನೂ ಕೈಬಿಸಿ ಕರೆಯುತ್ತದೆ ಕಲಾವಿದರನ್ನು ಮುಖ್ಯವಾಹಿನಿಗೆ ತೆಗೆದುಕೊಂಡು ಹೋಗುವಲ್ಲಿ ನೂರಾರು ಅಡ್ಡಿ ಆತಂಕಗಳು ಎದುರಾಗುತ್ತವೆ, ಉತ್ತರ ಕರ್ನಾಟಕದ ಹಲವಾರು ಕಲಾವಿದರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು ಮತ್ತು ರಾಜಕೀಯ ವ್ಯಕ್ತಿಗಳು ಮತ್ತು ಸರ್ಕಾರಗಳು ಮತ್ತು ಅಧಿಕಾರಿಗಳು ಕಲಾವಿದರ ಕಲೆಯನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತೆರಳಲು ಪ್ರೋತ್ಸಾಹಿಸಬೇಕು, ಆದರೆ ನಮ್ಮ ರಾಯಚೂರಿನ ರಾಜಕೀಯ ಹಿತಾಸಕ್ತಿ ವ್ಯಕ್ತಿಗಳು,ಅಧಿಕಾರಿಗಳು ಕಲಾವಿದರನ್ನು ಪ್ರೋತ್ಸಾಹಿಸುವಲ್ಲಿ ವಿಫಲರಾಗುತ್ತಿದ್ದಾರೆ ಇದರಿಂದಾಗಿ ನೂರಾರು ಕಾಲವಿದರು ಎಲೆ ಮರಿ ಕಾಯಂತೆ ಇದ್ದಾರೆ.

ರಾಯಚೂರಿನ ಪ್ರತಿಭಾವಂತ ಕಲಾವಿದರು,ವಕೀಲರು ಹಾಗೂ ಪತ್ರಕರ್ತರಾದ ಹನುಮಂತ ಬ್ಯಾಗವಾಟ ಅವರು ಈಗಾಗಲೇ ನಟಿಸಿ,ನಿರ್ದೇಶಿಸಿ, ನಿರ್ಮಿಸಿರುವ ಕಿರುಚಿತ್ರ ರೈತನ ಧ್ವನಿ ಎನ್ನುವ ಕಿರು ಚಿತ್ರವು ರಾಜ್ಯದ್ಯಂತ ಯೂ ಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆಗಳು, ಪ್ರಶಾಂಶಗಳು ಬಂದವು, ಈಗ ಮತ್ತೊಮ್ಮೆ ರಾಯಚೂರಿನ ಪ್ರತಿಭಾವಂತ ಕಲಾವಿದರನ್ನು ಒಂದೆಡೆ ಸೇರಿಸಿ ದಾರಿ ತಪ್ಪಿದ ಮಕ್ಕಳು (ಹೆತ್ತವರ ಬದುಕು ನರಕ ) ಎನ್ನುವ ಎರಡನೇ ಕಿರು ಚಿತ್ರವನ್ನು ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ಚಿತ್ರವಾಗಿದ್ದು, ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಹಲವಾರು ಜನರು ಒಪ್ಪಿಕೊಂಡು ಟೀಸರ್ ಉತ್ತಮವಾಗಿ ಮೂಡಿ ಬಂದಿದೆ, ಇನ್ನೂ ಸಿನಿಮಾ ಯಾವ ರೀತಿ ಇದೆ ಎನ್ನುವ ಕುತೂಹಲ ಜನರಲ್ಲಿ ಮನೆ ಮಾಡಿದೆ.

ಪ್ರಸ್ತುತ ದಿನಮಾನದ ಅಂಶಗಳನ್ನು ಇಟ್ಟುಕೊಂಡು ಸಾಮಾಜಿಕ ಸಂದೇಶ ಇರುವ ಈ ಚಿತ್ರವು ದಿನನಿತ್ಯದಲ್ಲಿ ಸಾಕಷ್ಟು ಬಡತನದಲ್ಲಿ ಬಂದ ಕುಟುಂಬಗಳ ನೋವು ನಲಿವುಗಳು, ಪ್ರಸ್ತುತ ದಿನದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಗಮನ ಕೊಡದೆ, ತಮ್ಮ ಶಿಕ್ಷಣದ ಭವಿಷ್ಯಕ್ಕಾಗಿ ಹಗಲು ರಾತ್ರಿ ಕನಸು ಕಾಣುವ ತಂದೆ ತಾಯಿಗಳಿಗೆ ಅವರ ಕನಸನ್ನು ನನಸು ಮಾಡುವಲ್ಲಿ ಇಂದಿನ ಯುವ ಪೀಳಿಗೆಯೂ ವಿಫಲರಾಗುತ್ತಿದ್ದಾರೆ, ಕಾರಣ ಅವರು ಮದ್ಯಪಾನ, ಧೂಮಪಾನ ಅಂತ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಅದರಿಂದ ಶಿಕ್ಷಣ ವಂಚಿತರಾಗುತ್ತಿದ್ದಾರೆ ಈ ಅಂಶಗಳನ್ನು ಇಟ್ಟುಕೊಂಡು ಈ ಕಿರು ಚಿತ್ರವು ಅತ್ಯುತ್ತಮವಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಕಲಾವಿದರು ದೇವದುರ್ಗ ಭಾಗದ ಶರಣೆಗೌಡ ಮರ್ಚಟಾಳ್, ಲಿಂಗಸೂರ್ ಭಾಗದ ಲಲಿತಮ್ಮ ಶೆಟ್ಟಿ, ಶ್ರೇಯ ಶೆಟ್ಟಿ, ಮಸ್ಕಿ ಭಾಗದ ಶರಣಬಸವ ಗುಗೆಬಾಳ್, ಮಾನ್ವಿ ಭಾಗದ ಶಿವಶಂಕರ ಹಿರೇಕೊಟ್ನೆಕಲ್ ಯಲ್ಲಾಲಿಂಗ ಸಲಾಪುರ್,ಅಭಿನಯಿಸಿದ್ದಾರೆ. ಈ ಚಿತ್ರದ ಛಾಯಾಗ್ರಹಕಣ ಬಸವರಾಜ್ ಕನ್ನಾರಿ ಮಾಡಿದ್ದು, ಚಿತ್ರದ ಸಂಗೀತ ಮತ್ತು ಸಂಕಲನ ಸಾಜಿತ್ ಸಿಂಧನೂರ್, ಬಿ ಆರ್ ಶಾಮೀದ್ ಕಂದಗಲ್ ಸಿಂದನೂರ್ ಮಾಡಿದ್ದಾರೆ.

ಈ ಚಿತ್ರವು ನಾಳೆ 12 ನೇ ತಾರೀಕಿಗೆ ದಸರಾ ಹಬ್ಬದ ಪ್ರಯುಕ್ತ ವಿಜಯದಶಮಿ ಅಂದು bhimanaada27 ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಸಾಯಂಕಾಲ 5:45ಕ್ಕೆ ಬಿಡುಗಡೆಯಾಗಲಿದೆ. ಸಾರ್ವಜನಿಕರು ಈ ಚಿತ್ರವನ್ನು ವೀಕ್ಷಣೆ ಮಾಡಲು ಚಿತ್ರ ತಂಡ ಹಾಗೂ ಪತ್ರಕರ್ತ ಸ್ನೇಹಿತರು ಹಾಗೂ ಗೆಳೆಯರ ಬಳಗ ಕೋರಲಾಗಿದೆ.

ರಾಯಚೂರಿನ ರಾಜಕೀಯ ವ್ಯಕ್ತಿಗಳು ಅಧಿಕಾರಿಗಳು ಇಂತಹ ಕಲಾವಿದರನ್ನು ಮುಖ್ಯ ವೇದಿಕೆಗೆ ಕಳಿಸಲು ಪ್ರೋತ್ಸಾಹಿಸಬೇಕು

ಈ ಚಿತ್ರರಂಗ ಎನ್ನುವುದು ಯುವಕರನ್ನ ಯುವತಿಯರನ್ನ ತನ್ನತ್ರ ಸದಾ ಸೆಳೆಯುತ್ತಿರುತ್ತದೆ ನೂರಾರು ಆಸೆಗಳನ್ನು ಹೊತ್ತುಕೊಂಡು ಬಂದಿರುವ ಯುವಕರು ಯುವತಿಯರು ಚಿತ್ರಗಳಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಹಗಲು ರಾತ್ರಿ ಕಷ್ಟಪಟ್ಟು ಚಿತ್ರರಂಗಕ್ಕೆ ಬರುತ್ತಾರೆ, ಆದರೆ ಎಷ್ಟು ಯುವಕರಿಗೆ ಯುವತಿಯರಿಗೆ ಅವಕಾಶಗಳಿಂದ ವಂಚಿತರಾಗಿದ್ದು ಸಹ ನಿದರ್ಶನಗಳಿವೆ, ಆದರೆ ಕನ್ನಡ ಚಿತ್ರರಂಗದಲ್ಲಿ ಕಲ್ಯಾಣ ಕರ್ನಾಟಕವನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ದುರಂತ ಈ ಭಾಗದಲ್ಲಿ ಸಾಕಷ್ಟು ಕಲಾವಿದರು ಇದ್ದರೂ ಸಹ ಅವರನ್ನ ಮುಖ್ಯ ವಾಹಿನಿಗೆ ತರುವಲ್ಲಿ ವಿಫಲರಾಗುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ, ಈ ಚಿತ್ರರಂಗದ ಬೆನ್ನಟ್ಟಿ ಈಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಹಲವಾರು ಯುವಕ ಯುವತಿಯರು ತಮ್ಮ ಅಭಿನಯದಲ್ಲಿ ಕಿರು ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ ಅದರಲ್ಲಿ ಸಹ ಹಲವಾರು ಜನರು ಯಶಸ್ಸನ್ನು ಕೂಡ ಸಾಧಿಸಿದ್ದಾರೆ.

About Mallikarjun

Check Also

ಹೃದಯಾಘಾತದಿಂದ ಸುಮಿತ್ರಾ ಹೂಗಾರ ನಿಧನ

Sumitra Hugara passed away due to heart attack ಗಂಗಾವತಿ: ಸ್ಥಳೀಯ ಎಲ್ ಐಸಿ ಉಪ ವ್ಯವಸ್ಥಾಪಕರಾದ ವಿಶ್ವನಾಥ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.