Breaking News

ಮಹಾಮಾಯ ನಗರದಲ್ಲಿ : ನಾಗದೇವತೆ ಮೂರ್ತಿ ಪ್ರತಿಷ್ಠಾಪನೆ,

In Mahamaya Nagar: Installation of Nagadevata idol,

ಜಾಹೀರಾತು

ಕೊಪ್ಪಳ : ಕುಕನೂರು ಪಟ್ಟಣದ ಮಹಾಮಾಯ ನಗರದ ನಿವಾಸಿಗಳು ನೂತನವಾಗಿ ನಿರ್ಮಿಸಿದ ಬನ್ನಿಕಟ್ಟೆ ಹಾಗೂ ನೂತನ ನಾಗದೇವತೆ ಮೂರ್ತಿಯ ಪ್ರತಿಷ್ಠಾಪನೆಯ ರವಿವಾರದಂದು ಬೆಳಗ್ಗೆ ನಾಲ್ಕರಿಂದ ಆರು ಗಂಟೆಯ ಒಳಗೆ, ಬ್ರಾಹ್ಮಿ ಮುಹೂರ್ತದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸ್ಥಳೀಯ ಅನ್ನದಾನೀಶ್ವರ ಮಠದ ಮಹಾದೇವ ಸ್ವಾಮಿಜೀಗಳು ಉಪಸ್ಥಿತಿಯಲ್ಲಿ ಯಲಬುರ್ಗಾದ ಧರಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮವು ದ್ಯಾಂಪುರ ವೃತ್ತದಲ್ಲಿರುವ ಮಂಜುನಾಥ ದೇವಸ್ಥಾನದಿಂದ ಮಹಾಮಾಯ ನಗರದ ಬನ್ನಿಕಟ್ಟಿಯವರೆಗೆ ಡೊಳ್ಳು, ಭಜನೆ, ಸುಮಂಗಲೆಯರ ಕುಂಭದ ಮೆರವಣಿಗೆಯೊಂದಿಗೆ ನಾಗದೇವತೆ ಮೂರ್ತಿಯು ಸಾಗಿ ಬರಲಿದೆ.

ಪ್ರತಿಮೆಯ ವಸ್ತ್ರವಾಸ ಕೂಡ ನಡೆಯುವುದು. ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗುವುದು. ಈ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ನಗರ ನಿವಾಸಿಗಳು ಭಾಗಿಯಾಗಲು ಮಹಾಮಾಯಾನಗರದ ನಿವಾಸಿಗಳ ಪರವಾಗಿ ಬಸವರಾಜ ಉಪ್ಪಾರ ಕೋರಿದ್ದಾರೆ.

About Mallikarjun

Check Also

ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಿದ ನರೇಗಾ ನೌಕರರು

NREGA employees have started an indefinite non-cooperation movement by stopping work. 6 ತಿಂಗಳ ಬಾಕಿ ವೇತನ …

Leave a Reply

Your email address will not be published. Required fields are marked *