Breaking News

ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ-ಆಶಾ ಜ್ಯೋತಿ

IMG 20240709 WA0241 300x225

ಕಂಪ್ಲಿ, ಮಂಗಳವಾರ ಜೂನ್ 09: ತಾಲೂಕಿನ ಜಾವುಕು ಗ್ರಾಮದ ಐದು ಸರಕಾರಿ ಶಾಲೆಯಲ್ಲಿ ಬ್ಯಾಗ ಮತ್ತು ನೊಟ್ ಪುಸ್ತಕ ವಿತರಿಸಲಾಯಿತು.
ಅಂದರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಜನಪುರ,ಸರ್ಕಾರಿ ಪ್ರೌಢಶಾಲೆ ಜವುಕು,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜವುಕು, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ರೇಗುಲೇಟರ್ ಶಾಲೆ ಹೊಸ ಜವುಕು) ಕೊನೆಯದಾಗಿ ಪಟ್ಟಣ ಸರಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು #ಆಶಾಜ್ಯೋತಿ ಸ್ವಯಂಸೇವಕರ ತಂಡದಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸಮೀರ್ ಬಂಡಿಹರ್ಲಾಪುರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ಸತತವಾಗಿ ಪ್ರಯತ್ನಿಸಿ ಕಲಿಯಬೇಕಾಗಿದೆ ಮತ್ತು ಆಶಾಜ್ಯೋತಿ ತಂಡವು ನಿರ್ಗತಿಕ ಬಡವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ಪಲಡಗು ವಂಶಿ ಕೃಷ್ಣ ಸರ್ ಮತ್ತು ಶ್ರೀಮತಿ ಪಲಡಗು, ಶ್ರೀಮತಿ ಭಾರ್ಗವಿ, ಶ್ರೀಮತಿ ಪದ್ಮಿನಿ ಮೇಡಂ, ಶ್ರೀ ವೀರ್ ಮಾಚೇನೇನಿ ರಾಧೆ ಸ್ಯಾಮ್ ಮತ್ತು ಶ್ರೀಮತಿ ಮಮತಾ ಮೇಡಂ ಗಂಗಾವತಿ ಅವರ ಅನುಪಸ್ಥಿತಿಯಲ್ಲಿ ಅವರನ್ನು ಮತ್ತು ಅವರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿ, ಖುಷಿಯಿಂದ ಕೊಡುಗೆಗಳನ್ನು ನೀಡಲಾಯಿತು.

ಜಾಹೀರಾತು

ರುವಾರಿ ಆಗಿ ಶ್ರೀ ಸುಗಸಾನಿ ಅರ್ಜುನ ಮೆಡಿಕಲ್ ಮಾತನಾಡಿದರು
ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸದಾ ತಲ್ಲೀನವಾಗಿ, ಶಾಲೆಗೆ ಹೆಸರು ತರುವಂತೆ ಪ್ರಯತ್ನಿಸಿ ,ಸದಾ ನಾವು ನಿಮ್ಮ ಜೊತೆಯಲ್ಲಿ ಇದ್ದು,ಕೊಡುಗೆ ಕೊಡುವಲ್ಲಿ ಪ್ರಯತ್ನ ಪಡುತ್ತವೆ. ವಾರ್ಷಿಕ ಫಲಿತಾಂಶದಲ್ಲಿ ಉನ್ನತ ಸ್ಥಾನ ದೊರೆಯಲಿ ಎಂದು ಹೇಳಿದರು, ಮಕ್ಕಳಲ್ಲಿ ಶಿಸ್ತು ಮೂಡಿಸಿ ಓದು ಬರಹದಲ್ಲಿ ತೊಡಗಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಸೇವಕರಾದ ಶ್ರೀ ಸುಗಸಾನಿ ಸಹದೇವ ಮೆಡಿಕಲ್ , ಎಸ್‌ಡಿಎಂಸಿ ಅಧ್ಯಕ್ಷರಾದ ಈರಣ್ಣ,ಫಕೀರಪ್ಪ, ಗ್ರಾಮ ಪಂ. ಸದಸ್ಯರು ಬಸವರಾಜ,ಯಂಕಪ್ಪ,ಕೆ.ಈರಣ್ಣ,ಮುಖಂಡರಾದ ಬಿ. ತಿಮ್ಮರೆಡ್ಡಿ,ವೀರಬದ್ರಗೌಡ, ಷಣ್ಮುಖಗೌಡ,ಪ್ರತಪ, ಶಿವಶಂಕರ,ಹನುಮಂತಪ್ಪ,ನಾಗರಾಜ್,
ಹಾಗೂ ಶಾಲೆಯ ಗುರುವೃಂದ, ಕೇಂದ್ರ ಬಿಂದು ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರಪ್ಪ ಮುಖ್ಯ ಗುರುಗಳು ಮಾತನಾಡಿ ಗ್ರಾಮದ ಮಕ್ಕಳಲ್ಲಿ ಶಿಸ್ತು, ಕೌಶಲ್ಯ ಬಹಳ ಮುಖ್ಯ, ಇಂತಹ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಆಶಾಜ್ಯೊತಿ ನೀಡಿರುವ ಕೊಡುಗೆಗೆ ಕೊನೆದಾಗಿ ಕೃತಜ್ಞತೆ ಸಲ್ಲಿಸಿದರು.

About Mallikarjun

Check Also

screenshot 2025 10 09 18 49 33 65 e307a3f9df9f380ebaf106e1dc980bb6.jpg

2005ರಪೂರ್ವಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು : ಮುಖ್ಯಮಂತ್ರಿ ಸಿದ್ದರಾಮಯ್ಯ 

Those who made a living in forest land before 2005 have the right to land: …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.