
Talakal: Applications invited for GTTC free skill development training courses.ತಳಕಲ್: ಜಿಟಿಟಿಸಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
ಕೊಪ್ಪಳ ಅಕ್ಟೋಬರ್ 12 (ಕರ್ನಾಟಕ ವಾರ್ತೆ): ತಳಕಲ್ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹಾಗೂ ಕೌಶಲ್ಯಾಭಿವೃದ್ಧಿ ಸಂಸ್ಥೆಯು (ಎಂ.ಎಸ್.ಡಿ.ಸಿ) ಜಂಟಿಯಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಉದ್ಯೋಗಮುಖಿ ಅಲ್ಪಾವಧಿ ತರಬೇತಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಸಂಸ್ಥೆಯಲ್ಲಿ ಮೈಕ್ರೋಸಾಫ್ಟ್ ಡೇಟಾ ಅನಾಲಿಸಿಸ್, ಸೈಬರ್ ಸೆಕ್ಯೂರಿಟಿ, ಜಿಎಸ್ಟಿ ಅಸಿಸ್ಟೆಂಟ್ , ಅಕೌಂಟ್ ಅಸಿಸ್ಟೆಂಟ್, ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ತರಬೇತಿ ಕೋರ್ಸುಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು,ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಸಕ್ತರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ದೂರವಾಣಿ ಸಂಖ್ಯೆ 9986088894 ಗೆ ಅಥವಾ ಇಮೇಲ್:gttcmsdctalakal@gmail.com ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



