ಕಲ್ಲೂರು ಗ್ರಾಮದ ವ್ಯಕ್ತಿ ಕಾಣೆ: ಪತ್ತೆಗಾಗಿ ಯಲಬುರ್ಗಾ ಪೊಲೀಸರ ಮನವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Man missing from Kallur village: Yalaburga police request for tracing

ಕಲ್ಲೂರು ಗ್ರಾಮದ ವ್ಯಕ್ತಿ ಕಾಣೆ: ಪತ್ತೆಗಾಗಿ ಯಲಬುರ್ಗಾ ಪೊಲೀಸರ ಮನವಿ

ಜಾಹೀರಾತು


ಕೊಪ್ಪಳ ಅಕ್ಟೋಬರ್ 12 (ಕರ್ನಾಟಕ ವಾರ್ತೆ): ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಕಲ್ಲಪ್ಪ ತಂದೆ ದೇವಪ್ಪ ಉಪ್ಪಾರ ಎಂಬ 35 ವರ್ಷದ ವ್ಯಕ್ತಿಯು ಕಾಣೆಯಾಗಿದ್ದು, ಪತ್ತೆಗಾಗಿ ಯಲಬುರ್ಗಾ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
 ಕಲ್ಲಪ್ಪ ತಂದೆ ದೇವಪ್ಪ ಉಪ್ಪಾರ ಎಂಬ ವ್ಯಕ್ತಿಯು ಉಡುಪಿ, ಸುಳ್ಯ ಕಡೆಗೆ ಕೂಲಿ ಕೆಲಸಕ್ಕೆ ಹೋಗಿ ಬಂದು ಮಾಡುತ್ತಿದ್ದು, 2025ರ ಮಾರ್ಚ್ 12 ರ ಸಂಜೆ 6 ಗಂಟೆಗೆ ಉಡುಪಿಗೆ ಕೂಲಿ ಕೆಲಸಕ್ಕೆ ಹೋದವನು ವಾಪಸ್ ಮನೆಗೆ ಬರದೆ ಕಾಣೆಯಾಗಿದ್ದು, ಉಡುಪಿ, ಮಲ್ಪೆ, ಸಂತೆಕಟ್ಟೆ, ಕುಂದಾಪುರ ಹಾಗೂ ಇನ್ನಿತರ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ತಂದೆಯು ದೂರು ನೀಡಿರುತ್ತಾರೆ. ಈ ಬಗ್ಗೆ ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ.126/2025 ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ವ್ಯಕ್ತಿ ಚಹರೆ ಪಟ್ಟಿ: ಕಲ್ಲಪ್ಪ ತಂದೆ ದೇವಪ್ಪ ಉಪ್ಪಾರ, ವಯಸ್ಸು 35 ವರ್ಷ, ಎತ್ತರ 5.5 ಅಡಿ, ದುಂಡು ಮುಖ, ಸದೃಡ ಮೈಕಟ್ಟು, ಸಾಧಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೊರಡುವಾಗ ನೀಲಿ ಬಣ್ಣದ ಟಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
 ಈ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ಇದ್ದಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ಪಿಎಸ್‌ಐ ನಂ. 9480803749 ಮತ್ತು 08534-220133 ಅಥವಾ ಕೊಪ್ಪಳ ಕಂಟ್ರೋಲ್ ರೂಂ ನಂಬರ್ 08539-220222 ಗೆ ಮಾಹಿತಿ ನೀಡಲು ಯಲಬುರ್ಗಾ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
ಜಾಹೀರಾತು
Share This Article