Fake DySP who had been deceiving people for 12 years finally arrested.
12 ವಷ೯ಗಳಿಂದ ಯಾಮಾರಿಸುತ್ತಿದ್ದ ನಕಲಿ Dysp ಕೊನೆಗೂ ಅರೆಸ್ಟ್.

ವಿಜಯಪುರ: ನಾನು ಡಿಎಸ್ಪಿ. ನಾನು ನಿಮಗೆ ಪೊಲೀಸ್ ಹುದ್ದೆ ಕೊಡಿಸುತ್ತೇನೆಂದು ವಂಚನೆಗೈದಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸನ್-2014 ನೇ ಸಾಲಿನಲ್ಲಿ ವಿಜಯಪುರ ನಗರದ ಎಪಿಎಂಸಿ ಪೊಲೀಸ ಠಾಣೆಯಲ್ಲಿ ದಿನಾಂಕ: 29-03-2014 ರಂದು ಪ್ರಕರಣ ಸಂಖ್ಯೆ. 39/2014 U/s 363. 307. 420 R/w 34 IPC ಅಡಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ಆರೋಪಿತನಾದ ಗ್ಯಾನನಗೌಡ @ ಜ್ಞಾನಗೌಡ @ ಗಣೇಶ @ ಸಿ. ಸಂಪತ್‌ಕುಮಾರ ಪಾಟೀಲ 31 ಬಂಧಿತ ಆರೋಪಿ. ಬಂಧಿತ ಆರೋಪಿ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ನಿವಾಸಿಯಾಗಿದ್ದಾನೆ. ನಾನು ಡಿಎಸ್‌ಪಿ ಇರುತ್ತೇನೆಂದು ಖಾಕಿ ಯುನಿಫಾರ್ಮ ಧರಿಸಿಕೊಂಡು ನಿರೋದ್ಯೋಗಿ ಯುವಕರಿಗೆ ಪೊಲೀಸ ನೌಕರಿ ಹಾಗೂ ಪಿಎಸ್‌ಐ ನೌಕರಿ ಕೊಡಿಸುತ್ತೇನೆ ಅಂತಾ ಹೇಳಿ ಅವರಿಂದ ಹಣ ಪಡೆದು ವಂಚಿಸುತ್ತಾ ಬಂದಿದ್ದಾನೆ. ಸನ್-2012 ನೇ ಇಸ್ವಿಯಲ್ಲಿ ಪಿರ್ಯಾದಿದಾರರಾದ ಕಾಖಂಡಕಿ ಗ್ರಾಮದ ವಿಠ್ಠಲ ಗ್ಯಾನಪ್ಪ ಛಾಯಾಗೋಳರ ಸಂಬಂಧಿಕನ ಮಗನಿಗೆ ಪೊಲೀಸ ನೌಕರಿ ಕೊಡಿಸುತ್ತೇನೆ ಅಂತಾ ಹೇಳಿ ಸುಮಾರು 1,20,000 ರೂಗಳನ್ನು ಪಡೆದುಕೊಂಡಿದ್ದು, ನೌಕರಿ ಕೊಡಿಸದೇ ಇರುವದರಿಂದ ಕೊಟ್ಟ ಹಣ ಮರಳಿ ಕೊಡಲು ಒತ್ತಾಯ ಮಾಡಿದ್ದಕ್ಕೆ ಆರೋಪಿತನು ತನ್ನ ಇತರ ಸಹಚರರೊಂದಿಗೆ ಸೇರಿ ಪಿರ್ಯಾದಿದಾರರಿಗೆ ಕೊಲೆ ಮಾಡುವ ಸಂಚು ರೂಪಿಸಿ, ಪಿರ್ಯಾದಿಯು ದಿನಾಂಕ: 26.03.2024 ರಂದು ಮುಂಜಾನೆ 08.30 ಗಂಟೆಗೆ ಗಾಂಧಿನಗರದ ಸ್ಟಾರ್ ಚೌಕ್‌ದಲ್ಲಿ ಹೊರಟಾಗ ಆರೋಪಿತರು ಕೂಡಿ ಒಂದು ಕಾರಿನಲ್ಲಿ ಬಂದು ಪಿರ್ಯಾದಿಗೆ ಕಾರಿನಲ್ಲಿ ಹಾಕಿಕೊಂಡು ಅಪಹರಣ ಮಾಡಿಕೊಂಡು ಹೋಗಿ ಕೊಪ್ಪಳ ಜಿಲ್ಲೆ ಮುನಿರಾಬದ್ ಹತ್ತಿರ ಇರುವ ಹುಲಗಿ ಗ್ರಾಮದ ಕೆನಾಲ್‌ದಲ್ಲಿ ಪಿರ್ಯಾದಿಯ ಕೈಗಳಿಗೆ ಬೇಡಿ ಹಾಕಿ ಕಾಲು ಕಟ್ಟಿ ಗೋಣಿ ಚೀಲದಲ್ಲಿ ಹಾಕಿ ಕೆನಾಲ್‌ದಲ್ಲಿ ನೀರಿನಲ್ಲಿ ಒಗೆದು ಕೊಲೆ ಮಾಡಲು ಪ್ರಯತ್ನ ಮಾಡಿದ್ದಾರೆ. ಅಲ್ಲದೇ, ಈತನಿಗೆ ಸಹಕರಿಸಿದ ಒಬ್ಬ ಹೆಣ್ಣು ಮಗಳು ಸೇರಿದಂತೆ ಒಟ್ಟು 03 ಜನ ಆರೋಪಿತರನ್ನು ಬಂಧಿಸಿ, ತನಿಖೆ ಪೂರ್ಣಗೊಳಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು. ತದನಂತರ ಸದರಿ ಆರೋಪಿತನು ದಸ್ತಗೀರ ಆಗಿ ನ್ಯಾಯಾಲಯದ ಜ್ಯಾಮೀನಿನ ನಂತರ ಮುಂದೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸತತವಾಗಿ ಗೈರ ಹಾಜರ ಆಗಿ, ಸುಮಾರು 12 ವರ್ಷಗಳಿಂದ ತಲೆ ಮರೆಸಿಕೊಂಡು, ಪುನಃ ತಾಳಿಕೋಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ಸಂಖ್ಯೆ. 121/2026 U/s 406. 417. 419. 420 IPC ಅಡಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿಯೂ ಸಹ ಆರೋಪಿತನು ಪಿರ್ಯಾದಿದಾರರಾದ ರೇವಣಸಿದ್ದಪ್ಪ ದೊಡಮನಿ ಇವರ ಮಗನಿಗೆ ತಾನು ಡಿಎಸ್‌ಪಿ ಇರುತ್ತೇನೆ ಅಂತಾ ನಟಿಸಿ, ಜೈಲರ್ ನೌಕರಿ ಕೊಡಿಸುತ್ತೇನೆ ಅಂತಾ ಹೇಳಿ ಅವರಿಂದ 8,00,000 ರೂಗಳನ್ನು ಪಡೆದುಕೊಂಡು ವಂಚಿಸಿ ಮೋಸ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ರೀತಿ ತಲೆ ಮರೆಸಿಕೊಂಡ ಆರೋಪಿತನಾದ ಗ್ಯಾನನಗೌಡ @ ಜ್ಞಾನಗೌಡ @ ಗಣೇಶ @ ಸಿ. ಸಂಪತ್‌ಕುಮಾರ ತಂ. ಸಿದ್ದನಗೌಡ ಪಾಟೀಲ ಬಂಧಿಸಲಾಗಿದೆ. ಸದರಿ ತನಿಖಾ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಆರೋಪಿತನ ಪತ್ತೆ ಕಾರ್ಯವನ್ನು ಕೈಕೊಂಡಿದ್ದು, ಆರೋಪಿತನು ಬೇರೆ ಬೇರೆ ಹೆಸರುಗಳಿಂದ ತನ್ನನ್ನು ತಾನು ಗುರುತಿಸಿಕೊಂಡು ವಿವಿಧ ಮೋಬೈಲ್ ನಂಬರಗಳನ್ನು ಬಳಸಿಕೊಂಡು ಊರಿಂದ ಊರಿಗೆ ತಿರುಗಾಡುತ್ತಾ ತನ್ನ ಇರುವಿಕೆಯನ್ನು ಮರೆ ಮಾಚುತ್ತಾ ಬಂದಿರುವನ್ನು ಗಮನಿಸಿ, ಆತನ ವಿವಿಧ ಮೋಬೈಲ್ ನಂಬರಗಳ ಲೋಕೇಷನ್ ಹಾಗೂ ಇತರೆ ತಾಂತ್ರಿಕ ಸಾಧನಗಳ ಆಧಾರದ ಮೇಲೆ ಆರೋಪಿತನು ಬೆಂಗಳೂರಿನಲ್ಲಿ ಇರುವ ಬಗ್ಗೆ ಪತ್ತೆ ಹಚ್ಚಿ, ದಿನಾಂಕ: 06.07.2026 ರಂದು ಬೆಂಗಳೂರಿನಲ್ಲಿ ಆರೋಪಿತನಿಗೆ ವಶಕ್ಕೆ ಪಡೆದುಕೊಂಡು, ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿರುತ್ತದೆ. ಸದರಿ ಆರೋಪಿತನ ಮೇಲೆ ಸನ್-2012ನೇ ಸಾಲಿನಿಂದ ಕ್ರಮವಾಗಿ ಮುದ್ದೇಬಿಹಾಳ, ಎಪಿಎಂಸಿ, ಆದರ್ಶನಗರ, ತಾಳಿಕೋಟೆ ಪೊಲೀಸ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
[09/07, 6:38 pm] Ishwar Dhavaleshwar: 12 ವಷ೯ಗಳಿಂದ ಯಾಮಾರಿಸುತ್ತಿದ್ದ ನಕಲಿ Dysp ಕೊನೆಗೂ ಅರೆಸ್ಟ್.


