ಶೌಚಾಲಯ ಇಲ್ಲದ ಸರಕಾರಿ ಶಾಲೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Government school without a toilet

ಶೌಚಾಲಯ ಇಲ್ಲದ ಸರಕಾರಿ ಶಾಲೆ

ಜಾಹೀರಾತು

 ತಳಕಟನಾಳ: ಶೈಕ್ಷಣಿಕ ಚಿಕ್ಕೋಡಿ ಜಿಲ್ಲೆಯ ಮೂಡಲಗಿ ವಲಯದ ತಳಕಟನಾಳ ಗ್ರಾಮದಲ್ಲಿ ಹುಲ್ಲಾರ ಸರ್ಕಾರಿ ಪ್ರೌಢ ಶಾಲೆ ಇದೆ. 8 ರಿಂದ 10ನೇ ತರಗತಿ ವರೆಗೆ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 100ಕ್ಕೂ ಅಧಿಕ ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಬಹುಮುಖ್ಯವಾಗಿ ಶೌಚಕ್ಕೆ ಶೌಚಾಲಯವೇ ಇಲ್ಲ. ಕಳೆದ ಕೆಲವು ವರ್ಷಗಳ ಹಿಂದೆಯೇ ನೂತನ ಕಟ್ಟಡವಾದರೂ ಶೌಚಾಲಯ ನಿರ್ಮಾಣ ಮಾಡಿಲ್ಲ. ಕಾಟಾಚಾರಕ್ಕಾಗಿ ಕಳಪೆ ಮಟ್ಟದ ಎರಡು ಶೌಚಾಲಯ ಅಳವಡಿಸಿದ್ರು ಅದು ಕೂಡಾ ಎರಡೇ ವರ್ಷದಲ್ಲಿ ಹಾಳಾಗಿದೆ. ಈ ಪ್ರೌಢ ಶಾಲೆ ನೂರಾರು ಮಕ್ಕಳಿಗೆ, ಶೌಚಕ್ಕೆ ಬಯಲೇ ಅನಿವಾರ್ಯವಾಗಿದೆ.
ಸ್ಕೂಲ್ ಎದುರು ಇರುವ ರಸ್ತೆ ದಾಟಿಕೊಂಡು ಶೌಚಕ್ಕೆ ಹೋಗೊ ಅನಿರ್ವಾಯತೆ ಇದೆ. ಮಲ-ಮೂತ್ರಕ್ಕಾಗಿ ಮಕ್ಕಳು ರಸ್ತೆ ದಾಟುವ ವೇಳೆ ಏನಾದ್ರೂ ಅನಾಹುತ ಘಟನೆ ನಡೆದ್ರೆ ಯಾರು ಹೋಣೆ ಅನ್ನುವಂತಾಗಿದೆ. ಅಷ್ಟೇ ಅಲ್ಲದೇ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲ ಈ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಸ್ಥಳಿಯ ಗ್ರಾಮ ಪಂಚಾಯಿತಿಗೆ ಸಾಕಷ್ಟು ಮನವಿ ನೀಡಲಾಗಿದೆ. ಆದರೂ, ಯಾರೂ ಸಹ ಈ ಸಮಸ್ಯೆಯನ್ನು ಕಾಣು ತೆರೆದು ನೋಡ್ತಿಲ್ಲ. ಅದ್ಯಾವಾಗಾ ಕಾಲ ಕೂಡಿ ಬರುತ್ತೊ ಅಂತ ಶಾಲಾ ಮಕ್ಕಳು ಹಾಗೂ ವಿದ್ಯಾರ್ಥಿಗಳು ಕಾದು ನೋಡುವ ಸ್ಥಿತಿಗೆ ಮೊರೆ ಹೋಗಿದ್ದಾರೆ

Total Views: 0
ಜಾಹೀರಾತು
Share This Article