'Best Actor' award for lead actor Manvith

ನಾಯಕ ಮನ್ವಿತ್‌ಗೆ ‘ಅತ್ಯುತ್ತಮ ನಟ’ ಪ್ರಶಸ್ತಿ

ಧಾರವಾಡ : ಕನ್ನಡ ಚಿತ್ರರಂಗದ ನಾಯಕ ನಟರಾಗಿ ಭರವಸೆಯನ್ನು ಹುಟ್ಟುಹಾಕಿರುವ ಯುವ ನಾಯಕ ‘ಮನ್ವಿತ್’ಗೆಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ)ವತಿಯಿಂದ ಧಾರವಾಡದ
ಆಲೂರ ವೆಂಕಟರಾಯರ ಭವನದಲ್ಲಿ ನಡೆದ ಅಂತಾರಾಷ್ಟ್ರೀಯಚಲನಚಿತ್ರೋತ್ಸವ-೨೦೨೬ರಲ್ಲಿ ಮಹಾಂತೇಶ ಹಳ್ಳೂರ ಅವರ ಕಥೆಆಧಾರಿತ ಗುರುದತ್ ಮುಸುರಿ ನಿರ್ದೇಶನದ ‘ಡೆತ್ ಸರ್ಟಿಫಿಕೆಟ್’ಚಿತ್ರದಲ್ಲಿನ ನಾಯಕ ಪಾತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’
ಪ್ರಶಸ್ತಿ ದೊರೆತಿದೆ.
ಹಿರಿಯ ನಟ, ಪರಿಸರವಾದಿ, ಜೀವಮಾನ ಸಾಧನೆಪುರಸ್ಕೃತ ಸುರೇಶ ಹೆಬ್ಳೀಕರ, ನಿರ್ದೇಶಕ ನಟ ಅನಿರುದ್ಧ ಜತ್ಕರ್,ಗ್ಯಾರಂಟಿ ನ್ಯೂಜ್‌ನ ರಾಧಾ ಹಿರೇಗೌಡರ, ನ್ಯೂಜೋ ನ್ಯೂಜ್‌ನಹರೀಶ ನಾಗರಾಜು ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಹಿರಿಯಚಲನಚಿತ್ರ ನಟಿ ಭವ್ಯ, ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿಪ್ರಶಸ್ತಿ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ಉ.ಕ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಮಂಜುನಾಥಹಗೇದಾರ, ಕಾರ್ಯಾಧ್ಯಕ್ಷ ಡಾ.ಕಲ್ಮೇಶ ಹಾವೇರಿಪೇಟ, ಪ್ರಧಾನಕಾರ್ಯದರ್ಶಿ ರಾಹುಲ್ ದತ್ತಪ್ರಸಾದ, ಉಪಾಧ್ಯಕ್ಷ ಪ್ರಭುಹಂಚಿನಾಳ, ಸಲಹಾ ಸಮಿತಿ ಸದಸ್ಯ, ಚಲನಚಿತ್ರ ಪತ್ರಕರ್ತಡಾ.ಪ್ರಭು ಗಂಜಿಹಾಳ ಮತ್ತು ಮಂಡಳಿಯ ಪದಾಧಿಕಾರಿಗಳು,ಡೆತ್ ಸರ್ಟಿಫಿಕೇಟ್’ ಚಿತ್ರದ ಕಥೆಗಾರ ಮಹಾಂತೇಶ ಹಳ್ಳೂರ,ನಿರ್ದೇಶಕ ಗುರುದತ್ ಮುಸುರಿ, ಹಿರಿಯ ಹೋರಾಟಗಾರರು,
ನ್ಯಾಯವಾದಿ ಬಿ.ಡಿ.ಹಿರೇಮಠ ಉಪಸ್ಥಿತರಿದ್ದರು.
ಇದೀಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ
ಚಿತ್ರೀಕರಣವಾದ “ಡೆತ್ ಸರ್ಟಿಫಿಕೇಟ್” ಚಲನಚಿತ್ರಕ್ಕೆ ‘ಅತ್ಯುತ್ತಮನಟ’ ಪ್ರಶಸ್ತಿ ದೊರೆತಿದ್ದಕ್ಕೆ ಮನ್ವಿತ್ ಖುಷಿಯಾಗಿದ್ದಾರೆ.
ಸಧ್ಯದಲ್ಲೆ “ಧ್ರುವನಕ್ಷತ್ರ” ಕನ್ನಡ ಚಲನಚಿತ್ರ ಮತ್ತು
“ಕೊಪ್ಪಂ” ಎಂಬ ತಮಿಳು ಚಲನಚಿತ್ರದಲ್ಲಿಯೂ ನಾಯಕ ನಟನಾಗಿನಟಿಸಿದ್ದು ಅವೆರಡೂ ಕೂಡಾ ಬಿಡುಗಡೆಗೆ ಸಿದ್ಧವಾಗಿದ್ದು ಅವರಿಗೆತಮ್ಮ ಅಭಿನಯದಲ್ಲಿ ಹೆಚ್ಚಿನ ಭರವಸೆ ಹುಟ್ಟುಹಾಕಿದೆ.ಪ್ರಶಸ್ತಿ
ಪಡೆದದ್ದಕ್ಕೆ ‘ಡೆತ್ ಸರ್ಟಿಫಿಕೇಟ್’ ಚಿತ್ರ ತಂಡ ಇವರನ್ನು
ಅಭಿನಂದಿಸಿದೆ.

