
Koppal Mango Mela to continue for 5 more days: Krishna Ukkunda


ಇನ್ನೂ 5 ದಿನಗಳ ಕಾಲ ಕೊಪ್ಪಳ ಮಾವು ಮೇಳ: ಕೃಷ್ಣ ಉಕ್ಕುಂದ
ಕೊಪ್ಪಳ ಮೇ 21 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾದ 2026-27ನೇ ಸಾಲಿನ 10ನೇ ವರ್ಷದ ಮಾವು ಮಾರಾಟ ಮೇಳವನ್ನು ಇನ್ನೂ 5 ದಿನಗಳ ಕಾಲ ಮುಂದುವರೆಸುವ ತೋಟಗಾರಿಕೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ಕೊಪ್ಪಳದಿಂದ ರೈತರಿಂದ ನೇರವಾಗಿ ಗ್ರಾಹಕರಿಗೆ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಮಾವು ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಮತ್ತು ಕೊಪ್ಪಳ ಜಿಲ್ಲೆಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ಮೇ 12 ರಿಂದ 22ರ ವರೆಗೆ ಆಯೋಜಿಸಲಾಗಿತ್ತು, ರೈತರು ಹಾಗೂ ಗ್ರಾಹಕರ ಒತ್ತಾಯದ ಮೇರೆಗೆ ಮಾವು ಮಾರಾಟ ಮೇಳವನ್ನು ಇನ್ನೂ 5 ದಿನಗಳ ಕಾಲ ಅಂದರೆ, ಮೇ 27ರ ಬುಧವಾರದ ವರೆಗೆ ಮುಂದುವರೆಸಲಾಗಿದೆ. ರೈತರು ಹಾಗೂ ಜಿಲ್ಲೆಯ ಗ್ರಾಹಕರಿಗೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯಿಂದ ಪ್ರಕಟಣೆ ತಿಳಿಸಿದೆ.
