
Opposition to the Hindu convention of Basavadi Sharan.
ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ವಿರೋಧ.


ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಬಸವಕಲ್ಯಾಣ
ಬಸವ ಕಲ್ಯಾಣದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲು ಕನ್ನೇರಿ ಮಠದ ಶ್ರೀಗಳಿಗೆ ನೈತಿಕ ಹಕ್ಕಿಲ್ಲ. ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಾದಿ ಶರಣರು ಸಾರಿದ ಸಮಾನತೆಯನ್ನು ವಿರೋಧಿಸಿ, ಕಲ್ಯಾಣ ನೆಲದಲ್ಲಿ ಅಂದು ಶರಣರ ಹತ್ಯಾಕಾಂಡ ನಡೆಸಿದ ವರ್ಣಾಶ್ರಮಿಗಳ ಸಂತತಿಯೇ ಇವರಾಗಿದ್ದಾರೆ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆದ್ದರಿಂದ ಇಂಥವರಿಗೆ ಬಸವಕಲ್ಯಾಣದಲ್ಲಿ ಜೂನ್ 28ಕ್ಕೆ ನಡೆಯುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಅವಕಾಶ ನೀಡಲು ಬಿಡುವುದಿಲ್ಲ ಎಂದು ಬಸವಕಲ್ಯಾಣದ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮವೇ ಅಲ್ಲ; ಅದು ಜೀವನ ಪದ್ಧತಿಯಾಗಿದೆ. ವೈದಿಕ ಧರ್ಮವೇ ಹಿಂದೂ ಧರ್ಮವೆಂದು ವೈದಿಕ ಜನಗಳನ್ನು ಮೂರ್ಖನಾಗಿಸುತ್ತ ಒಳಗೊಳಗೆ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನವನ್ನು ವಿರೋಧಿಸುತ್ತ ಮತ್ತೊಮ್ಮೆ ಈ ದೇಶದಲ್ಲಿ ಮನು ಸಂಸ್ಕೃತಿ ಜಾರಿಗೆ ತರುವ ಹುನ್ನಾರ ಈ ಕಾರ್ಯಕ್ರಮದ ಹಿಂದೆ ಅಡಗಿದೆ. ಬಸವಣ್ಣನವರು ವೈದಿಕತೆಯಲ್ಲಿರುವ ವರ್ಣಾಶ್ರಮ ಪದ್ಧತಿಯನ್ನು ವಿರೋಧಿಸಿ ಅದರಿಂದ ಹೊರಬಂದು ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. 900ವರ್ಷದಿಂದ ಬಸವಣ್ಣನವರ ತತ್ವವನ್ನು ವಿರೋಧಿಸಿದವರು ಈಗ ಏಕಾಏಕಿಯಾಗಿ ಬಸವಣ್ಣನವರನ್ನು ಹಿಂದುತ್ವಕ್ಕೆ ತಳಕು ಹಾಕಿ ಬಸವಣ್ಣನವರ ವಚನವನ್ನು ತಪ್ಪು ತಪ್ಪಾಗಿ ಅರ್ಥೈಸುತ್ತಾ ಬಸವಣ್ಣನವರನ್ನು ಹಿಂದೂಧರ್ಮದ ಸುಧಾರಕ ಎಂದು ಬಿಂಬಿಸಲು ಹೊರಟಿರುವ ಇವರ ಜಾಣ ನಡೆಯನ್ನು ಲಿಂಗಾಯತ ಧರ್ಮಿಯರು, ಬಸವಾಭಿಮಾನಿಗಳು ಅರ್ಥಮಾಡಿಕೊಂಡು ಹೋರಾಟದಲ್ಲಿ ಭಾಗವಹಿಸಬೇಕೆಂದು ಕರೆ ಕೊಟ್ಟರು. ಬಸವತತ್ವ ಪ್ರಚಾರಕರನ್ನು ತಾಲಿಬಾನಿಗಳೆಂದು ಹೀಯಾಳಿಸುತ್ತ, ಬಸವತತ್ವ ಸ್ವಾಮಿಗಳನ್ನು ಹೊಡೆಯುವಂತೆ ತಮ್ಮ ಕಾರ್ಯಕರ್ತರಿಗೆ ಪ್ರಚೋದನೆ ನೀಡುವ ಕನ್ನೇರಿ ಸ್ವಾಮಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದೂ ಆಗ್ರಹಿಸಿದರಲ್ಲದೆ ಕಾರ್ಯಕ್ರಮ ಮಾಡದಂತೆ ತಡೆಯೊಡ್ಡಲು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಬಸವಕಲ್ಯಾಣ
