
DYFI demands free education under KKRDB grant for SSLC toppers at district and taluk levels

SSLC ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಟಾಪರಾದ ವಿದ್ಯಾರ್ಥಿಗಳಿಗೆ KKRDB ಅನುದಾನದಲ್ಲಿ ಉಚಿತ ಶಿಕ್ಷಣ ಒದಗಿಸಲು DYFI ಆಗ್ರಹ

ಕೊಪ್ಪಳ:ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ನಿನ್ನೆ ಬಿಡುಗಡೆಯಾದ ಹತ್ತನೇ ತರಗತಿ ಫಲಿತಾಂಶ ಉತ್ತಮ ರೀತಿಯಲ್ಲಿ ಬಂದಿದ್ದು ಜಿಲ್ಲೆಯ ಹಲವಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಉತ್ತಮ ಸಾಧನೆಯನ್ನು ಮಾಡಿದ್ದರೆ ಇಂಥಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಅಧೀನದಲ್ಲಿರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಅನುದಾನದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಟಾಪರ್ ವಿದ್ಯಾರ್ಥಿಗಳಿಗೆ ಅವರ ಇಷ್ಟು ಪಟ್ಟು ಓದುವು ಪಿ.ಯು ಕಾಲೇಜ್ ನಲ್ಲಿ KKRDB ಅನುದಾನ ಬಳಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಲು ಮಂಡಳಿ ಮುಂದಾಗಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಅಮರೇಶ ಕಡಗದ ಆಗ್ರಹ ಮಾಡಿದ್ದಾರೆ.
ಹಣಕಾಸಿನ ಸಮಸ್ಯೆಯಿಂದ ಉತ್ತಮ ಕಾಲೇಜಿಗೆ ಹೋಗಲು ಹಿನ್ನಡೆ ಆಗಿ ಮುಂದಿನ ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಆದ್ದರಿಂದ ರಾಜ್ಯ ಸರ್ಕಾರ ಪ್ರತಿ ವರ್ಷ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸುಮಾರು 5,000 ಕೋಟಿ ಅನುದಾನ ಬಿಡುಗಡೆ ಮಾಡುತ್ತದೆ ಅದು ಅತಿ ಹೆಚ್ಚಾಗಿ ಕಟ್ಟಡಗಳು, ಡಾಂಬರೀಕರಣ, ಸಿಸಿ ರಸ್ತೆಗೆ ಬಳಕೆಯಾಗುತ್ತದೆ ಅದರಲ್ಲಿ ಪ್ರಮುಖವಾಗಿ ಶಿಕ್ಷಣಕ್ಕೆ ಆದ್ಯತೆ ಇರುವುದರಿಂದ ಕಲ್ಯಾಣ ಕರ್ನಾಟಕ ಪ್ರದೇಶ ಭಾಗದಲ್ಲಿನ ಎಲ್ಲಾ ಜಿಲ್ಲೆಗಳ ಜಿಲ
