ಹನೂರು ಪಟ್ಟಣದಲ್ಲಿ ನೂತನವಾಗಿ ಹನೂರು ನಾಟಿ ರುಚಿ ಮಾಂಸಹಾರಿ ಹೋಟೆಲ್‌ ಪ್ರಾರಂಭ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

A new Hanur Nati Ruchi Non-vegetarian restaurant has opened in Hanur town.




ಹನೂರು ಪಟ್ಟಣದಲ್ಲಿ ನೂತನವಾಗಿ ಹನೂರು ನಾಟಿ ರುಚಿ ಮಾಂಸಹಾರಿ ಹೋಟೆಲ್‌ ಪ್ರಾರಂಭ.

ಜಾಹೀರಾತು


ವರದಿ: ಬಂಗಾರಪ್ಪ .ಸಿ .

ಹನೂರು:ಆಹಾರವು ಮನುಷ್ಯನ ದೇಹದ ಸಧೃಡ ಮೈಕಟ್ಟು ಹಾಗೂ ಬಲಶಾಲಿ ಶಕ್ತಿಗೆ ಉತ್ತಮ ಪೌಷ್ಟಿಕ ಅಂಶಗಳಲ್ಲಿ ಒಂದಾಗಿದೆ, ಇಲ್ಲಿನ ಜನರ ನಾಡಿ ಮಿಡಿತವನ್ನರಿತು ಪಟ್ಟಣದಲ್ಲೊಂದು ನಾಟಿ ರುಚಿ ಹೋಟೆಲ್ ತೆರೆಯಲಾಗಿದ್ದು ನೂತನ ಹೋಟೆಲ್ ನ್ನು ಹಾಲಿ ಶಾಸಕ ಎಂ. ಆರ್. ಮಂಜುನಾಥ್ ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಹೋಟೆಲ್ ಮಾಲಿಕ ರಮೇಶ್ ತಿಳಿಸಿದ್ದಾರೆ .‌

ಪಟ್ಟಣ ಮುಖ್ಯರಸ್ತೆ ಹಾಗೂ ಸರ್ಕಾರಿ ಬಸ್ ನಿಲ್ದಾಣ ಎದುರು ಪಟ್ಟಣ ನಿವಾಸಿ ರಮೇಶ್ ಮಾಲೀಕತ್ವದಲ್ಲಿ ನೂತನ ನಾಟಿ ರುಚಿ ಮಾಂಸಹಾರಿ ಹೋಟೆಲ್ ತೆರೆದಿದ್ದು ಜನಪ್ರಿಯ ಶಾಸಕರಾದ ಎಂ. ಆರ್. ಮಂಜುನಾಥ್ ರವರ ಅಮೃತ ಹಸ್ತದಿಂದ ರಮೇಶ್ ಕುಟುಂಬಸ್ಥರು ಸ್ನೇಹಿತರು ಹಿತೈಷಿಗಳು ಶಾಸಕರ ಅಭಿಮಾನಿಗಳು ಬಂಧು ಮಿತ್ರರರ ಉಪಸ್ಥಿತಿಯಲ್ಲಿ ನೂತನ ನಾಟಿ ರುಚಿ ಹೋಟೆಲ್ ನ್ನು ತೆರೆಯಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರುಚಿಕರ ಮಾಂಸಹಾರಿ ಖಾಧ್ಯೆದ ಸವಿ ಸವಿದು ಹೋಟೆಲ್ ಅಭಿವೃದ್ದಿಗೆ ಸಹಕರಿಸಬೇಕಾಗಿದೆ.
ನೂತನ ಹೋಟೆಲ್ ಉಧ್ಘಟನೆ ಸಮಾರಂಭಕ್ಕೆ ಹನೂರು ರಾಜು ಕುಮಾರ್ ಎಂದೇ ಪ್ರಖ್ಯಾತಿ ಪಡೆದಿರುವ ಟೈಲರ್ ಚಂದ್ರು ಮೇನ್ಸ್ ರವರು ಆಗಮಿಸಿ ನೂತನ ನಾಟಿ ರುಚಿ ಹೋಟೆಲ್ ಗೆ ಮತ್ತು ಮಾಲೀಕರು ಕುಟುಂಸ್ಥರಿಗೆ ಶುಭ ಹಾರೈಸಿದರು. ಅಲ್ಲದೆ ಶಾಸಕರ ಅಭಿಮಾನಿಗಳು ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸಹ ಶುಭಾಶಯಗಳನ್ನು ಕೋರಿದರು.
ನಾಟಿ ರುಚಿ ಹೋಟೆಲ್ ಮಾಂಸಹಾರಿ ಆಗಿದ್ದರೂ ಹೋಟೆಲ್ ಪ್ರಾರಂಭದ ಮೊದಲ ದಿನದ ಸಸ್ಯಹಾರಿ ಪಲಾವ್ ವಡೆ ಇನ್ನಿತರ ಖಾಧ್ಯೆಗಳನ್ನು ಮಾಡಲಾಗಿತ್ತು. ಹೋಟೆಲ್ ಪ್ರಾರಂಭೋತ್ಸವಕ್ಕೆ ಆಗಮಿಸಿದ ಶಾಸಕರು ಸೇರಿದಂತೆ ಸ್ನೇಹಿತರು ಬಂಧು ಮಿತ್ರರು ಅಭಿಮಾನಿಗಳು ಉಚಿತ ಸಸ್ಯಹಾರಿ ಆಹಾರ ಸೇವಿಸಿ ಹೋಟೆಲ್ ಪ್ರಾರಂಭೋತ್ಸವನ್ನು ವಿಜೃಂಭಣೆಯಿಂದ ಸಂಭ್ರಮಿಸಿದರು. ಇದೆ ಸಮಯದಲ್ಲಿ ಸಾರ್ವಜನಿಕರು ಸೇರಿದಂತೆ ಹಿತೈಷಿಗಳು ಮುಖಂಡರುಗಳು ಹಾಜರಿದ್ದರು.

Total Views: 0
Share This Article