ಮರಳಿ ಗ್ರಾಮಕ್ಕೆ ಆಗಮಿಸಿದ ಶ್ರೀ ಶಿವ ಚಿದಂಬರ ದಿಂಡಿ ಯಾತ್ರೆ: ಭಜನೆ, ಉಪನ್ಯಾಸ ಕಾರ್ಯಕ್ರಮ

H.Mallikarjun
H.Mallikarjun - Kalyanasiri
1 Min Read
  1. ಮರಳಿ ಗ್ರಾಮಕ್ಕೆ ಆಗಮಿಸಿದ ಶ್ರೀ ಶಿವ ಚಿದಂಬರ ದಿಂಡಿ ಯಾತ್ರೆ: ಭಜನೆ, ಉಪನ್ಯಾಸ ಕಾರ್ಯಕ್ರಮ

 

Shri Shiva Chidambaram procession arrives back in the village: Bhajans and lecture program

 

ಗಂಗಾವತಿ :ಕೊಪ್ಪಳ ತಾಲೂಕಿನ ಶ್ರೀ ಕ್ಷೇತ್ರ ಕರ್ಕಿಹಳ್ಳಿಯಲ್ಲಿ ಜುಲೈ 29ರಂದು ನಡೆಯಲಿರುವ ಶ್ರೀ ಮೃತ್ಯುಂಜಯೇಶ್ವರ ಜಾತ್ರೆಯ ಅಂಗವಾಗಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ರಾಮಾಚಾರ್ಯ ಜೋಶಿ ಹಾಗೂ ಶ್ರೀ ಶ್ಯಾಮಾಚಾರ್ಯ ಜೋಶಿ ಇವರ ನೇತೃತ್ವದಲ್ಲಿ ರಾಯಚೂರಿನಿಂದ ಹೊರಟ ಶ್ರೀ ಶಿವ ಚಿದಂಬರ ದಿಂಡಿ ಯಾತ್ರೆಯು ತಾಲೂಕಿನ ಮರಳಿ ಗ್ರಾಮಕ್ಕೆ ಆಗಮಿಸಿತು.

ಜಾಹೀರಾತು

ಗ್ರಾಮಕ್ಕೆ ಆಗಮಿಸಿದ ದಿಂಡಿ ಯಾತ್ರೆಯನ್ನು ಮರಳಿ ಗ್ರಾಮದ ವಿಪ್ರ ಬಾಂಧವರು ಶ್ರದ್ಧಾ-ಭಕ್ತಿಯಿಂದ ಅದ್ಧೂರಿಯಾಗಿ ಸ್ವಾಗತಿಸಿದರು. ತದನಂತರ ರಮೇಶ್ ಕುಲಕರ್ಣಿ ಅವರ ನಿವಾಸದಲ್ಲಿ ದಿಂಡಿ ಯಾತ್ರೆಯ ಭಕ್ತಾದಿಗಳಿಂದ ಶ್ರದ್ಧಾಪೂರ್ವಕ ಭಜನೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನೆರವೇರಿತು.

ಈ ಪವಿತ್ರ ಧಾರ್ಮಿಕ ಸಂದರ್ಭದಲ್ಲಿ ಮುಖಂಡರಾದ ರಮೇಶ್ ಕುಲಕರ್ಣಿ, ಗಿರಿಧರ್ ಕುಲಕರ್ಣಿ, ಶೇಷಗಿರಿ ಕುಲಕರ್ಣಿ, ಗಿರಿಜಾ, ದಿವ್ಯ, ಸುಶೀಲಾ ದೀಕ್ಷಿತ್, ಅನುಪಮಾ, ಸವಿತಾ, ರಂಜನಾಬಾಯಿ, ರಮಾಬಾಯಿ ಹಾಗೂ ಗಂಗಾವತಿಯ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಮುರುಳಿಧರ ಕುಲಕರ್ಣಿ, ಗುರುರಾಜ ಚಿರ್ಚನಗುಡ್ಡ, ರಮಾಕಾಂತ ಅಲಬನೂರು ಸೇರಿದಂತೆ ಹಲವು ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article