ನೂತನ ರಥೋತ್ಸವಕ್ಕೆ ಆರತಿ ಬೆಳಗಿ ಸ್ವಾಗತ ಕೋರಿದ ಭಟಪನಹಳ್ಳಿಯ ಭಕ್ತರು.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Devotees from Bhatapanahalli welcomed the new chariot festival by performing aarti.




ನೂತನ ರಥೋತ್ಸವಕ್ಕೆ ಆರತಿ ಬೆಳಗಿ ಸ್ವಾಗತ ಕೋರಿದ ಭಟಪನಹಳ್ಳಿಯ ಭಕ್ತರು.

ಜಾಹೀರಾತು

ಕುಕನೂರ : ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕಾದೇವಿಯ 29 ನೇ ಜಾತ್ರೋತ್ಸವದಂಗವಾಗಿ ಎ.18 ರಂದು ಶನಿವಾರ ಸಂಜೆ 5.30 ಕ್ಕೆ ನೂತನ ರಥೋತ್ಸವ ಜರುಗುವದು, ಯಲಬುರ್ಗಾ ತಾಲೂಕಿನ ನರಸಾಪೂರ ಗ್ರಾಮದ ಶ್ರೀ ಮೌನ ಜ್ಯೋತಿ ಶೀಲ್ಪಾ ಕಲಾ ಕೇಂದ್ರದ ಶೀಲ್ಪಿ ಶರಣಕುಮಾರ ಬಡಿಗೇರ ಹಾಗು ಸಂಘಡಿಗರಿಂದ ತಯಾರದ ಸುಂದರ ರಥೋತ್ಸವಕ್ಕೆ ಪೂಜಾ ವಿಧಾನಗಳಿಂದ ಪೂಜಿಸಿ ,ಭಟಪನಹಳ್ಳಿಯ ಭಜನಾ ಸಂಘ, ಹಾಗು ಮಹಿಳೆಯರು ಕುಂಭ ಕಳಸದೊಂದಿಗೆ ಸಕಲ ವಾದ್ಯಾಗಳೊಂದಿಗೆ ಮೇರವಣಿಗೆ ಮುಖಾಂತರವಾಗಿ ಗುರು ಹಿರಿಯರು ಆರತಿ ಬೆಳಗಿ ಸ್ವಾಗತಕೊರಿದರು.ಇದೇ ಸಮಯದಲ್ಲಿ ಮೇಗರಾಜ ರಥೋತ್ಸವಕ್ಕೆ ಚಳೆಹೊಡೆದು ,ಮಡಿಉಡಿಯಿಂದ ನೀರು ಸುರಿಸಿದ ,ಅಶ್ವೀನಿ ಮಳೆರಾಯ ಆಗಮಿಸಿ ರಥೋತ್ಸವಕ್ಕೆ ಮೇರಗು ಬಂದಿತು.ಈ ವೇಳೆ ಶ್ರೀ ಭೀಮಾಂಬಿಕಾದೇವಿ ಪುರಾಣ ಸಮಿತಿಯವರು ಹಾಗು ಭಕ್ತರು ಭಾಗವಹಿಸಿದ್ದರು.

Total Views: 0
Share This Article