Breaking News
ನೂತನ ವರ್ಷವನ್ನು ವಿನೂತನವಾಗಿ ಆಚರಿಸಿದ ಬೇವೂರ ಪೋಲಿಸ್ ಇಲಾಖೆ,,

Bevoor police department celebrated the new year in an innovative way.



ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಿಷೇಶ ವಾರ್ತೆ ಕೊಪ್ಪಳ.
ಕೊಪ್ಪಳ : ಪೋಲಿಸ್ ಎಂದರೇ ಭಯ, ಪೋಲಿಸ್ ಎಂದರೇ ಶಿಸ್ತಿನ ಸಿಫಾಯಿ, ಪೋಲಿಸ್ ಎಂದರೇ ಕಡಕ್ ಮಾತು ಅಷ್ಟೇ ಅಲ್ಲಾ ಪೋಲಿಸ್ ಖಾಕಿ ಸಮವಸ್ತ್ರವೆಂದರೇ ಭಯ ಮೂಡಿಸುವವರು ಎಂದು ತಿಳಿದ ಸಮಾಜದ ಮದ್ಯೆ ಇವರು ಪ್ರತಿನಿತ್ಯ ಬದುಕು ಸಾಗಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಹೌದು, ಪೋಲಿಸ್ ನವರನ್ನು ಕಂಡರೇ ಮಾತನಾಡುವವರು ಸುಮ್ಮನಾಗಿ ಬಿಡುತ್ತಾರೆ. ಯಾಕೆಂದರೇ ಅವರ ಕಡಕ್ ಮುಖ, ಗಂಭೀರ ನೋಟ, ಮೈಮೇಲೆ ಖಾಕಿ ಬಟ್ಟೆ ಇವೆಲ್ಲವನ್ನು ಕಂಡಾಕ್ಷಣ ಮಾತೇ ಗಫ್ ಚುಪ್ ಯಾಕೇ ಬೇಕಪ ಏನರ ಮಾತಾಡಕ ಹೋಗಿ ಏನಾರ ಆದ್ರ ಏನ ಫಜೀತಿ ಅಂತ ಮಾತೇ ನಿಲ್ಲಿಸಿದ ಪ್ರಸಂಗಗಳು ಹಲವಾರು.

ಇವರ ಮುಂದ ಒಂದ ತಪ್ಪು ಮಾತಾಡಿದ್ರು ಕಂಬಿ ಎಣಸಬಕಾಗತ್ತ ಅನ್ನುವ ಭಯ ಸಾರ್ವಜನಿಕ ವಲಯದಲ್ಲಿದೆ.

ಇದೆಲ್ಲವಕ್ಕೂ ತದ್ವಿರುದ್ದ ಎನ್ನುವಂತೆ ಹಲವಾರು ಠಾಣೆಗಳಲ್ಲಿ ಹಲವಾರು ಅಧಿಕಾರಿಗಳಿದ್ದರು, ಅವರ ಸಮವಸ್ತ್ರಕ್ಕೆ ತಕ್ಕಂತೆ ಅವರು ಖಡಕ್ ಆಗಿರುವುದು ಸಾಮಾನ್ಯ ಅವರು ಸಹ ಮಾನವೀಯತೆ ಬದುಕು ನಡೆಸುತ್ತಾ ಹಗಲಿರುಳು ಸಮಾಜದ ಒಳಿತಿಗೆ ಶ್ರಮವಹಿಸುತ್ತಾರೆ ಎನ್ನುವುದು ಗಮನಿಸಲೇಬೇಕು.

ಯಲಬುರ್ಗಾ ತಾಲೂಕಿನ ಬೇವೂರನ ಠಾಣೆಯಲ್ಲಿ ವಿಷೇಶ ವ್ಯಕ್ತಿತ್ವದ ವ್ಯಕ್ತಿಯೊಬ್ಬರಿದ್ದಾರೆ ಅವರ ಬಗ್ಗೆ ಹೇಳಲೇ ಬೇಕು ಅವರೇ ಬೇವೂರ ಪೋಲಿಸ್ ಠಾಣೆಯ ಪಿಎಸ್ಐ ಪ್ರಶಾಂತ ಅವರು ಹೆಸರಿಗೆ ತಕ್ಕಂತೆ ಪ್ರಶಾಂತ ಸ್ವಭಾವದವರು ಆದರೆ. ಮೈಮೇಲೆ ಖಾಕಿ ತೊಟ್ಟರೇ ಮಾತ್ರ ಇಲಾಖೆಯ ಖಡಕ್ ಪೋಲಿಸ್ ಅಧಿಕಾರಿ, ಇಂತಹ ಅಧಿಕಾರಿಯೊಬ್ಬರೂ ಈ ನೂತನ ವರ್ಷಾಚರಣೆ ವಿನೂತನವಾಗಿ ಆಚರಿಸಿಕೊಳ್ಳಲು ತಾವಷ್ಟೇ ಅಲ್ಲದೇ ತಮ್ಮ ಬೇವೂರ ಪೋಲಿಸ್ ಠಾಣಾ ಸಿಬ್ಬಂದಿಗೂ ಒಂದೇ ತರನಾದ ಕಲರ್ ಫುಲ್ ಸಫಾರಿ ಬಟ್ಟೆ ಹಾಕಿಸಿ ನೂತನ ವರ್ಷವನ್ನು ವಿನೂತನವಾಗಿ ಆಚರಿಸಿದರು.

ಈ ಒಂದು ದಿನವಾದರು ತಮ್ಮೆಲ್ಲ ಸಿಬ್ಬಂದಿಗಳು ಅಧಿಕಾರದ ಬಿಂಕ, ಬಿಗುಮಾನ ಬಿಟ್ಟು ಸೌಹಾರ್ದಯುತವಾಗಿ ಒಂದೇ ಬಟ್ಟೆಯನ್ನುಟ್ಟು ನೂತನ ವರ್ಷವನ್ನು ಆಚರಿಸಬೇಕು, ಪ್ರತಿನಿತ್ಯ ನಮ್ಮ ಬಗ್ಗೆ ಇರುವ ಗೌರವದ ಜೊತೆಗೆ ಸ್ನೇಹಮಯವಾಗಿ, ಸಂತೋಷದಿಂದ ಈ ಹೊಸ ವರ್ಷ ಆಚರಿಸೋಣವೆಂದು ಸಂಭ್ರಮದಿಂದ ನೂತನ ವರ್ಷ ಆಚರಿಸಿ ಸಂಭ್ರಮಿಸಿದರು.

ಅಮರಶಿಲ್ಪಿಜಕಣಾಚಾರಿಸಂಸ್ಕಾರಣಾದಿನಾಚರಣೆ :ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

Amarashilpijakanachari Funeral Day Celebration: Floral Tribute by District Administration

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ : ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕಾರಣಾ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ವಿಶ್ವ ವಿಖ್ಯಾತ ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಜನವರಿ 1 ರಂದು ಪುಷ್ಪ ನಮನ ಸಲ್ಲಿಸಲಾಯಿತು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕಾರಣಾ ದಿನಾಚರಣೆಯನ್ನು ಜಿಲ್ಲಾಡಳಿತ ಕಛೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ವಿಶ್ವ ವಿಖ್ಯಾತ ಅಮರ ಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಚುನಾವಣಾ ಶಾಖೆಯ ತಹಶೀಲ್ದಾರ ರವಿ ವಸ್ತçದ್, ವಿಶ್ವಕರ್ಮ ಸಮಾಜದ ಮುಖಂಡರಾದ ದೇವೆಂದ್ರಪ್ಪ ಬಡಿಗೇರ, ಈಶಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ದೇವಪ್ಪ ಬಡಿಗೇರ, ಕಲ್ಲಪ್ಪ ಬಡಿಗೇರ, ನಿಂಗಪ್ಪ ಬಡಿಗೇರ, ನಿಂಗಪ್ಪ ಬಡಿಗೇರ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಗಂಗಾವತಿ ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತಯ,! ವಿದ್ಯುತ್ ಯಾವುದೇ ಕಾರ್ಯ ಮಾಡದಂತೆ ಜೆಸ್ಕಾಂ ಸೂಚನೆ,,

Power outage in Gangavati city and surrounding villages! JESCOM instructs not to do any electrical work.

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಗಂಗಾವತಿ : ಜನೇವರಿ 02ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೊಳ್ಳುತ್ತಿರುವ ಪ್ರಯುಕ್ತ 110/11ಕೆವಿ ವಿದ್ಯುತ್ ವಿತರಣಾ ಉಪ-ಕೇಂದ್ರ ಗಂಗಾವತಿಯಿಂದ ಸರಬರಾಜಾಗುವ ಎಲ್ಲಾ ಫೀಡರ್ ನ ವಿದ್ಯುತ್‌ನಲ್ಲಿ ವ್ಯತ್ಯಯವಾಗುವುದರಿಂದ ಗಂಗಾವತಿ ನಗರ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಆದ್ದರಿಂದ ಸಾರ್ವಜನಿಕರು ಮತ್ತು ರೈತರು ಸಹಕರಿಸಬೇಕೆಂದು ಹಾಗೂ ಈ ದಿನದಂದು ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕಾರ್ಯ ಪೂರ್ವಾನುಮತಿ ಇಲ್ಲದೆ ಮಾಡಬಾರದು ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಜೆಸ್ಕಾಂ ಕಂಪನಿ ಜವಬ್ದಾರಿಯಾಗಿರುವುದಿಲ್ಲಾ ಎಂದು ಈ ಮೂಲಕ ತಿಳಿಸಲಾಗಿದೆ.

ಹೆದ್ದಾರಿಯಲ್ಲಿ ಪಥ ಬಿಟ್ಟು ಚಲಿಸುವ ವಾಹನಗಳನ್ನು ನಿಯಂತ್ರಿಸಲು ಆಗ್ರಹ.

Demand to control the vehicles that leave the lane on the highway.

ಗಂಗಾವತಿ,ದೇಶದ ಬಹುತೇಕ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರಿ ಗಾತ್ರದ ವಾಹನಗಳು ಪಥ ಬಿಟ್ಟು ಸಂಚರಿಸುತ್ತಿರುವುದರಿಂದ ಅಫ಼ಘಾತಗಳು ಸಂಭವಿಸುತ್ತಿವೆ.ಇತ್ತೀಚಿಗೆ ಭಾರಿ ವಾಹನವೊಂದು ರಸ್ತೆಯ ಬಲ ಭಾಗದಲ್ಲಿ ಸಂಚರಿಸಿದ್ದರಿಂದ ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿ ವೋಲ್ವಾ ಕಾರ್ ಒಂದರ ಮೇಲೆ ಲಾರಿ ಮಗುಚಿಬಿದ್ದು ಆರು ಜನ ಮೃತರಾಗಿದ್ದು ವಿಷಾದಕರ ಸಂಗತಿಯಾಗಿದೆ.

ಲಾರಿ ಮತ್ತು ಕಾರು ಬೇರೆ ಬೇರೆ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಈ ಅಫ಼ಘಾತ ಸಂಭವಿಸಲು ಲಾರಿಯು ರಸ್ತೆಯ ಎಡ ಭಾಗದಲ್ಲಿ ಸಂಚರಿಸುವ ಬದಲು, ಬಲ ಭಾಗದಲ್ಲಿ ಸಂಚರಿಸಿದ್ದೇ ಕಾರಣ.
ಲಾರಿ,ಬಸ್,ಟ್ರ್ಯಾಕ್ಟರ್,ಎತ್ತಿನ ಬಂಡಿ ಮುಂತಾದವುಗಳು ಹಿಂಬಾದಲ್ಲಿ ಯಾವುದೇ ರೇಡಿಯಮ್ ಸ್ಟಿಕ್ಕರ್ ಗಳನ್ನು ಅಳವಡಿಸಿ ಕೊಂಡಿರುವುದಿಲ್ಲ.ಬ್ರೆಕ್ ಲೈಟ್ ಹಾಗೂ ಇಂಡಿಕೇಟರ್ ಸಿಗ್ನಲ್ ಗಳು ಕೆಲಸ ನಿರ್ವಹಿಸುತ್ತಿರುವುದಿಲ್ಲ.ಎಲ್ಲಾ ರಸ್ತೆಗಳಲ್ಲಿಯೂ ಸಂಚರಿಸುವ ಉಸುಕು, ಬಿಂಚಿ ಕಲ್ಲುಗಳು, ಹೊತ್ತ ಲಾರಿ ಮತ್ತು ಟ್ರ್ಯಾಕ್ಟರ್ ಗಳು ಟ್ರಾಲಿಯ ಮೇಲೆ ಯಾವುದೇ ಹೊದಿಕೆಯನ್ನು ಹೊದ್ದಿರುವುದಿಲ್ಲ.ಇದರಿಂದ ಸಾಕಷ್ಟು ಸಣ್ಣ-ಪುಟ್ಟ ವಾಹನಗಳ ಮುಂದಿನ ಗ್ಲಾಸ್ ಗಳು ಒಡೆದ ಉದಾಹರಣೆಗಳು ಸಾಕಷ್ಟಿವೆ.

ಕಬ್ಬಿಣದ ರಾಡ್ ಹೊತ್ತ ಲಾರಿ,ಟ್ರ್ಯಾಕ್ಟರ್ ಗಳು ಮುಂಜಾಗ್ರತೆಯ ನಿಯಮಗಳನ್ನು ಪಾಲಿಸದೇ ಸಂಚರಿಸುತ್ತಿವೆ,ಎತ್ತರದ ರಸ್ತೆಯಲ್ಲಿ ಇಂತಹ ವಾಹನಗಳು ಸಂಚರಿಸುವಾಗ ಹಿಂಬದಿಯ ವಾಹನಗಳ ಮೇಲೆ ಕಬ್ಬಿಣದ ವಸ್ತುಗಳು ನೇರವಾಗಿ ಹಿಂದೆ ಸಂಚರಿಸುವ ವಾಹನಗಳ ಮೇಲೆ ಬಿದ್ದು ,ಸಾವು-ನೋವುಗಳು ಸಂಭವಿಸಿದ ಘಟನೆಗಳು ಸಹ ವರದಿಯಾಗಿವೆ.(ಹಳೇ ಟಯರ್ ಅಥವಾ ರಬ್ಬರ್ ಪಟ್ಟಿಗಳನ್ನು ಕಟ್ಟಿಕೊಂಡು ಸಂಚರಿಸುವುದು ವಾಡಿಕೆ)

ಬೆಂಗಳೂರಿನ ರಾಜಾಜಿನಗರದ ಪ್ಲೈ ಓವರ್ ಮೇಲೆ ದಿನಾಂಕ:30-12-2024 ರಂದು ಸಾಯಂಕಾಲ 7 ಗಂಟೆಯ ಸಮಯದಲ್ಲಿ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸದೆ,ಕಬ್ಬಿಣದ ರಾಡ್ ಗಳನ್ನು ಹೊತ್ತ ಲಾರಿ ಸಂಚರಿಸುತ್ತಿರುವುದು ಕಂಡಿತು.ಇದೇ ರೀತಿ ಉಸುಕು,ಬೆಣಚಿ ಕಲ್ಲು ಹೊತ್ತ ಹಲವಾರು ಲಾರಿಗಳು, ಮೇಲೆ ಹೊದಿಕೆ ಇಲ್ಲದೆ ಸಂಚರಿಸುತ್ತಿರುವುದು ಕಂಡು ಬಂತು.ರಸ್ತೆಯಲ್ಲಿನ ಸಿ.ಸಿ.ಕ್ಯಾಮೆರಾಗಳ ಮೂಲಕ ಇವುಗಳನ್ನು ಖಚಿತ ಪಡಿಸಿಕೊಳ್ಳಬಹುದು.

ಹೈವೇ ಪೆಟ್ರೊಲಿಂಗ್ ವಾಹನಗಳು ಮತ್ತು ಆರ್.ಟಿ.ಓ ಅಧಿಕಾರಿಗಳು ಇವೆಲ್ಲವುಗಳನ್ನು ಕಂಡು ಕಾಣದಂತೆ ಕಾರ್ಯ ನಿರ್ವಹಿಸುತ್ತಿರುವುದು ವಿಷಾದಕರ.
ಅವೈಜ್ಞಾನಿಕವಾಗಿ ಬಾಡಿ ಕಟ್ಟಿಸಿ ಕೊಂಡು ಸಂಚರಿಸುವ ಭಾರಿ ಗಾತ್ರದ ವಾಹನಗಳನ್ನು ತಡೆಯಬೇಕು. ಬೆಂಗಳೂರಿನ ನೆಲಮಂಗಲ ಹೈವೇ ದಲ್ಲಿ ಇಂತಹ ಅವೈಜ್ಞಾನಿಕ ಬಾಡಿ ಕಟ್ಟಿಕೊಂಡ ಲಾರಿಯಿಂದಲೇ ಮೇಲೆ ತಿಳಿಸಿದ ಅಫ಼ಘಾತ ಸಂಭವಿಸಿರುವುದು ಇಲ್ಲಿ ಉಲ್ಲೇಖಾರ್ಹ.

ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಗಳು,ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಹೈವೇ ಪೆಟ್ರೊಲಿಂಗ್ ಹಾಗೂ ಪೋಲಿಸ್ ಅಧಿಕಾರಿಗಳು ಇಂತಹ ವಾಹನಗಳ ಓಡಾಟ ತಡೆಯುವುದು ಅಗತ್ಯ.
ಈ ನಿಟ್ಟಿನಲ್ಲಿ ಮೇಲ್ಕಾಣಿಸಿದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ,ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ನಿಕಟ ಪೂರ್ವ ನಿರ್ದೇಶಕ ಅಶೋಸ್ವಾಮಿ ಹೇರೂರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಇಮೇಲ್ ಮೂಲಕ ಪತ್ರ ಬರೆದು ಒತ್ತಾಯಿಸಿದ್ದಾರೆ.

ಗಂಗಾವತಿಯಲ್ಲಿ ಯಶಸ್ವಿ೪ನೇವರ್ಷದಗರ್ಭಧಾರಣೆ ಸಮಸ್ಯೆ ಮತ್ತು ಬಂಜೆತನ ನಿವಾರಣೆಯ ಉಚಿತ ಶಿಬಿರ

Successful 4th year free camp on pregnancy problem and infertility treatment at Gangavati

ಗಂಗಾವತಿ: ಜೀನಿಯ ಫರ್ಟಿಲಿಟಿ ಸೆಂಟರ್ ಹಾಗೂ ಯಶೋಧ ಆಸ್ಪತ್ರೆ ಗಂಗಾವತಿ ಸಹಯೋಗದಲ್ಲಿ ಜನವರಿ-೩ ಶುಕ್ರವಾರ ಬೆಳಿಗ್ಗೆ ೧೦:೦೦ ಗಂಟೆಯಿAದ ಮದ್ಯಾಹ್ನ ೪:೦೦ ರವರೆಗೆ ಗರ್ಭಧಾರಣೆ ಸಮಸ್ಯೆ ಮತ್ತು ಬಂಜೆತನ ನಿವಾರಣೆ ಬಗ್ಗೆ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ವೈದ್ಯರಾದ ಡಾ|| ಸತೀಶ ರಾಯಕರ್ ಪ್ರಕಟಣೆಯಲ್ಲಿ ತಿಳಿಸಿದರು.
ಹೊಸವರ್ಷದ ಪ್ರಯುಕ್ತ ಈ ಉಚಿತ ಶಿಬಿರದಲ್ಲಿ ಮಕ್ಕಳಿಲ್ಲದ ೭೫ ದಂಪತಿಗಳಿಗೆ ಉಚಿತ ಬಂಜೆತನ ನಿವಾರಣಾ ಶಿಬಿರ, ಉಚಿತ ಸಮಾಲೋಚನೆ, ಉಚಿತ ಸ್ಕಾö್ಯನ್, ಉಚಿತ ವೀರ್ಯಾಣು ಪರೀಕ್ಷೆ, ಉಚಿತ ತಪಾಸಣೆ, ಉಚಿತ ಸಲಹೆಗಳನ್ನು ನೀಡಲಾಗುತ್ತದೆ.
ಈ ಶಿಬಿರದಲ್ಲಿ ಡಾ|| ದಿವ್ಯಶ್ರೀ ಪಿ. ಯೆಸ್ ಹಾಗೂ ಡಾ|| ಪ್ರಭಾ ರಾಯಕರ್ ತಪಾಸಣೆ ಮಾಡಲಿದ್ದಾರೆ,
ಮಕ್ಕಳಾಗುವ ಅವಕಾಶವಿದ್ದರೂ ಸಹ ಸೂಕ್ತ ಸಲಹೆ, ಸೂಚನೆ, ಚಿಕಿತ್ಸೆಗಳಿಲ್ಲದೆ ಸಂತಾನಕ್ಕಾಗಿ ಹಂಬಲಿಸುತ್ತಿರುವ ದಂಪತಿಗಳಿಗಾಗಿಯೇ ಈ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ದಂಪತಿಗಳ ಬಂಜೆತನ ಪರಿಹಾರಕ್ಕಾಗಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಕೋರಿದ್ದಾರೆ.
ಈ ಉಚಿತ ಶಿಬಿರದ ನೋಂದಣಿಗಾಗಿ ಮೊಬೈಲ್ ಸಂಖ್ಯೆ ೮೯೭೦೪೯೦೧೦೮ ಸಂಪರ್ಕಿಸಲು ತಿಳಿಸಲಾಗಿದೆ.

ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಆಚರಣೆ

Bhima Koregaon Victory Program Celebration

ಗಂಗಾವತಿ : ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಾಗೂ ರೈತ ಸಂಘ ದಲಿತ ಅಲ್ಪಸಂಖ್ಯಾತರ ಒಕ್ಕೂಟದದಿಂದ ಗಂಗಾವತಿ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭೀಮ ಕೋರೆಗಾಂವ್ ಸ್ಥಂಭದ ಭಾವಚಿತ್ರಕ್ಕೆ, ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶರಣೆಗೌಡ ಕೆಸರಟ್ಟಿ ರೈತ ಸಂಘದ ರಾಜ್ಯಾಧ್ಯಕ್ಷ ಮಾತನಾಡಿ
ಜನವರಿ 1, ಜಗತ್ತಿಗೆ ಹೊಸ ವರ್ಷದ • ಸಂಭ್ರಮಾಚಾರಣೆಯಾದರೆ ಶೋಷಿತರ ಪಾಲಿಗೆ ಇದು ಅಸ್ಪೃಶ್ಯತೆಯ ಈ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ – ಮಹಾ‌ರ್ ಯೋಧರ ಶೌರ್ಯದ ಸಂಕೇತ ಮೆರೆದ ವಿಜಯೋತ್ಸವ ದಿನ ಇದು ಹಾಗಿದೆ
ಡಾ ಬಾಬಾ ಸಾಹೇಬ್ ಅಂಬೇಡ್ಕರ್ – ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ > ನೀಡಿದ ಈ ದಿನವು ನಮ್ಮೆಲ್ಲರ ಪಾಲಿಗೆ > ವಿಜಯೋತ್ಸವದ ದಿನವಾಗಿದೆ. ಕ್ರಿಶ. 1800 ರ ಸಂದರ್ಭದಲ್ಲಿ ಮಹರಾಷ್ಟ್ರ ದಲ್ಲಿ ಆಡಳಿತ ನಡೆಸುತ್ತಿದ್ದ ಪೇಶ್ವಗಳು ಮನು ಸಂವಿಧಾನವನ್ನು ಜಾರಿಗೆ ತರುವ ಮೂಲಕ ಅಸ್ಪೃಶ್ಯರ ಜೀವನವನ್ನು ಕಠೋರವಾಗಿಸಿದ್ದರು. ಸಾರ್ವಜನಿಕ ಕೆರೆಗಳನ್ನು ಬಳಸದಂತೆ • ನಿರ್ಬಂಧ ಹೇರಲಾಗಿತ್ತು.ತಮ್ಮ ಮೇಲೆ ಈ ರೀತಿಯ ಅಮಾನುಷ ಕೃತ್ಯಗಳನ್ನು ನಡೆಸುತ್ತಿದ್ದ ಪೇಶ್ವಗಳ ದೌರ್ಜನ್ಯ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಅಸ್ಪೃಶ್ಯರು ತಮ್ಮ ಜನಾಂಗದ ಮುಕ್ತಿಗಾಗಿ ಈ ಯುದ್ಧವನ್ನು ಮಾಡಬೇಕಾದ ಪ್ರಸಂಗದಿಂದ ಪೇಶ್ವೆಗಳ ವಿರುದ್ಧ 500 ಮಹರ್ ಸೈನಿಕರು ಸೇರಿಕೊಂಡು 28000 ಪೇಶ್ವೆಗಳ ಸೈನಿಕರನ್ನು ಹೊಡೆದು ಉಳಿಸಿದಂತಹ ಈ ಮಹರ್ ಸೈನಿಕರು 01.01.1818 ರಂದು ವಿಜಯವನ್ನು ಸಾಧಿಸಿದಂತಹ ದಿನವಾಗಿದೆ. ಆ ಯುದ್ಧ ಮುಗಿದ ನಂತರ ಕೊರೆಗಾವ್ ಗ್ರಾಮಕ್ಕೆ ಬಂದು ಯುದ್ಧದಲ್ಲಿ ಮರಣ ಹೊಂದಿದಂತಹ ಮಹರ್ ಸೈನಿಕರ ಧ್ವಜಸ್ತಂಭವನ್ನು ಹಾಕಿ ವಿಜಯೋತ್ಸವವನ್ನು ಆಚರಣೆ ಮಾಡಿದ ದಿನ ಇದಾಗಿದೆ ಎಂದರು
ನಂತರ ಶಂಕರ್ ಸಿದ್ದಾಪುರ ವಕೀಲರ ಮಾತನಾಡಿ ಹೊಸ ವರ್ಷ ಆಚರಣೆ ಮತ್ತು ಭೀಮ ಕೊರೆಗಾವ್ ನಮ್ಮ ಮಹರ್ ಸೈನಿಕರ ನೆನಪು ಮಾಡಿಕೊಳ್ಳುವುದರ ಜೊತೆಗೆ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರು ಲಕ್ಷ್ಮಿ ನಾರಾಯಣ್ ನಾಗವರ್ ಇವರು ನಮ್ಮನ್ನೆಲ್ಲ ಬಿಟ್ಟು ಹಗಲಿದ್ದಾರೆ ಅವರಿಗೆ ಕೂಡ ನಮ್ಮ ಮಹಾರ್ ಸೈನಿಕರ ಜೊತೆಗೆ ಅವರಿಗೂ ಕೂಡ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ನಂತರದ ದಿನಮಾನಗಳಲ್ಲಿ ಭೀಮ ಕೊರೆಗಾವ್ ಯುದ್ಧ ನಡೆಯಬೇಕಾದರೆ ಪೇಶ್ವೆಗಳ ಕೊಳಕು ಮನಸ್ಥಿತಿಗಳಿಂದ ನಮ್ಮ ಮಹಾರ್ ಸೈನಿಕರ ಅಸ್ಪೃಶ್ಯತೆ ದಬ್ಬಾಳಿಕೆ ಒಳಗಾಗುವುದರಿಂದ ಈ ಯುದ್ಧ ನಡೆಯಲು ಕಾರಣ ಮತ್ತು ಯುದ್ಧವು ಅಸ್ಪೃಶ್ಯರ ಸ್ವಾಭಿಮಾನದ ಸಂಕೇತವಾಗಿದೆ ಈ ಘಟನೆಯು ನಮ್ಮೆಲ್ಲರಿಗೂ ಆತ್ಮಗೌರವನ್ನು ಎತ್ತಿ ಹಿಡಿಯುವ ದಿನವಾಗಿದೆ. ಇಂತಹ ಸ್ವಾಭಿಮಾನದ, ಆತ್ಮಗೌರವದ ದಿನವನ್ನು ಶೋಷಿತ ಸಮುದಾಯದವರು ನೆನಪಿಸಿಕೊಂಡು ಅಮರ ವೀರರ ಕೆಚ್ಚೆದೆಯ ಸ್ವಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅವರ ತ್ಯಾಗ ಬಲಿದಾನದಿಂದ ಮನು ಸಂವಿದಾನಕ್ಕೆ ಪೆಟ್ಟುಬಿದ್ದು ಅಸ್ಪೃಶ್ಯರಿಗೆ ವಿದ್ಯಾಭ್ಯಾಸ ನೀಡಲು, ಸೈನ್ಯಕ್ಕೆ ಸೇರಲು, ಸಾಮಾಜಿಕವಾಗಿ ಅಲ್ಪ ಪ್ರಮಾಣದಲ್ಲಿ ನಾಗರೀಕ ಬದುಕು ಕಾಣಲು ಸಾಧ್ಯವಾಗಿದೆ.
ಅಂದು ಅಸ್ಪೃಶ್ಯರು ಬ್ರಿಟೀಷರ ಪರ ವಾಗಿ ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಜನಾಂಗಕ್ಕೆ ತಮ್ಮ ಮಕ್ಕಳು ಮುಂದಿನ ಭವಿಷ್ಯ, ಹೊಟ್ಟೆಗೆ ಅನ್ನ ದೊರಕಿಸಿಕೊ ಳ್ಳುವ ಸ್ವಾಭಿಮಾನದಿಂದ ಬದುಕುವ ಉದ್ದೇಶಕ್ಕೆ ತಮ್ಮ ಅಮೂಲ್ಯ ಜೀವವನ್ನು ಅರ್ಪಣೆ ಮಾಡಿದ ನಮ್ಮಹುತಾತ್ಮರಾದ ಯೋಧರಿಗೆ ನಾವೆಲ್ಲ ಗೌರವಿಸಬೇಕಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಜಿಲ್ಲಾ ಮುಖಂಡರಾದ ಗಂಗಣ್ಣ ಸಿದ್ದಾಪುರ ಹೊನ್ನೂರ ಸಿದ್ದಾಪುರ ಅಯ್ಯಣ್ಣ ಮೈಲಾಪುರ್ ಪರುಶುರಾಮ ಮಹಾದೇವ ಕಾಟಾಪುರ ಶರಣಪ್ಪ ಸಿದ್ದಾಪುರ ಮೂರ್ತಿ ಸಂಗಾಪುರ ಹುಲ್ಲಿಗೇಶ ಕಾಟಾಪುರ ಸೇರಿದಂತೆ ಇತರರು ಯುವಕರು ಭಾಗವಹಿಸಿದ್ದರು

ಭೀಮ ಕೊರೆಗಾಂವ್ ವಿಜಯೋತ್ಸವಆಚರಣೆಯನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳ ಸಲ್ಲಿಸುವ ಮೂಲಕ ಆಚರಣೆಗೆ ಚಾಲನೆ

Bhima Koregaon Victory celebrations kick off with floral tributes to Dr BR Ambedkar’s portrait


ಕೊಟ್ಟೂರು: ಇತಿಹಾಸದಲ್ಲಿ ಯುದ್ಧಗಳು ಹೆಣ್ಣು ಮಣ್ಣು ಸಾಮ್ರಾಜ್ಯ ಸ್ಥಾಪನೆಗೆ ಯುದ್ಧಗಳು ನಡೆದಿದ್ದಾವೆ. ಆದರೆ ಆತ್ಮ ಗೌರವ ಸ್ವಾಭಿಮಾನಕ್ಕಾಗಿ ನಡೆದಿರುವ ಇದ್ದವೇ ಭೀಮ ಕೊರೆಗಾಂವ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ಹೇಳಿದರು.

ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾದ್ವಾರ ಬಾಗಿಲು ಹತ್ತಿರ ದಲಿತ ಸಂಘಟನೆಯಿಂದ ಆಯೋಜಿಸಿದ್ದ ಭೀಮ ಕೊರೆಗಾಂವ್ ವಿಜಯೋತ್ಸವ ಆಚರಣೆಯನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳ ಸಲ್ಲಿಸುವ ಮೂಲಕ ಆಚರಣೆಗೆ ಚಾಲನೆ ನೀಡಿ ನಂತರ ಮಾತನಾಡಿದರು ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕಾಲವಾಗಿತ್ತು ಆಗಿನ ಸಂದರ್ಭದಲ್ಲಿ ಮಹಾರ್ (ದಲಿತರು)ಜನರನ್ನು ಹೀನಾಯ ಸ್ಥಿತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಇದನ್ನು ಸಹಿಸಿಕೊಳ್ಳಲಾಗದ ಮಹರ್ (ದಲಿತರು) ಜನರ ನಾಯಕನಾದ ಸಿದ್ಧಿ ನಾಯಕ ಮತ್ತು ಎರಡನೇ ಬಾಜಿರಾಯ ವಿರುದ್ಧ ಯುದ್ಧ ಸಾರಿ 28 ಸಾವಿರ ಪೇಶ್ವೆ ಗಳ ಸೈನಿಕರು ಕೇವಲ 500 ದಲಿತ ಸೈನಿಕರು ಸೇರಿಕೊಂಡು ಸೋಲಿಸದ ಇದ್ದವೇ ಭೀಮ ಕೊರೆಗಾಂವ್ ವಿಜಯೋತ್ಸವ ಎಂದು ಹೇಳಿದರು.

ನಂತರ ದಲಿತ ಮುಖಂಡರುಗಳಾದ ಬಿ ಮರಿಸ್ವಾಮಿ ಮತ್ತು ತೆಗ್ಗಿನಕೇರಿ ಕೊಟ್ರೇಶ್ ಮಾತನಾಡಿದರು ಮೇಲ್ಜಾತಿಯ ದೌರ್ಜನ್ಯಕ್ಕೆ ಒಳಗಾದ ಶೋಷಿತ ಸಮುದಾಯವು ತಮ್ಮ ಹಕ್ಕಿಗಾಗಿ ಸಮಾನತೆಗಾಗಿ ಮಾನವಿತೆಯ ಮೌಲ್ಯಗಳನ್ನು ಪಡೆದುಕೊಳ್ಳಲು ಕೆಚ್ಚೆದೆಯ ಹೋರಾಟ ಸಾಹಸ ಮಹರ್ ಸೈನಿಕರು ನಡೆಸಿದ ಯುದ್ದವೇ ಭೀಮ ಕೋರಂಗಾವ್ ಯುದ್ಧ ಎಂದು ಇತಿಹಾಸದಲ್ಲಿ ಪ್ರಸಿದ್ಧಿ ಹೊಂದಿದೆ ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಬಿ ರೇಖಾ ರಮೇಶ್, ಡಿ ವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ ಟಿ, ಪಿ ಎಸ ಐ ಗೀತಾಂಜಲಿ ಸಿಂಧೆ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಬುಗ್ಗಳಿ ಕೊಟ್ರೇಶ್, ಯುವ ಮುಖಂಡ ಎಂ ಎಂ ಜೆ ಶೋಬಿತ್, ಹಾಲಿ ಪ. ಪಂ. ಸದಸ್ಯರುಗಳಾದ ತೆಗ್ಗಿನಕೇರಿ ಜಗದೀಶ್, ಕೆಂಗಪ್ಪ, ದಲಿತ ಮುಖಂಡಗಳಾದ ಟಿ. ಹನುಮಂತಪ್ಪ ವಕೀಲರು, ಬಿ ದುರುಗೇಶ್, ಬಣಕರ್ ಕುಮಾರಪ್ಪ, ಟಿ ಸುರೇಶ್, ಶಿವು, ಬಿ ಪರಶುರಾಮ್, ಕೊಲ್ಲಾರಿ, ವೀರಭದ್ರಪ್ಪ, ದಡೇರಪ್ಪ, ಕೆ ಶಿವರಾಜ್, ಮಣಿಕಂಠ, ತಿಮಲಾಪುರ ಮೈಲಪ್ಪ, ಇತರರು ಉಪಸ್ಥಿತರಿದ್ದರು.

ಶಿಲೆಯನ್ನು ಕಲೆಯಾಗಿ ಅರಳಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿಗೆ ಸಲ್ಲಿತ್ತದೆ‌ : ಗಿರಿಧರ್ ಜೋಷಿ

Amarashilpi Jakanachari is credited with blossoming rock into art: Giridhar Joshi

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರ : ತಾಲೂಕ ಪಂಚಾಯತ ಕುಕನೂರ ಕಛೇರಿಯಲ್ಲಿ ವಿಶ್ವ ಕಂಡ ಮಹಾ ಶಿಲ್ಪಕಾರ ಅಮರಶಿಲ್ಪಿ ಜಕಣಾ ರರ ಜಯಂತಿಯನ್ನು ಆಚರಿಸಲಾಯಿತು.

ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ತಾಲೂಕ ಪಂಚಾಯತ ಕುಕನೂರ ಮ್ಯಾನೇಜರ್ ಗಿರಿಧರ್ ಜೋಷಿ ಮಾತನಾಡಿ ಅಮರಶಿಲ್ಪಿ ಜಕಣಾಚಾರಿಯವರು ನಾಡು ಕಂಡ ಮಹಾನ್ ಚೇತನ ರಾಮಾನುಜಾಚಾರ್ಯರ ಮಾರ್ಗದರ್ಶನದಿಂದ ತಮ್ಮ ವೃತ್ತಿಯಲ್ಲಿ ಏಕಾಗೃತೆಯನ್ನು ಸಾಧಿಸಿ ಹೋಯ್ಸಳ, ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯಗಳಲ್ಲಿ ಅನೇಕ ದೇವಾಲಯಗಳನ್ನು ನಾಜೂಕಾದ ಕುಸುರಿ ಕೆತ್ತನೆಗಳಿಂದ ನಿರ್ಮಾಣ ಮಾಡಿ ಕವಿಗಳಿಗೆ ಕಲೆಯ ಬಲೆಯಾಗಿ, ಇತಿಹಾಸಕಾರರಿಗೆ ಆಕರವಾಗಿ, ಕೆಲವರಿಗೆ ವಿಸ್ಮಯದ ತಾಣಗಳಾಗಿವೆ,

ಕಾಯ ಅಳಿದರೂ ಕೀರ್ತಿ ಇಂದಿಗೂ ಶಿಲೆಗಳಲ್ಲಿ ಉಳಿದಿವೆ. ನಾವು ನಮ್ಮ ನಮ್ಮ ಕೆಲಸಗಳನ್ನು ಶ್ರೆದ್ದೆಯಿಂದ ಮಾಡಿದರೆ ಮಹಾನ್ ಸಾಧಕರ ಸಾಲಿನಲ್ಲಿ ನಿಲ್ಲ ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಚೆನ್ನಬಸಪ್ಪ ಸಣ್ಣಕರಡದ್, ತಾಂತ್ರಿಕ ಸಂಯೋಜಕ ಸುರೇಶ್ ದೇಸಾಯಿ, ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ತಾಪಂ ಸಿಬ್ಬಂದಿಗಳು, ಎನ್.ಆರ್.ಎಲ್ ಎಮ್ ಸಿಬ್ಬಂದಿಗಳು ಹಾಜರಿದ್ದರು.

ಕಾಂಗ್ರೆಸ್ ವಿಜಯೋತ್ಸವ

Satyasodha News Koppala.

ಈ ಹಿರೇವಂಕಲಕುಂಟಾ ಪ್ರಾಥಮಿಕಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರ ಆಯ್ಕೆ

ವರದಿ : ಪಂಚಯ್ಯ ಹಿರೇಮಠ.


ಕೊಪ್ಪಳ : ಭಾನುವಾರದಂದು ಯಲಬುರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಗೊಂಡರು.

ಹಿರೇ ವಂಕಲಕುಂಟಾದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ವಿರೇಶ ಬಸನಗೌಡ ಗೌಡ, ಖಲೀಲಸಾಬ್ ಶ್ಯಾಮೀದಸಾಬ್‌ ಗುಬ್ಬಿ, ವೆಂಕಟೇಶ ರಾಮಣ್ಣ ಈಳಿಗೇ‌ರ್, ಬಾಲನಗೌಡ ನಾಗನಗೌಡ ಮಾಲಿಪಾಟೀಲ್, ನಿರುಪಾದೆಪ್ಪ ಹನಮಪ್ಪ ದಾಸರ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ) ಮಂಜುನಾಥ ಹನುಮಪ್ಪ ಬೇವೂರ (ಪರಿಶಿಷ್ಟ ಪಂಗಡ ಎಸ್ ಟಿ ಮೀಸಲು ಕ್ಷೇತ್ರ), ಕುಂಟೆಪ್ಪ ಶಿವಪ್ಪ ಕಂಬಳಿ( ಹಿಂದುಳಿದ ಆ ವರ್ಗ), ಅಶೋಕ ಈಶ್ವರಪ್ಪ ಹರ್ಲಾಪೂರ( ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರ), ಈರಮ್ಮ ಆದಪ್ಪ ಗೌಡ್ರ (ಮಹಿಳಾ ಮೀಸಲು ಕ್ಷೇತ್ರ), ಫಾತೀಮಾ ಬೇಗಂ ಮುನಿರಸಾಬ್ ಕುಷ್ಟಗಿ (ಮಹಿಳಾ ಮೀಸಲು ಕ್ಷೇತ್ರ), ಹನುಮೇಶ ಚಿಣಗಿ, ಮಾಹಾಂತೇಶ ಹಡಪದ ಸಾಮಾನ್ಯ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಾಬುಸಾಬ್ ಲೈನಂದಾರ್ ತಿಳಿಸಿದ್ದಾರೆ.

ವಿಜಯೋತ್ಸವ:
ವೇಳೆ ನೂತನವಾಗಿ ಕಾಂಗ್ರೆಸ್ ಬೆಂಬಲಿತವಾಗಿ ನಿರ್ದೇಶಕರ ಆಯ್ಕೆ ಹಿನ್ನೆಲೆ ಸಡಗರ ಸಂಭ್ರಮದಿಂದ ಕಾರ್ಯಕರ್ತರು, ಮುಖಂಡರು ಪಕ್ಷದ ಅಭಿಮಾನಿಗಳು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ ಹಳ್ಳಿ, ಮುಖಂಡ ಅಪ್ಪಣ್ಣ ಜೋಷಿ, ಕಾಂಗ್ರೆಸ್ ಕಾರ್ಯಕರ್ತರಾದ ಮಂಜುನಾಥ ಸಜ್ಜನ್, ಕಾಸೀಂಸಾಬ್ ಗುಬ್ಬಿ, ಮಂಜುನಾಥ ಬಂಗಾರಿ, ಲೆಂಕೆನಗೌಡ ಚಿಕ್ಕವಂಕಲಕುಂಟಾ, ನಾಗರಜಾ ಓಜನಹಳ್ಳಿ, ನಿಂಗಪ್ಪ ತೊಣಿಸಿಹಾಳ್‌, ಅಜ್ಜಪ್ಪ ಹರ್ಲಾಪೂರ, ಬಸವರಾಜ ಸಜ್ಜನ್ (ಸಾಹುಕಾರ್), ನಜೀರಮೀಯಾ ಕುಷ್ಟಗಿ, ಹುಸೇನಸಾಬ್ ಬಳಿಗಾರ್, ಇಮಾಮಸಾಬ್ ಅತ್ತಾರ್.ಹನ್ಮಂತ ಓಜನಹಳ್ಳಿ, ಕೇಶವ ಜ್ಞಾನಮೋಟೆ ಹಾಗೂ ಇನ್ನಿತರರು ಇದ್ದರು.