Breaking News

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರಾಗಿರಾಮಕೃಷ್ಣ ಸಿ.ಡಿ ಆಯ್ಕೆ


Ramakrishna CD elected as Taluk President of Karnataka Media Journalists Association

ಜಾಹೀರಾತು
screenshot 2025 08 23 18 39 52 51 6012fa4d4ddec268fc5c7112cbb265e7 2

ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಘಟಕ ಪದಾಧಿಕಾರಿಗಳ ನೇಮಕಾತಿಯು ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹೆಚ್. ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಆಗಸ್ಟ್-೨೩ ಶನಿವಾರ ನಗರದ ಕೋರ್ಟ್ ಮುಂಭಾಗದ ಶ್ರೀ ಸಾಯಿ ಹೋಟಲ್ ಸಭಾಂಗಣದಲ್ಲಿ ನಡೆಯಿತು. ಗಂಗಾವತಿ ತಾಲೂಕ ಘಟಕದ ನೂತನ ಅಧ್ಯಕ್ಷರನ್ನಾಗಿ ರಾಮಕೃಷ್ಣ ಸಿ.ಡಿ., ಪ್ರಧಾನ ಕಾರ್ಯದರ್ಶಿಯಾಗಿ ಚನ್ನಬಸವ ಮಾನ್ವಿ ಹಾಗೂ ಖಜಾಂಜಿಯಾಗಿ ದೇವದಾನಂ ಅವರು ಆಯ್ಕೆಯಾದರು ಎಂದು ಜಿಲ್ಲಾ ಅಧ್ಯಕ್ಷ ರಮೇಶ್ ಕೊಟಿ ತಿಳಿಸಿದರು.
ಪದಾಧಿಕಾರಿಗಳ ಆಯ್ಕೆಯ ಪೂರ್ವದಲ್ಲಿ ನೇತೃತ್ವವಹಿಸಿದ್ದ ಹೆಚ್. ಮಲ್ಲಿಕಾರ್ಜುನ ಹೊಸಕೇರಾ ಮಾತನಾಡಿ, ಈ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳು ಸಂಘದ ಬೈಲಾಗಳಲ್ಲಿನ ನಿಯಮಗಳಿಗೆ ಬದ್ಧರಾಗಿ, ಸಂಘದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನದಂತೆ ಸಂಘವನ್ನು ಬಲಪಡಿಸಿ, ಸಂಘದ ಎಲ್ಲಾ ಸದಸ್ಯರ ವಿಶ್ವಾಸವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಅದರಂತೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಎಲ್ಲಾ ಸದಸ್ಯರ ಮತದಾನದ ಮೂಲಕ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.


ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ರಾಮಕೃಷ್ಣ ಸಿ.ಡಿ ಯವರು ಮಾತನಾಡಿ, ಮತ ಚಲಾಯಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಸಂಘದ ರಾಜ್ಯ, ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಘವನ್ನು ಒಮ್ಮತದಿಂದ ಮುನ್ನಡೆಸಿಕೊಂಡು ಹೋಗುವುದಾಗಿ ಹಾಗೂ ಸಂಘದ ಯಾವುದೇ ಸದಸ್ಯರು ತಮ್ಮ ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊAಡು ಇತ್ಯರ್ಥಪಡಿಸಿಕೊಳ್ಳಬೇಕು, ಸಂಘಕ್ಕೆ ಮುಜುಗರವುಂಟು ಮಾಡುವಂತಹ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಸದಸ್ಯರಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಮಂಜುನಾಥ ಎಂ., ಡಿ.ಎಂ. ಸುರೇಶ, ದೇವದಾನಂ, ಹೆಚ್. ಭೋಗೇಶ, ಸೋಮಪ್ಪ, ಎಂ.ಡಿ ಗೌಸ್, ಶರಣಯ್ಯ ಹಿರೇಮಠ, ನಿಂಗಪ್ಪ ನಾಯಕ, ಜೆ. ಶ್ರೀನಿವಾಸ, ಎನ್. ಮಲ್ಲಿಕಾರ್ಜುನ, ಎಸ್. ಮಾರ್ಕಂಡೇಯ, ಮಂಜುನಾಥ ಆರತಿ, ನಾಗರಾಜ ಅಂಗಡಿ ಹಾಗೂ ಮಂಜುನಾಥ ವಣಗೇರಿ ಇವರುಗಳು ಉಪಸ್ಥಿತರಿದ್ದು, ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

About Mallikarjun

Check Also

ಉಪ ಲೋಕಾಯುಕ್ತರಿಂದ ಅ.30, 31 ರಂದು ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ

Public inquiry reception program by the Deputy Lokayukta on October 30th and 31st ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.