Breaking News
ಕೊಟ್ಟೂರಿನ ಸಿಟಿ ಆಸ್ಪತ್ರೆಯಲ್ಲಿ :ಪ್ರಾಧಿಕಾರಗದಿಂದ ಅನುಮತಿ ಇಲ್ಲದೆ ಅಕ್ರಮ ಕ್ಲಿನಿಕ್

Illegal clinic at City Hospital in Kotturu without permission from the authorities

ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದಲ್ಲಿ ಕೊಟ್ಟೂರು ಸಿಟಿ ಆಸ್ಪತ್ರೆಯನ್ನು ಸೂಕ್ತ ಪರವಾನಿಗೆಯನ್ನು ಪಡೆಯದೇ, ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕರ್ನಾಟಕ ಪ್ರವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಅಥಾರಿಟಿಯಿಂದ ನೋಂದಣಿಯಾಗದ ಪ್ರವೇಟ್ ಕ್ಲಿನಿಕ್ ಆಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಹೈ ಡೋಸ್ ಔಷಧಿಗಳನ್ನು ಬರೆದು, ಸುಂಕಪ್ಪ ಎಂಬುವ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.?

ಆಸ್ಪತ್ರೆಯ ಮೆಡಿಕಲ್ ಸ್ಟೋರ್ ಸಹ ಅಕ್ರಮವಾಗಿ ನಡೆಯುತ್ತಿದ್ದು, ಈ ಬಗ್ಗೆ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಪರವಾನಿಗೆಯ ಪ್ರಮಾಣಪತ್ರ ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿದಾಗ ಪ್ರಮಾಣ ಪತ್ರ ಪಡೆಯಲು ಆರು ತಿಂಗಳು ಕಾಲಾವಕಾಶ ಇದೆಯೆಂದು ಸಬೂಬು ಹೇಳಿರುತ್ತಾರೆ. ಇಂತಹ ಅಕ್ರಮ ಕ್ಲಿನಿಕ್‌ಗಳ ಸೀಜ್ ಮಾಡುವ ಮೂಲಕ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಲ್ಲದೇ ಕಾದು ನೋಡಬೇಕಾಗಿದೆ. ಎಂದು ಎ ಐ ಡಿ ಆರ್ ಎಂ ರಾಜ್ಯ ಕಾರ್ಯದರ್ಶಿ ಕೆ ರೇಣುಕಮ್ಮ,ರಾಮೇಶ್, ಮಂಜುನಾಥ್ ಪತ್ರಿಕೆ ತಿಳಿಸಿದರು


ಈ ರೀತಿಯಾಗಿ ಅಕ್ರಮವಾಗಿ ಪ್ರೈವೇಟ್ ಕ್ಲಿನಿಕ್ ನಡೆಸಲು ಆರೋಗ್ಯ ಇಲಾಖೆಯಲ್ಲಿ ನಿಯಮಾವಳಿಗಳು ಇವೆಯೇ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸಾರ್ವಜನಿಕರಾದ ರಮೇಶ್ ಪ್ರಶ್ನಿಸುತ್ತಿದ್ದಾರೆ.

ಕಳ್ಳ ಹೊಕ್ಕ ಮನೆ ಉಳಿಯಬಹುದು ಕೊಳ್ಳಿ ಹೊಕ್ಕ ಮನೆ ಉಳಿಯಲಾರದು : ಶರಣಬಸಪ್ಪ ದಾನಕೈ

A house entered by a thief may survive, but a house entered by a thief cannot survive: Sharanabasappa Danakai

ಕುಕನೂರ : ಕಳ್ಳ ಹೊಕ್ಕ ಮನೆ ಉಳಿಯಬಹುದು ಆದರೆ ಕೋಳ್ಳಿ ಹೋಕ್ಕ ಮನೆ ಉಳಿಯಲಾರದು ಸರಾಯಿ ಮದ್ಯ ಇದು ಕೋಳ್ಳಿ ಇದ್ದಂತೆ ಆದ್ದರಿಂದ ಮದ್ಯಪಾನ ಪ್ರೀಯರು ಇದರಿಂದ ದೂರವಿರಬೇಕು ಎಂದು ಅಖಿಲ ಕರ್ನಾಟಕ ಕೊಪ್ಪಳ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ದೀಪ ಬೆಳಗಿಸಿ ಮಾತನಾಡಿದರು. ದುಷ್ಟಚಟಗಳಿಂದ ದೂರವಿದ್ದಾಗ ನೆಮ್ಮದಿ ಕಾಣುವದಕ್ಕೆ ಸಾದ್ಯ ಎಂದು ಪಿಡಿಓ ವೀರನಗೌಡ ಚನ್ನನಗೌಡ್ರ ಅವರು ಮೈಲಾರಲಿಂಗೇಶ್ವರ ದೇವಸ್ಥಾನ ತಳಕಲ್ಲ ಗ್ರಾಮದಲ್ಲಿ ನವಜೀವನೋತ್ಸವ ಕಾರ್ಯಕ್ರಮದಲ್ಲಿ ನವಜೀವನ ಸಮಿತಿಯವರಿಗೆ ಸಲಹೆ ನೀಡಿದರು. ಮದ್ಯವ್ಯಸನಿಗಳು ಮೋಜು ಮಸ್ತಿಗಾಗಿ ಕುಡಿದು ನಂತರ ಚಟಕ್ಕೆ ದಾಸರಾಗಿ ಚಟ್ಟ ಕಟ್ಟಿ ಅವರ ಬದುಕು ಕಗ್ಗತ್ತಲಾಗಿ ಅವರ ಕುಟುಂಬ ಬೀದಿಪಾಲಾಗಿ ಹೋಗುತ್ತದೆ ಆದ್ದರಿಂದ ಜಾಗೃತಿವಹಿಸಬೇಕು ಎಂದು ಜನಜಾಗೃತಿ ಸಮಿತಿ ಸದಸ್ಯ ವೀರಣ್ಣ ನಿಂಗೋಜಿ ಅವರು ಮಾತನಾಡಿದರು. ಕುಟುಂಬದಲ್ಲಿ ಮದ್ಯಮಾರಟ ಮಾಡುವ ಸಮಯದಲ್ಲಿ ವಿದ್ಯಾವಂತ ಮಹಿಳೆಯರು ಸಿಲುಕಿ ಕೋರ್ಟ ಕಛೇರಿ ಅಲೆದಾಡುವ ಪ್ರಸಂಗ ಜರುಗಿವೆ ಇದರಿಂದ ಹೊರಬರಲಾರದೆ ಜೀವನದಲ್ಲಿ ಜಿಗುಪ್ಸೆಹೊಂದಿ ತೊಂದರೆ ಅನುಭವಿಸುತ್ತದ್ದಾರೆ ಆದ್ದರಿಂದ ಜಾಗೃತರಾಬೇಕು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯೆ ಸಾವಿತ್ರಿ ಗೋಲ್ಲರ ಅವರು ಮಾತನಾಡಿದರು. ಜೀವನದ ಬದುಕಿನಲ್ಲಿ ಬದಲಾವಣೆ ಪರ್ವ ಜರುಗಿದಾಗ ಹೊಸ ಬದುಕು ನಿರ್ಮಿಸಲು ಸಾದ್ಯ ಎಂದು ಜಿಲ್ಲಾ ಜನಜಾಗೃತಿ ಸಮತಿ ಸದಸ್ಯ ಕರಬಸಯ್ಯ ಬಿನ್ನಾಳ ಅವರು ಮಾತನಾಡಿದರು.ತಳಕಲ್ಲ ನವಜೀವನ ಸಮತಿ ಅಧ್ಯಕ್ಷ ಷಣ್ಮುಖಯ್ಯ ಅವರು ಅದ್ಯಕ್ಷತೆ ವಹಿಸಿ ಮಾತನಾಡಿ ನಮಗೆಲ್ಲರಿಗೂ ಈ ಯೋಜನೆಯಲ್ಲಿ ಗೌರವ ಸ್ಥಾನ ಸಿಗುವದಕ್ಕೆ ಸಾದ್ಯವಾಗಿತು ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.. ಈ ವೇಳೆ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಪ್ರಕಾಶ್ ರಾವ್ , ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ನಾಗೇಶ್ ವಾಯ್ ಎ , ಯಲಬುರ್ಗಾ ಯೋಜನಾದಿಕಾರಿ ಸತೀಶ ಜಿ, ಮುಖಂಡರಾದ ಲಿಂಬನಗೌಡ ಪೋಲಿಸ್ ಪಾಟೀಲ, ಮೇಲ್ವಿಚಾರಕ ಶಿವಪ್ಪ ಪೂಜಾರ, ಸೇವಾಪ್ರತಿನಿಧಿಗಳಾದ ಸುಮಂಗಲಾ,ನೀಲಮ್ಮ,ಸುನಂದಾ ಹಾಗು ಉಡಚಮ್ಮದೇವಿ ನವ ಜೀವನ ಸಮಿತಿ ತಳಕಲ್ಲ ಸಮಿತಿಯ ಸರ್ವ ಪದಾಧಿಕಾರಿಗಳು, ನವಜೀವನ ಪೋಷಕರು ಭಾಗವಹಿಸಿದ್ದರು.

ಸಾಲಬಾಧೆ ಗೆ ಆತ್ಮಹತ್ಯೆ :  ಮೂವರ ಬಂಧನ

Suicide due to debt: Three arrested

ಕೊಟ್ಟೂರು : ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ  ಬಡ್ಡಿ ಸಾಲ ಕೊಟ್ಟು ಜನರಿಗೆ ಕಿರುಕುಳ ನೀಡಿರುವುದು ಹೆಚ್ಚಾಗಿದ್ದು
ಹೆಚ್ಚಿನ ಬಡ್ಡಿಗೆ ಹಣ ನೀಡಿ ಜನರ ಜೀವದ ಜೋತೆ ಚೆಲ್ಲಾಟ ಅಡುತ್ತಿದ್ದಾರೆ.ಬಡಪಾಯಿ ಕುಟುಂಬಗಳು ಬಿಂದಿಗೆ ಬಿದ್ದಿರುವ ಘಟನೆ ನಡೆದಿದೆ.

ಕೊಟ್ಟೂರು ತಾಲೂಕಿನ ಗೊಲ್ಲರ ಹಳ್ಳಿ ನಿವಾಸಿ ಚಂದ್ರಯ್ಯ (43), ಸೌಮ್ಯ(35), ಭವಾನಿ (12) ಮತ್ತು ಶಿವಕುಮಾರ್ (8) ಎಂಬವರು ವಿಜಯನಗರ ಜಿಲ್ಲಾ ಹಂಪಿಯಲ್ಲಿ ಕ್ರಿಮಿನಾಶಕ ಸೇವಿಸಿದ್ದರು. ಚಂದ್ರಯ್ಯ ಮೃತಪಟ್ಟಿದ್ದು, ಮೂವರು ಹೊಸಪೇಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡರು.

ಚಂದ್ರಯ್ಯ ಗೆ ನಾಲ್ವರು ಸಾಲ ನೀಡಿದ್ದು, ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಎಫ್‌ ಐ ಆರ್ ದಾಖಲಾಗಿದೆ. ಇನ್ನು ಎಸ್‌ ಬಿ ಐ ಸೇವಾ ಕೇಂದ್ರದ ಸೂಪರ್‌ ವೈಸರ್ ಆಗಿದ್ದ ಬಸವರಾಜ, ಅಕೌಂಟ್ ಬ್ಲಾಕ್ ಮಾಡಿ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದು, ಈತನ ವಿರುದ್ಧವೂ ಎಫ್‌ ಐ ಆ‌ರ್ ದಾಖಲಾಗಿದೆ.

ಸಾಲ ಬಾಧೆಯಿಂದಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ  ಯತ್ನಿಸಿದ್ದ ಕೊಟ್ಟೂರು ತಾಲೂಕಿನ ಗೊಲ್ಲರಹಳ್ಳಿಯ ಚಂದ್ರಯ್ಯ (43) ಹಂಪಿಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಟ್ಟೂರು ಮೂಲದ ಶ್ರೀಕಾಂತ್ ಶೆಟ್ಟಿ, ಜಗದೀಶ್ ಹಾಗೂ ಬಸವರಾಜ ಬಂಧಿತರು. ಹುಣಸಿ ಕಟ್ಟಿ ಗುರು, ವಾಮಯ್ಯ ಎಂಬುವವರನ್ನು ಪೊಲೀಸರು ಮೂವರನ್ನು ಗುರುವಾರ ಬಂಧಿಸಿದ್ದಾರೆ. ಪತ್ರಿಕೆಗೆ ತಿಳಿಸಲಾಯಿತು