If Bagalkote University is closed, the dream of higher education of 45 thousand students will be axed..?

ವರದಿ:ಸಚೀನ ಆರ್ ಜಾಧವ
ಸಾವಳಗಿ: 2023-24ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಬರುವ ಮಹಾವಿದ್ಯಾಲಯಗಳನ್ನು ಒಳ ಪಡುವಂತೆ ಜಮಖಂಡಿ ನಗರದಲ್ಲಿ ಹೊಸದಾಗಿ ಬಾಗಲಕೋಟೆ ವಿವಿ ಸ್ಥಾಪನೆ ಮಾಡಲಾಗಿತ್ತು. ಇದು ನಗರಕ್ಕೆ ಬಯಸದೇ ಬಂದ ಭಾಗ್ಯವು ಹೌದು. ರಾಣಿ ಚೆನ್ನಮ್ಮ ವಿವಿಯಿಂದ ವಿಭಜನೆಗೊಂಡು ಪ್ರಾದೇಶಿಕ ಅಧಿಕಾರವ್ಯಾಪ್ತಿ, ಕಾರ್ಯಭಾರದ ಆಧಾರದಮೇಲೆ ಬೋದಕ-ಭೋದಕೇತರ ಸಿಬ್ಬಂದಿ, ಸ್ನಾತಕೋತ್ತರಕೇಂದ್ರ, ಸಂಯೋಜಿತ ಕಾಲೇಜುಗಳು, ಸ್ಥಿರಾಸ್ತಿ-ಚರಾಸ್ತಿಗಳ ಹಂಚಿಕೆಯು ಆಗಿದೆ. ಜಿಲ್ಲೆಯ ವ್ಯಾಪ್ತಿಗೆ ಬರುವ 73 ಮಹಾವಿದ್ಯಾಲಯಗಳ ಸಂಯೋಜನೆ ಹೊಂದಿದ್ದು, 7 ಸ್ನಾತಕೊತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ವಿವಿ ವ್ಯಾಪ್ತಿಗೆ ಬರುವ ಮಹಾವಿದ್ಯಾಲಯಗಳಲ್ಲಿ 22 ಸ್ನಾತಕ ಹಾಗೂ 13 ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು ಬೀದರನ ವಿಶ್ವವಿದ್ಯಾಲಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ವಿಶ್ವವಿದ್ಯಾಲಯವಾಗಿದೆ .
ಸರ್ಕಾರ ಮುಚ್ಚಲು ತೀರ್ಮಾನಿಸಿದ 9 ವಿದ್ಯಾಲಯಗಳ ಪೈಕಿ ಜಮಖಂಡಿ ನಗರದಲ್ಲಿರುವ ಬಾಗಕೋಟೆ ವಿಶ್ವವಿದ್ಯಾಲಯವು ಒಂದು. ಪ್ರಾರಂಭದ ವರ್ಷ 2023-24 ರಲ್ಲಿ 14768 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ, 2024-25 ನೇ ಸಾಲಿನಲ್ಲಿ 15ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಪ್ರಸ್ತುತ 30 ಸಾವಿರ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ 15 ಸಾವಿರ ವಿದ್ಯಾರ್ಥಿಗಳ ಪ್ರವೇಶ ಪಡೆದರೆ 45 ಸಾವಿರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲಿರುವ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಮುಚ್ಚಿದರೆ 45 ಸಾವಿರ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗದ ಕನಸಿಗೆ ಕೊಡಲಿ ಪೆಟ್ಟು ಬಿದ್ದಂತಾಗುತ್ತದೆ. ಗ್ರಾಮೀಣಭಾಗದ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿದ್ದು ಶೇ.95 ರಷ್ಟು ಹಿಂದುಳಿದವರ್ಗ, ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿದ್ದಾರೆ ಈ ಪೈಕಿ ಶೇ.55 ರಷ್ಟು ವಿದ್ಯಾರ್ಥಿನಿಯರಿರುವದು ವಿವಿಯ ವಿಶೇಷ. ಕ್ಯುಪಿಡಿಎಸ್ ತಂತ್ರಾಂಶದ ಮೂಲಕ ಪರೀಕ್ಷೆಗಳನ್ನು ನಡೆಸುವದು ಹಾಗೂ ಅರ್ನವೈಲ್‌ಲರ್ನನ ಪರಿಕಲ್ಪನೆಯನ್ನು ಜಾರಿಗೆ ತರುವ ಮೂಲಕ ಅಂಚಿನ ಸಮುದಾಯದ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತಿದೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲಾ ಕೇಂದ್ರಸ್ಥಾನದ ಮಧ್ಯದ ಜಮಖಂಡಿಯಲ್ಲಿ ವಿಶ್ವವಿದ್ಯಾಲಯ ಇರುವದರಿಂದ ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ. ಪ್ತಸ್ತುತ 3ಜನ ಖಾಯಂ ಶಿಕ್ಷರು 15 ಜನ ಖಾಯಂ ಸಿಬ್ಬಂದಿಗಳು, 18 ಜನ ಅತಿಥಿ ಶಿಕ್ಷಕರು, 18 ಜನ ಗುತ್ತಿಗೆ ಕೆಲಸಗಾರರು, 450 ಪಿಜಿ ವಿದ್ಯಾಥಿಗಳಿದ್ದಾರೆ.
ವಿಜಯಪುರದ ವಿದ್ಯಾಲಯಗಳನ್ನು ಇಲ್ಲಿ ಸಂಯೋಜನೆ ಗೊಳಿಸಿದರೇ 220 ವಿದ್ಯಾಲಯಗಳ ಸಂಯೋಜನೆ ಹೊಂದಿ, ರಾಜ್ಯದ ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರುವದು ಖಚಿತ. ವಿಜಯಪುರದ ವಿದ್ಯಾಲಯಗಳು ಬೆಳಗಾವಿಯ ವಿವಿಯ ವ್ಯಾಪ್ತಿಗೆ ಬರುವದ ರಿಂದ ಆರ್ಥಿಕ ಹೊರೆ ಹೆಚ್ಚಿದೆ ಮತ್ತು 5 ಗಂಟೆ ಪ್ರಯಾಣಿಸಿ ಬೆಳಗಾವಿ ತಲುಪಬೇಕಾಗುತ್ತದೆ. ಆದರೆ ಜಮಖಂಡಿ ಕೇವಲ 65 ಕಿ,ಮಿ ದೂರ ವಿರುವದರಿಂದ ವಿಜಯಪುರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಮುಚ್ಚಲು ಪ್ರಯತ್ನಿಸಬಾರದು ಎಂದು ಸಾರ್ವಜನಿಕರು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
1) ನಗರಕ್ಕೆ ಆದರ್ಶಪ್ರಾಯವಾಗಿರುವ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಯತ್ನವನ್ನು ಸರ್ಕಾರ ಕೂಡಲೇ ಹಿದಂಕ್ಕೆ ಪಡೆಯಬೇಕು, ಕೇವಲ 2 ವರ್ಷಗಳ ಅವಧಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು ವರ್ಷಕ್ಕೆ 7 ಕೋಟಿ ರೂ. ಆಂತರಿಕ ಆದಾಯ ಹೊಂದಿದೆ. ಸರ್ಕಾರ ಕೂಲಂಕುಶವಾಗಿ ಪರಿಸಿಲಿಸಿ ಕ್ರಮ ಜರುಗಿಸಬೇಕು.ಉತ್ತರಕರ್ನಾಟಕದ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗದ ಕನಸಿಗೆ ತಣ್ಣಿರೆರೆಚುವ ಕೆಲಸ ಮಾಡಬಾರದು.-
ಸಂದೀಪ ಬೆಳಗಲಿ,
ಮಾಜಿ ಸಿಂಡಿಕೇಟ ಸದಸ್ಯರು ರಾಣಿಚೆನ್ನಮ್ಮ ವಿವಿ ಹಾಗೂ ಬಾಗಲಕೋಟೆ ವಿವಿ ಹೋರಾಟ ಸಮಿತಿಯ ಅಧ್ಯಕ್ಷರು ಜಮಖಂಡಿ.
2) ನಗರದಲ್ಲಿರುವ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ವಿಶ್ವಕ್ಕೆ ಆಧ್ಯಾತ್ಮವನ್ನು ಪರಿಚಯಿಸಿದ ತತ್ವಜ್ಞಾನಿ ಗುರುದೇವ ರಾನಡೆ ಅವರ ಹೆಸರನ್ನಿಡಬೇಕು, ಜಮಖಂಡಿ ಮಹತ್ವದ ಕೇಂದ್ರಸ್ಥಾನ, ಭವಿಷ್ಯದ ಜಿಲ್ಲೆ ಆದ್ದರಿಂದ ಇಲ್ಲಿರುವ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಯತ್ನ ಸರ್ಕಾರದ ಮೂರ್ಖತನದ ನಿರ್ಧಾರ. ಉತ್ತರ ಕರ್ನಾಟಕ ಭಾಗದ ಅತ್ಯಂತ ಪ್ರಮುಖ ವಿಶ್ವವಿದ್ಯಾಲಯವಾಗಿ ಬೆಳೆಯುವ ಎಲ್ಲಾ ಸಾಧ್ಯತೆಗಳಿದ್ದು ಬಾಗಲಕೋಟೆ ವಿವಿಯನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು,
ಶ್ರೀಕಾಂತ ಕುಲಕರ್ಣಿ
ಮಾಜಿ ಶಾಸಕರು ಜಮಖಂಡಿ.
3) ಬಾಗಲಕೋಟೆ ವಿಶ್ವ ವಿದ್ಯಾಲಯ ಸಲುವಾಗಿ ಹಗಲು ರಾತ್ರಿ ಹೋರಾಟ ಮಾಡಿ ಇಂದು ಜಮಖಂಡಿ ನಗರದಲ್ಲಿ ವಿಶ್ವ ವಿದ್ಯಾಲಯ ಪ್ರಾರಂಭವಾಗಿದೆ ಇಂದು ವಿಶ್ವ ವಿದ್ಯಾಲಯ ಮುಚ್ಚುವ ಕಾರ್ಯ ಮಾಡುತ್ತಿರುವ ಸರ್ಕಾರದ ನಡೆ ಸರಿ ಅಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತದೆ.
ಸಿದ್ಧಾರ್ಥ್ ತಳಕೇರಿ
ವಿವಿ ಹೋರಾಟ ಸಮಿತಿ ಕಾರ್ಯದರ್ಶಿ ಜಮಖಂಡಿ.
ಗ್ರಾಮ ಪಂಚಾಯತ ಸದಸ್ಯರು ಸಾವಳಗಿ