ವ್ಯಕ್ತಿ ಕಾಣೆ: ಪತ್ತೆಗೆ ಮನವಿ

Missing person: appeal for tracing

ಕೊಟ್ಟೂರು:- ತಾಲೂಕಿನ ತಿಪ್ಪೇಸ್ವಾಮಿ ಡಿ.ಎನ್. ಎಂಬವವರ ಮಗನಾದ ಮೂಗಪ್ಪ ಡಿ.ಎನ್. ದಿನಾಂಕ 22.12.2024 ರ ಬೆಳಗ್ಗೆ 3.00 ಗಂಟೆಗೆ ಮನೆಯಿಂದ ಹೋದವನು ಪತ್ತೆಯಾಗಿಲ್ಲ. ನೆಂಟರಿಷ್ಟರ ಮನೆ ಹಾಗೂ ಸ್ನೇಹಿತರ ಮನೆಯಲ್ಲಿ ಆತನಿಗಾಗಿ ಹುಡುಕಾಟ ನಡೆಸುವುದರ ಜತೆಗೆ ಉಳಿದ ಕಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ, ಕಾಣೆಯಾಗಿರುವ ಬಗ್ಗೆ ಆತನ ತಂದೆ ತಿಪ್ಪೇಸ್ವಾಮಿ ಡಿ ಎನ್ ಅವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಮೇಲೆನ ವ್ಯಕ್ತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಕೊಟ್ಟೂರು ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

ಅಂಜನಾದ್ರಿ ಬೆಟ್ಟ ಹುಂಡಿಯಲ್ಲಿ ರೂ 61,64,760/- ಸಂಗ್ರಹ

61,64,760/- collected in Anjanadri Betta Hundi

ಗಂಗಾವತಿ, ತಾಲುಕಿನ ಆನೆಗುಂದಿ ಸಮೀಪದ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟದಲ್ಲಿ
ಇಂದು ದಿ. 20/01/2025 ರಂದು ಎಂ ಹೆಚ್ ಪ್ರಕಾಶ ರಾವ್ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ಆದೇಶದ ಪ್ರಕಾರ ಹಾಗೂ ಅವರ ಉಪಸ್ಥಿತಿಯಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು.

(ದಿ.02-12-2024 ರಿಂದ 20-01-2025 ರವರೆಗೆ ಒಟ್ಟು 50 ದಿನಗಳ ಅವಧಿಯಲ್ಲಿ) ಒಟ್ಟು ರೂ.61,64,760/- ರೂ ಗಳು ಸಂಗ್ರಹವಾಗಿರುತ್ತದೆ. *ವಿದೇಶಿ ನಾಣ್ಯಗಳು , ನೋಟುಗಳು( * ಯು ಎಸ್ ಎ , ನೇಪಾಳ್, ಮತ್ತು ಇತರೆ ದೇಶ ಗಳು )ಹುಂಡಿಯಲ್ಲಿ ಸಂಗ್ರಹವಾಗಿರುತ್ತವೆ.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಶಿರಸ್ತೇದಾರಾದ ರವಿಕುಮಾರ್ ನಾಯಕವಾಡಿ , ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಮಂಜುನಾಥ ಹಿರೇಮಠ, ಪ್ರ.ದ.ಸ, , ಮಹಮ್ಮದ್ ರಫಿ, ಗಾಯತ್ರಿ, ಶ್ರೀರಾಮ ಜೋಶಿ , ಸೌಭಾಗ್ಯಮ್ಮ, ಕವಿತಾ, ಸುಧಾ ,ಕವಿತಾ ಎಸ್ ದ್ವಿ.ದ.ಸ. ಮಹಾಲಕ್ಷ್ಮಿ ,ಪೂಜಾ , ಅಸ್ಲಾಂ ಪಟೇಲ್, ಮಂಜುನಾಥ ದುಮ್ಮಾಡಿ ಗ್ರಾಮ ಆಡಳಿತ ಅಧಿಕಾರಿಗಳು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಮ್ಯಾನೇಜರ್ ನವೀನ್ ಕುಮಾರ , ಸತೀಶ್, ಪ್ರವೀಣ್ ಕುಮಾರ ವಿನೋದ್ ,ಶ್ರೀಮಂತ . ಭೀಮಪ್ಪ HC ಪೋಲಿಸ್ ಸಿಬ್ಬಂದಿ , ಪ್ರವಾಸಿ ಮಿತ್ರರು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ, ಮಹಿಳಾ ಸ್ವಯಂ ಸೇವಾ ಸಂಘದವರು ಹಾಜರಿದ್ದರು

ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ .02/12/2024 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ ರೂ.26,60,917 /- ಸಂಗ್ರಹವಾಗಿತ್ತು.

ಸರ್ಕಾರವು ‘ ಹಬ್ ಅಂಡ್ ಸ್ಪೋಕ್ ‘ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವದು ಖಂಡನೆ

The government is going to close down government schools in the name of ‘hub and spoke’

ಕೊಪ್ಪಳ: ರಾಜ್ಯದ ಕಾಂಗ್ರೆಸ್‌ ಸರ್ಕಾರವು ‘ ಹಬ್ ಅಂಡ್ ಸ್ಪೋಕ್ ‘ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಕಡಿಮೆ ಹಾಜರಾತಿ ಇರುವ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜನೆಗೊಳಿಸುವುದಾಗಿ ಸರ್ಕಾರವು ತಿಳಿಸಿದೆ. ಈ ಮೂಲಕ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯದ ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. 4 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ಈ ನಡೆಯನ್ನು ಎಐಡಿಎಸ್ಓ ಕೊಪ್ಪಳ ಜಿಲ್ಲಾ ಮಿತಿಯು ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತದೆ.

 ಹಿಂದಿನ ಬಿಜೆಪಿ ರಾಜ್ಯ ಸರ್ಕಾರವು ಇದೇ ನೆಪವೊಡ್ಡಿ ಎನ್ಈಪಿ-2020ರ ಅಡಿಯಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಅದರ ವಿರುದ್ಧ ರಾಜ್ಯದ ವಿದ್ಯಾರ್ಥಿಗಳು ಎಐಡಿಎಸ್ಓ ನೇತೃತ್ವದಲ್ಲಿ ಬೃಹತ್ ಆಂದೋಲನ ನಡೆಸಿ 35 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸುವುದರ ಮೂಲಕ ಶಾಲೆಗಳನ್ನ ರಕ್ಷಿಸಿದ್ದರು. ಆದರೆ, ಈಗ ಮತ್ತೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದರ ಮುಖಾಂತರ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತ-ಕಾರ್ಮಿಕರು ಹಾಗೂ ಜನ ಸಾಮಾನ್ಯರಿಗೆ ವಿಶ್ವಾಸದ್ರೋಹವೆಸಗಿದೆ. ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ. ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಮುಚ್ಚುವುದು, ‘ನೆಗಡಿ ಬಂದರೆ ಮೂಗು ಕತ್ತರಿಸಿದಂತೆ’! ಸರ್ಕಾರವು ತನ್ನ ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಜನವಿರೋಧಿ ನಿರ್ಧಾರವನ್ನು ಕೈಬಿಡಬೇಕು ಹಾಗೂ ಕೂಡಲೇ ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯಗಳನ್ನು ನೀಡಿ ರಕ್ಷಿಸಬೇಕೆಂದು ಎಐಡಿಎಸ್ಓ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ ಹಾಗೂ ಇದರ ವಿರುದ್ಧ ಪ್ರಬಲ ಪ್ರತಿರೋಧ ಚಳುವಳಿ ಬೆಳೆಸಬೇಕೆಂದು ರಾಜ್ಯದ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣಪ್ರೇಮಿ ಜನತೆಗೆ ಕರೆ ನೀಡುತ್ತದೆಎಂದರು.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆಸಾರ್ವಜನಿಕರ ಸಹಕಾರ ಅಗತ್ಯ: ಸಂತೋಷ‌ ಲಾಡ್

Public’s cooperation is needed to eradicate child labour: Santosh Lad


ರಾಯಚೂರು ಜ.20 (ಕರ್ನಾಟಕ ವಾರ್ತೆ): ಗ್ರಾಮೀಣ ಭಾಗದ ಹಲವೆಡೆ ಇನ್ನು ಜೀವಂತವಾಗಿದೆ ಎನ್ನಲಾಗುವ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯವಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಎಸ್. ಲಾಡ್ ಅವರು ಹೇಳಿದರು.
ಜನವರಿ 20ರಂದು, ಸೋಮವಾರ, ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಇಂಡಸ್ಟ್ರಿಯಲ್ ಡಿಸ್ಪೋರ್ಟ್ ಕಾಯ್ದೆಯಡಿ ಸುಮಾರು 183 ಪ್ರಕರಣಗಳು ದಾಖಲಾಗಿದ್ದು, ಸುಮಾರು 133 ಪ್ರಕರಣಗಳನ್ನು ಬಗೆಹರಿಸಲಾಗಿದೆ‌ ಎಂದರು.
ಬಾಲ ಕಾರ್ಮಿಕ ಕಾಯ್ದೆಯಡಿ ಸುಮಾರು 256 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಬೇರೆ ರಾಜ್ಯಗಳಿಂದ ಬರುವಂತಹ ಮಕ್ಕಳನ್ನು ರಕ್ಷಣೆ ಮಾಡುವಂತ ಕಾರ್ಯ ಸಹ ಮಾಡಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಾಲ ಕಾರ್ಮಿಕ ಇಲಾಖೆಯಲ್ಲಿ ದೊರಕುವಂತೆ ಕಾರ್ಯವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯಡಿ ರಾಯಚೂರ ಜಿಲ್ಲೆಯಲ್ಲಿ 12, ಕಲಬುರಗಿ ಜಿಲ್ಲೆಯಲ್ಲಿ 37, ಬೀದರ ಜಿಲ್ಲೆಯಲ್ಲಿ 9, ಯಾದಗಿರಿ ಜಿಲ್ಲೆಯಲ್ಲಿ 34, ಕೊಪ್ಪಳ ಜಿಲ್ಲೆಯಲ್ಲಿ 5 ಹಾಗೂ ವಿಜಯನಗರ ಜಿಲ್ಲೆಯಲ್ಲಿ 9 ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 20 ಸೇರಿದಂತೆ ಒಟ್ಟು 126 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಮೊಕದ್ದಮೆ ಹೂಡಲು 43 ಪ್ರಕರಣಗಳು ಬಾಕಿ ಇವೆ. 226 ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಮಾನ್ವಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ್, ದೇವದುರ್ಗ ವಿಧಾನಸಭೆ ಕ್ಷೇತ್ರದ ಶಾಸಕರಾದ ಕರೆಮ್ಮ ಜಿ.ನಾಯಕ, ಆಯುಕ್ತರಾದ ಡಾ.ಹೆಚ್.ಎನ್.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ನಿತೀಶ್ ಕೆ., ಕಾರ್ಮಿಕ ಇಲಾಖೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯದರ್ಶಿಯಾದ ಭಾರತಿ ಡಿ., ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ ಇದ್ದರು.

ಆನೆ ದಾಳಿಗೆ ಬೆಳೆ ನಾಶ ರೈತ ಸಾಲದ ಸುಳಿಯಲ್ಲಿ

Crop destruction due to elephant attack in the whirlwind of farmer’s loan.


ವರದಿ : ಬಂಗಾರಪ್ಪ .ಸಿ .
ಹನೂರು : ನಮ್ಮ ಭೂಮಿಯಲ್ಲಿ ಬೆಳೆದ ಬೆಳೆಯಿಂದ ಮಾಡಿದ ಸಾಲವನ್ನು ತೀರಿಸಲು ಪ್ರಯತ್ನ ಮಾಡುವ ಸಮಯದಲ್ಲಿ ಜಮಿನಿಗೆ ಆನೆ ನುಗ್ಗಿ ಬೆಳೆನಾಶ ಮಾಡಿದೆ ಎಂದು ರೈತರಾದ ಬಸವರಾಜು ಕಾಂಚಳ್ಳಿ ತಿಳಿಸಿದರು.
ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾ. ಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಬಸವರಾಜು ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಬಾಳೆ . ಕಬ್ಬು ಬೆಳೆಯನ್ನು ಆನೆಗಳ ದಾಳಿಯಿಂದ ನಾಶವಾಗಿರುವ ಘಟನೆ ಶನಿವಾರ ತಡರಾತ್ರಿ ಬೆಳಕಿಗೆ ಬಂದಿದೆ.

ರೈತರಾದ ಕಾಂಚಳ್ಳಿ ಗ್ರಾಮದ ಬಸವರಾಜು ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು 2 ಎಕರೆ 29 ಸೆಂಟು (ಸರ್ವೇ ನಂ :439) ಬೆಳೆಗಳನ್ನು ನಾಶ ಮಾಡಿದೆ. ಸುಮಾರು 3 ರಿಂದ 4 ಲಕ್ಷರೂಪಾಯಿ ಸಾಲ ಮಾಡಿ ಹಾಕಿದ್ದ ಬೆಳೆ ಕಾಡು ಪ್ರಾಣಿಗಳ ಪಾಲಾಗಿದ್ದು, ಹಗಲು ಇರುಳು ಎನ್ನದೆ ಕಾವಲು ಕಾಯ್ದು, ಗೊಬ್ಬರವನ್ನು ಸಹ ಹಾಕಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ರೈತರ ಗೋಳು ಕೇಳುವವರು ಯಾರು ಎಂಬಂತಾಗಿದೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರು ಸಹ ರೈತ ಬೆವರು ಸುರಿಸಿ ಬಿತ್ತನೆ ಮಾಡಿ, ಬೆಳೆಯನ್ನ ಕಾಪಾಡಿಕೊಂಡು ಬಂದಿರುತ್ತಾರೆ, ಆದರೆ ಈಗ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗಿದ್ದು ರೈತನಿಗೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿಪರಿಹಾರ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘವು ಆಗ್ರಹಿಸುತ್ತಿದೆ .

ಲಿಂಗಾಯತರು ಮಾಡಬೇಕಾದದ್ದು ಏನು ?

What should Lingayats do?

ವೀರಶೈವರಿಗೆ ಪರ್ಯಾಯ ಸಂಘಟನೆಯೊಂದೇ ಪರಿಹಾರವಲ್ಲ . ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿತವಾಗಿ 121 ವರ್ಷಗಳು ಕಳೆದಿವೆ .
ಅಂದಿನ ಕಾಲಕ್ಕನುಗುಣವಾಗಿ ವೀರಶೈವ ಲಿಂಗಾಯತ ಒಂದೇ ಎನ್ನುವ ಭಾವವಿತ್ತು ಅಭಿಪ್ರಾಯಗಳು ಒಂದೇ ಇದ್ದವು. ಉತ್ತರ ಕನ್ನಡ ಭಾಷೆಯಲ್ಲಿ ಕೇವಲ ಲಿಂಗಾಯತ ಇತ್ತು 1978 ರ ಈಚೆಗೆ ವೀರಶೈವ ದಕ್ಷಿಣದಿಂದ ಉತ್ತರ ಗಂಡು ಕನ್ನಡಿಗರ ಹೆಗಲ ಮೇಲೇರಿತು
ಇಂದು ಪರ್ಯಾಯ ಸಂಘಟನೆ ಮಾಡಿ ಸಂಘರ್ಷಕ್ಕಿಲ್ಯುತ್ತೇವೆ ಎಂದೆನ್ನುವುದು ಒಂದು ಭ್ರಾ೦ತಿ ಭ್ರಮೆ.
ಎಲ್ಲವೊ ಕೊನೆಗೊಳ್ಳುವುದು ರಾಜಕೀಯ ಲೆಕ್ಕಾಚಾರ.

ನನ್ನ ಕೆಲವು ಪ್ರಶ್ನೆಗಳು ಸಂಬಂಧಿತರು ಉತ್ತರಿಸಲಿ.

ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ಅವರು ಸಲ್ಲಿಸಿದ ವರದಿ ಆಧಾರದ ಮೇಲೆ ಕರ್ನಾಟಕ ಅಂದಿನ ಸರಕಾರವು ಕೇಂದ್ರ ಮೈನಾರಿಟಿ
ಇಲಾಖೆಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಮೇಲೆ ಸಂಬಂಧಿತ ಲಿಂಗಾಯತ ಮಠಗಳು ಸಂಘಟನೆಗಳು ಕಳೆದ ಏಳು ವರ್ಷಗಳಿಂದ ಮತ್ತೆ ಪುಸ್ಟಿಕರಿಸಿದ ಅರ್ಜಿಯನ್ನು ಏಕೆ ಸಲ್ಲಿಸಲಿಲ್ಲ.
ಅವತ್ತಿನ ಸಮ್ಮಿಶ್ರ ಸರಕಾರ ಕೇಂದ್ರ ಸರಕಾರಕ್ಕೆ ಏಕೆ ಮತ್ತೆ ಮೆಲ್ಮನವಿ ಸಲ್ಲುಸಲಿಲ್ಲ.
ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಮಾನ್ಯತೆಗೆ ಲಿಂಗಾಯತರ ಪ್ರಾಮಾಣಿಕ ಗುಣಮಟ್ಟದ ಪ್ರಯತ್ನವು ನಡೆಯಲಿಲ್ಲ.ಇದೊಂದು ರಾಜಕೀಯ ಸಮಾವೇಶ ಅಥವಾ ಮತಗಳ ವಿಭಜನೆ ಧ್ರುವಿಕರಣ ಎಂದರೆ ತಪ್ಪಾಗದು.

1 ) 1963 ರಲ್ಲಿ ಸಿಖ 1993 ರಲ್ಲಿ ಬೌದ್ಧ 2013 ರಲ್ಲಿ ಜೈನ ಸ್ವತಂತ್ರ ಧರ್ಮ ಮಾನ್ಯತೆ ಪಡೆದವು ಅವುಗಳನ್ನು ಯಾವ ಯಾವ ರಾಜ್ಯಗಳು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದವು ?
2 ) ಅಲ್ಪ ಸಂಖ್ಯಾತ ಆಯೋಗದ ರಚನಾಯೆಯಾದ ಮೇಲೆ ಸಿಖ್ ಮತ್ತು ಬೌದ್ಧ ಧರ್ಮಗಳು ಅವುಗಳ ಮಾನ್ಯತೆ ಪಡೆದವು.
3 ) ಕಾನೂನಿನಾತ್ಮಕ ಉಲ್ಲೇಖವಿರಲು ನಾವು ಅಂದರೆ ಸಮಸ್ತ ಲಿಂಗಾಯತರು ಬಸವಣ್ಣನ ಒಪ್ಪಿಕೊಂಡವರು.ಇಂತಹ ಬಿಡಿ ರಂಪಾಟ ಮಾಡುವ ಅಗತ್ಯವೇನಿತ್ತು ಯಾವ ಪುರುಷಾರಥಕ್ಕೆ ಬೃಹತ್ ಸಮಾವೇಶಗಳು.
4 ) ಅರಿವು ಜಾಗೃತಿ ಮೂಡಿಸಲು ಇನ್ನು ಅನೇಕ ಯೋಜನೆಗಳನ್ನು ಕೈಕೊಳ್ಳಬಹುದಿತ್ತು.
5 ) ಸಂಘಟನೆಯು ಯಾವುದೊ ಒಂದು ರಾಜಕೀಯ ಪಕ್ಷದ ಅಣತಿಯಂತೆ ನಡಯಬಾರದು.
6 ) ಧಾರ್ಮಿಕ ಮುಖಂಡರು ಮಠಾಧೀಶರು ಅನೇಕರು ಇಂದು ಚುನಾವಣೆ ಸಿದ್ಧತೆ ನಡೆಸಿದ್ದಾರೆ.
7 ) ಧಾರ್ಮಿಕ ಮಾನ್ಯತೆ ಅಲ್ಪ ಸಂಖ್ಯಾತ ಮಾನ್ಯತೆಗೆ ಅಟಾರ್ನಿ ಜನರಲ್ ಆಪ್ ಇಂಡಿಯಾ
ಮತ್ತು ಮೈನಾರಿಟಿ ಕಮಿಷನ್ ಇದ್ದಾಗ ನಾವು ದೆಹಲಿಯ ಅವರ ಕಚೇರಿಗೆ ನಮ್ಮ ಅರ್ಜಿಯನ್ನು ಪಿಟಿಷನ್ ಏಕೆ ಕೊಡಲಾಗುತ್ತಿಲ್ಲ.?
8 ) ಇವತ್ತು ಕಾರ್ಯಕರ್ತರನ್ನು ಬಾಯಿ ಮುಚ್ಚಿಸುವ ವರ್ಚಸ್ವಿ ನಾಯಕರು ಮಠಾಧೀಶರ ತಪ್ಪನ್ನು ಏಕೆ ತಿದ್ದುತ್ತಿಲ್ಲ.
9 ) ಲಿಂಗಾಯತ ವಿರೋಧಿ ಶಕ್ತಿಗಳು ಒಗ್ಗಾಟ್ಟಾಗಿ ಕಾರ್ಯ ನಡೆಸುತ್ತಿವೆ ಆದರೆ ಬಸವಣ್ಣ ಎಂದೆನ್ನುವ ಅಕ್ಕ ಮಾತೆ ಸ್ವಾಮಿಗಳು ಕಾರ್ಯಕರ್ತರು ಕೆಚ್ಚಾಡುತ್ತಿದ್ದೇವೆ ಆರೋಪ ಪ್ರತ್ಯಾರೋಪ ಪರಸ್ಪರ ಕೆಸರು ಎರಚುವ ಕಾರ್ಯ ನಿಲ್ಲಬೇಕು.
10 ) ಲಿಂಗಾಯತ ಸಂಘಟನೆ ಕಾಲ ಕ್ರಮೇಣ ರಾಜಕೀಯ ಮುಖವಾಣಿಗಳಾಗುತ್ತವೆ.
11 ) ಕೆಲವೇ ಕೆಲವು ಜನರು ತೆಗೆದುಕೊಳ್ಳುವ ನಿರ್ಧಾರಕ್ಕೆ ಇಡೀ ಸಮಾಜವೇ ಒಪ್ಪಿಕೊಳ್ಳಬೇಕೇ ?
12 ) ದುಡ್ಡು ದರ್ಪ ಅಧಿಕಾರ ಸ್ವಾಮಿ ಅಕ್ಕ ಮಾತೆ ಶ್ರೇಣೀಕೃತ ವ್ಯವಸ್ಥೆ ಸಂಘಟನೆಯಲ್ಲಿ ಅಗತ್ಯವೇ ?
ವೀರಶೈವರು ಲಿಂಗಾಯತ ಧರ್ಮದ ಒಂದು ಉಪ ಪಂಗಡ . ಅವರಿಗಿರುವ ಪೌರಾಣಿಕ ಕಾಲ್ಪನಿಕ ದಾಖಲೆಗಳಿಗಿಂತ- ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂದೆನ್ನಲು ಅವರಿಗಿಂತ ನೂರು ಪಟ್ಟು ದಾಖಲೆಗಳಿರುವಾಗ ನಾವು ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ಮಾನ್ಯತೆ ಮತ್ತು ಕಾನೂನಾತ್ಮಕ ಸವಲತ್ತುಗಳನ್ನು ಪಡೆಯಲು ಶೀಘ್ರವಾಗಿ ಚಿಂತಿಸಬೇಕು.
13 ) ನ್ಯೂಟೋನ್ ಲಾ ದಂತೆ ಕ್ರಿಯೆ ಪ್ರತಿಕ್ರಿಯೆ ಸಮ ಹಾಗು ಪರಸ್ಪರ ವಿರುದ್ಧವಾಗಿರುತ್ತವೆ.ಸಮಾವೇಶದ ಅಬ್ಬರಕ್ಕೆ ಪ್ರತಿ ತಂತ್ರ ರೂಪಿಸುವ ಶಕ್ತಿಗಳು ಜಯವನ್ನು
ಸಾಧಿಸುವ ನಿಟ್ಟಿನಲ್ಲಿ ಕುತಂತ್ರ ಯೋಜನೆ ರಚಿಸುತ್ತವೆ, ಆದರೆ ಲಿಂಗಾಯತರೆನ್ನುವವರು ಇನ್ನು ವೀರಶೈವ ಮಹಾಸಭೆಗೆ ರಾಜೀನಾಮೆ ಮತ್ತು ಪರ್ಯಾಯ ಸಂಘಟನೆಯಲ್ಲಿ ತೊಡಗಿದ್ದೇವೆ.ಮೈಸೂರು ತುಮಕೂರು ಶ್ರೀಗಳು ವೀರಶೈವರ ಬೆಂಬಲಕ್ಕೆ ನಿಂತಿದ್ದಾರೆ.
14 ) ಎಲ್ಲಿಯವರೆಗೆ ವೀರಶೈವ ಲಿಂಗಾಯತ ಕಾನೂನಾತ್ಮಕ ದೃಷ್ಟಿಯಲ್ಲಿಒಂದೇ ಅಲ್ಲ ಬೇರೆ ಬೇರೆ ಎಂದು ನಿರೂಪಿಸಲು ಆಗುವದಿಲ್ಲವೋ ಇಂತಹ ಇನ್ನು ನೂರು ಸಮಾವೇಹಸ ಸಭೆಗಳು ನಡೆದರೂ ವ್ಯರ್ಥ.
15 ) ಅಖಿಲ ಭಾರತ ವೀರಶೈವ ಮಹಾಸಭೆ ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯಲ್ಲವೆಂದು ಸಾಧಿಸಲು ವಿಫಲರಾಗಿದ್ದೇವೆ ಈ ಕೂಡಲೇ ಇಂತಹ ಪ್ರಯತ್ನಕ್ಕೆ ಮುಂದಾಗಬೇಕು.
16 ) ನೆಂಟರ ಮೇಲೆ ಪ್ರೀತಿ ಗೋಧಿಯ ಮೇಲೆ ಕಣ್ಣು ಎಂದೆನ್ನುವ ಹಾಗೆ ಒಂದು ಕಡೆಗೆ ಪರ್ಯಾಯ ಸಂಘಟನೆ ಇನ್ನೊಂದು ಅವರ ವೈರತ್ವವನ್ನು ಕಟ್ಟಿಕೊಳ್ಳಲಾಗದ ಒತ್ತಡ .
17 ) ಬಸವಣ್ಣ ಲಿಂಗಾಯತ ಧರ್ಮ ಎಲ್ಲಿಯವರೆಗೆ ಸಾಂಸ್ಥಿಕರಣದಿಂದ ಹೊರ ಬರುವದಿಲ್ಲವೋ ಅಲ್ಲಿಯವರೆಗೆ ನಾವು ಅತಂತ್ರರು.
18 ) ಲಿಂಗಾಯತ ಚಳುವಳಿ ಎಲ್ಲ ವರ್ಗದವರ ಬಡವರ ಸಾಮಾನ್ಯರ ಹೋರಾಟವಾಗಲಿ ಹೊರತು ಶ್ರೀಮಂತರ ರಾಜಕೀಯ ಕಪಿ ಮುಷ್ಠಿಗೆ ಸಿಲುಕಿಸುವ ಪ್ರಯತ್ನವಾಗಬಾರದು.

ನಮಗೆ ಲಿಂಗಾಯತ ಧರ್ಮ ಎಂದೆನ್ನುವುದು ಸ್ವಾಭಿಮಾನದ ಪ್ರಶ್ನೆ ಈ ನೆಲದಲ್ಲಿ ಹುಟ್ಟುದ ಶ್ರೇಷ್ಠ ಸಾಮಾಜಿಕ ಕ್ರಾಂತಿಕಾರ ದಾರ್ಶನಿಕನ ಮೌಲ್ಯಗಳಿಗೆ ದೊರಕುವ ಸ್ಥಾನಮಾನ .
ನಾನಿಲ್ಲಿ ಯಾರನ್ನು ಟೀಕಿಸುತ್ತಿಲ್ಲ ಉದ್ವೇಗ ಉತ್ಸಾಹ ಉನ್ಮಾದಗಳಲ್ಲಿ ನಡೆಯುವ ಕ್ರಿಯೆಗಳು ಹುಸಿ ಹೋರಾಟವಾದಲ್ಲಿ ಹೋರಾಟಗಾರನಲ್ಲಿ ಮಾನಸಿಕ ಧೈರ್ಯ ಸ್ಥೈರ್ಯ ಕುಗ್ಗುತ್ತದೆ.
ಲಿಂಗಾಯತರಿಗೆ ಕೇವಲ ಮಾನ್ಯತೆ ದೊರಕಿಸಿಕೊಡಬೇಕೆನ್ನುವದೊಂದೇ ಗುರಿಯಲ್ಲ ಬಸವ ತತ್ವದಂತೆ ಆಚರಣೆಗೆ ತರುವಲ್ಲಿ ಒಟ್ಟು ಕೊಡಬೇಕು.
ಹೋರಾಟ ಗುಣಾತ್ಮಕವಾಗಿರಲಿ ಅಬ್ಬರದ ಘೋಷಣೆಗಳು ಹಸಿದ ಹೊಟ್ಟೆಯನ್ನು ತುಂಬಿಸವು.
ಲಿಂಗಾಯತ ಧರ್ಮದ ಮಾನ್ಯತೆ ನಮ್ಮ ಹಕ್ಕಗಳೇ ಭಿಕ್ಷೆ ಅಥವಾ ಬೇಡಿಕೆಯಾಗದಿರಲಿ.

ಸತ್ಯ ಕಠಿಣ ಅದನ್ನು ಜನರಿಗೆ ತಲುಪಿಸುವುದು ಇನ್ನು ಕಠಿಣ ಸತ್ಯದ ಅರಿವಾದಾಗ ಸಮಯ ಮೀರಿ ಹೋಗುತ್ತದೆ ಸತ್ಯದ ಪ್ರತಿಪಾದಕರಾದ ಡಾ ಎಂ ಎಂ ಕಲ್ಬುರ್ಗಿಯರಂತೆ ಹುತಾತ್ಮರಾಗಬೇಕಾಗುತ್ತದೆ. ಚಳುವಳಿ ಸಮ್ಮೋಹನವಾಗದಿರಲಿ.

ಡಾ.ಶಶಿಕಾಂತ.ಪಟ್ಟಣ ಪುಣೆ

APS ನನ್ನ ಗರ್ವ ಮತ್ತು ಹೆಮ್ಮೆ ಸೂಪರ್ ಸ್ಟಾರ್.ರಜನಿ ಕಾಂತ್

APS is my pride and pride Super Star.Rajani Kanth

APS ಕಾಲೇಜಿನ “MEGA ALUMNI MEET “ ಅನ್ನು ಇದೆ 26 ಜನವರಿ 2025 ರಂದು ನಿಗದಿಪಡಿಸಲಾಗಿದೆ ಎಂದು ಕೇಳಿ ಬಹಳ ಸಂತೋಷವಾಯಿತು. ನಾನು ಚಲನಚಿತ್ರದ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ನಲ್ಲಿದ್ದೇನೆ, ನಾನು APS ನಲ್ಲಿ ಕಳೆದ ನನ್ನ ಬಾಲ್ಯದ ಸುವರ್ಣ ದಿನಗಳನ್ನು ಜ್ಞಾಪಿಸಿಕೊಳ್ಳಲು ಬಯಸುತ್ತೇನೆ.
ನಾನು ಮೊದಲು ಎಪಿಎಸ್ ಹೈಸ್ಕೂಲ್‌ಗೆ ಸೇರಿದಾಗ, ನಾನು ಈ ಹಿಂದೆ ಕನ್ನಡ ಮಾಧ್ಯಮದಲ್ಲಿ ಓದಿದ್ದೆ ಮತ್ತು ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದಾಗ ತುಂಬಾ ಸವಾಲಿನ ಸಂಗತಿಯಾಗಿತ್ತು. ಆದಾಗ್ಯೂ ಇಲ್ಲಿನ ನನ್ನ ಶಿಕ್ಷಕರು ನಂಬಲಾಗದಷ್ಟು ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ನಾನು 10 ನೇ ತರಗತಿಯಲ್ಲಿ ರಸಾಯನಶಾಸ್ತ್ರ ವಿಷಯವು ತುಂಬಾ ಕಷ್ಟವಾಗಿತ್ತು., ಆದರೆ ನನ್ನ ರಸಾಯನಶಾಸ್ತ್ರದ ಶಿಕ್ಷಕರು ನನಗೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಬೋಧನೆಯನ್ನು ಉಚಿತವಾಗಿ ನೀಡಿದರು. ಅವರ ಸಹಾಯದಿಂದ ನಾನು ನನ್ನ 10ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣನಾದೆ. ನಂತರ APS ಕಾಲೇಜಿಗೆ ಸೇರಿಕೊಂಡೆ.
ನನ್ನ ಶಾಲಾ ದಿನಗಳಲ್ಲಿ ನನಗೆ ಹಾಡುಗಾರಿಕೆ, ನಾಟಕ ಮತ್ತು ಇತರ ಕಲೆಗಳ ಬಗ್ಗೆ ಹೆಚ್ಚು ಒಲವು ಇತ್ತು. ನಾನು ನನ್ನ ಸ್ನೇಹಿತರೊಂದಿಗೆ ಹಾಡುವುದು,ಮಿಮಿಕ್ರಿ ಮಾಡುತ್ತಿದ್ದೆ,ಅದು ನನಗೆ ಬಹಳ ಸಂತೋಷದ ವಿಷಯವಾಗಿರುತ್ತಿತ್ತು.ಜೊತೆಗೆ ನನ್ನ ಶಿಕ್ಷಕರು ನನ್ನ ಕಲೆಯನ್ನು ಗುರುತಿಸಿದರು. ನನ್ನ ಶಾಲಾ ಜೀವನದ ಮುಖ್ಯ ಘಟ್ಟ ಅದು ಒಂದು ಅಂತರ -ಶಾಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅಲ್ಲಿ ಸುಮಾರು 15 ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ನಾನು ಈ ಸ್ಪರ್ಧೆಯಲ್ಲಿ ಆದಿ ಶಂಕರ ನಾಟಕದಲ್ಲಿ “ಚಂಡಾಲ” ಪಾತ್ರವನ್ನು ಮಾಡಿದ್ದೇನೆ, ಇದರಲ್ಲಿ ಶಿವನು ಆತ್ಮವನ್ನು ಭೇಟಿಯಾಗುವ ದೃಶ್ಯದಲ್ಲಿ ಅಭಿನಯಿಸಿದ್ದೇ ಅಲ್ಲಿ ನನಗೆ, “ಅತ್ಯುತ್ತಮ ನಟ ಪ್ರಶಸ್ತಿ” ಬಂದಿತು,ಇದು ನನಗೆ ಬಹಳ ಆಶ್ಚರ್ಯ ಹಾಗೂ ಸಂತೋಷವನ್ನು ತಂದಿತ್ತು.ಇದು ನನ್ನ ಮೊದಲ ನಟನೆಯ ನಾಟಕವಾಗಿತ್ತು.ಅಂದು ನನಗೆ ವೇದಿಕೆ ಕಲ್ಪಿಸಿದ್ದು APS ಸಂಸ್ಥೆ,ಈ ಅನುಭವವು ನನ್ನ ನಟನಾ ವೃತ್ತಿಜೀವನದ ಕಡೆಗೆ ಬರಲು ಮತ್ತು ನನಗೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.ಹಾಗಾಗಿ APS ನನ್ನ ಜೀವನದ ಪ್ರಮುಖ ಭಾಗವಾಗಿದೆ.ವಿಶಾಲವಾದ ಆ APS ಶಾಲಾ ಮೈದಾನದಲ್ಲಿ ಸಾಕಷ್ಟು ಆಟಗಳನ್ನು ಆಡಿದ್ದೇನೆ.
ಕ್ರಿಕೆಟ್, ಫುಟ್ಬಾಲ್, ಖೋ-ಖೋ ಆಡುತ್ತಿದ್ದೆ. ಎಪಿಎಸ್ಆಟದ ಮೈದಾನ, ಕಲ್ಲಿನ ಕಟ್ಟಡ, ಪ್ರೌಢಶಾಲೆ ಆವರಣ ಈ ಎಲ್ಲಾ ಸವಿನೆನಪುಗಳೂ ಇಂದಿಗೂ ಹಚ್ಚ ಹಸಿರಾಗಿ ಇವೆ.
ನನ್ನ ಮನೆ ಹನುಮಂತನಗರದ ಬಳಿ ಇತ್ತು, ಆ ಸಂತಸದ ದಿನಗಳಲ್ಲಿ ನ ನೋಡಿದ ದೊಡ್ಡ ಬಸಣ್ಣ ದೇವಸ್ಥಾನ ಮತ್ತು ದೊಡ್ಡ ಗಣಪತಿ ದೇವಸ್ಥಾನವನ್ನು ನಾನು ಇಂದಿಗೂ ನೆನಪಿಸಿಕೊಳ್ಳುತ್ತೇನೆ.
APS ಸಂಸ್ಥೆ ನನಗೆ ಯಾವಾಗಲೂ ಹೆಮ್ಮೆಯಾಗಿರುತ್ತದೆ.ಮತ್ತು ನಾನು ಇಲ್ಲಿ ಕಳೆದ ಸುವರ್ಣ ದಿನಗಳ ಸವಿ ನೆನಪುಗಳನ್ನು ಶಾಶ್ವತವಾಗಿ ನೆನಪಿಟ್ಟುಕೊಳ್ಳುತ್ತೇನೆ.ಮುಂದಿನ ದಿನಗಳಲ್ಲಿ ನಾ ಕಾಲೇಜಿಗೆ ಭೇಟಿ ನೀಡುತ್ತೇನೆ.

ಹೃತ್ಪೂರ್ವಕ ವಂದನೆಗಳು,
ಶ್ರೀ. ರಜನಿ ಕಾಂತ್

ಗಂಗಾವತಿ ರಾಷ್ಟ್ರೀಯ ಬಸವ ದಳಕ್ಕೆ ಅತ್ಯುತ್ತಮ ಕ್ರಿಯಾಶೀಲ ಸೇವಾ ರತ್ನ ಪ್ರಶಸ್ತಿ

Best Active Seva Ratna Award to Gangavathi Rashtriya Basava Dal

ಗಂಗಾವತಿ,19:ಕೂಡಲಸಂಗಮ ದಲ್ಲಿ ೧೨,೧೩,೧೪ ಜರುಗಿದ ಸ್ವಾಭಿಮಾನಿ ಶರಣಮೇಳದಲ್ಲಿ ಗಂಗಾವತಿ ರಾಷ್ಟ್ರೀಯ ಬಸವ ದಳಕ್ಕೆ ಅತ್ಯುತ್ತಮ ಕ್ರಿಯಾಶೀಲ ಸೇವಾ ರತ್ನ ಪ್ರಶಸ್ತಿ ಕೊಡಮಾಡಲಾಯಿತು.ಪ್ರಶಸ್ತಿಗೆ ಮೂಲ ಕರ್ತರಾದ,ಮತ್ತು ಸ್ವಾಭಿಮಾನಿ ಶರಣಮೇಳ ಯಶಸ್ವಿಯಾಗಿ ಕಾರಣ ಕರ್ತರಾದ ಇವರಿಗೆ ಇಂದು ರವಿವಾರ ದಿ,೧೯-೧-೨೦೨೫ ರಂದು ನಗರದ ರಾಷ್ಟ್ರೀಯ ಬಸವದಳದ ಬಸವ ಮಂಟಪದಲ್ಲಿ ಪ್ರತಿ ವಾರದ ಸಾಮೂಹಿಕ ಪ್ರಾರ್ಥನೆ, ಮತ್ತು ಬಸವ ಯೋಗಿ ಗುರುಸಿದ್ದರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಶರಣ ಮೇಳಕ್ಕೆ ಸೇವೆ ಸಲ್ಲಿಸಿದ ಶರಣ ವಿನಯ್ ಕುಮಾರ್ ಅಂಗಡಿ, ಕವಿತಾ ರಗಡಪ್ಪ ಹಾಗೂ ವೀರೇಶ್ ಅಸರಡ್ಡಿಯವರಿಗೆ ಗೌರವ ಸಲ್ಲಿಸಲಾಯಿತು.

ವಿಶೇಷವಾಗಿ ಈ ಬಾರಿ ಗಂಗಾವತಿ ರಾಷ್ಟ್ರೀಯ ಬಸವ ದಳಕ್ಕೆ ಅತ್ಯುತ್ತಮ ಕ್ರಿಯಾಶೀಲ ಸೇವಾ ರತ್ನ ಪ್ರಶಸ್ತಿ ಬಂದಿದೆ, ಆಯ್ಕೆ ಮಾಡಿದ ಸ್ವಾಭಿಮಾನಿ ಶರಣ ಮೇಳ ಸಮಿತಿಯವರಿಗೆ ರಾಷ್ಟ್ರೀಯ ಬಸವದಳ. ಸರ್ವ ಸದಸ್ಯರು ತುಂಬ ಹೃದಯದ ಧನ್ಯವಾದಗಳನ್ನು ಅರ್ಪಿಸುಲಾಯಿತು.

ಈ ಸಂರ್ದಭದಲ್ಲಿ ರಾಷ್ಟ್ರೀಯ ಬಸವದಳದ ಅದ್ಯಕ್ಷ. ಲೀಪ್ ಕುಮಾರ್ ವಂದಾಲ, ಉಪಾದ್ಯಕ್ಷ ಕೆ ವೀರೇಶ್ವಪ್ಪ, , ಚನ್ನಬಸಮ್ಮ ಕಂಪ್ಲಿ , ಬಸವ ಜ್ಯೋತಿ ಬಿ ಲಿಂಗಾಯತ, ವಿನಯ ಕುಮಾರ್ ಅಂಗಡಿ,

ಮಲ್ಲಿಕಾರ್ಜುನ ಅರಳಹಳ್ಳಿ ದಂಪತಿಗಳು, ಗೌರವ ಅದ್ಯಕ್ಷ. ಹೆಚ್ ಮಲ್ಲಿಕಾರ್ಜುನ ಹೊಸಕೇರಾ ಮತ್ತು ರಾಷ್ಟ್ರೀಯ ಬಸವ ದಳದ ಶರಣರು ಇದ್ದರು.

ಮಹಾಯೋಗಿ ವೇಮನ ಅವರ ಚಿಂತನೆ, ವಿಚಾರಧಾರೆಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಲು ಸಲಹೆ

Advice to adopt Mahayogi Vemana’s thoughts and ideas in life

ರಾಯಚೂರು ಜ.19, (ಕರ್ನಾಟಕ ವಾರ್ತೆ): ಮಾನವನ ಏಳ್ಗೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು, ಅಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹನಿಯರಲ್ಲಿ ಶ್ರೀ ಮಹಾಯೋಗಿ ವೇಮನರು ಸಹ ಪ್ರಮುಖರಾಗಿದ್ದಾರೆ ಎಂದು
ರಾಯಚೂರು ತಹಸೀಲ್ದಾರ್ ಸುರೇಶ ವರ್ಮಾ ಅವರು ಹೇಳಿದರು.
ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜನವರಿ 19ರಂದು ನಡೆದ ಮಹಾಯೋಗಿ ವೇಮನ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೇಷ್ಠ ಅಧ್ಯಾತ್ಮಿಕ ಚಿಂತಕ, ಮಹಾನ್ ಯೋಗಿ ವೇಮನ ಅವರ ಜನ್ಮದಿನವು
ಭಾರತ ಇತಿಹಾಸದಲ್ಲಿ ಪುಣ್ಯದಿನವಾಗಿದೆ. ಮಾನವ ಜೀವನದ ಸುಧಾರಣೆಗಾಗಿ ತಮ್ಮ ವಚನಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಇಂದಿನ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬರು ಸಮಯವಿಲ್ಲದೆ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಇಂದು ಆರೋಗ್ಯ ಮತ್ತು ಒತ್ತಡದ ನಿವಾರಣೆಗಾಗಿ, ಮಾನಸಿಕ ನೆಮ್ಮದಿಗಾಗಿ ಸಂಗೀತ ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳುವುದು ಅತೀ ಅವಶ್ಯವಾಗಿದೆ.
ಮಾನವನು ನೆಮ್ಮದಿಯ ಬಾಳ್ವೆಯನು ನಡೆಸುವುದು
ಮೇಮನ ಅವರ ವಚನಗಳಲ್ಲಿ, ಚಿಂತನೆಗಳಲ್ಲಿ ಅಡಗಿದೆ. ಅವರ ಸಾಹಿತ್ಯ, ಚಿಂತನೆ, ಬರಹಗಳ ಸಂದೇಶವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ವೇಮನ ಅವರು ನೀಡಿದ ಬೋಧನೆಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರಜ್ಞಾವಂತರಾಗಿ ನಡೆಯಬೇಕು. ವೇಮನ ಅವರು ವಿಶ್ವಮಟ್ಟದಲ್ಲಿ ಬೆಳೆದಿದ್ದಾರೆ. ವೇಮನರ ವಿಚಾರ, ಸಿದ್ದಾಂತಗಳನ್ನು ಈ ಜಗತ್ತು ಒಪ್ಪಿಕೊಳ್ಳುತ್ತಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸಕರಾಗಿ ದಂಡಪ್ಪ ಬೀರಾದಾರ್ ಅವರು ಮಾತನಾಡಿ, ಮೇಮನ ಅವರು ಕ್ರಿ.ಶ. 1421ರಲ್ಲಿ ಆಂಧ್ರಪ್ರದೇಶದ ಮೂಗಚಿಪಲ್ಲಿಯ ಕೋಮಗಿರಿ ವೇಮ ಭೂಪಾಲ ಮತ್ತು ಮಲ್ಲ ಮಾಂಬೆ ಎಂಬ ದಂಪತಿಯ ಮಗನಾಗಿ ಜನಿಸಿದರು. 15ನೇ ಶತಮಾನದಲ್ಲಿ ವೇಮನರು ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರಾಗಿ ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ಅವರು ಶ್ರೇಷ್ಟ ವಚನಕಾರರು, ಮಹಾಕವಿ, ಮಹಾ ಯೋಗಿಯಾಗಿದ್ದಾರೆ ಎಂದರು.
ವೇಮನರ ಕೃತಿಗಳು ಇತಿಹಾಸದಲ್ಲಿ ವೇಮನ ಶತಕಲು ಎಂದು ಕರೆಯಲ್ಪಡುತ್ತದೆ ಎಂದರು.
ವೇಮನ ಅವರು ತಮ್ಮ ವಚನಗಳ ಮೂಲಕ ಮಾನವ ಕುಲದ ಒಳತಿಗಾಗಿ ಕೊಡುಗೆ ನೀಡಿದ್ದಾರೆ. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಮಾಜಿಕ ಜೀವನ ಸುಧಾರಣೆ ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕಾಧ್ಯಕ್ಷರಾದ ರಾಮಚಂದ್ರ ರೆಡ್ಡಿ, ಡಾ.ಶ್ರೀಧರ ರೆಡ್ಡಿ, ಕೇಶವ ರೆಡ್ಡಿ, ಗೋಪಾಲ ರೆಡ್ಡಿ, ಶಿವನಗೌಡ ಪಾಟೀಲ್ ಮಟಮಾರಿ, ವೀರಶೈವ ಸಮಾಜದ ಅಧ್ಯಕ್ಷರಾದ ಶರಣ ಬೂಪಾಲ ನಾಡಗೌಡ, ಅಚ್ಯುತ ರೆಡ್ಡಿ, ರಾಮನಗೌಡ ಏಗನೂರು, ಇಸ್ಮಾಯಿಲ್ ಸೇರಿದಂತೆ ಸಮಾಜದ ಮುಖಂಡರು ಮಹಿಳೆಯರು, ಯುವಕರು ಭಾಗವಹಿಸಿದ್ದರು.

ಅಮೀತಕುಮಾರ ರೆಡ್ಡಿ ಅವರಸಂಶೋದನೆಗೆಬಳ್ಳಾರಿ ವಿ.ವಿ ಡಾಕ್ಟರೇಟ್

Ameeta Kumara Reddy for research Bellary VV Doctorate

ಗಂಗಾವತಿ: ನಗರದ ಸಂಕಲ್ಪ ಕಾಲೇಜಿನ ನಿರ್ದೇಶಕರು ಹಾಗೂ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಅಮೀತಕುಮಾರ ರೆಡ್ಡಿಯವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತç ವಿಭಾಗದಲ್ಲಿ ವರ್ಚುವಲ್ ಬ್ಯಾಂಕಿಂಗ್ ಪ್ರಾಕ್ಟೀಸ್ ಆಫ್ ಪಬ್ಲಿಕ್ ಆ್ಯಂಡ್ ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್: ಎ ಕೇಸ್ ಸ್ಟಡಿ ಆಫ್ ಬಳ್ಳಾರಿ ಸಿಟಿ ಎಂಬ ವಿಷಯದ ಕುರಿತು ಕೈಗೊಂಡ ಅಧ್ಯಯನದಲ್ಲಿ ಪಿಎಚ್.ಡಿ ಪದವಿಗೆ ಭಾಜನರಾಗಿರುತ್ತಾರೆ.
ಇವರ ಅಧ್ಯಯನಕ್ಕೆ ಬಳ್ಳಾರಿ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತç ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೇಘರಾಜ ಬಿ. ರವರು ಮಾರ್ಗದರ್ಶನ ನೀಡಿದ್ದಾರೆ.
ಈ ಕುರಿತು ಅಮೀತಕುಮಾರ ರೆಡ್ಡಿ ಮಾತನಾಡಿ ನಾನು ಪ್ರಾಧ್ಯಾಪಕನಾಗಿ ಪಿಎಚ್.ಡಿ. ಪದವಿಯನ್ನು ಪಡೆಯುವ ಹಂಬಲ ದೊಂದಗೆ ವರ್ಚುವಲ್ ಬ್ಯಾಂಕಿಂಗ ಪ್ರಾಕ್ಟೀಸ್ ಆಫ್ ಪಬ್ಲಿಕ್ ಆ್ಯಂಡ್ ಬ್ಯಾಂಕ್ಸ್: ಎ ಕೇಸ್ ಸ್ಟಡಿ ಆಫ್ ಬಳ್ಳಾರಿ ಸಿಟಿ ಅಧ್ಯಯನವನ್ನು ಕೈಗೊಂಡು ಮುಂದಿನ ಪೀಳಿಗೆಗೆ ಅನುಕೂಲವಾಗುವ ಉದ್ದೇಶವನ್ನಿಟ್ಟುಕೊಂಡು ಪೂರೈಸಿರುತ್ತೇನೆ ಎಂದು ತಿಳಿಸಿದರು.