Social development is possible only through education
ಸಾವಳಗಿ: ಎಲ್ಲ ವ್ಯಕ್ತಿಗಳು ಶಿಕ್ಷಣವನ್ನು ಪಡೆದಾಗ ಮಾತ್ರ ನಾವು ಜಗತ್ತಿನಲ್ಲಿ ಶಾಂತಿ ಹೊಂದಲು ಸಾಧ್ಯ ಎಂದು ಗ್ರಾಮ ಪಂಚಾಯತ ಸದಸ್ಯ ಸುಜೀತಗೌಡ ಪಾಟೀಲ ಹೇಳಿದರು.
ನಗರದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಗೆ ಶೇಠ್ ಟಾಪಿದಾಸ ಮತ್ತು ತುಳಸಿದಾಸ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇವರ ವತಿಯಿಂದ ದೇಣಿಗೆಯಾಗಿ ನೀಡಿದ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಕಾರ್ಯಕ್ರಮವನ್ನು ಶುಕ್ರವಾರ ನಡೆಯಿತು.
ಶೇಠ್ ಟಾಪಿದಾಸ ಮಾತನಾಡಿ ‘ದೇಶದ ಸಂವಿಧಾನವು ಮಕ್ಕಳಿಗೆ ವಿಶೇಷ ಸ್ಥಾನ ನೀಡಿದೆ. ಪ್ರತಿ ಮಗುವೂ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಲು ಮುಂದಾಗಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ಅರಿವನ್ನು ಪಡೆಯಬೇಕು. ಮಕ್ಕಳು ಮೊಬೈಲ್ ಸೇರಿದಂತೆ ವ್ಯಸನಿಗಳಾಗುತ್ತಿದ್ದಾರೆ. ಮಕ್ಕಳ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಗಮನಹರಿಸಿ, ಚಿಕ್ಕವಯಸ್ಸಿನಲ್ಲೇ ನಡವಳಿಕೆಯನ್ನು ತಿದ್ದಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಾಲೆಯ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರು, ಶಾಲೆಯ ಆಡಳಿತ ಮಂಡಳಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
I am handling all my work duties adequately: Minister Bosaraja
ವರದಿ : ಪಂಚಯ್ಯ ಹಿರೇಮಠ.. ಕುಕನೂರು : ನಾನು ಸಣ್ಣ ನೀರಾವರಿ ಸಚಿವನಾಗಿ ರಾಜ್ಯದಲ್ಲಿ ನನಗಿರುವ ಎಲ್ಲಾ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದೇನೆ ಎಂದು ಸಣ್ಣ ನೀರಾವರಿ ಸಚಿವ ಎನ್. ಎಸ್ ಬೋಸರಾಜು ಅವರು ಹೇಳಿದರು.
ಅವರು ಶುಕ್ರವಾರದಂದು ಕೊಪ್ಪಳ – ಯಲಬುರ್ಗಾ ಕೆರೆ ತುಂಬಿಸುವ ಯೋಜನೆಯ ಮೊದಲನೇ ಹಂತದ ಕಾಮಗಾರಿಯ ಜಾಕವೆಲ್ ಮತ್ತು ಪಂಪ್ ಹೌಸ್ ಪರೀವಿಕ್ಷಣೆ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮಗೆ ಬಜೆಟ್ ನಲ್ಲಿ ಇಟ್ಟಿರುವ 3 ಲಕ್ಷ 71 ಸಾವಿರ ಕೋಟಿಯಲ್ಲಿಯೇ 365 ದಿನದಲ್ಲಿ ಖರ್ಚು ಮಾಡಬೇಕು ಅದಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲಾ, ಸುಮ್ಮನೆ ರಾಜಕೀಯವಾಗಿ ಟೀಕೆ ಟಿಪ್ಪಣೆಗಳು ಇರುವುದು ಸಹಜ ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲಾ ಎಂದರು.
ಕೆರೆ ತುಂಬಿಸುವ ಯೋಜನೆಯು ಕಳೆದ 6 ವರ್ಷದಿಂದ ನಡೆಯುತ್ತಿದ್ದು, ತ್ವರಿತವಾಗಿ ಕಾಮಗಾರಿ ಕೈಗೊಂಡು ಪೂರ್ಣಗೊಳ್ಳಿಸುವಂತೆ ಇಂಜನಿಯರ್‌ಗೆ ಸೂಚನೆ ನೀಡಿದರು.
ಕೆರೆ ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗುತ್ತಿದ್ದು, ಯಲಬುರ್ಗಾ ಕ್ಷೇತ್ರದಲ್ಲಿ 9 ಕೆರೆಗಳಿಗೆ ನೀರು ತುಂಬಲಿದೆ. ಇದೇ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಇನ್ನೂ ಮೂರು ನಾಲ್ಕು ಕಿ.ಮೀ ಪೈಪ್‌ಲೈನ್ ಹಾಕುವ ಕಾರ್ಯ ಹಾಗೂ ಈಗಾಗಲೇ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಪ್ರಮುಖ್ಯತೆ ನೀಡಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರ ಅಡಿ ಅಂತರ್ಜಲ ಕುಸಿತಗೊಂಡಿತ್ತು. ಇದರಿಂದ ಕೆರೆ ತುಂಬಿಸುವ ಯೋಜನೆ ಸೇರಿದಂತೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಸೇರಿದಂತೆ ಸಣ್ಣ ನೀರಾವರಿ ಯೋಜನೆಯ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಪ್ರಮುಖ್ಯತೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಅಶೋಕ ತೋಟದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಪಪಂ ಉಪಾಧ್ಯಕ್ಷ ಪ್ರಶಾಂತ ಆರ್‌ಬೆರಳಿನ್, ವಕ್ತಾರ ಸಂಗಮೇಶ ಗುತ್ತಿ, ಶಿವನಗೌಡ ದಾನರಡ್ಡಿ, ತಿಮ್ಮಣ್ಣ ಚವಡಿ, ಮಂಜುನಾಥ ಯಡಿಯಾಪುರ, ಈಶಪ್ಪ ದೊಡ್ಡಮನಿ, ರಾಮಣ್ಣ ಬಂಕದಮನಿ, ಶಿವಕುಮಾರ ಆದಾಪುರ ಇತರರಿದ್ದರು.
Untouchability awareness program held in Chiribi village
ಕೊಟ್ಟೂರು ತಾಲ್ಲೂಕು ಚಿರಿಬಿ ಗ್ರಾಮದಲ್ಲಿ ಶುಕ್ರವಾರ ಅಸ್ಪೃಶ್ಯತಾ ನಿವಾರಣ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ ಅನ್ನದಾನೇಶ್ ಮಾತನಾಡಿ ಈ ಕಾರ್ಯಕ್ರಮಗಳು ಎಲ್ಲರಿಗೂ ತಲುಪಿ ಅಸ್ಪೃಶ್ಯತೆ ನಿವಾರಣೆ ಆಗಬೇಕು ಎಂದು ಹೇಳಿದರು. ಡಿ.ಎಸ್.ಎಸ್. ಮುಖಂಡರು ಮತ್ತು ವಕೀಲರಾದ ಹನುಮಂತಪ್ಪ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ಮಾತನಾಡಿ, ಮನುಷ್ಯ ಮನುಷ್ಯರಾಗಿ ಬಾಳಬೇಕು, ಕಾನೂನಿನ ಪ್ರಕಾರ ಎಲ್ಲರೂ ಒಂದೇ ಎಂದು ಹೇಳಿದರು. ಸಂವಿಧಾನದ ಅನುಚ್ಛೇದ ೧೭ ರ ಬಗ್ಗೆ ಹೇಳಿದರು ೧೯೮೯ ಪರಿಶಿಷ್ಟ ಜಾತಿ ಕಾಯ್ದೆ ಬಗ್ಗೆ ವಿವರವಾಗಿ ಮಾತನಾಡಿದರು. ಡಿ.ಎಸ್.ಎಸ್. ಮುಖಂಡರಾದ ಬಿ.ಮರಿಸ್ವಾಮಿ ಮಾತನಾಡಿ ಇಂತಹ ಕಾರ್ಯಕ್ರಮ ಜನರಿಗೆ ತಲುಪಬೇಕು. ಎಲ್ಲ ಇಲಾಖೆಯವರು ಭಾಗವಹಿಸಲು ಜಾಗೃತಿ ಮೂಡಿಸಬೇಕು. ಜಾತಿ ವ್ಯವಸ್ಥೆ ವಿರೋಧ ಮಾಡಬೇಕು, ಎಲ್ಲರಿಗೂ ಬುದ್ಧ, ಬಸವ, ಅಂಬೇಡ್ಕರ್ ಆದರ್ಶ ಆಗಬೇಕು ಎಂದರು. ಜಾತಿ ವ್ಯವಸ್ಥೆ ವಿರೋಧಿಸಿದವರು ಚರಿತ್ರೆಯಲ್ಲಿ ಉಳಿಯುತ್ತಾರೆ ಎಂದರು. ಶ್ರಮಿಕ ವರ್ಗ ಇರುವುದರಿಂದ ನಾವೆಲ್ಲರೂ ಬದುಕುತ್ತಿದ್ದೇವೆ ಎಂದರು. ಕೊಪ್ಪಳ ಜಿಲ್ಲೆ ಮರುಕುಂಬಿ ಘಟನೆ ಮನುಷ್ಯ ಸಮಾಜ ತಲೆತಗ್ಗಿಸುವ ಘಟನೆ ಎಂದರು. ರಾಮ ಸೀತೆಯನ್ನು ಪರಿಚಯಿಸಿದ ವಾಲ್ಮೀಕಿ ಮಂದಿರ ಕಟ್ಟಬೇಕು ಎಂದು ತಿಳಿಸಿದರು. ಕನಕದಾಸರು ಅಸ್ಪೃಶ್ಯತೆ ದೇಶಕ್ಕೆ ದೊಡ್ಡ ಕಳಂಕ ಹಾಗೂ ಮೂಢನಂಬಿಕೆ ತೊಲಗಬೇಕು. ದೇವಸ್ಥಾನದ ಮುಂದೆ ನಿಲ್ಲುವ ಬದಲು ಗ್ರಂಥಾಲಯ ಮುಂದೆ ನಿಲ್ಲಬೇಕು, ಬಸವಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು ಎ.ಡಿ. ನರೇಗಾ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಎ.ಡಿ. ಶಾಹಿಕ ಅಹವದಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಪ್ರೌಢಶಾಲೆಯ ಮುಖ್ಯ ಗುರುಗಳಾದ ಜಿತೇಂದ್ರನಾಥ, ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
On January 05, there was a power outage at various places
ವರದಿ : ಪಂಚಯ್ಯ ಹಿರೇಮಠ. ಕಲ್ಯಾಣ ಸಿರಿ ವಾರ್ತೆ ಕೊಪ್ಪಳ. ಕೊಪ್ಪಳ : ಕೊಪ್ಪಳ ಜೆಸ್ಕಾಂ ವ್ಯಾಪ್ತಿಯ 110 ಕೆ.ವಿ ಒUSS ಕೊಪ್ಪಳ ಸ್ಟೇಷನ್ ನ ತುರ್ತು ನಿರ್ವಹಣೆ ಕಾಮಗಾರಿ ನಡೆಸುತ್ತಿರುವ ಪ್ರಯುಕ್ತ ಜನವರಿ 05 ರಂದು ಕೊಪ್ಪಳ ನಗರದಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯ ಕೊಪ್ಪಳ ಸ್ಟೇಷನ್ ಗೆ ಒಳಪಡುವ ಎಫ್-10 ಗವಿಮಠ, ಎಫ್-2 KWS , ಎಫ್-4 LIS ಫೀಡರ್ ಗೆ ಸಂಬAಧಪಟ್ಟ ಗವಿಶ್ರೀನಗರ, ಕೋರ್ಟ್ ಏರಿಯಾ, ಗವಿಮಠ ಜೈಲ್, ಕುವೆಂಪು ನಗರ, ಹಮಾಲರ ಕಾಲೋನಿ, ಗಡಿಯಾರ ಕಂಬ, ನಿರ್ಮಿತ ಕೇಂದ್ರ, ಮಹಿಬೂಬ ನಗರ, ಹುಲಿಕೇರಿ, ದಿಡ್ಡಿಕೇರಿ, ಸೈಲಾನ್ಪೂರ, ವಿಠ್ಠಲ ಮಾದರಿ ನಗರ, ಮಿಟ್ಟಿಕೇರಿ ಈ ಎಲ್ಲಾ ಲೈನ್ ಗಳಿಗೆ ಜ. 05 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.
ಮೇಲಿನ ಕೆಲಸವು ಬೇಗನೆ ಮುಕ್ತಾಯವಾದಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Savitri Bai Phule’s birth anniversary celebration at Congress office
ಶಿಕ್ಷಣದ ಕಾಂತ್ರಿ ಮೂಡಿಸಿದಸಾವಿತ್ರಿಬಾಯಿಯವರ ಕೊಡುಗೆ ಅನನ್ಯ : ಕರಿಬಸಪ್ಪ ನಿಡಗುಂದಿ ಅಭಿಮತ
ವರದಿ : ಪಂಚಯ್ಯ ಹಿರೇಮಠ,, ಕಲ್ಯಾಣಸಿರಿ ವಾರ್ತೆ ಕೊಪ್ಪಳ. ಯಲಬುರ್ಗಾ : ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕರಿಬಸಪ್ಪ ನಿಡಗುಂದಿ ಮಾತನಾಡಿ ಅವರು, ದೇಶದಲ್ಲಿ ಶಿಕ್ಷಣ ಕಾಂತ್ರಿ ಮೂಡಿಸಿದ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಅಪಾರವಾಗಿದೆ. ದೇಶದ ಮೊದಲ ಶಿಕ್ಷಕಿಯಾಗಿ ಅಕ್ಷರದ ಅರಿವನ್ನು ಮೂಡಿಸಿದ ಮಹಾನ್ ತಾಯಿ ಅವರ ತತ್ವ ಆದರ್ಶವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು.
ದೇಶದ ಪ್ರತಿಯೊಬ್ಬರಿಗೂ ಅಕ್ಷರ ಕಲಿಸುವ ಕೆಲಸ ಮಾಡುವ ಮೂಲಕ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ. ಇಂತಹ ಶ್ರೇಷ್ಠ ಚಿಂತನೆಗಳ ವಿಚಾರಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಶಿವನಗೌಡ ದಾನರೆಡ್ಡಿ, ವಕ್ತಾರ ಆನಂದ ಉಳ್ಳಾಗಡ್ಡಿ, ಜಿ.ಪ. ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಭೂ ನ್ಯಾಯ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ, ಮುಖಂಡರಾದ ಹಂಪಯ್ಯಸ್ವಾಮಿ ಹಿರೇಮಠ, ಶರಣಗೌಡ ಬಸಾಪೂರು, ಸಿದ್ದು ಪೋ.ಪಾಟೀಲ, ನಾಗರಾಜ ತಲ್ಲೂರು, ನಿಂಗಪ್ಪ ಕಮತರ, ಸುರೇಶ್ ಧನಕಾಯಿ, ಪುನೀತ್ ಕೊಪ್ಪಳ, ಸಂಗಮೇಶ ಚಿಕ್ಕಮ್ಯಾಗೇರಿ ಇದ್ದರು.
Books expand the horizon of knowledge. : Dr. K. Rabindranath.
ಗಂಗಾವತಿ, ಪುಸ್ತಕಗಳು ಮನುಷ್ಯನ ನಿಜವಾದ ಸ್ನೇಹಿತರು ಅವು ಮಾನವರ ಬದುಕಿನಲ್ಲಿ ಅಪಾರ ಪ್ರಭಾವವನ್ನು ಬೀರಿವೆ. ಪುಸ್ತಕಗಳನ್ನು ಓದುವುದರಿಂದಮನಸ್ಸಿಗೆವ್ಯಾಯಾಮವಾಗುತ್ತದೆ.ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಧನಾತ್ಮಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಮತ್ತು ಹಿರಿಯ ವಿದ್ವಾಂಸ ಡಾ. ರವೀಂದ್ರನಾಥ ಅಭಿಪ್ರಾಯಪಟ್ಟರು. ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಹೆಚ್. ಆರ್ ಸರೋಜಮ್ಮ ಬಾಲಕಿಯರ ಪದವಿಪೂರ್ವಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜರುಗಿದ ನನ್ನ ಮೆಚ್ಚಿನ ಪುಸ್ತಕ ಅಭಿಪ್ರಾಯ ಮಂಡನೆ ಮತ್ತು ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಂಸದ ಎಸ್. ಶಿವರಾಮಗೌಡ ಅವರು ಪುಸ್ತಕಗಳು ಜ್ಞಾನದ ಹಸಿವನ್ನು ನೀಗಿಸುವ ಅಮೃತಫಲಗಳಿದ್ದಂತೆ ಹಾಗಾಗಿ ವಿದ್ಯಾರ್ಥಿಗಳು ನಿರಂತರ ಪುಸ್ತಕ ಓದುವ ಮೂಲಕ ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಬೇಕೆಂದರು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳಸಲು ಇಂಥ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಎಂದರು. ಸಮಾರಂಭದ ಸಾನಿಧ್ಯವಹಿಸಿದ್ದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕೊಟ್ಟೂರುಮಹಾಸ್ವಾಮಿಗಳು ಮಾತನಾಡುತ್ತ ವೈವಿದ್ಯಮಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಚಾರಿತ್ರಿಕ, ಸಾಂಸ್ಕೃತಿಕ ಪ್ರಜ್ಞೆ ಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ಕೆ. ಚನ್ನಬಸಯ್ಯ ಸ್ವಾಮಿಯವರು ಮಾತನಾಡುತ್ತ ಪುಸ್ತಕಗಳು ಬಾಷಾಜ್ಙಾನವನ್ನು ಬೆಳಸಿಕೊಳ್ಳಲು ನೆರವಾಗುತ್ತವೆ ಎಂದರು ಪ್ರಾಧಿಕಾರದ ಸದಸ್ಯ ಡಾ. ಶರಣಬಸಪ್ಪ ಕೋಲ್ಕಾರ ಪ್ರಾಸ್ತಾವಿಕವಾಗಿ ಮಾತನಾಡುತ್ತ. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ 1993 ರಲ್ಲಿ ಪುಸ್ತಕ ಪ್ರಾಧಿಕಾರ ಸ್ಥಾಪನೆಯಾಗಿದೆ. ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ, ಪ್ರಕಾಶಕರಿಗೆ ಪ್ರಶಸ್ತಿ, ಲೇಖಕರಿಗೆ ಪ್ರಶಸ್ತಿ, ಶಾಲಾ ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಮನೆ ಮನೆಗೆ ಗ್ರಂಥಾಲಯ ಮುಂತಾದ ಕಾರ್ಯಯೋಜನೆಯನ್ನು ಹೊಂದಿದೆ. ಮತ್ತು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನನ್ನ ಮೆಚ್ಚಿನ ಪುಸ್ತಕ ಕುರಿತು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶರಣೆಗೌಡ ಮಾಲೀಪಾಟೀಲ್ ಮತ್ತು ಸಹಾ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ ವಕೀಲರು ಉತ್ತಮವಾಗಿ ಮಾತನಾಡಿದ ಹತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪ್ರಾಚಾರ್ಯ ಡಾ.ರವಿ ಚವ್ಹಾಣ ಸ್ವಾಗತಿಸಿದರು. ವೇದಿಕೆಯಲ್ಲಿ ಸದಸ್ಯ ಕಮತಗಿ ಲಿಂಗಪ್ಪ, ಪ್ರಾಚಾರ್ಯರಾದ ವಿ.ಜಿ.ಯಾವಗಲ್, ಬಸವರಾಜ್ ಅಯೋಧ್ಯ ಉಪಸ್ಥಿತರಿದ್ದರು.
Lawyer Bavikatti Sivananda elected as President of Kottoor Weavers Cooperative and Sales Association
ಕೊಟ್ಟೂರು ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘದ ಅಧ್ಯಕ್ಷರಾಗಿ ಬಾವಿಕಟ್ಟಿ ಶಿವಾನಂದ, ಉಪಾಧ್ಯಕ್ಷರಾಗಿ ತೋಟದ ಹನುಮಂತಪ್ಪ ಗುರುವಾರ ಆಯ್ಕೆಯಾಗಿದ್ದು
ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘಕ್ಕೆ ನಿರ್ದೇಶಕರಾಗಿ ವಿ ಎಸ್ ಕೊಟ್ರೇಶ್,ರಾಂಪುರ ಬಸವರಾಜ, ದೇವರೆಡ್ಡಿ ವೆಂಕಟೇಶ್ , ಗಂಜಿ ದಿನೇಶ, ಪಟ್ಟಶಾಲಿ ನಿಂಗರಾಜ, ತೂಲಹಳ್ಳಿ ಬೊಮ್ಮಪ್ಪ,ಕಾಸಲ ಕೊಟ್ರೇಶ್ , ವಿ ಶಿವರಾಜ್, ಪದ್ಮಾವತಿ ಆರ್ ,ಬಿ. ಸುನಂದಾ, ಅವಿರೋಧವಾಗಿ ಆಯ್ಕೆಯಾಗಿದ್ದು. ಅಧಿಕಾರಾವಧಿ ಐದು ವರ್ಷದ ವರೆಗೆ ಇರಲಿದೆ ಎಂದು ಚುನಾವಣಾಧಿಕಾರಿ ಎಚ್.ಸುರೇಶ ಪ್ರಮಾಣ ಪತ್ರ ನೀಡಿ ಪ್ರಕಟಿಸಿದರು.
ನಂತರ ನೂತನ ಅಧ್ಯಕ್ಷರಾದ ಬಾವಿಕಟ್ಟಿ ಶಿವಾನಂದ ಮಾತನಾಡಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ನೇಕಾರರ ಸಹಕಾರ ಉತ್ಪತ್ತಿ ಮತ್ತು ಮಾರಾಟ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಶ್ರಮಿಸುತ್ತೇವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್, ಪ್ರಮುಖರಾದ ಬಾಚಿನಳ್ಳಿ ಗುರುಬಸವರಾಜ್, ಭಾವಿಕಟ್ಟಿ ಗುರುಬಸಪ್ಪ, ಬಾರಿಕರ ಮರಿಗೋಣಪ್ಪ, ಜವಳಿ ರಾಜಣ್ಣ, ಶಿವಕುಮಾರ್, ಲಾರಿ ಗುರುಬಸವರಾಜ್ ಹಾಗೂ ಸಂಘದ ಕಾರ್ಯದರ್ಶಿ ಹರೀಶ ಇತರರಿದ್ದರು.
Besiege Eranna’s house if you have courage! BJP leader Viresh Sabar’s challenge
ವರದಿ : ಪಂಚಯ್ಯ ಹಿರೇಮಠ,, ಕೊಪ್ಪಳ : ಗುರುವಾರದಂದು ಕಾಂಗ್ರೆಸ್ ಪಕ್ಷದಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ವೀರಣ್ಣ ಹುಬ್ಬಳ್ಳಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯವಾಗಿದೆ ಗುತ್ತಿಯವರು ನಮ್ಮ ವೀರಣ್ಣ ಹುಬ್ಬಳ್ಳಿ ಕ್ಷಮೆಯಾಚಿಸಬೇಕು ಇಲ್ಲವೇ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ ಅವರಿಗೆ ತಾಕತ್ತಿದ್ದರೇ ಮುತ್ತಿಗೆ ಹಾಕಲಿ ನೋಡೋಣ ಎಂದರು.
ಅವರು ಪಟ್ಟಣದ ಎಪಿಎಂಸಿಯ ಗೋಡೌನ ಒಂದರ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜಕೀಯ ಎಂದ ಮೇಲೆ ಟೀಕೆ ಟಿಪ್ಪಣೆ ಇರುವುದು ಸಹಜ, ಆದರೆ ಮಾತನಾಡುವಾಗ ವೀರಣ್ಣ ಹುಬ್ಬಳ್ಳಿಯವರು ರಾಯರಡ್ಡಿಯವರಿಗೆ ಮಾನ್ಯರು ಎಂದು ಯಾವಾಗಲೂ ಸಂಬೋಧನೆ ಮಾಡಿ ಮಾತನಾಡುತ್ತಾರೆ ವಿನಃ ಎಂದು ಏಕವಚನದಲ್ಲಿ ಮಾತನಾಡುವುದಿಲ್ಲಾ ಎಂದರು.
ಆದರೆ ಗುತ್ತಿಯವರು ಹೇಳ್ತಾರೇ ನಮ್ಮ ಮನೆಯವರು ಹಾಗೂ ಪಕ್ಷದ ಹಿರಿಯರು ಮುಖಂಡರು ಗೌರವಯುತವಾಗಿ ಮಾತನಾಡುವುದನ್ನು ಕಲಿಸಿದ್ದಾರೆ ಎಂದು ಹೇಳುವ ನಿಮಗೆ ನಿಮ್ಮ ತಂದೆ ವಯಸ್ಸಿನ ವೀರಣ್ಣನವರಿಗೆ ಏಕ ವಚನದಲ್ಲಿ ಮಾತನಾಡಿದ್ದು ಸರಿಯೇ ಮೊದಲು ನೀವು ವೀರಣ್ಣನವರನ್ನು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಅವರು ನಮ್ಮ ಸಮಾಜದ ಹಿರಿಯರು ಹಾಗೂ ಜಿಲ್ಲಾಧ್ಯಕ್ಷರು ಅವರಿಗೆ ನೀವು ಈ ರೀತಿಯಾಗಿ ಮಾತನಾಡಿದ್ದು ನಮ್ಮ ಸಮಾಜ ಖಂಡಿಸುತ್ತದೆ ಮತ್ತು ಅವರನ್ನು ಕ್ಷಮೆ ಕೇಳುವಂತೆ ಆಗ್ರಹಿಸುತ್ತದೆ ಒಂದು ವೇಳೆ ನೀವು ಕ್ಷಮೆ ಕೇಳದಿದ್ಧರೇ ನಾವು ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಂತರ ಬಿಜೆಪಿ ನಗರ ಘಟಕ ಕಾರ್ಯದರ್ಶಿ ಕರಬಸಯ್ಯ ಬಿನ್ನಾಳ ಮಾತನಾಡಿ ಸಂಗಪ್ಪ ಗುತ್ತಿಯವರೇ ಮೊದಲು ನೀವು ಮಾತನಾಡುವ ರೀತಿ, ನೀತಿಗಳನ್ನು ಕಲಿತುಕೊಳ್ಳಿ, ನಿಮ್ಮ ಶಾಸಕರ ಆಡಳಿತ ಪಕ್ಷದಲ್ಲಿದ್ದಾಗ ನಮ್ಮ ಶಾಸಕ ಹಾಲಪ್ಪ ಆಚಾರ ಅವರ ಮನೆ ಮುಂದೆ ಸಿಸಿ ರಸ್ತೆ ಮಾಡಿದ್ದು ಯಾರಪ್ಪನ ಮನೆಯ ಸ್ವತ್ತಿನಿಂದ ಅಲ್ಲಾ ಎನ್ನುವುದು ತಿಳಿದು ಮಾತನಾಡಿ, ಹಾಲಪ್ಪನವರು ಮೊದಲ ಬಾರಿ ಮೂರು ಖಾತೆಗಳನ್ನು ನಿಭಾಯಿಸಿ ನಿಷ್ಠಾವಂತ ಸಚಿವರಾಗಿದ್ದರು. ಕೊಟ್ಟಂತ ಖಾತೆಗೆ ನ್ಯಾಯ ಒದಗಿಸಿ ರಾಜ್ಯದಲ್ಲಿ ಮಾದರಿಯಾಗಿದ್ದರು, ಅಂತಹ ಹಿರಿಯರ ಬಗ್ಗೆ ಮಾತನಾಡುವ ಮುನ್ನ ಬಾಯಿಗೆ ಲಗಾಮು ಹಾಕಿಕೊಂಡು ಮಾತನಾಡಿ ಇಲ್ಲದಿದ್ದರೇ ಪರಿಣಾಮ ಎದುರಿಸಬೇಕಾಗುವುದು ಎಚ್ಚರಿಕೆ ಎಂದರು.
ಈ ವೇಳೆ ಮುಖಂಡ ನಾಗಪ್ಪ ಕಲ್ಮನಿ ಮಾತನಾಡಿ ನಮ್ಮ ಪಕ್ಷದ ಹಿರಿಯ ನಾಯಕ ಕೇಂದ್ರ ಮಂತ್ರಿ ಅಮಿತ್ ಶಾ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿದ್ದು ನಾವು ಹಾಗೂ ನಮ್ಮ ಪಕ್ಷದವರು ಖಂಡಿಸುತ್ತೇವೆ. ಆದರೆ ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿ ನೀತಿಗಳ ಕುರಿತು ಒಮ್ಮೆ ಅಧ್ಯಯನ ಮಾಡಿ ಮಾತನಾಡಬೇಕು. ಅಂಬೇಡ್ಕರ್ ಅವರ ಹೆಸರು ಹೆಳಲು ಕಾಂಗ್ರೆಸ್ ನವರ ಯೋಗ್ಯರಲ್ಲಾ ಎಂದರು.
ನಮಗೆ ಕೃಷಿ ಪತ್ತಿನ ಚುನಾವಣೆಗೆ 338 ಜನ ಮಾತ್ರ ಅರ್ಹ ಸದಸ್ಯರು ಎಂಬುದು ಗೊತ್ತಿತ್ತು, ಆದರೆ ಇನ್ನೂಳಿದಂತೆ ಸದಸ್ಯರು ಅರ್ಹರು, ಅನರ್ಹರು ಎಂಬುದು ಗೊತ್ತಿರಲಿಲ್ಲಾ, ಚುನಾವಣೆಯ ದಿನ ಬೆಳಗ್ಗೆ 9 ಗಂಟೆಗೆ 448 ಮತದಾರರು ಅರ್ಹರು ಎಂದು ಗೊತ್ತಾಗಿದ್ದೆ ಆಗ, ಆದರೆ ನಾವು ಚುನಾವಣೆ ಫಲಿತಾಂಶವನ್ನು ಅಂದೇ ಸಾಯಂಕಾಲ ಬಹಿರಂಗಗೊಳಿಸಿ ಎಂದು ಆರ್ ಓ ಅವರನ್ನು ಕೇಳಿದ್ದು ಇದಕ್ಕೆ ರಾಜಕೀಯ ತಂದವರೇ ಕಾಂಗ್ರೆಸ್ ನವರು ಇಲ್ಲದಿದ್ದರೇ ಅಂದೇ ಫಲಿತಾಂಶ ಹೊರ ಬಿಳತಿತ್ತು, ಒಟ್ಟಾರೇ ಇದನ್ನೆಲ್ಲಾ ಹದಗೇಡಿಸಿದ್ದು ಕಾಂಗ್ರೆಸ್ ನವರೇ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಹಾಳಕೇರಿ, ಮಧು ಕಲ್ಮನಿ, ರಮೇಶ ಶಾಸ್ತ್ರೀ, ಶರಣಪ್ಪ ಕಾಳಿ, ರಾಜು ದ್ಯಾಂಪೂರ, ವಿನಾಯಕ ಸರಗಣಾಚಾರ, ಪ್ರಕಾಶ ಬೋರಣ್ಣವರ್, ಜಗದೀಶ ಸೂಡಿ, ಚಂದ್ರು ಬಗನಾಳ, ಬಸವರಾಜ ಬಡಗೇರ, ಮಂಜು ಚನ್ನಪ್ಪನಹಳ್ಳಿ, ಮಂಜು ಕಾಳಿ, ಲಕ್ಷ್ಮಣ ಕಾಳಿ ಇನ್ನಿತರರು ಇದ್ದರು.
Prajapita Brahmakumari Ishwariya Vishwa Vidyalaya celebrated the New Year meaningfully
. ವರದಿ : ಬಂಗಾರಪ್ಪ .ಸಿ . ಹನೂರು : ಪ್ರತಿಯೊಬ್ಬ ವ್ಯಕ್ತಿಯೂ ಅವರು ಮಾಡುವ ಕರ್ಮಕ್ಕೆ ತಕ್ಕ ಫಲವನ್ನು ಪಡೆಯುತ್ತಾರೆ. ಆದ ಕಾರಣ ಸದಾ ಭಗವಂತನ ನೆನಪಿನಿಂದ ಒಳ್ಳೆಯ ಕರ್ಮವನ್ನೇ ಮಾಡಬೇಕು. ಸದ್ಗುರುವಾದ ಶಿವತಂದೆಯನ್ನು ನೆನೆಪು ಮಾಡಲು, ಅವರ ಯಥಾರ್ಥ ಪರಿಚಯವನ್ನು ತಿಳಿದು ಸದ್ಗುರುವಿನ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ರಾಜಯೋಗಿನಿ ಬ್ರಹ್ಮಾಕುಮಾರಿ ಪ್ರಭಾಮಣಿ ಬೆಹಂಜಿರವರು ತಿಳಿಸಿದರು . ಹನೂರು ಪಟ್ಟಣದಲ್ಲಿನ ಬ್ರಹ್ಮಾಕುಮಾರಿ ವಿಶ್ವ ವಿದ್ಯಾಲಯದ ಶಾಖೆಯಲ್ಲಿ ಮಾತನಾಡಿದ ಅವರು ಮನುಷ್ಯನು ಆತ್ಮ ಮತ್ತು ಶರೀರ ಎರಡರಿಂದ ಮಾಡಲ್ಪಟ್ಟಿದೆ.ನಾನೊಂದು ಆತ್ಮ. ಆತ್ಮದಲ್ಲಿ ಮೂರು ಭಾಗಗಳಿವೆ, ಅವು ಮನಸ್ಸು, ಬುದ್ದಿ, ಸಂಸ್ಕರವಾಗಿದೆ.ನಾವು ಕೇವಲ ಸತ್ಕಾರ್ಯಗಳನ್ನು ಮಾಡುವುದರಿಂದ ಅದರ ಪುಣ್ಯದ ಫಲವನ್ನು ಪಡೆಯುತ್ತೇವೆ ಎಂದು ತಿಳಿಸಿದರು. ಇಂದು ಹಳೆಯ ವರ್ಷದ ಜೊತೆ ನಮ್ಮಹಳೆಯ ನಿಶ್ಶಕ್ತತೆಗೆ ವಿದಾಯಿ ಕೊಟ್ಟು, ಹೊಸ ವರ್ಷದಲ್ಲಿ ಹೊಸ ನವೀನತೆಯನ್ನು ತರಬೇಕಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಬಿಂದು ಅಕ್ಕನವರು ,ಸುಶೀಲಾ ಅಕ್ಕನವರು ,ಸಂತೋಷಣ್ಣ ನವರು, ಮೋಹನರವರು, ವೆಂಕಟೇಶಣ್ಣನವರು, ಮಲ್ಲೇಶಣ್ಣನವರು,ಪುಟ್ಟಸ್ವಾಮಿಣ್ಣನವರು ,ಸೇರಿದಂತೆ ಇನ್ನಿತರರು ಹಾಜರಿದ್ದರು
MoulasabGPL Season Nine Tournament Inaugurated by Municipal Chairman Moulasab
ಗಂಗಾವತಿ: ಇಂದು ಜಿ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಮಾಡಿ ಮಾತನಾಡಿ ದೈಹಿಕ ಮತ್ತು ಮಾನಸಿಕ ಸದೃಢತೆ ಹೊಂದಿದಾಗ ಮಾತ್ರ. ಕ್ರೀಡೆ ಆಡೋದು ಉತ್ತಮ: ಮೌಲಸಾಬ್ ನಗರಸಭೆ ಅಧ್ಯಕ್ಷರ ಸಲಹೆ ನೀಡಿದರು.
ಈ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮವನ್ನು ಉದ್ದೇಶಿಸಿನಗರಸಭೆ ಅಧ್ಯಕ್ಷ ಮೌಲಸಾಬ್ ಮಾತನಾಡಿ. ದೈಹಿಕ ಚಟುವಟಿಕೆಯ ಮುಂದುವರಿದ ಭಾಗವೇ ಕ್ರೀಡೆಯಾಗಿದ್ದು, ಪ್ರತಿಯೊಬ್ಬರೂಚಿಕ್ಕವಯಸ್ಸಿನಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹಾಗೂ ಮಹತ್ವವನ್ನುಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು. ನಗರದ ಎಪಿಎಂಸಿ ಪಕ್ಕದಲ್ಲಿರುವ ಸಿ.ಬಿ.ಎಸ್ ತಾಲೂಕ ಕ್ರೀಡಾಂಗಣದಲ್ಲಿ ಜಿಪಿಎಲ್ ಸೀಸನ್-೯ಆಯೋಜಿಸಲಾಗಿತ್ತು. ಅವರು ಗಂಗಾವತಿ ಪ್ರೀಮಿಯರ್ ಲೀಗ್ ಕ್ರಿಕೆಟ್ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಪಂದ್ಯಾವಳಿ ತಂಡಗಳಲೋಗೋ ಅನಾವರಣ ಮಾಡಿ ಮಾತನಾಡಿದರು. ಕ್ರೀಡಾಕೂಟಗಳಮಹತ್ವವನ್ನು ಅರಿತು ಕ್ರೀಡೆಗಳನ್ನು ಅಬಿವೃದ್ಧಿಪಡಿಸುವ ಮನೋಭಾವ ಬೆಳೆಸಿಕೊಂಡು ಇಂದಿನ ಯುವಜನತೆಯುಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕವಾಗಿಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದರು. ಅದೇ ರೀತಿಯಾಗಿ ನಗರಸಭೆ ಪೌರಾಯುಕ್ತ ಆರ್. ವಿರುಪಾಕ್ಷಪ್ಪಮೂರ್ತಿ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ, ಎಲ್ಲಕ್ರೀಡಾಭಿಮಾನಿಗಳನ್ನು ಕ್ರೀಡಾಂಗಣದಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿಕ್ರಿಕೆಟ್ ಪಂದ್ಯಾವಳಿಗಿದೆ. ಕ್ರೀಡಾಭಿಮಾನಿಗಳಿಗೆ ಹಬ್ಬದ ವಾತಾವರಣವೇಸೃಷ್ಟಿಯಾಗಲಿದೆ. ಹಾಗಾಗಿ ಕ್ರಿಡಾಪಟುಗಳು ಕ್ರೀಡಾಮನೋಭಾವನೆಯಿಂದ ಭಾಗವಹಿಸಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕೆಂದು ಕ್ರೀಡಾಪಟುಗಳಿಗೆ ಹೇಳಿದರು ಮತ್ತು ನಂತರಕಪ್‌ಗಳನ್ನು ವೀಕ್ಷಣೆ ಮಾಡಿ ಎಲ್ಲಾ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಈ ಜಿಪಿಎಲ್ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ.
ಇದರಲ್ಲಿ ಪ್ರಥಮ ಬಹುಮಾನ ರೂ. ೨ ಲಕ್ಷ, ದ್ವಿತೀಯ ಬಹುಮಾನ ೧
ಲಕ್ಷ, ತೃತೀಯ ಬಹುಮಾನ ೫೦,೦೦೦ ಇರುತ್ತದೆ. ಭಾಷಾ ಪಾಂಟಿಂಗ್,ಪರಂಜೋತಿ, ದೀಪಕ್ ಪಾಂಡೆ, ರಾಜ್ ಮೊಹಮ್ಮದ್ ರವರು ಈ ಪಂದ್ಯದಮುಖ್ಯ ಆಯೋಜಕರಾಗಿದ್ದು, ಪಂದ್ಯಾವಳಿಗಳು ನಾಳೆಯಿಂದಪ್ರಾರಭವಾಗಲಿವೆ. ಈ ಸಂದರ್ಭದಲ್ಲಿ ನಗರಸಭೆಯ ಸಾಯಿ ಸಮಿತಿ ಅಧ್ಯಕ್ಷ ರಮೇಶ್ಚೌಡ್ಕಿ. ನಗರಸಭೆ ಸದಸ್ಯರಾದ ನವೀನ್ ಮಾಲಿಪಾಟೀಲ್ ಮತ್ತು ಮತ್ತೊಬ್ಬ ಈ ಪಂದ್ಯಾವಳಿ ಆಯುಕ್ತರಾದ ಭಾಷೆಸಾಬ್, ನಗರಸಭೆ ಸದಸ್ಯಗಳಾದಉಮೇಶ್ ಸಿಂಗನಾಳ, ಪರಶುರಾಮ ಮಡ್ಡೇರ್, ಮುಸ್ತಾಕ್ ಅಲಿ, ಫಾರೂಕ್,ದಲಿತ ಮುಖಂಡ ದುರ್ಗೇಶ್, ಉಡಚಪ್ಪ, ಅರ್ಜುನ್ ಶ್ರೀರಾಮನಗರ, ಈ.ದೊಡ್ಡಮನಿ, ರಮೇಶ್ ಹೊಸಮಲಿ, ವಿರುಪಣ್ಣ ಹಿರೇಜಂತಕಲ್, ನವೀನ್, ರಂಜಿತ, ಸಿರಾಜ್, ಹಜರತ್, ಬಸವ ಸೇರಿದಂತೆ ಅನೇಕ ಕ್ರಿಕೆಟ್ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.