ಆರೋನ್ ಮೀರಜಕರ್ ಆಂಗ್ಲ ಮಾದ್ಯಮ ಶಾಲೆಯಲ್ಲಿವಾರ್ಷಿಕ ಕ್ರೀಡಾ ದಿನಾಚರಣೆ

Annual Sports Day Celebration at Aaron Meerajkar English Medium School

ಗಂಗಾವತಿ: ಜನವರಿ-೦೩ ಮತ್ತು ೦೪ ಎರಡು ದಿನಗಳ ಕಾಲ ನಗರದ ಹೊಸಳ್ಳಿ ರಸ್ತೆಯಲ್ಲಿರುವ “ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ”ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೀನ್ ಮಿರಜ್‌ಕರ್ ಅವರು ಧ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳಿಂದ ಗೌರವ ವಂದನೆಯನ್ನ ಸ್ವೀಕರಿಸಿದರು.
“ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಭಿನ್ನ ಕ್ರೀಡೆಗಳನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ತರಗತಿವಾರು ವಿವಿಧ ತಂಡಗಳನ್ನು ರಚಿಸಲಾಗಿದೆ ಹಾಗೂ ಶಾಲಾ ಶಿಕ್ಷಕರನ್ನು ನಿರ್ಣಾಯಕರಾಗಿ ನೇಮಿಸಲಾಗಿದೆ.” ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಾನಸ ಪಾಟೀಲ್ ಮಾಹಿತಿ ನೀಡಿದರು.
“ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯವಾಗಿವೆ. ಮಕ್ಕಳ ಮಾನಸಿಕ ಬೆಳವಣಿಗೆಯ ಜೊತೆಗೆ ದೈಹಿಕ ಬೆಳವಣಿಗೆಯು ಅವಶ್ಯವಾಗಿದ್ದು, ನಮ್ಮ ಶಾಲೆಯ ವಿದ್ಯಾರ್ಥಿಗಳು ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ. ಜೊತೆಗೆ ಪರೀಕ್ಷೆಯಲ್ಲಿ ಉತ್ತಮವಾದ ಪಲಿತಾಂಶವನ್ನು ನೀಡುತ್ತಿದ್ದಾರೆ.” ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೀನ್ ಮಿರಜ್‌ಕರ್ ಅವರು ತಿಳಿಸಿದರು.
“‘ಸಧೃಢ ಶರೀರದಲ್ಲಿ, ಸಧೃಢ ಮನಸ್ಸಿರುತ್ತದೆ.’ ಅಂತೆಯೆ ಕ್ರೀಡೆಯು ಮಗುವಿನ ಮನಸ್ಸನ್ನು ಏಕಾಗ್ರತೆಯ ಕಡೆಗೆ ಕೊಂಡೊಯ್ಯುವ ಒಂದು ಸಾಧನವಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ನಮ್ಮ ಆರೋಗ್ಯ ಯಾವಾಗಲೂ ಸಹ ಚೆನ್ನಾಗಿ ಇರುತ್ತದೆ.” ಎಂದು ಶಾಲೆಯ ಆಡಳಿತಾಧಿಕಾರಿಗಳಾದ ಚಂದ್ರಕಾAತ್. ಜಿ ಅವರು ನುಡಿದರು.
ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕರಾದ ಮಂಜುನಾಥ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ದೈಹಿಕ ಶಿಕ್ಷಕರಾದ ವೀರೇಶ್ ಇವರು ಪ್ರಮಾಣ ವಚನ ಭೋಧಿಸಿದರು. ನಂತರ ಕ್ರೀಡಾ ತಂಡಗಳ ಪರಿಚಯವನ್ನು ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿಗಳಾದ ಶ್ರೀಮತಿ ಸುನೀತಾ ಮಿರಜ್‌ಕರ್, ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್, ಶಾಲೆಯ ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ದಿನದ ಕಾರ್ಯಕ್ರಮವನ್ನು ಶನಿವಾರ ಮಕ್ಕಳಿಗೆ ಬಹುಮಾನಗಳನ್ನು ಘೋಸಿಸುವ ಮೂಲಕ ಸಮಾಪ್ತಿಗೊಳಿಸಲಾಯಿತು.

ಆರಾಳಅಕ್ಷಯಕುಮಾರ ಜಿ., ಸಿ.ಎ ಪರೀಕ್ಷೆಯಲ್ಲಿಆರಾಳರ‍್ಹಾಳ ಅಕ್ಷಯಕುಮಾರ ಜಿ., ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣಕುಟುಂಬ ವರ್ಗ ಹರ್ಷ.

Aral Akshay Kumar G., passed the CA exam. The family class is happy.

ಗಂಗಾವತಿ:ಆರಾಳ ಶರಣಪ್ಪ ಹಾಗೂ ಶ್ರೀಮತಿ ಜಯಶ್ರೀ
ದಂಪತಿಗಳ ಸುಪುತ್ರ ಆರಾಳಅಕ್ಷಯಕುಮಾರ
ಗುಡದೂರು ಅವರು ಇತ್ತೀಚೆಗೆ ಸಿ.ಎ ಪರೀಕ್ಷೆಯಲ್ಲಿ
ತೇರ್ಗಡೆಯಾಗಿ ಗಂಗಾವತಿ ತಾಲೂಕಿಗೆ ಕೀರ್ತಿ ತಂದಿರುತ್ತಾರೆ.
ಇವರ ಸಾಧನೆಗೆ ಕುಟುಂಬ ವರ್ಗ ಹಾಗೂ ರ‍್ಹಾಳ ಗ್ರಾಮದಗ್ರಾಮಸ್ಥರು, ಲಯನ್ಸ್ ರೋಟರಿ ಕ್ಲಬ್ ಸದಸ್ಯರು, ನಗರದಹಿರಿಯರು, ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಅಕ್ಷಯಕುಮಾರ ರವರು ತಮ್ಮ ಪ್ರಾಥಮಿಕ ಹಾಗೂ
ಪ್ರೌಢ ಶಿಕ್ಷಣವನ್ನು ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಮುಗಿಸಿ,ಪದವಿಯನ್ನು ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿ,
ಕಷ್ಟಪಟ್ಟು ಓದಿ, ದೇವರ ಅನುಗ್ರಹದಿಂದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.ಇವರಿಗೆ ಹಿತೈಷಿಗಳಾದ ಶ್ರೀಮತಿ ರೇಣುಕಾ ಶಿವರಾಮೇಗೌಡ್ರು,ಶಿರಿಗೇರಿ ಬದರಿನಾರಾಯಣ, ಶರಣರೆಡ್ಡಿ ಸಿದ್ದಾಪುರ, ಲಯನ್ಸ್ ಕ್ಲಬ್‌ನಹಿರಿಯರಾದ ಡಾ|| ಜಿ. ಚಂದ್ರಪ್ಪ, ಅಧ್ಯಕ್ಷರಾದ ಲಯನ್ಸುಬ್ರಹ್ಮಣ್ಯೇಶ್ವರರಾವ್, ಡಾ|| ಶಿವಕುಮಾರ ಮಾಲಿಪಾಟೀಲ್, ರೋಟರಿಕ್ಲಬ್‌ನ ಸುರೇಶ ಬಂಬ್, ಎನ್.ಆರ್. ಶ್ರೀನಿವಾಸ ಹಾಗೂಪದಾಧಿಕಾರಿಗಳು, ಸದಸ್ಯರು, ಲಿಟಲ್ ಹಾರ್ಟ್ಸ್ ಶಾಲೆಯ
ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರಿಯಾಕುಮಾರಿ ಪೊಲೀನಾ,ಲಿಟಲ್ ಹಾರ್ಟ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥಆಲಂಪಲ್ಲಿಯವರು, ಪ್ರಭಾಕರ ಸಿ ಹಾಗೂ ಇತರರುಶುಭಾಶಯ ಕೋರಿದ್ದಾರೆ.

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಸೌಹಾರ್ದ ಸಹಕಾರಿ ಸಂಘಗಳ ಬಳಗ ಬೆಂಬಲ : ಸುಧಾಕರ್ ಕಲ್ಮನಿ  

Sauharda Cooperative Societies support Nirmala Tungabhadra campaign: Sudhakar Kalmani



ಗಂಗಾವತಿ:ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳಿಂದ ಪ್ರಾರಂಭಗೊಂಡ ನಿರ್ಮಲ ತುಂಗಭದ್ರಾ ಅಭಿಯಾನ ಶಿವಮೊಗ್ಗ ತುಂಗ ಡ್ಯಾಮ್ ನಿಂದ ಹೊಸಪೇಟೆಯ ಭದ್ರಾ ಡ್ಯಾಮ್ ವರೆಗೂ ಮತ್ತು ತುಂಗಭದ್ರ ನದಿ ಗಂಗಾವತಿ ತಾಲೂಕಿನ ಕಿನ್ನಿಂದೇಯ ಪವಿತ್ರ ಸ್ಥಳದಿಂದ ಹರಿಯುತ್ತಿದ್ದು ಈ ತುಂಗಭದ್ರ ನದಿ ಅಪವಿತ್ರವಾಗದಂತೆ ಪವಿತ್ರವಾಗಿ, ಸ್ವಚ್ಛವಾಗಿ ಹರಿಯುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನದ ರಥೋತ್ಸವಕ್ಕೆ ಸೌಹಾರ್ದ ಸಹಕಾರಿ ಸಂಘಗಳ ಬಳಗ ಗಂಗಾವತಿ, ಸ್ವಾಇಚ್ಛೆಯಿಂದ ಬೆಂಬಲ ನೀಡುತ್ತಿದೆ.


ಗಾಲಿಶ್ರೀ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸೌಹಾರ್ದ ಸಹಕಾರಿ ಸಂಘಗಳ ಬಳಗದ ಅಧ್ಯಕ್ಷರಾದ ಸುಧಾಕರ ಕಲ್ಮನಿ ಅವರು ಮಾತನಾಡಿ ಬಳ್ಳಾರಿ, ರಾಯಚೂರು, ಕೊಪ್ಪಳ, ಹಾಗೂ ಹೊಸಪೇಟೆ ಜಿಲ್ಲೆಯ ರೈತರ ಜೀವನಾಡಿಯಾದ ತುಂಗಭದ್ರಾ ನದಿಯ ಸ್ವಚ್ಛತೆಗೆ ಅಭಿಯಾನದ ಮೂಲಕ ಸರಕಾರದ ಕಣ್ಣು ತೆರೆಸುವ ಉದ್ದೇಶ ಹೊಂದಿದೆ. ಗಂಗಾ ಸ್ಥಾನ ತುಂಗಾ ಪಾನ” ಎಂಬ ಮಾತಿನಂತೆ ತುಂಗಭದ್ರ ಮಡಿಲಿಗೆ ದಿನದಿಂದ ದಿನಕ್ಕೆ ತ್ಯಾಜ್ಯಗಳು ಕಾರ್ಖಾನೆಯಿಂದ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಅಯಾ ಕಾರ್ಖಾನೆಗಳ ಮಾಲೀಕರಿಗೆ ಹೊಣೆಗಾರಿಕೆ ನೀಡುವುದರ ಮೂಲಕ, ತುಂಗಭದ್ರ ಮಲಿನ ವಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.


 ನಂತರ ಶಾಂತಮೂರ್ತಿ ಎಂ ಮಾತನಾಡಿ, ಈಗಾಗಲೇ ತುಂಗಭದ್ರ ಜಲಾಶಯ 34 ಟಿಎಂಸಿ ಎಷ್ಟು ಹೂಳು ತುಂಬಿದ್ದು, ತೆರವಿಗೆ ಮುಂದಾಗಬೇಕು. ಇದರಿಂದ ಅಧಿಕ ಪ್ರಮಾಣದ ನೀರು ಸಂಗ್ರಹಿಸಲು ಸಾಧ್ಯ, ಜೊತೆಗೆ ರೈತರ ಕೃಷಿ ಚಟುವಟಿಕೆಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಸ್ಪಷ್ಟಪಡಿಸಿದರು. ಮತ್ತು ತುಂಗಭದ್ರೆ ನದಿ ರೈತರ ಜೀವನಾಡಿಯಾಗಿದ್ದು ಮತ್ತು ಲಕ್ಷಾಂತರ ಜನರ ಕುಡಿಯುವ ನೀರಿಗೆ ಅಮೃತಧಾರೆ ಯಾಗಿ ಹೆಸರುವಾಸಿಯಾಗಿದ್ದು, ಇಂತಹ ಪವಿತ್ರ ನದಿ ಮಲಿನಗೊಳ್ಳುವುದು ಬೇಡ, ಇದನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.


ತುಂಗಭದ್ರೆಯ ಮಕ್ಕಳಾದ ನಾವು ತಾಯಿ, ತುಂಗಭದ್ರೆಯ ಒಡಲ ಶುದ್ದಿಗೆ, ಜಾತಿ-ಮತ-ಪಂಥಗಳ ಮೀರಿ, ಶುದ್ಧ ಅಂತಃಕರ್ಣದಿಂದ ನೋಡಿಕೊಳ್ಳಬೇಕು, ತುಂಗಭದ್ರ ಅರಿದೇಹೋಗುವ ಪ್ರತಿಯೊಂದು ಜಿಲ್ಲೆಯ ನಾಗರಿಕರು ತಮ್ಮ ತನು-ಮನ- ಧನದಿಂದ ಎಲ್ಲರೊಂದಾಗಿ, ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿ, ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಿಸಿ, ಕೃಷಿ ಮತ್ತು ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ನೀರು ಶುದ್ದೀಕರಣಗೊಳಿಸಿ, ನದಿ ಶುದ್ಧತೆಗೆ ಆದ್ಯತೆಕೊಟ್ಟು, ನೀರಿನ ಉತ್ತಮ ಬಳಕೆ ಮತ್ತು ಸಂರಕ್ಷಣೆಯಿಂದ, ಮಾನವ, ಜಲಚರ ಮತ್ತು ಸಮಸ್ತ ಜೀವಸಂಕುಲ ಉಳಿವಿಗೆ ಸ್ವಚ್ಛ, ಶುದ್ಧ ಕುಡಿಯುವ ಮತ್ತು ಬಳಸಲು ಯೋಗ್ಯವಾದ ಜೀವನದಿ ನಿರ್ಮಲ ತುಂಗಭದ್ರೆಯನ್ನು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ, ಉಳಿಸಿಕೊಳ್ಳಲು, ಪ್ರತಿಯೊಬ್ಬರು ಕಾಯಾ-ವಾಚಾ-ಮನಸಾ ನಿರ್ಮಲ ತುಂಗಭದ್ರೆಯ ಸಂಕಲ್ಪವನ್ನು ಸ್ವ-ಇಚ್ಛೆಯಿಂದ ಒಪ್ಪಿಕೊಂಡು, ಆತ್ಮಸಾಕ್ಷಿಯಾಗಿ ಈ “ಜಲಸಂಕಲ್ಪ” ವನ್ನು ಸ್ವೀಕರಿಸಬೇಕೆಂದು ಹೇಳಿದರು.


ಈ ಸಂದರ್ಭದಲ್ಲಿ ಸೌಹಾರ್ದ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಕಲ್ಯಾಣ ಬಸವ ಷಣ್ಮುಖಪ್ಪ ಕುರುಗೋಡು, ಸತೀಶ್, ಶಾಂತಯ್ಯ ಹಿರೇಮರ್, ಮೌನೇಶ್, ವಸಂತ್ ಆದಿಮನಿ, ಮಲ್ಲಿಕಾರ್ಜುನ್ ಕೋಚಿ. ಲಿಂಗರಾಜ್, ಸಂತೋಪ್ ಲಂಕೆ, ರಾಘವೇಂದ್ರ, ಮಹಾಬಲೇಶ್, ಪಟ್ಟಣ್ ಶೆಟ್ಟಿ ಹಾಗೂ ನರಸಿಂಹ ಕುಲಕರ್ಣಿ ಉಪಸ್ಥಿತರಿದ್ದರು.

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯಮಹಿಳೆಯರ ಕರಾಟೆ ಸ್ಪರ್ಧೆಗೆ ಆಯ್ಕೆ

Selected for All India Inter-University Women’s Karate Competition


ಕೊಪ್ಪಳ ಜ. ೫: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ
ಮಹಿಳೆಯರ ಕರಾಟೆ ಪಂದ್ಯಾಟಗಳು ದಿನಾಂಕ ೦೬-೦೧-೨೦೨೫ ರಿಂದ
೦೮-೦೧-೨೦೨೫ರವರೆಗೆ ಬಿ.ಎಸ್.ಅಬ್ದುಲ್ ರೆಹಮಾನ್ ವಿಶ್ವವಿದ್ಯಾಲಯ,
ಭೂಪಾಲ್‌ದಲ್ಲಿ ಜರುಗಲಿದೆ. ಸದರಿ ಪಂದ್ಯಾಟಕ್ಕೆ ಕೊಪ್ಪಳದ ಶ್ರೀ
ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಬಿ.ಎ. ಅಂತಿಮ ವರ್ಷದ
ವಿದ್ಯಾರ್ಥಿನಿ ಕು. ನೇತ್ರಾ ಇವರು ವಿಜಯನಗರ ಶ್ರೀ
ಕೃಷ್ಣದೇವರಾಯ ವಿಶ್ವವಿದ್ಯಾಲಯದ ತಂಡದ ಆಟಗಾರರಾಗಿ
ಆಯ್ಕೆಯಾಗಿರುತ್ತಾರೆ. ಸದರಿ ವಿದ್ಯಾರ್ಥಿನಿಗೆ ಆಡಳಿತ ಮಂಡಳಿಯ
ಕಾರ್ಯದರ್ಶಿಗಳಾದ ಡಾ. ಆರ್ ಮರೇಗೌಡ ಮತ್ತು ಶ್ರೀ
ಗವಿಸಿದ್ಧೇಶ್ವರ ಟ್ರಸ್ಟಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು,
ಪ್ರಾಚಾರ್ಯರಾದ ಡಾ. ಚನ್ನಬಸವ, ಕಾಲೇಜಿನ ದೈಹಿಕ ಶಿಕ್ಷಣ
ನಿರ್ದೇಶಕರಾದ ವಿನೋದ ಸಿ. ಮುದಿನಬಸನಗೌಡರ ಹಾಗೂ
ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ

ಓದಿನೊಂದಿಗೆ ದೇಶಾಭಿಮಾನ ಮೂಡಿಸುವ ಶಿಕ್ಷಣ ಇಂದಿನ ಆದ್ಯತೆಗೆ ಒತ್ತು ಕೊಡಿ : ಸೈನಿಕ ಪಿ.ದಿವ್ಯಪ್ರಸಾದ್

Emphasis on education that instills patriotism with reading is today’s priority : Sainik P. Divyaprasad

ಬೆಂಗಳೂರು : ವಿದ್ಯಾರ್ಥಿಗಳಿಗೆ ದಿನನಿತ್ಯದ ಓದು, ಬರಹದ ಶಿಕ್ಷಣ ದೊಂದಿಗೆ ದೇಶಾಭಿಮಾನ ಹೊಂದುವಂತಹ ನೈತಿಕ ಶಿಕ್ಷಣವನ್ನು ಬೋಧಿಸುವ, ಅಭಿಮಾನ ಮೂಡಿಸುವ ಕೆಲಸವನ್ನು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಂಥ ಕಾಲೇಜುಗಳು ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ನನಗೆ ಅತೀವ ಸಂತಸ ಹಾಗೂ ಗೌರವ ಮೂಡುವಂತಾಗಿದೆ ಎಂದು ಮಾಜಿ ಸೈನಿಕರು, ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಪಿ.ದಿವ್ಯಪ್ರಸಾದ್ ಅಭಿಪ್ರಾಯಪಟ್ಟರು. ಅವರು ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನ 2024–25 ರ ಸಾಲಿನ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ ವಿಜೇತರಾದ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.‌ಇಂದು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದು ಪೋಷಕರಿಗೆ, ಓದಿದ ಕಾಲೇಜಿಗೆ ಕೀರ್ತಿ ತರುತ್ತಿರುವುದು ಬಹಳ ಸಂತೋಷವೇ, ಆದರೆ ನೈತಿಕ, ಶಿಕ್ಷಣ, ದೇಶಾಭಿಮಾನ ಮೂಡಿಸುವ, ಸಮಾಜದಲ್ಲಿ ಮಹಿಳೆಯರಿಗೆ, ಬಡವರಿಗೆ, ನಿರ್ಗತಿಕರಿಗೆ ಸಮಾನತೆ ಮೂಡಿಸುವ, ಅವರೂ ನಮ್ಮಂತೆ ಮನುಷ್ಯರು ಎಂಬ ಭಾವನೆ ಮೂಡುವಂತೆ ಮಕ್ಕಳಲ್ಲಿ ಶಿಕ್ಷಣದ ಸಂಸ್ಥೆಗಳು, ಅಧ್ಯಾಪಕರು ಗಮನ ಹರಿಸಬೇಕಿದೆ , ವಿದ್ಯಾರ್ಥಿಗಳಲ್ಲಿ ಅಸಾಮಾನ್ಯ ಶಕ್ತಿ, ಸಾಮರ್ಥ್ಯ ಇದ್ದು, ಕ್ರೀಡೆ , ಸಾಹಿತ್ಯ, ಸಂಸ್ಕೃತಿ ಮೌಲ್ಯಾತ್ಮಕ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವ ಸೌಭಾಗ್ಯ ನನ್ನದು .ಇಂತಹ ಕಾರ್ಯಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಮನೋಧರ್ಮ ಬದಲಾಗುತ್ತದೆ.

ಆರೋಗ್ಯಕರ ಸಮಾಜವೂ ನಿರ್ಮಾಣವೂ ಆಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆ ಸಹಕಾರ್ಯದರ್ಶಿ ಎಂ.ಎಸ್.ನಟರಾಜ್ ಅವರು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿರಿ, ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಕೀರ್ತಿವಂತರಾಗಿರಿ, ಸರ್ವಜನಾಂಗದ ಶಾಂತಿಯ ಸಂದೇಶ ಸಾರುವ ದಾರ್ಶನಿಕರನ್ನು ಓದಿರಿ, ಅವರ ಹಾದಿಯಲ್ಲಿ ನಡೆದರೆ ನಮ್ಮ ಬದುಕು ಸುಂದರವಾಗುವುದು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಆರ್.ವಿ.ಮಂಜುನಾಥ್ ಅವರು ವಿದ್ಯಾರ್ಥಿ ಜೀವನದಲ್ಲಿ ರ್ಯಾಂಕ್ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ಸಾರ್ವಜನಿಕ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು, ಸಮಯ, ಸಂದರ್ಭವನ್ನು ಚೆನ್ನಾಗಿ ಬಳಸಿಕೊಂಡು, ತಂದೆ ತಾಯಿ ಗುರು ಹಿರಿಯರಿಗೆ ಸದಾ ಮಾದರಿಯಾಗಬೇಕೆಂದು ಹಿತವಚನ ಹೇಳಿದರು.‌ಇದೇ ಸಮಯದಲ್ಲಿ ‌ಅತಿಥಿ ಪಿ.ದಿವ್ಯ ಪ್ರಸಾದ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ.ಎಸ್.ರಾಮಲಿಂಗೇಶ್ವರ, ಪ್ರೊ.ಮಧು.ಬಿ.ಎನ್. ಅಧ್ಯಾಪಕರುಗಳಾದ ಗುರುರಾಜ್, ಸಹನಾ.ಎಸ್, ಕಾವ್ಯ.ವಿ, ಜೀವಿತಾ ಮುಂತಾದವರಿದ್ದರು. 300 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಜ.07 ರಂದು ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ

Massive protest by Koppal District Vishwakarma Samaj on January 07

ಸಾಂದರ್ಭಿಕ ಚಿತ್ರ

ಕೊಪ್ಪಳ: ಕಲಬುರಗಿ ಜಿಲ್ಲೆಯ ಸಿವಿಲ್ ಗುತ್ತಿಗೆದಾರ ಹಾಗೂ ವಿಶ್ವಕರ್ಮ ಸಮಾಜದ ಯುವಕ ಸಚಿನ್ ಪಾಂಚಾಳ ಆತ್ನಹತ್ಯೆ ಪ್ರಕರಣದ  ಕುರಿತು ತನಿಖೆ ನಡೆಸಬೇಕು ಮತ್ತು ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿ ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ಜ.07 ರಂದು ಬೆಳಿಗ್ಗೆ 11.00 ಗಂಟೆಗೆ ಕೊಪ್ಪಳ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಶಕುಮಾರ ಕಂಸಾಲೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಪ್ರಕಾಶತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜ.07 ರಂದು ಅಶೋಕ ಸರ್ಕಲ್, ಬಸವೇಶ್ವರ ಸರ್ಕಲ್ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಡಿಸಿ ಅವರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ತಿಳಿಸಿದ ಅವರು, ಅಂದು ನಡೆಯುವ ಪ್ರತಿಭಟನೆಯಲ್ಲಿ ವಿಶ್ವಕರ್ಮ ಸಮಾಜ ಬಾಂಧವರು, ಮುಖಂಡರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಎ.ಪಿ.ಎಂ.ಸಿ. ಬಜೆಟ್  ಮಂಡನೆ

A.P.M.C. Budget presentation

ಕೊಟ್ಟೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ತನ್ನ 2025-26ನೇ ಸಾಲಿನ ಸಾಮನ್ಯ ಮುಂಗಡ ಪತ್ರವನ್ನು ಶುಕ್ರವಾರ ಮಂಡಿಸಿತು. ಲೈಸೆನ್ಸ್ ಶುಲ್ಕದಿಂದ ೨೫,೦೦೦/-, ಮಾರುಕಟ್ಟೆ ಶುಲ್ಕದಿಂದ ೨,೦೦,೦೦,೦೦೦ ಇತರೆ ಆದಾಯ ಮೂಲಗಳಿಂದ ೪೫,೨೫,೦೦೦/- ಒಟ್ಟು ಆದಾಯ ೨,೪೫,೫೦,೦೦೦ ಆಗಿದ್ದು ವೆಚ್ಚದ ಬಾಬ್ತು ರೂ. ೧,೪೪,೯೫,೨೫೦ ಆಗಲಿದೆ ಎಂಬ ಅಂದಾಜಿದೆ. ಖಾಯಂ ನಿಧಿ ಮುಂಗಡಗಳು ೩,೯೭,೨೦,೯೦೨ ಆಗಿದ್ದು, ಒಟ್ಟಾರೆ ಉಳಿತಾಯ ರೂ. ೨೭,೦೪,೯೬೦ ಆಗಿದೆ ಎಂದು ಬಜೆಟ್ ಮಂಡನೆಯಲ್ಲಿ ತಿಳಿಸಲಾಗಿದೆ.
ಬಜೆಟ್ ಮಂಡನೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಅಧ್ಯಕ್ಷರು ಎ ನಂಜಪ್ಪ ಹರಾಳು, ಉಪಾಧ್ಯಕ್ಷರು ಎಂ ಶಿವಣ್ಣ, ಶಿರಿಬಿ ಕೊಟ್ರೇಶ್, ಬೇವೂರು ದೇವಪ್ಪ, ಕೆ ಶಿವಕುಮಾರ್ ಗೌಡ, ಸರ್ವ ಸದಸ್ಯರು,ಕಾರ್ಯದರ್ಶಿ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲಾ ವಿಜ್ಞಾನ ಕೇಂದ್ರಗಳ ಅಭಿವೃದ್ಧಿಗೆ ಒತ್ತು:ಸಚಿವಎನ್.ಎಸ್. ಭೋಸರಾಜು

Emphasis on development of district science centers: Minister N.S. Bhosaraju

ವರದಿ : ಪಂಚಯ್ಯ ಹಿರೇಮಠ
ಕೊಪ್ಪಳ : ರಾಜ್ಯದಲ್ಲಿರುವ ಜಿಲ್ಲಾ ವಿಜ್ಞಾನ ಕೇಂದ್ರಗಳ ಅಭಿವೃದ್ಧಿಗೆ ಮನವಿಗಳು ಬರುತ್ತಿದ್ದು ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಸಣ್ಣ ನೀರಾವರಿ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ಹೇಳಿದರು.

ಅವರು ಶನಿವಾರ ಕೊಪ್ಪಳ ನಗರದಲ್ಲಿರುವ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ. 50:50 ರ ಅನುದಾನದಲ್ಲಿ ಈಗಾಗಲೇ ರಾಯಚೂರು. ಯಾದಗಿರಿ ಮತ್ತು ಮಂಗಳೂರಿನಲ್ಲಿ ಒಳ್ಳೆಯ ವಿಜ್ಞಾನ ಕೇಂದ್ರಗಳನ್ನು ಮಾಡುತ್ತಿದ್ದೆವೆ. ಅದರಂತೆ ಉತ್ತರ ಕರ್ನಾಟಕದ ಜಿಲ್ಲೆಯ ಎಲ್ಲಾ ಕಡೆ ಪ್ರೌಢ ಶಾಲೆಯ ಮಕ್ಕಳಿಗೆ ಅನುಕೂಲವಾಗುವ ಮತ್ತು ಅವರಿಗೆ ವಿಜ್ಞಾನದ ಕುರಿತು ಮಾಹಿತಿ ನೀಡಲು ಈ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಅನುದಾನವನ್ನು ನೀಡಲಾಗುವುದು ಎಂದರು.

ಮೊಬೈಲ್ ವ್ಯಾನಗಳ ಮುಖಾಂತರ ಶಾಲೆಗಳಿಗೆ ತೆರಳಿ ವಿಜ್ಞಾನದ ಮಾಹಿತಿಯನ್ನು ಮಕ್ಕಳಿಗೆ ನೀಡಲಾಗುತ್ತದೆ. ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷರು ಜಿಲ್ಲಾಧಿಕಾರಿಗಳು ಆಗಿರುವುದರಿಂದ ಆಗಾಗ್ಗೆ ಸಭೆ ನಡೆಸಿ ವಿಜ್ಞಾನ ಕೇಂದ್ರಕ್ಕೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಬೇಕು. ಇದಕ್ಕೆ ಆಯಾ ಜಿಲ್ಲೆಯ ಸಚಿವರು. ಸಂಸದರು. ಶಾಸಕರು ತಮ್ಮ ಸ್ಥಳೀಯ ಅನುದಾನದಲ್ಲಿ ನೆರವನ್ನು ನೀಡುವ ಮೂಲಕ ವಿಜ್ಞಾನ ಕೇಂದ್ರಗಳ ಅಭಿವೃದ್ಧಿಗೆ ಎಲ್ಲರೂ ಸಹಾಯ ಸಹಕಾರ ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಮಾಜಿ ಸಂಸದರಾದ ಸಂಗಣ್ಣ ಕರಡಿ, ಕೊಪ್ಪಳ ತಹಶೀಲ್ದಾರ ವಿಠಲ್ಲ ಚೌಗಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಾದ ಶ್ರೀಶೈಲ ಬಿರಾದಾರ ಸೇರಿದಂತೆ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಚಿನ್ ಪಂಚಾಳ ಸಾವಿನ ಬಗ್ಗೆ ಸಿಬಿಐ ತನಿಖೆನಡೆಸಿತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಿಂಧನೂರು ವಿಶ್ವಕರ್ಮ ಮುಖಂಡರು ಒತ್ತಾಯ

Vishwakarma leaders insisted

ಸಿಂಧನೂರು: ಬೀದರನಲ್ಲಿ ಆತ್ಮಹತ್ಯೆಗೆ ಸಚಿನ್ ಪಂಚಾಳ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಿಂಧನೂರು ತಾಲೂಕ ವಿಶ್ವಕರ್ಮ ಮುಖಂಡರು ಸಿಂಧನೂರು ತಹಸೀಲ್ದಾರ್ ಕಚೇರಿಯಲ್ಲಿ ಮಾನ್ಯ ತಹಸೀಲ್ದಾರ ಅರುಣ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.

ಬೀದರ ಜಿಲ್ಲೆಯ ನಿವಾಸಿಯಾದ ಸಚಿನ್ ಮಾನಪ್ಪ ಪಂಚಾಳ ಅವರು ಉನ್ನತ ಗುತ್ತಿಗೆದಾರರು ಎಂದು ತಿಳಿದು ಬಂದಿದ್ದು ಸಚಿನ್ ಪಂಚಾಳ ಅವರು ಪ್ರಭಾವಿ ಸಚಿವರ ಬೆಂಬಲಿಗರ ಕಿರುಕುಳಕ್ಕೆ ಬೇಸತ್ತು ಸ್ವಯಂ ಪ್ರೇರಿತವಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ಆಸರೆಯಾಗಿರುವ ಸಚಿನ್ ಪಂಚಾಳ ಅವರ ಕುಟುಂಬದವರ ಅನಾಥರಾಗಿದ್ದು,ಈ ಘಟನೆ ಇಡೀ ಮನುಕುಲವನ್ನೇ ನಾಚಿಸುವಂತಹದಾಗಿದ್ದು ಖಂಡನೀಯವಾಗಿದೆ.ಸರ್ಕಾರ ಕೂಡಲೇ ಸಾವಿಗೆ ಕಾರಣರಾದದವರನ್ನು ಬಂಧಿಸಬೇಕು.ಡೆತ್ ನೋಟ್ ನಲ್ಲಿ ಬರೆದಿರುವಂತಹ ಆರೋಪಿಗಳಿಗೆ ನೀಡಿರುವ ಹಣವನ್ನು ಸಚಿನ್ ಕುಟುಂಬಸ್ಥರಿಗೆ ಹಿಂತಿರುಗಿಸಿಕೊಟ್ಟು,ಸಚಿನ್ ಪಂಚಾಳ ಅವರ ಸಾವಿಗೆ ನ್ಯಾಯ ದೊರಕಿಸಿ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 50ಲಕ್ಷ್ಮಿ ರೂಪಾಯಿಗಳನ್ನು ಪರಿಹಾರವನ್ನು ಕೊಡಬೇಕೆಂದು ಹಾಗೂ ಆತ್ಮಹತ್ಯೆಯ ಸಾವಿನ ಬಗ್ಗೆ ತನಿಖೆ ಮಾಡಲು ಸಿಬಿಐ ಗೆ ಕೊಡಬೇಕೆಂದು ತಹಸೀಲ್ದಾರ್ ಅರುಣ್ ದೇಸಾಯಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ಸಿಂಧನೂರು ನಿಂದ ಮಸ್ಕಿ ಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿ ಪಿ ಡಬ್ಲ್ಯೂ ಡಿ ಕ್ಯಾಪ್ ಕಂಪೌಂಡ್ ಗೆ ಹೊಂದಿಕೊಂಡು ಸುಮಾರು ವರ್ಷಗಳಿಂದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಇದೆ.ಮುಖ್ಯ ರಸ್ತೆ ಅಗಲೀಕರಣದಿಂದ ದೇವಸ್ಥಾನವನ್ನು ತೆರವುಗೊಳಿಸಬೇಕಾಗಿರುವುದರಿಂದ ಸರ್ಕಾರದ ವತಿಯಿಂದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನಕ್ಕೆ ಜಾಗವನ್ನು ಮಂಜೂರು ಮಾಡಬೇಕು ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ ಮಹಾಸ್ವಾಮಿಗಳು ಶ್ಯಾಡಲಗೇರಿ ಮಠ,ವಿಶ್ವಕರ್ಮ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಬಡಿಗೇರ,ಸಮಾಜದ ಹಿರಿಯರಾದ ಅಯ್ಯಪ್ಪ ನಿವೃತ್ತ ಬಿ.ಇ.ಓ,ವೀರಭದ್ರಪ್ಪ ಹಂಚಿನಾಳ,ರವೀಂದ್ರ ಗದ್ರಟಗಿ,ಡಾ.ವೀರೇಶ ತಿಡಿಗೋಳ,ದೇವಪ್ಪ ದೇವರಗುಡಿ,ಚನ್ನಪ್ಪ ಕೆ ಹೊಸಹಳ್ಳಿ ಇನ್ನಿತರ ಸಮಾಜದ ಮುಖಂಡರು ಇದ್ದರು.

ಭಾನುವಾರದoದು: ಅನಿಲ್ ಗುನ್ನಾಪುರವರ ಸರ್ವೇ ನಂಬರ್-97 ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ

Sunday: Anil Gunnapur’s Survey No.97 story anthology release event

ಬೆಂಗಳೂರು: ಜ.04: ಅನಿಲ್ ಗುನ್ನಾಪೂರ ಅವರು ಬರೆದ ‘ಸರ್ವೇ ನಂಬರ್-97’ ಎಂಬ ಕಥಾಸಂಕಲನವನ್ನು ಹೊಗಿರಣ ಪ್ರಕಾಶನ, ಬುಕ್ ಬ್ರಹ್ಮ ಹಾಗೂ ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ, ಬಾಗಲಕೋಟೆ ಇವರ ಸಹಯೋಗದಲ್ಲಿ ಇದೇ ಭಾನುವಾರ ಬೆಳಗ್ಗೆ 10.30 ಗಂಟೆಗೆ
ಕನ್ನಡ ಸಾಹಿತ್ಯ ಪರಿಷತ್ (ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎoದು ಹೈಕೋರ್ಟ್ ವಕೀಲರಾದ ಸುನಿಲಕುಮಾರ್ ಗುನ್ನಾಪೂರರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಿಲ್ ಗುನ್ನಾಪೂರ ಅವರ ‘ಸರ್ವೇ ನಂಬರ್-97’ ಎಂಬ ಕಥಾಸಂಕಲನವನ್ನು ಹಿರಿಯ ಕವಿ ಹಾಗೂ ಚಿಂತಕರಾದ
ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಇದರ ಅಧ್ಯಕ್ಷತೆಯನ್ನು ಲೇಖಕ ಮತ್ತು ಹಿರಿಯ ಪತ್ರಕರ್ತರಾದ ಶ್ರೀ ರಘುನಾಥ ಚ.ಹ ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ವಲಯ ಆಯುಕ್ತರು ಮತ್ತು ಯಲಹಂಕ ವಲಯದ ಕರೀಗೌಡ (ಐಎಎಸ್) ಹಾಗೂ ಕವಯಿತ್ರಿ, ಅನುವಾದಕಿ ಮತ್ತು ಕತೆಗಾರ್ತಿಯಾದ ಜ.ನಾ.ವೇಜಶ್ರೀ, ನಡೆದಾಡುವ ದೇವರ ಪ್ರತಿಷ್ಠಾನ, ಕನ್ನಡ ಮನಸುಗಳು, ಚಾರಣ ಬಳಗ, ಎಂ.ಇ ಅಸೋಸಿಯೇಷನ್ ನ ಗಣ್ಯರು, ಮತಿತರು ಭಾಗವಹಿಸಲಿದ್ದಾರೆ ಹಾಗೂ ಕಾರ್ಯಕ್ರಮದ ನಿರ್ವಹಣೆಯನ್ನು ಶೃತಿ.ಬಿ.ಆರ್, ಸ್ವಾಗತವನ್ನು ಸುನಿಲಕುಮಾರ್ ಗುನ್ನಾಪೂರ ನೆರವೇರಿಸಲಿದ್ದಾರೆ.