Constituency leaders appeal to seniors to give suitable status to former MLA R Narendra.
ವರದಿ : ಬಂಗಾರಪ್ಪ .ಸಿ .
ಹನೂರು : ಪಕ್ಷವು ಆಡಳಿತಕ್ಕೆ ಬಂದು ಎರಡು ವರ್ಷಗಳ ಅಂತರವಾಗಿದೆ ನಮ್ಮ ನಾಯಕರಾದ ಆರ್ ನರೇಂದ್ರರವರಿಗೆ ನಮ್ಮದೆ ಸರ್ಕಾರವಿದ್ದರು ಯಾವುದೇ ಆಡಳಿತ ನೀಡದಿರುವುದು ನೋವಿನ ಸಂಗಾತಿಯಾಗಿದೆ ಎಂದು ಉದ್ಯಮಿ ಪೊನ್ನಾಚಿ ರಂಗಸ್ವಾಮಿ ಸೇರಿದಂತೆ ಇನ್ನಿತರರು ಸಚಿವರಾದ ಹೆಚ್ ಸಿ ಮಹದೇವಪ್ಪರವರಿಗೆ ಮನವಿ ಮಾಡಿದರು.
ಮೈಸೂರಿನ ಲೋಕೋಪಯೋಗಿ ಇಲಾಖೆಯಲ್ಲಿನ ಅಥಿತಿ ಗೃಹದಲ್ಲಿ ಸಚಿವರ ಜೋತೆಯಲ್ಲಿ ಮಾತನಾಡಿದ ಕಾರ್ಯಕರ್ತರು ಕಳೆದ ಸಲ ನಡೆದ ಲೋಕಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದದಿಂದ ಬಾರಿ ಬಹುಮತದಿಂದ ಆಯ್ಕೆ ಮಾಡಲಾಗಿದೆ ,ಹಾಗೂ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಒಂದು ಅವಕಾಶವನ್ನು ನಮ್ಮ ನಾಯಕರಿಗೆ ನೀಡಬೇಕೆಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಹನೂರು ಹಾಗೂ ಕೊಳ್ಳೆಗಾಲ ವಿದಾನಸಭಾ ಕ್ಷೇತ್ರದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.