Breaking News

ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಿ –ವಿಜ್ಞಾನಿ ಪ್ರೊ.ಎಸ್ ಎಂ ಶಿವಪ್ರಸಾದ್

Cultivate the habit of questioning – Scientist Prof. SM Shivaprasad

ಜಾಹೀರಾತು


ಕೊಟ್ಟೂರು: ನಿಸರ್ಗದ ಬಗ್ಗೆ ಅರ್ಥೈಸಿಕೊಳ್ಳುವುದರ ಜೊತೆಯಲ್ಲಿ ಕುತೂಹಲ ಗುಣ ಬೆಳೆಸಿಕೊಂಡವರು ವಿಜ್ಙಾನಿಗಳಾಗಲು ಸಾಧ್ಯ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ  ಹಾಗೂ ವಿಜ್ಞಾನಿ ಪ್ರೊ. ಎಸ್.ಎಂ.ಶಿವಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗೊರ್ಲಿ ಶರಣಪ್ಪ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ  ಸಂವಾದ ಕಾರ್ಯಕ್ರಮದಲ್ಲಿ  ‘ ವಿಜ್ಞಾನ  ಅರಿವು ಮತ್ತು ಜಾಗೃತಿ ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಸಂವಾದ ನಡೆಸಿದರು.  

ವಿಜ್ಙಾನ ಎಂಬುದು ಸತ್ಯವಾದ ಮತ್ತು ಸುಂದರವಾದ ವಿಷಯವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೇ ಅದರಾಚೆಗೂ ವ್ಯಾಪಕ ಕಲಿಕೆಗೆ ಒತ್ತು ನೀಡುವತ್ತ ಗಮನ ಹರಿಸಬೇಕು ಹಾಗೂ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳನ್ನು ವೈಜ್ಞಾನಿಕ ಚಿಂತನೆಗೆ ಪ್ರಚೋದಿಸುವ ಹಾಗೂ  ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ    ಉಪನ್ಯಾಸಕರ ಪಾತ್ರ ಮುಖ್ಯವಾಗಿದೆ ಎಂದರು. ಕೇವಲ ಅಂಕಗಳ ಮಾನದಂಡದಿಂದ ವಿದ್ಯಾರ್ಥಿಗಳ ಜಾಣತನ ಅಳೆಯಬಾರದು ಅವರಲ್ಲಿ ಅಡಗಿರುವ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸುವ ನಿಟ್ಟಿನತ್ತ ಪಾಲಕರು ಹಾಗೂ ಶಿಕ್ಷಕರು ಮುಂದಾಗಬೇಕೆಂದರು.

ಯಂತ್ರಗಳ ಸಹಾಯದಿಂದ ಜಗತ್ತು ಮುನ್ನಡೆಯುವುದರ ಜೊತೆಯಲ್ಲಿ ವಯಸ್ಸನ್ನು ತಡೆಗಟ್ಟುವಂತಹ ತಂತ್ರಜ್ಙಾನ ಹಾಗೂ ಸಾವನ್ನು ಗೆಲ್ಲುವಂತಹ ದಿನಗಳು ಬರುವುದರಿಂದ ಆಧುನಿಕ ತಂತ್ರಜ್ಙಾನಕ್ಕೆ ತಕ್ಕಂತೆ ಜಗತ್ತು ಹೊಂದಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.

ಪರೀಕ್ಷಾ ರಹಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳು ಒತ್ತಡದಿಂದ ಪಾರಾಗಿ  ಜೀವನದಲ್ಲಿ ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದಿನಗಳನ್ನು ತಾವೇ ರೂಪಿಸಿಕೊಳ್ಳಬೇಕೇ ವಿನಃ ಇನ್ನೊಬ್ಬರ ನೆರವಿನಿಂದ ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದರು,

ಪಾಲಕರ  ಆಕಾಂಕ್ಷೆಗಳನ್ನು ಈಡೇರಿಸುವುದರ ಜೊತೆಯಲ್ಲಿ ಸಂಸ್ಕಾರ ಹಾಗೂ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ವಿದ್ಯಾರ್ಥಿಗಳ ಬದುಕು ಅರ್ಥಪೂರ್ಣವಾಗುತ್ತದೆ ಎಂದರು.

ಉಪನ್ಯಾಸಕ ಸಿದ್ದೇಶ್ ಅಧ್ಯಕ್ಷತೆ ವಹಿಸಿ  ಮಾತನಾಡಿ ಭಾರತವು  ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ  ದಾಪುಗಾಲು ಇಡುವಲ್ಲಿ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಜ್ಙಾನ ಸಮಿತಿ ಸದಸ್ಯ ಅಲಬೂರು ಶಾಂತಕುಮಾರ್, ರಾಮಣ್ಣ, ನಾಗರಾಜ್ ಬಂಜಾರ್, ವಿನಯ್ ಮುದೇನೂರ್, ಉಪನ್ಯಾಸಕರಾದ ಸಿ.ಬಸವರಾಜ್, ಕೆ.ಎಂ.ರೇಣುಕಾಸ್ವಾಮಿ, ಆರಾದ್ಯ ಸ್ವಾಮಿ, ಚೇತನ್ ಚೌವಾಣ್, ಡಾ.ವಿಜಯಕುಮಾರ್, ಕೆ.ಕೊಟ್ರೇಶ್, ಶಿಪಪ್ರಕಾಶ್   ಮುಂತಾದವರು ಪಾಲ್ಗೊಂಡಿದ್ದರು.

About Mallikarjun

Check Also

ಎಫ್.ಕೆ.ಸಿ.ಸಿ.ಐನಿಂದ ಶನಿವಾರ ಉದ್ಯೋಗ ಉತ್ಸವ್ 2025 –26 ; 6 ವಲಯಗಳಲ್ಲಿ 6 ಸಾವಿರ ಉದ್ಯೋಗಾವಕಾಶಗಳು ಲಭ್ಯ

FKCCI to hold Saturday Udyog Utsav 2025-26; 6,000 job opportunities available in 6 zones ಬೆಂಗಳೂರು, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.