For Capacity Building of Agricultural Workers: Sponsored by Agricultural University and KVK
ಗಂಗಾವತಿ: ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರ ಸಹಯೋಗದಲ್ಲಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಕೃಷಿ ಸಖಿಯರ 2ನೇ ಹಂತದ ಆರು ದಿನಗಳ ಪರಿಸರ ಕೃಷಿ ವಿಧಾನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಕೆ.ವಿ.ಕೆ.ಯ ಹಿರಿಯ ಮತ್ತು ಮುಖ್ಯಸ್ಥರಾದಂತ ಡಾ.ರಾಘವೇಂದ್ರ ಎಲಿಗಾರ್, ಹಿರಿಯ ತಾಂತ್ರಿಕ ಅಧಿಕಾರಿಗಳಾದ ಡಾ. ನಾರಪ್ಪ, ಕೊಪ್ಪಳ ಜಿಲ್ಲಾ ಕೃಷಿ ತರಬೇತಿ ಕೇಂದ್ರದ, ಸಹಾಯಕ ಕೃಷಿ ನಿರ್ದೇಶಕರಾದ ಡಾ.ಚಂದ್ರಕಾಂತ ನಾಡಗೌಡ, ಗಂಗಾವತಿ ತಾಲೂಕಿನ
ಎನ್.ಆರ್.ಎಲ್.ಎಂ. ಕೃಷಿ ತಾಲೂಕು ವ್ಯವಸ್ಥಾಪಕರಾದ ಮುದ್ದಾಣೇಶ್ , ಮೂರು ತಾಲೂಕಿನ ಕೃಷಿ ಸಖಿಯರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ 153 ಮಂದಿ ಕೃಷಿ ಸಖಿ ನಿಯೋಜನೆ :** ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಬ್ಬರಂತೆ ಕೆಲಸ
ಕೃಷಿ ಇಲಾಖೆಗೆ ಆಸರೆಯಾದ ಕೃಷಿ ಸಖಿಯರು
ಆರೋಗ್ಯ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಮಾದರಿಯಲ್ಲಿ ಕೃಷಿ ಇಲಾಖೆಯಡಿ ‘ಕೃಷಿ ಸಖಿಯರನ್ನು ಗ್ರಾಮೀಣ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕೃಷಿ ಇಲಾಖೆಗೆ ಕೊಂಡಿಯಾದ ‘ಕೃಷಿಸಖಿ’ಯರು.
ಕೊಪ್ಪಳ ಜಿಲ್ಲೆಯಲ್ಲಿ 153 ಪಂಚಾಯಿತಿ ಗಳಲ್ಲಿ 153 ಕೃಷಿ ಸಖಿಯರನ್ನು ನೀಯೋಜಿಸಲಾಗಿದ್ದು, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ ಕೃಷಿ ಸಖಿಯವರಿಗೆ 2ನೇ ಹಂತದ ಪರಿಸರ ಕೃಷಿ ವಿಧಾನಗಳ ತರಬೇತಿ ಇಂದು ಮುಗಿದಿದೆ. ಮುಂದಿನ ದಿನಗಳಲ್ಲಿ ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ಇಲಾಖೆ ಪೂರ್ಣಪ್ರಮಾಣದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಬಾಕಿ ಉಳಿದ ಕೃಷಿ ಸಖಿಯರಿಗೆ ಶೀಘ್ರದಲ್ಲಿ 2 ನೇ ಹಂತದ ತರಬೇತಿ ನಡೆಯಲಿದೆ.
ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್ ಮೂಲಕ ಡೇ ಎನ್ಆರ್ ಎಲ್ ಎಮ್ ವಿಧೇಯಕ ಸ್ವಸಹಾಯ ಗುಂಪಿನ ಮಹಿಳಾ ರೈತರಿಗೆ ಕೃಷಿ ಇಲಾಖೆಯ ಕಾರ್ಯಕ್ರಮಗಳ ವಿಸ್ತರಣಾ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸುವ ಘನ ಉದ್ದೇಶ ಹೊಂದಲಾಗಿದೆ. ಕೃಷಿ ಇಲಾಖೆ ವಿವಿಧ ಬಗೆಯ ಸೇವೆಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಅಗತ್ಯತೆಗೆ ಅನುಸಾರವಾಗಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಕ್ಕೆ (ಜಿಪಿಎಲ್ಎಫ್) ತಲಾ ಒಬ್ಬರಂತೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿ ನಿಯೋಜನೆಗೂಂಡ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿ) ಅವರಿಗೆ ಒಂದು ತಿಂಗಳಲ್ಲಿ 15 ದಿನಗಳ ಕಾಲ ಸಲ್ಲಿಸುವ ಕೃಷಿ ಇಲಾಖೆಯ ವಿವಿಧ ವಿಸ್ತರಣಾ ಸೇವೆಗಳಿಗೆ ಆಯಾ ಜಿಪಿಎಲ್ಎಫ್ ಮೂಲಕ ಒಂದು ದಿನಕ್ಕೆ ರೂ.250/- ರೂಗಳಂತೆ ತಿಂಗಳಿಗೆ ರೂ.3750/- ಗೌರವಧನ ಪಾವತಿಸಲಾಗುತ್ತದೆ.
ಕೃಷಿ ಸಖಿಯರು ಆಯಾ ಗ್ರಾಮ ಪಂಚಾಯಿತಿ ಹೋಬಳಿ ವ್ಯಾಪ್ತಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಕೃಷಿ ಅಧಿಕಾರಿಗಳೂಂದಿಗೆ ನಿರಂತರ ಸಂಪರ್ಕದಲಿದ್ದು ಅವರು ತಾಂತ್ರಿಕ ಮತ್ತು ವಿಸ್ತರಣಾ ಸೇವೆ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.
ಈಗಾಗಲೇ ಜಿಲ್ಲೆಯ 153 ಕೃಷಿ ಸಖಿಯರಿಗೆ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ,ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣೆಯ ಸಂಸ್ಥೆ, ಹೈದರಾಬಾದ್ ವತಿಯಿಂದ ನೈಸರ್ಗಿಕ ಕೃಷಿ ತರಬೇತಿಯ ಪ್ಯಾರಾ ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ಪ್ರಮಾಣ ಪತ್ರ ನೀಡಲಾಗಿದೆ.
ಕೃಷಿ ಸಖಿ ಹೇಳಿಕೆ :
“”ನಾನು ಕೃಷಿ ಸಖಿಯಾಗಿ ಕೆಲಸ ಮಾಡಲು ಇಚ್ಛಿಸಿದ್ದೆನೆ ಇದುವರೆಗೂ 2 ಹಂತದ ತರಬೇತಿ ಪಡೆದಿದ್ದು ಇನ್ನು ಹೆಚ್ಚುವರಿ ತಾಂತ್ರಿಕ ತರಬೇತಿಯನ್ನು ಪಡೆಯಲು ಆಸಕ್ತಿ ಹೊಂದಿದ್ದೆನೆ. ಮಣ್ಣಿನ ಆರೋಗ್ಯ, ಬೆಳೆ ಪರಿವರ್ತನೆ, ಗುಣಮಟ್ಟದ ಬೀಜ ಉತ್ಪಾದನೆ ಮತ್ತು ಬೀಜೋಪಚಾರ, ಜೈವಿಕ ಗೊಬ್ಬರ, ಶೀಲಿಂದ್ರನಾಶಕ ಮತ್ತು ಜೈವಿಕ ಕೀಟನಾಶಕಗಳ ಬಳಕೆ, ಕೃಷಿ ಆಧಾರಿತ ಬೇಸಾಯ ಪದ್ಧತಿ, ಸುಸ್ಥಿರ ಬೇಸಾಯ, ಎರೆಹುಳು ಗೊಬ್ಬರ, ಅಜೋಲಾ, ಪಂಚಗವ್ಯ, ಬೆಳೆಗಳಲ್ಲಿ ಪ್ರಧಾನ ಮತ್ತು ಲಘು ಪೋಷಕಾಂಶಗಳ ನಿರ್ವಹಣೆ , ತೋಟಗಾರಿಕೆ ಬೆಳೆಗಳ ಅಂತರಿಕ ಬೇಸಾಯ ಪದ್ಧತಿ ಇವುಗಳ ಬಗ್ಗೆ ತಿಳಿದು ಕೊಂಡಿದ್ದೆನೆ. ವೈಜ್ಞಾನಿಕವಾಗಿ ಕೃಷಿ ನಿರ್ವಹಣೆ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಇಲಾಖೆ ಮತ್ತು ರೈತರ ನಡುವೆ ಕೆಲಸ ಮಾಡಲು ಖುಷಿಯಾಗುತ್ತದೆ””.- ಹರ್ಷೀತಾ, ಕೃಷಿ ಸಖಿ,ನವಲಿ
ಅಧಿಕಾರಿಗಳ ಹೇಳಿಕೆ: “”ಕೃಷಿ ಸಖಿಯವರು ಗ್ರಾಮೀಣ ಭಾಗದಲ್ಲಿ ಇಲಾಖೆಯ ವಿಸ್ತರಣಾ ಕಾರ್ಯಕರ್ತರಿಗೆ ಕೆಲಸ ಮಾಡುತ್ತಿದ್ದಾರೆ ಇಲಾಖೆಯ ಯಾವುದೇ ಕಾರ್ಯಕ್ರಮಗಳಿದ್ದರೂ ಅವರ ಮೂಲಕ ರೈತರಿಗೆ ತಿಳಿಸಲು ಸಹಕಾರಿ, ಇಲಾಖೆಯಲ್ಲಿರುವ ರೈತಪರ ಯೋಜನೆಗಳ ಮಾಹಿತಿಯನ್ನು ತಲುಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ””- ಡಾ.ಚಂದ್ರಕಾಂತ ನಾಡಗೌಡ, ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ವಡ್ಡರಹಟ್ಟಿ, ಗಂಗಾವತಿ
ಅಧಿಕಾರಿಗಳ ಹೇಳಿಕೆ 2 : “”ಕೃಷಿ ಸಖಿಯವರು ಕೃಷಿ ವಿಜ್ಞಾನ ಕೇಂದ್ರದ ವಿವಿಧ ತರಬೇತಿ ಮತ್ತು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ, ಕೆವಿಕೆ ಗೂ ಸಹ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ, ರೈತರಿಗೆ ಬೆಳೆ ನಿರ್ವಹಣೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ಸಲಹೆಗಳನ್ನು ನೀಡುವಲ್ಲಿ ಯಶಸ್ವಿಯಾಗಬೇಕು”” – ಡಾ. ರಾಘವೇಂದ್ರ ಎಲಿಗಾರ, ಹಿರಿಯ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ