Breaking News

ನಾಗರಹುಣಿಸೆ:ತೆನೆಯಲ್ಲೇಮೊಳಕೆಯೊಡಿದಿರುವ ಮೆಕ್ಕೆಜೋಳ

Nagarhunise: Maize that has sprouted on its own

ಜಾಹೀರಾತು

ಗುಡೇಕೋಟೆ: ಕೂಡ್ಲಿಗಿ ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಮೆಕ್ಕೆಜೋಳ ಬೆಳೆದ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕಟಾವು ಮಾಡಿದ ಹಾಗೂ ಹೊಲದಲ್ಲಿ ಇರುವ ಮೆಕ್ಕೆ ಜೋಳಗಳು ಮೊಳಕೆಯೊಡೆದಿದೆ.
ಒಕ್ಕಣೆಯಾದ ಧಾನ್ಯ ಮಳೆಗೆ ತೊಯ್ದು ಮುಗ್ಗಸು ಹಿಡಿಯಲಾರಂಭಿಸಿದೆ.

ಕೂಡ್ಲಿಗಿ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಪ್ರದಾನ ಬೆಳೆ. ಪ್ರಸಕ್ತ ಮುಂಗಾರಿನಲ್ಲಿ…. ಸಾವಿರ ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು. ಬೆಳೆಗೆ ಪೂರಕವಾಗಿ ಮಳೆ ಸುರಿದಿದ್ದರಿಂದ ಉತ್ತಮ ಫಸಲು ಕಣ್ಣಿಗೆ ಕಂಡಿತ್ತು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಈ ವರ್ಷವಾದರೂ ಬೆಳೆ ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಹಿಂಗಾರು ಮಳೆಗಳು ರೈತರ ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಅನುಭವ ಉಂಟಾಗಿದೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆ ಹಾನಿಗೀಡಾಗಿದೆ.ಗುಡೇಕೋಟೆ, ರಾಮದುರ್ಗ,ಬೆಳ್ಳಿಗಟ್ಟೆ, ಜರ್ಮಲಿ, ಅಪ್ಪಯ್ಯನಹಳ್ಳಿ,ಚಿರತಗುಂಡು,ಗಂಡಬೊಮ್ಮನಹಳ್ಳಿ, ಇನ್ನಿತರೆ ಗ್ರಾಮಗಳಲ್ಲಿ ತೆನೆರಾಶಿಯಲ್ಲೇ ಮೆಕ್ಕೆಜೋಳ ಮೊಳಕೆ ಒಡೆದಿದೆ. ನಾಗರಹುಣಿಸೆ,ಹರವದಿ,ದಿಬ್ಬದಹಳ್ಳಿ,ಕಾಟ್ರಹಳ್ಳಿ,ನರಸಿಂಹನಗಿರಿ, ಹುಲಿಕುಂಟೆ,ಅರ್ಜುನಚಿನ್ನನಹಳ್ಳಿ, ಚಂದ್ರಶೇಖರಪುರ,ಸಿಡೇಗಲ್, ವ್ಯಾಪ್ತಿಯಲ್ಲಿ ಒಕ್ಕಣೆಯಾದ ಮೆಕ್ಕೆಜೋಳ ರಸ್ತೆಯಲ್ಲಿ ಒಣಗಿಸುವ ವೇಳೆ ಮಳೆಗೆ ತೊಯ್ದು ಅಪಾರ ಪ್ರಮಾಣದ ಫಸಲು ಹಾನಿಯಾಗಿದೆ.

‘ಮಳೆಗೆ ಮೆಕ್ಕೆಜೋಳದ ರಾಶಿ ತೊಯ್ದು ಅರ್ಧದಷ್ಟು ಬೆಳೆ ಹಾಳಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಪ್ರಯೋಜನ ಇಲ್ಲದಾಗಿದೆ. ಮಳೆಯಿಂದ ಹಾನಿಗೀಡಾದ ಬೆಳೆಯನ್ನು ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಾಲ ಮಾಡಿ ಬೆಳೆಗೆ ಖರ್ಚು ಮಾಡಿದ್ದೇವೆ. ಸಾಲವನ್ನು ಹೇಗೆ ತೀರಿಸಬೇಕೆಂದು ತಿಳಿಯುತ್ತಿಲ್ಲ’ ಎಂದು ನಾಗರಹುಣಿಸೆ ರೈತ ಜಿ.ಟಿ.ಜಗದೀಶ್,ಹೇಳಿದರು.

‘ಮಳೆಯಿಂದ ಮೆಕ್ಕೆಜೋಳ ಇತರೆ ಬೆಳೆಗಳು ಹಾನಿಗೀಡಾಗಿವೆ. ಅಧಿಕಾರಿಗಳು ಹೊಲಗದ್ದೆಗಳಲ್ಲಿ ಸಮೀಕ್ಷೆ ನಡೆಸುವ ಜತೆಗೆ, ಮಳೆಗೆ ತೊಯ್ದು ಹಾನಿಯಾದ ಫಸಲಿನ ಸಮೀಕ್ಷೆ ನಡೆಸಬೇಕು. ಸರ್ಕಾರ ಎಲ್ಲ ರೈತರಿಗೂ ವೈಜ್ಞಾನಿಕ ಪರಿಹಾರ ನೀಡಬೇಕು’ ಎಂದು ಗುಡೇಕೋಟೆ ಹೋಬಳಿ ಭಾಗದ ರೈತರು ಆಗ್ರಹಿಸಿದ್ದಾರೆ.

About Mallikarjun

Check Also

ಎಫ್.ಕೆ.ಸಿ.ಸಿ.ಐನಿಂದ ಶನಿವಾರ ಉದ್ಯೋಗ ಉತ್ಸವ್ 2025 –26 ; 6 ವಲಯಗಳಲ್ಲಿ 6 ಸಾವಿರ ಉದ್ಯೋಗಾವಕಾಶಗಳು ಲಭ್ಯ

FKCCI to hold Saturday Udyog Utsav 2025-26; 6,000 job opportunities available in 6 zones ಬೆಂಗಳೂರು, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.