Leadership and skill development training for awareness center supervisors

ವಿಜಯನಗರ:ದಿನಾಂಕ 25/09/2024 ಬುಧುವಾರ ಶಿಕ್ಷಣ ಫೌಂಡೇಶನ್ ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ 6 ತಾಲೂಕಿನ 40 ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕರಿಗೆ ನಾಯಕತ್ವ ಹಾಗೂ ಕೌಶಲ್ಯ ಅಭಿವೃದ್ಧಿ

ತರಬೇತಿಯನ್ನು ಹೊಸಪೇಟೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹೊಸಪೇಟೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ಕಾಂತರಾಜು D ಮತ್ತು ಶಿಕ್ಷಣ ಫೌಂಡೇಶನ್ ಸಂಸ್ಥೆಯ ಉತ್ತರ ಕರ್ನಾಟಕ ವಿಭಾಗದ ಸಂಯೋಜರಾದ ಶ್ರೀಯುತ ಶರಣಪ್ಪ ಕಟ್ಟಿಮನಿ ಹಾಗೂ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ರಂಜನಿ ಬೆಂಗಳೂರು , ಇವರು ಉದ್ಘಾಟನೆ ಮಾಡಿದರು.
ಶಿಬಿರಾರ್ಥಿಗಳಿಗೆ ಮೇಲ್ವಿಚಾರಕರಿಗೆ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮವನ್ನು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ಕುರಿತು ಹಾಗೂ ಲೈಬ್ರರಿಯನ್ ಪೋರ್ಟಲ್ ನಲ್ಲಿ ಸ್ವಸಹಾಯ ಸಂಘದ ಸದಸ್ಯರನ್ನು ನೊಂದಣಿ ಮಾಡುವ ಕುರಿತು ಮಾಹಿತಿ ನೀಡಲಾಯಿತು. ಮತ್ತು ತರಬೇತಿಯಲ್ಲಿ ವಿನೂತನ ಚಟುವಟಿಕೆಗಳಲ್ಲಿ ಶಿಬಿರಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದರ ಮೂಲಕ ತರಬೇತಿಯೂ ಸಂಪೂರ್ಣ ಹಾಜರಾತಿಯೊಂದಿಗೆ ಯಶಸ್ವಿಯಾಗಿ ನಡೆಯಿತು.
ತರಬೇತಿಯಲ್ಲಿ ಜಿಲ್ಲಾ ಸಂಯೋಜಕರಾದ ಎಸ್.ಬಿ ಶ್ರೀಧರ್ ಹಾಗೂ ಬಸವರಾಜು ಬಿ. ಎ ಉಪಸ್ಥಿತರಿದ್ದರು