Breaking News

ಹೊಲದಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣು ಶರಣು

A farmer committed suicide by consuming poison in the field

ಜಾಹೀರಾತು

ರಾಯಚೂರು: ಬೆಳೆ ನಷ್ಟ ದಿಂದ ಮತ್ತು ಮಾನಸಿಕ ಅವೇದನೆ ತಾಳಲಾರದೆ ರೈತರೊಬ್ಬರು ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ತಾಲ್ಲೂಕಿನ ಚಿಕ್ಕಸುಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಮೃತ ರೈತನನ್ನು ಮಹಾದೇವ ಸಾಗರ್ (42) ಎಂದು ಗುರುತಿಸಲಾಗಿದ್ದು, ತಮ್ಮ ಹೆಸರಿನಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದಾರೆ.ಹೊಲದಲ್ಲಿ ಹತ್ತಿ ಹಾಗೂ ಮಿಶ್ರ ಬೆಳೆ ಹಾಕಿದ್ದರು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಸಂಪೂರ್ಣ ನಾಶ ವಾಗಿತ್ತು ಸ್ಥಳೀಯ ಯೂನಿಯನ್ ಬ್ಯಾಂಕಿನಲ್ಲಿ ₹ 1.0 ಲಕ್ಷ ಕೃಷಿ ಸಾಲ ಹಾಗೂ ₹ 6 ಲಕ್ಷ ಕೈಗಡ ಸಾಲ ಮಾಡಿದ್ದರು ಎನ್ನಲಾಗಿದೆ.
ಹೊಲಕ್ಕೆ ನೀರು ಹರಿಸಲು ಎಂದು ಹೋಗಿ ಹೊಲದಲ್ಲಿ ಇದ್ದ ಔಷದಿ ಕುಡಿದಿದ್ದಾರೆ ಮನೆಯವರು ಹುಡುಕಾಟ ನಡೆಸಿದಾಗ ಹೊಲದಲ್ಲಿ ಅಲ್ಪ ಸ್ವಲ್ಪ ಜೀವ ಇತ್ತು ಇದನ್ನು ತಿಳಿದ ಕುಟುಂಬ ದವರು ವಿಷಯವನ್ನು ವಿಚಾರಿಸಿದಾಗ
ವಿಷ ಸೇವಿಸಿದ ಎಂದು ತಿಳಿದ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಳಿಸಿದ್ದರು . ಚಿಕಿತ್ಸೆ ಫಲಕಾರಿಯಾಗದೆ ಬುದುವಾರ ಸಂಜೆ 4:00 ಗಂಟೆಗೆ ಮೃತರಾಗಿರುವರೆಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.