Indefinite strike for fulfillment of various demands from September 26.
Appeal of village administration officials to tehsildar.
ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಸೆ.26ರಿಂದ ನಾನಾ ಬೇಡಿಕೆ ಈಡೇರಿಕೆಗಾಗಿ ಅನಿರ್ಧಾಷ್ಠಾವಧಿ ಮುಷ್ಕರ ಮಾಡಲಾಗುವುದು ಎಂದು ಕುಕನೂರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಸುರೇಶ ಕ್ಯಾದಗುಂಪಿ, ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಬೆಂಗಳೂರು ಇವರ ನಿರ್ದೇಶನದಂತೆ ಸೆ.26 ರಿಂದ ಕರ್ತವ್ಯಕ್ಕೆ ಸಂಬಂಧಿದಂತೆ ಎಲ್ಲಾ ಬಗೆಯ ಮೊಬೈಲ್ ಆಪ್, ವೆಬ್ ಅಪ್ಲಿಕೇಷನ್ ಸ್ಥಗೀತ, ಲೇಖನಿ ಸ್ಥಗೀತಗೊಳಿಸಿ ಬೇಡಿಕೆ ಈಡೇರುವವರೆಗೂ ಮುಷ್ಕರ ಮಾಡಲಾಗುವುದು.
17 ಮೊಬೈಲ್ ಆಪ್ ಮತ್ತು ಅಪ್ಲಿಕೇಷನ್ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಅನೇಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ ಆಪ್ ಗಳ ಬಳಕೆಗೆ ಲ್ಯಾಪ್ ಟಾಪ್, ಇಂಟರನೆಟ್ ಸೌಲಭ್ಯ ಸಹ ನೀಡಿಲ್ಲ. ಅಲ್ಲದೆ ಕಚೇರಿಯಲ್ಲಿ ಟೇಬಲ್, ಚೇರ್, ಪ್ರೀಂಟರ್, ಇಂಟರನೆಟ್ ಕನೇಕ್ಷನ್ ಗಳ ಮೂಲಭೂತ ಸೌಲಭ್ಯ ಸಹ ಕಲ್ಪಿಸಿಲ್ಲ.
ಅಲ್ಲದೆ 30 ವರ್ಷದ ಸೇವಾವಧಿ ನಂತ ಪದೋನ್ನತಿ ನೀಡುತ್ತಿದ್ದು, ನಿವೃತ್ತಿ ಅಂಚಿನಲ್ಲಿ ಪದೋನ್ನತಿ ನೀಡದೆ ಬೇಗ ನೀಡಬೇಕು. ಕೆಲಸದ ಅವಧಿಯ ಮುನ್ನಾ ಹಾಗು ಕೆಲಸದ ನಂತರ ಅವಧಿಯಲ್ಲಿ ಎಲ್ಲಾ ಬಗೆಯ ವರ್ಚುವಲ್ ಸಭೆಗಳನ್ನು ನಿಷೇಧಿಸಬೇಕು ಹಾಗು ಇತರೆ ನಾನಾ ಬೇಡಿಕೆ ಈಡೇರಿಸಬೇಕು ಎಂದರು.
ತಹಶೀಲ್ದಾರ ಮೂಲಕ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು. ಗ್ರಾಮ ಆಡಳಿತ ಅಧಿಕಾರಿಗಳ ತಾಲೂಕ ಸಂಘದ ಪ್ರಧಾನ ಕಾರ್ಯದರ್ಶಿ ಪೀರಸಾಬ ಲಕ್ಕುಂಡಿ, ಖಜಾಂಚಿ ವೀರಣ್ಣ ತೆಗ್ಗಿನಮನಿ, ಜಿಲ್ಲಾ ಖಜಾಂಚಿ ಮಹೇಶಗೌಡ , ಸದಸ್ಯರುಗಳಾದ ಶರೀಫ್ ನಧಾಪ್ , ರಾಣಿ ಹಳ್ಳಿ, ಶರಣಪ್ಪ ಹಳ್ಳಿ , ದೇವಮ್ಮ, ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿದ್ದರು.