Breaking News

ಜಾನಪದ ಬಾಲಾಜಿಯ ಜೀವಪರ್ಯಟನೆಗೆ ಶಕ್ತಿಯಾದ ಕಲಾಲೋಕ

Kalaloka is the power for the life of folk art

ಜಾಹೀರಾತು


ಇದೊಂತರ ವಿಚಿತ್ರವಾದ ಸತ್ಯ ಸಂಗತಿ. ಒಬ್ಬ ಸಾಮಾನ್ಯ ವ್ಯಕ್ತಿ ಇಡೀ ರಾಜ್ಯದ ಉದ್ದಗಲಕ್ಕೂ ಓಡಾಡಿ ಎಲ್ಲ ಜಿಲ್ಲೆಗಳನ್ನು ಮೂರು ನಾಲ್ಕು ಬಾರಿ ಯಾವುದೇ ಅಧಿಕಾರ ಇರದೆನೂ ಓಡಾಡಿ ಸಂಘಟನೆ ಕಟ್ಟಿ ಒಂದೆಡೆ ಯುವ ಸಂಘಟನೆ ನಂತರ ಇನ್ನೊಂದು ಕಡೆ ಕನ್ನಡ ಜಾನಪದ ಪರಿಷತ್ ಮೂಲಕ ಮೂಲ ಜನಪದರ ರಕ್ಷಣೆ, ಜಾನಪದ ಸಾಹಿತ್ಯ ಉಳಿಸುವ ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ.


ಸುಮಾರು ಮೂರು ದಶಕಗಳ ಕಾಲ ಇದನ್ನೇ ಪೂರ್ಣಾವದಿ ಕೆಲಸ ಮಾಡಿಕೊಂಡ ಬಾಲಾಜಿ ಅವರು ಬೆಂಗಳೂರಲ್ಲಿ ಹುಟ್ಟಿ ಬೆಳೆದವರು. ವಿ. ಸುಬ್ರಹ್ಮಣ್ಯಂ ಮತ್ತು ಎಸ್. ಜಯಲಕ್ಷ್ಮೀ ಅವರ ಸುಪುತ್ರ ಬಾಲಾಜಿ ೪೯ ವರ್ಷದ ಎಂ.ಎ. ಸ್ನಾತಕೋತ್ತರ ಪದವೀಧರ.
ಪ್ರಸ್ತುತ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ಕನ್ನಡ ಜಾನಪದ ಪರಿಷತ್ ಎರಡನ್ನೂ ಕಟ್ಟಿ ಬೆಳೆಸಿದವರು. ಅಲ್ಲದೇ ಮಾತೃಭೂಮಿ ಯುವಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.
೧೯೯೯ ರಲ್ಲಿ ಭಾರತ ಸರ್ಕಾರದ ಅತ್ಯುತ್ತಮ ಯುವ ಪ್ರಶಸ್ತಿ, ೨೦೦೦ ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಯುವ ಪ್ರಶಸ್ತಿ, ೨೦೦೧ ರಲ್ಲಿ ಅಮೆರಿಕನ್ ಬಯೋಗ್ರಫಿ ಇನ್ಸ್‌ಟ್ಯೂಟ್ ನಿಂದ ಮ್ಯಾನ್ ಆಫ್ ದ ಮಿಲೇನಿಯಂ ಪಶಸ್ತಿ, ೨೦೦೨ ರಲ್ಲಿ ರಾಜೀವ್ ಗಾಂಧಿ ಸದ್ಭಾವನಾ ರಾಷ್ಟ್ರ ಪ್ರಶಸ್ತಿ, ೨೦೦೩ ರಲ್ಲಿ ಕೊಪ್ಪಳ ಜಿಲ್ಲೆಯಿಂದ ಯುವ ನಾಯಕ, ೨೦೦೪ ರಲ್ಲಿ ಯುವ ಚೇತನ ಪ್ರಶಸ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ೨೦೦೫ ರಲ್ಲಿ ಶ್ರೀ ಕೃಷ್ಣದೇವರಾಯ ಪ್ರಶಸ್ತಿ, ೨೦೦೮ ರಲ್ಲಿ ನವದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕಸಾಂಸ್ಕೃತಿಕ ತಂಡವನ್ನು ಮುನ್ನಡೆಸಿದ ಅಂದಿನ ಘನತವತ್ತ ರಾಷ್ಟ್ರಪತಿಗಳ ಔತಣ ಕೂಟದಲ್ಲಿ ಭಾಗಿ, ೨೦೦೬ ರಲ್ಲಿ ಯುವ ಸಂಜೀವಿನಿ, ತುಮಕೂರು ಜಿಲ್ಲೆ, ೨೦೦೯ ರಲ್ಲಿ ಜಾನಪದ ತೇರು, ಉತ್ತರ ಕನ್ನಡ ಜಿಲ್ಲೆ, ೨೦೧೦ ರಲ್ಲಿ ಕರ್ನಾಟಕ ಜ್ಯೋತಿ, ರಾಜ್ಯ ಪಶಸ್ತಿ, ಕೊಪ್ಪಳ ಜಿಲ್ಲೆ, ೨೦೧೧ ರಲ್ಲಿ ಜಾನಪದ ರತ್ನ, ರಾಮನಗರ ಜಿಲ್ಲೆ, ೨೦೧೨ ರಲ್ಲಿ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಚಿನ್ನದ ಪದಕ ( ಜನಪದ ಗೀತೆ ವಿಭಾಗದಲ್ಲಿ ನೇತೃತ್ವ ), ೨೦೧೩ ರಲ್ಲಿ ಧಮ್ಮಭೂಮಿ ಚಾರಿಟೇಬಲ್ ಟ್ರಸ್ಟ್ ಕನಕಪುರ ವತಿಯಿಂದ ರಾಜ್ಯಮಟ್ಟದ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೇಮಕ, ೨೦೧೪ ರಲ್ಲಿ ವಿಶ್ವರತ್ನ ಡಾ ಬಿ ಆರ್ ಅಂಬೇಡ್ಕರ್ ಪ್ರಶಸ್ತಿ, ೨೦೧೫ ರಲ್ಲಿ ಯುವ ಶ್ರೀ ಪ್ರಶಸ್ತಿ ಶಿವಮೊಗ್ಗ ಜಿಲ್ಲೆ, ೨೦೧೬ ರಲ್ಲಿ ನಡೆದಾಡುವ ಜಾನಪದ ವಿಶ್ವಕೋಶ ಪ್ರಶಸ್ತಿ, ಬೆಂಗಳೂರು, ೨೦೧೭ ರಲ್ಲಿ ಜಾನಪದ ಶ್ರೀ, ರಾಮನಗರ ಜಿಲ್ಲೆ, ೨೦೧೮ ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ೨೦೧೯ ಕಲಾಶ್ರೀ ಪ್ರಶಸ್ತಿ ಹಾವೇರಿ ಜಿಲ್ಲೆ, ೨೦೨೦ ರಲ್ಲಿ ಬಸವ ಬುದ್ಧ ಅಂಬೇಡ್ಕರ್ ಸಾಂಸ್ಕೃತಿಕ ಸಂಸ್ಥೆ ರಾಜ್ಯ ಮಟ್ಟದ ಯುವ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ನೇಮಕರಾಗಿದ್ದರು. ೨೦೨೧ ರಲ್ಲಿ ನವ ದೆಹಲಿ ನ್ಯಾಷನಲ್ ಯೂತ್ ಫೆಡರೇಶನ್ ಇಂದ ರಾಷ್ಟ್ರೀಯ ಯುವ ಪ್ರಶಸ್ತಿ, ೨೦೨೨ ರಲ್ಲಿ ವರ್ಲ್ಡ್ ಯೂತ್ ಸೊಸೈಟಿ ರಾಷ್ಟ್ರೀಯ ಜಾನಪದ ವಿದ್ವಾಂಸ ಪ್ರಶಸ್ತಿ, ೨೦೨೩ ರಲ್ಲಿ ಜಾನಪದ ರಾಯಭಾರಿ ಪ್ರಶಸ್ತಿ ಜೊತೆಗೆ ಸಾವಿರಾರು ಸನ್ಮಾನಗಳಾಗಿವೆ.
ಬಾಲಾಜಿ ಅವರು ಭಾರತ ಸರಕಾರದ ವಿದೇಶಾಂಗ ಮಂತ್ರಾಲಯದ ಐಸಿಸಿಆರ್ ಆರ್‌ಎಸಿ ಸದಸ್ಯ, ಕರ್ನಾಟಕ ಸರಕಾರದ ಯುವ ನೀತಿ ಸಮಿತಿಯ ಕೋ ಆಪ್ ಸದಸ್ಯ, ಕರ್ನಾಟಕ ಸರಕಾರದ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಅನೇಕ ಜವಾಬ್ದಾರಿಗಳು ನಿರ್ವಹಿಸಿದ್ದಾರೆ. ೨೦೧೯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಗುರು ಶಿಷ್ಯ ಪರಂಪರೆಯ ಯೋಜನೆಯ ಸಲಾಹಾ ಸಮಿತಿ ಸದಸ್ಯ, ೨೦೧೫ ರಾಷ್ಟ್ರೀಯ ಸೇವಾ ಯೋಜನೆಯ ಬೆಂಗಳೂರು ವಿಶ್ವವಿದ್ಯಾಲಯದ ಸಮಿತಿ ಸದಸ್ಯರಾಗಿ ನೇಮಕ, ೨೦೧೯ ರಾಷ್ಟ್ರೀಯ ಸೇವಾ ಯೋಜನೆಯ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಲಹಾ ಸಮಿತಿ ಸದಸ್ಯರಾಗಿ ನೇಮಕ, ೨೦೦೫ ಭಾರತ್ ಸರ್ಕಾರ ನೆಹರು ಕೇಂದ್ರದಲ್ಲಿ ಬೆಂಗಳೂರು ನಗರ ಜಿಲ್ಲಾ ಸಲಾ ಸಮಿತಿ ಸದಸ್ಯ, ೨೦೦೯ ಗಾಂಧಿ ಪೀಸ್ ಫೌಂಡೇಶನ್ ನಲ್ಲಿ ಪ್ರಾಂತದ ಸಲಹಾ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ೨೦೦೦-೨೦೨೨ ರಾಜ್ಯಮಟ್ಟದ ಯುವಜನ ಮೇಳ, ಯುವಜನೋತ್ಸವದಲ್ಲಿ ಮುಖ್ಯ ತೀರ್ಪುಗಾರರಾಗಿ ಕಾರ್ಯನಿರ್ವಹಣೆ ಅವರ ಅಮೋಘ ಸಾಧನೆ.
ಇವರು ಪುಸ್ತಕ ಮತ್ತು ಆಡಿಯೋ ಸುರಳಿಗಳನ್ನು ಸಹ ಮಾಡಿದ್ದು ಅವರ ಸಂಪಾದಕತ್ವದಲ್ಲಿ ೨೦೧೪ ರಲ್ಲಿ ಮಲ್ಲಿಗೆ ತೆನೆ (ಜಾನಪದ ಗೀತೆಗಳ ಸಂಗ್ರಹ), ೨೦೧೫ ರಲ್ಲಿ ಅರಿವಿನ ಮನೆಯಲ್ಲಿ ಗುರುವನು ಕೂಡಿದನು (ತತ್ವಪದಗಳ ಸಂಗ್ರಹ), ೨೦೧೬ ರಲ್ಲಿ ಸೊಲ್ಲೆತ್ತಿ ಕೋಲನುಡಿಸೋಣ (ಕೋಲಾಟ ಪದಗಳ ಸಂಗ್ರಹ) ಮತ್ತು ೨೦೨೩ ರಲ್ಲಿ ನೂರೊಂದು ಜಾನಪದ ಸೊಲ್ಲುಗಳು (ಜನಪದ ವಿದ್ವಾಂಸರ ಲೇಖನ ಸಂಗ್ರಹ) ಹೊರತಂದಿದ್ದಾರೆ.
ಧ್ವನಿ ಸುರುಳಿಗಳನ್ನು ೨೦೦೦ ರಲ್ಲಿ ಒಂದು ವರ ಕೊಟ್ಟೇವು ಹೆಣ್ಣು ಕೊಡಿರಮ್ಮ (ಜನಪದ ಗೀತೆಗಳು), ೨೦೧೩ ರಲ್ಲಿ ಬಾರೇ ಗೀಜಗಲೆ (ಬುಡಕಟ್ಟು ಗೀತೆಗಳು), ೨೦೧೪ ರಲ್ಲಿ ಲಿಂಗಬಾ ಮಾದೇವಬಾ (ದೇವರಗೊಡ್ಡ ಹಾಗೂ ನೀಲಗಾರರ ಪದಗಳು), ೨೦೧೫ ರಲ್ಲಿ ಬೆಟ್ಟದ ಚಾಮುಂಡಿ ನಡಗಾಡು ನಂಜುಂಡ (ಕಥನ ಗಾಯನ), ೨೦೧೬ ರಲ್ಲಿ ನಗೋಣ ಬನ್ನಿರ (ಜನಪದ ಹಾಸ್ಯ ಕಥೆಗಳು) ಮತ್ತು ೨೦೧೭ ರಲ್ಲಿ ಜಿಪುಣಗಾತಿ ಮಾರಮ್ಮ (ಜನಪದ ಹಾಸ್ಯ ಉಪ ಕಥೆಗಳು) ಹೊರ ತಂದಿದ್ದಾರೆ.
ಸಂಘಟನೆ ವಿಷಯಕ್ಕೆ ಬಂದರೆ ಬಾಲಾಜಿ ಒಂದು ದೊಡ್ಡ ಶಕ್ತಿಯೇ ಸರಿ. ಕರ್ನಾಟಕದಲ್ಲಿ ಯುವ ಒಕ್ಕೂಟದ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸಿ ಯುವ ಚಟುವಟಿಕೆಗಳನ್ನು ಯುವ ಸಂಘಗಳನ್ನು ಕ್ರಿಯಾಶೀಲವಾಗಿ ಸಂಘಟಿಸಿ ಪ್ರತಿವರ್ಷ ರಾಜ್ಯದ ೩೧ ಜಿಲ್ಲೆಗಳಿಂದ ಸಾಧನೆಗೈದವರನ್ನು ಗುರುತಿಸಿ ಸ್ವಾಮಿ ವಿವೇಕಾನಂದ ರಾಜಯೋಗ ಪ್ರಶಸ್ತಿಯನ್ನು ಕಳೆದ ೧೦ ವರ್ಷಗಳಿಂದ ನೀಡುತ್ತಿದ್ದಾರೆ.
ಕನ್ನಡ ಜಾನಪದ ಪರಿಷತ್ ಸ್ಥಾಪಿಸಿ ೩೧ ಜಿಲ್ಲಾ ಘಟಕ ಮತ್ತು ೨೧೪ ತಾಲ್ಲೂಕು ಘಟಕ ಅಲ್ಲದೇ ಸಾವಿರಕ್ಕಿಂತ ಹೆಚ್ಚು ಗ್ರಾಮ ಘಟಕ ಮಾಡಿ ಇಡೀ ಕರ್ನಾಟಕದಲ್ಲಿ ಸರ್ಕಾರದ ಯಾವುದೇ ಅನುದಾನವಿಲ್ಲದೆ ಸುಮಾರು ೮ ಸಾವಿರಕ್ಕಿಂತ ಹೆಚ್ಚಿನ ಕಾರ್ಯಕ್ರಮ ಸಂಘಟಿಸಿದ ಕೀರ್ತಿ ಇವರದ್ದು. ಕಲಾವಿದರ ಆರ್ಥಿಕ ಹಾಗು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯ ಬಗ್ಗೆ ಜನಪದ ಕಲಾವಿದರ ಸಮೀಕ್ಷೆಯನ್ನು ಕೈಗೊಂಡಿದ್ದಾರೆ.
ಜನಪದ ಕುಟೀರ : ಬೆಂಗಳೂರಿನ ಲಗ್ಗೆರೆಯಲ್ಲಿ ಜನಪದ ಕುಟೀರವನ್ನು ಸ್ಥಾಪಿಸಿ ೨,೦೦೦ ಕ್ಕಿಂತ ಹೆಚ್ಚು ಜನಪದ ಪರಿಕರಗಳನ್ನು ಸಂಗ್ರಹಿಸಿ ಬೆಂಗಳೂರಿನಂತ ಕಾಂಕ್ರೀಟ್ ಕಾಡಿನಲ್ಲಿ ಇಲ್ಲಿನ ನಗರೀಕರಣದ ವಿದ್ಯಾರ್ಥಿಗಳ ಯುವ ಜನರ ಅನುಕೂಲಕ್ಕಾಗಿ ಜನಪದ ಮ್ಯೂಸಿಯಂ ಅನ್ನು ಸ್ಥಾಪಿಸಿದ್ದು ಬಾಲಾಜಿ ಈ ಸಮಾಜಕ್ಕೆ ಮಾಡಿದ ಬಹುದೊಡ್ಡ ಉಪಕಾರ. ಆದರೆ ಸರಕಾರ ಅವರನ್ನು ಗುರುತಿಸಿ ಅಕಾಡಮಿಗಳಲ್ಲಿ ಅವಕಾಶ ಕೊಟ್ಟು ಸಂಘಟನೆಗೆ ಆರ್ಥಿಕ ಚೈತನ್ಯ ಕೊಟ್ಟರೆ ಸರಕಾರದ ಜೊತೆಗೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಸಮಾಜಕ್ಕೆ, ಯುವಜನರಿಗೆ ಮತ್ತು ಜನಪದರಿಗೆ ಬಾಲಾಜಿ ಅಂತಹ ನಿರುಪದ್ರವಿ ಸಂಘಟಕನ ಅಗತ್ಯ ಇದೆ. ಯಾವ ಹಂಗು, ಬಿಗುಮಾನ, ಅಹಂಕಾರವಿಲ್ಲದ ೫೦ ವರ್ಷದ ಬಾಲಾಜಿಗೆ ಬಹುದೊಡ್ಡ ಕನಸುಗಳಿವೆ, ಅವೆಲ್ಲವೂ ಈ ಸಮಾಜಕ್ಕೆ ಎನ್ನುವದು ಅತ್ಯಂತ ಸಂತಸದ ಸಂಗತಿ. ಇದು ಒಂದು ಕಡೆಯಾದರೆ ಬಾಲಾಜಿ ಅವರ ಮಾನವೀಯ ಮುಖವೊಂದು ಇದೆ. ರಾಜ್ಯದ ಅನೇಕ ಗ್ರಾಮಗಳಿಂದ ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಅವರಿಗೆ ವಿದ್ಯಾಭ್ಯಾಸ ಕೊಡಿಸಿ ಎತ್ತರಕ್ಕೆ ಬೆಳೆಸಿದ್ದಾರೆ, ಹಲವರಿಗೆ ಉದ್ಯೋಗ ಕೊಡಿಸಿದ್ದಾರೆ, ಜೊತೆಗೆ ಇಟ್ಟುಕೊಂಡು ಜೀವನ ಕಲಿಸಿದ್ದಾರೆ, ಕಷ್ಟದಲ್ಲಿರುವ ಕಲಾವಿದರಿಗೆ ಆಹಾರ ಧಾನ್ಯಗಳನ್ನು, ವಷ್ತ್ರಗಳನ್ನು ದಾನದ ರೂಪದಲ್ಲಿ ಕೊಟ್ಟ ನಿಷ್ಕಲ್ಮಶ ವ್ಯಕ್ತಿತ್ವ, ಮನುಷ್ಯ ಪೀತಿಯ ಬಾಲಾಜಿಗೆ ಒಳ್ಳೆಯದಾಗಲಿ ಎಂದಷ್ಟೇ ಹಾರೈಸಬಲ್ಲೆ.
ಮಂಜುನಾಥ ಜಿ. ಗೊಂಡಬಾಳ
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಂಘಟಕರು,
ಕೊಪ್ಪಳ.

About Mallikarjun

Check Also

ಬೀದಿಬದಿಯ ಆಹಾರ ಪದಾರ್ಥಗಳನ್ನು ಸ್ವಚ್ಛತೆಯಿಂದ ಕಾಪಾಡಿ -ಪಟ್ಟಣ ಪಂಚಾಯತಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ

Keep street food items clean – Pattana Panchayat President Kavali Shivappa Nayaka ಕೂಡ್ಲಿಗಿ ಪಟ್ಟಣ ಬೀದಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.