ಸಾವಳಗಿ: ಈ ಹೋರಾಟ ಎಪ್ರಿಲ್ ಮೇ ತಿಂಗಳಿನಲ್ಲಿ ಹೋರಾಟ ಮಾಡಿದರೆ ಉಪಯುಕ್ತ ಯಾರಿಗೂ ಮಾಹಿತಿ ನೀಡಿದೆ ನಿನ್ನೆ ಪ್ರತಿಭಟನೆ ಮಾಡಿದ್ದಾರೆ, ಹೋರಾಟಕ್ಕೆ ರಾಜಕೀಯ ತರಬಾರದು ಎಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡಿದರೆ ಮಾತ್ರ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಸ್ವಲ್ಪ ಶಾಸಕರು ಈ ಭಾಗದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಬೇಕು, ಅಧಿಕಾರಿಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸುಶೀಲ್ ಕುಮಾರ್ ಬೆಳಗಲಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೋದಲು ಜೆ. ಟಿ. ಪಾಟೀಲ ಅವರ ಪರಿಶ್ರಮದಿಂದ ಕಾಲುವೆಗಳಿಗೆ ನೀರು ಹರಿಸಿದರು, ಯಾರೋ ಮಾಡಿದ್ದನ್ನು ನಾವು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ, 1997 ರಿ ಕ್ಕಿಂತ ಮೊದಲು ಹೊರಾಟ ಇದೆ, ಆಗಿನ ಸಂದರ್ಭದಲ್ಲಿ ಈ ಭಾಗದ ಶಾಸಕರಾಗಿದ್ದ ಜೆ. ಟಿ ಪಾಟೀಲ ಅವರು ನಾವು ಕೂಡಿಕೊಂಡು ಈ ಭಾಗಕ್ಕೆ ನೀರು ಹರಿಸಿದೆ ಅವರು ಕರಿ ಮಸೂತಿಯಿಂದ ಏತ ನೀರಾವರಿ ಯೋಜನೆ ಮೊದಲು ಇರಲಿಲ್ಲ ನಂತರ ಹೋರಾಟ ಮಾಡಿದ ನಂತರ ಯೋಜನೆಗೆ ಸೇರಿಸಿದರು, ದಿವಂಗತ ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರು ಅತಿ ಹೆಚ್ಚು ಕಾಲುವೆಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅವರ ಪಾತ್ರ ಬಹು ಮುಖ್ಯವಾಗಿತ್ತು, ನಂತರ ಬಂದ ಶಾಸಕರು ಕಾಲುವೆಗಳಿಗೆ ನೀರು ಹರಿಸುವಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ, ಇದರಿಂದ ಈ ಯೋಜನೆ ಸಮಸ್ಯೆಯಾಗಿ ಉಳಿದಿದೆ, ಆದರಿಂದ ರೈತರೊಂದಿಗೆ ನಾನು ಮೇಲಾಧಿಕಾರಿಗಳಿಗೆ ಈ ಏತ ನೀರಾವರಿಯ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ ಈ ಭಾಗದ ರೈತರಿಗೆ ಅನ್ಯಾಯ ಆಗದಂತೆ, ನಾವು ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ.
ಈ ಭಾಗದ 5 ಹಳ್ಳಿಗಳಿಗೆ ನೀರಾವರಿ ಯೋಜನೆಯಿಂದ ವಂಚಿತವಾಗಿದೆ, ರೈತರಿಗೋಸ್ಕ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣ, ಮೊದಲು ರೂಪುರೇಷೆಗಳನ್ನು ತಯಾರಿ ಮಾಡಿಕೊಂಡು ಮುಂದುವರಿಯೋಣ.
ಸಿಎಂ ಭೇಟಿಗೆ ನಿರ್ಧಾರ: ಈ ಭಾಗದ ರೈತರಿಗೆ ಅನುಕೂಲ ಆಗುವಂತೆ ನಾನು ನೀರಾವರಿ ಸಚಿವರಿಗೆ, ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ನಿರಂತರ ನೀರು ಹರಿಸುವಂತೆ ಮನವಿ ಸಲ್ಲಿಸಿ ಮಾತನಾಡಿ ಈ ಭಾಗಕ್ಕೆ ಶಾಶ್ವತವಾಗಿ ಏತ ನೀರಾವರಿಗೆ ಸಹಾಯ ಮಾಡುತ್ತೇನೆ.
ಪತ್ರಿಕಾಗೋಷ್ಠಿಯಲ್ಲಿ ಹುಕುಮಚಂದ ಬಾಗೇವಾಡಿ, ಆಜೀಮ ಆಲಗೂರ, ಸಂಜೀವ ನಂದ್ರೇಕರ, ಕಾಶೀನಾಥ ಹಟ್ಟಿ, ಸಾಗರ ಕಾಂಬಳೆ, ಮಹಾವೀರ್ ಜಮಖಂಡಿ, ಅಪ್ಪು ಕಾಗವಾಡ, ರಾಮು ಜಾಧವ, ಗ್ರಾಮ ಪಂಚಾಯತ ಸದ್ಯಸರಾದ ರಾಜಕುಮಾರ ಬಂಡಿವಡ್ಡರ,ರಾಜು ಭಜಂತ್ರಿ ಮಹಾವೀರ ಕವಟೇಕರ, ಆದಿತ್ಯ ತಿಕೋಟಾ, ಕುಮಾರ್ ಚೌಗಲೆ, ಶ್ರೀಮಂತ ದಡ್ಡೇನ್ನವರ, ಅಕ್ಷಯ ಹುನ್ನೂರ ಉಪಸ್ಥಿತರಿದ್ದರು.