Breaking News

ತಂಬಾಕು ನಿಷೇಧ ದಿನ ಕಾರ್ಯಕ್ರ

ಕೊಪ್ಪಳ:ನುಷ್ಯನಲ್ಲಿ ಮಾನಸಿಕ ಆತ್ಮಿಕ ಬಲ ಕಡಿಮೆ ಆಗಿರುವುದೇ ತಂಬಾಕಿಗೆ ಬಲಿಯಾಗಲು ಮುಖ್ಯ ಕಾರಣ ಎಂದು ಬ್ರಹ್ಮಕುಮಾರಿ  ಯೋಗಿನಿ ಅಕ್ಕ ತಿಳಿಸಿದರು.

ಜಾಹೀರಾತು

ಅವರು ಈಶ್ವರೀಯ ವಿಶ್ವವಿದ್ಯಾಲಯ ಏರ್ಪಡಿಸಿದ ತಂಬಾಕು ನಿಷೇಧ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಬುದ್ಧಿಜೀವಿಯಾದ ಮನುಷ್ಯನಿಗೆ ಒಳ್ಳೆಯದನ್ನು ಸ್ವೀಕಾರ ಮಾಡಲು ಆಗುತ್ತಿಲ್ಲ ಕೆಟ್ಟದ್ದನ್ನು ಬಿಡಲು ಆಗುತ್ತಿಲ್ಲ ಅನೇಕ ದುಶ್ಚಟಗಳಿಗೆ ದಾಸನಾಗುತ್ತಿದ್ದಾನೆ ದಿನೇ ದಿನೇ ಮನುಷ್ಯನಲ್ಲಿ ದುಃಖ ಅಶಾಂತಿ ಹೆಚ್ಚುತ್ತಿದೆ ಇಂತಹ ಸ್ಥಿತಿಗೆ ಮೂಲ ಕಾರಣ ಮನುಷ್ಯನ ಮನೋಬಲ ಕಡಿಮೆಯಾಗಿದೆ ತನ್ನ ಮೇಲೆ ತನಗೆ ನಿಯಂತ್ರಣ ಶಕ್ತಿ ಕಳೆದುಕೊಳ್ಳುತ್ತಿದ್ದಾನೆ ಆದ್ದರಿಂದ ವರ್ತಮಾನ ಸಮಯದಲ್ಲಿ ಇಂದಿನ ಮನುಕುಲವನ್ನು ದುಶ್ಚಟಗಳಿಂದ ದೂರ ಮಾಡಲು ವ್ಯಕ್ತಿ ದುಶ್ಚಟಗಳಿಗೆ ವಶವಾಗದಂತೆ ಮಾಡಲು ವ್ಯಕ್ತಿಯಲ್ಲಿ ದೃಢತೆಯ ಶಕ್ತಿ ಆತ್ಮವಿಶ್ವಾಸವನ್ನು ಮೂಡಿಸುವ ಉದ್ದೇಶದಿಂದಲೇ ಈಶ್ವರೀಯ ವಿಶ್ವ ವಿದ್ಯಾಲಯ ಇಂದು ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದರು. ಆಧುನಿಕ ಸಮಾಜದ ಒಂದು ಜ್ವಲಂತ ಸಮಸ್ಯೆ ಎಂದರೆ ತಂಬಾಕು ಸೇವನೆ, ಇದರಿಂದ ಲಕ್ಷಾಂತರ ಜನರ ರಚನಾತ್ಮಕ ಮತ್ತು ಕ್ರಿಯಾತ್ಮಕ ಶಕ್ತಿ ಹಾಳಾಗುತ್ತಿದೆ. ನೈತಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ವ್ಯಕ್ತಿ ಹಾಳಾಗುತ್ತಾನೆ. ಒಮ್ಮೆ ಈ ತಂಬಾಕು ಸೇವನೆಯ ಚಟ ಬಂತೆಂದರೆ ಅದು ವ್ಯಕ್ತಿಯನ್ನು ಬಿಡುವುದಿಲ್ಲ ಮನುಷ್ಯ ದುಷ್ಚಟಗಳಿಗೆ ಗುರಿಯಾಗಲು ಆತನ ದುರ್ಬಲ ವಿಚಾರಗಳೇ ಕಾರಣ. ವಿಚಾರ ಪರಿವರ್ತನೆಯಾಗದೆ ಆಚಾರ ಪರಿವರ್ತನೆ ಆಗಲು ಸಾಧ್ಯವಿಲ್ಲ. ಕೆಟ್ಟ ವಿಚಾರ ಕೆಟ್ಟ ಸಂಗ ಕೆಟ್ಟ ಚಟದಿಂದ ಮುಕ್ತ ಆಗಬೇಕಾದರೆ ಒಳ್ಳೆ ಸಂಗ ಒಳ್ಳೆ ವಿಚಾರ ಒಳ್ಳೆ ಸಂಸ್ಕಾರ ಜೀವನದಲ್ಲಿ ಬೇಕು. ಇಂದಿನ ಮನುಕುಲಕ್ಕೆ ಒಳ್ಳೆತನವನ್ನ ಜಾಗೃತಗೊಳಿಸಲು ಸಶಕ್ತ ಸಮಾಜವನ್ನು ನಿರ್ಮಾಣ ಮಾಡಲು ಮನೋಬಲ ವೃದ್ಧಿಗಾಗಿ ರಾಜಯೋಗ ಶಿಬಿರವನ್ನು ಈಶ್ವರೀಯ ವಿಶ್ವ ವಿದ್ಯಾಲಯ ಉಚಿತವಾಗಿ ಏರ್ಪಡಿಸಿದೆ ಬೆಳಿಗ್ಗೆ ಮತ್ತು ಸಂಜೆ 6.00 ಗಂಟೆಯಿಂದ  7.00ಗಂಟೆವರೆಗೆ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಜರುಗುವುದು ಎಂದು ಯೋಗಿನಿ ಅಕ್ಕ ಕರೆ ನೀಡಿದರು. ಸಾಮೂಹಿಕವಾಗಿ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ಬ್ರಹ್ಮಕುಮಾರಿ ಸ್ನೇಹಕ್ಕ ಕಾರ್ಯಕ್ರಮ ನಿರೂಪಿಸಿದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.