ಕಡ್ಡಾಯ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದ ವರ ಪ್ರಭುರಾಜ
ಕೊಪ್ಪಳ.ಏ.26 : ತಾಲೂಕಿನ ಹ್ಯಾಟಿ ಮುಂಡರಗಿ ಗ್ರಾಮದ ನಂದಿಬಂಡಿ ಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ವಧುವರರಾದ ಪ್ರಭುರಾಜ ಜಾಗೀರದಾರ ಮತ್ತು ಪವಿತ್ರಾ ಅವರ ಮದುವೆಯಲ್ಲಿ ಮತದಾನ ಜಾಗೃತಿಯನ್ನು ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಗೊಂಡಬಾಳ ಗ್ರಾಮದ ಕೃಷಿ ಕುಟುಂಬದ ಪ್ರಭುರಾಜ ಜಾಗೀರದಾರ ವೃತ್ತಿಯಲ್ಲಿ ಪತ್ರಕರ್ತರಾಗಿದ್ದು, ತಮ್ಮ ಮದುವೆಯಲ್ಲಿ ಮತದಾನ ಜಾಗೃತಿ ಮತ್ತು ಪರಿಸರ ಜಾಗೃತಿ ಮೂಡಿಸುವ ಮೂಲಕ ಜನಜಾಗೃತಿ ಕಾರ್ಯ ಮಾಡಿದ್ದಾರೆ.
ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಹೆಚ್. ಹನುಮಂತಪ್ಪ ನೇತೃತ್ವದಲ್ಲಿ ವರ ಪ್ರಭುರಾಜ ಕಡ್ಡಾಯ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿದರು.
ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮತ್ತು ಪರಿಸರ ಜಾಗೃತಿ ಮೂಡಿಸುವ ಬ್ಯಾನರ್ ಹಾಕಿ ಅತಿಥಿಗಳ ಗಮನ ಸೆಳೆಯಲಾಯಿತು.
ಸ್ವೀಪ್ ಸದಸ್ಯರಾದ ಬಸವರಾಜ ಬಳಿಗಾರ, ವೀರೇಶ ಬಡಿಗೇರ, ತಾ.ಪಂ. ಐಇಸಿ ಕೋ-ಆರ್ಡಿನೇಟರ್ ದೇವರಾಜ ಪತ್ತಾರ, ಮದುವೆಯಲ್ಲಿ ಈ ಯೋಜನೆ ರೂಪಿಸಿದ ಸಮಾಜ ಸೇವಕ ಮಂಜುನಾಥ ಜಿ. ಗೊಂಡಬಾಳ ಮತ್ತು ಜ್ಯೋತಿ ಎಂ.ಗೊಂಡಬಾಳ, ಶಿಕ್ಷಕರಾದ ಹನುಮಂತಪ್ಪ ಕುರಿ, ಸುರೇಶ ಕಂಬಳಿ, ಬಾಲ ನಾಗಮ್ಮ, ಕುಟುಂಬದವರಾದ ಬಸವರಾಜ ಪಲ್ಲೇದ, ಮಹೇಶ ಕರಿಯಪ್ಪ ಜಾಗೀರದಾರ, ಮಾರ್ಕಂಡೆಪ್ಪ ಜಾಗೀರದಾರ ಇತರರು ಇದ್ದರು.