Breaking News

ದಕ್ಷಿಣ ಭಾರತದ ನಿರಂಕಾರಿ ಸಂತ ಸಮಾಗಮ ಮಾರ್ಚ್ 2 ಮತ್ತು 3ರಂದು ಬೆಂಗಳೂರಿನಲ್ಲಿ.

South India Nirankari Sant Samagam March 2nd and 3rd in Bangalore.

ಜಾಹೀರಾತು

ಬೆಂಗಳೂರು : ಸದ್ಗುರು ಮಾತಾ ಸುದಿಕ್ಷಾ ಜಿ ಮಹಾರಾಜ ಅವರ ಕೃಪಾ ಆಶೀರ್ವಾದದಿಂದ ದಕ್ಷಿಣ ಭಾರತದ ನಿರಂಕಾರಿ ಸಂತ ಸಮಾಗಮವು ಮಾರ್ಚ್ 2 ಮತ್ತು 3ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡದಲ್ಲಿ ನಡೆಯಲಿದೆ. ಸಮಾಗಮದ ತಯಾರಿಯು ಬರದಿಂದ ಸಾಗಿದೆ. ಕರ್ನಾಟಕ, ಅಂದ್ರ ಪ್ರದೇಶ, ತೆಲಂಗಾಣ, ತಮಿಳನಾಡು,ಕೇರಳ, ಮಹಾರಾಷ್ಟ, ಅಂಡಮಾನ ನಿಕೋಬಾರ, ಗೋವಾ ಮತ್ತು ದೂರದ ದೇಶ ವಿದೇಶಗಳಿಂದ ನಿರಂಕಾರಿ ಮಹಾತ್ಮರು ಈ ಸಮಾಗಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಎರಡು ದಿನಗಳ ವರಗೆ ನಡೆಯುವ ಈ ಸಮಾಗಮದಲ್ಲಿ ಲಕ್ಷಕ್ಕಿಂತ ಹೆಚ್ಚು ನಿರಂಕಾರಿ ಭಕ್ತರು ಸೇರುವ ನಿರೀಕ್ಷೆ ಇದ್ದು ನಿರಂಕಾರಿ ಭಕ್ತರಿಗಾಗಿ ಪ್ರಸಾದ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.

ಸನ್ 1929ರಿಂದ ಇಲ್ಲಿಯವರೆಗೆ ಅಂದರೆ 95ವರ್ಷದ ವರೆಗೆ ಸಂತ ನಿರಂಕಾರಿ ಮಂಡಳ(ರಿ). ದಿಲ್ಲಿ ಯವರು ಮಿಷನ್ ವನ್ನು ಮುನ್ನನಡೆಸುತ್ತ ಬಂದಿದ್ದಾರೆ. ಸಂತ ನಿರಂಕಾರಿ ಮಿಷನ್ ಇದೊಂದು ಆದ್ಯಾತ್ಮಿಕ ವಿಚಾರಧಾರೆಯಾಗಿ ವಿಶ್ವ ಬಂದುತ್ವ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದೆ. ದೇಶ ವಿದೇಶಗಳಲ್ಲಿ ನಿರಂಕಾರಿ ಮಿಷನ್ ಆದ್ಯಾತ್ಮಿಕ ವಿಚಾರಧಾರೆಯನ್ನು ಪ್ರಚಾರ ಮಾಡುತ್ತಿದೆ. ನಿರಂಕಾರಿ ಭಕ್ತರಿಗೆ ಬ್ರಹ್ಮ ಜ್ಞಾನದ ಮಹತ್ವವನ್ನು ತಿಳಿಸಿ, ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಬದುಕಲು ತಿಳಿಸುತ್ತದೆ. ಬ್ರಹ್ಮ ಜ್ಞಾನವನ್ನು ಪಡೆಯಲು ಮೊದಲು ಸದ್ಗುರುವಿಗೆ ಶರಣಾಗಬೇಕು. ಈಗಿನ ಗಡಿಬಿಡಿ ಜೀವನದಲ್ಲಿ ನೆಮ್ಮದಿಯಿಂದ ಬದುಕಲು ದಿನಾಲೂ ಸೇವಾ – ಸತ್ಸಂಗ – ಶಿಮರಣ ದ ಮಹತ್ವ ತಿಳಿದುಕೊಳ್ಳಬೇಕಾಗಿದೆ. ಬೆಂಗಳೂರಿನಲ್ಲಿ ನಡೆಯುವ ನಿರಂಕಾರಿ ಸಂತ ಸಮಾಗಮದಲ್ಲಿ ಪಾಲ್ಗೊಂಡು ಸಮಯದ ಸದ್ಗುರು ಮಾತಾ ಸುದಕ್ಷಾ ಜಿ ಮಹಾರಾಜ ಅವರ ದರ್ಶನ ಮತ್ತು ಆಶೀರ್ವಾದ ಪಡೆದು ಮಾನವ ಜನ್ಮದ ಮಹತ್ವವನ್ನು ತಿಳಿದುಕ್ಕೊಳ್ಳಿ.
ಧನ್ಯ ನಿರಂಕಾರ ಜಿ

ಡಾ. ಎನ್ ಪ್ರಶಾಂತ ರಾವ್, ಬೆಳಗಾವಿ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.