We don’t want dirty water, we want clean water: Leader Ravikumar insists.
ವರದಿ : ಬಂಗಾರಪ್ಪ ಸಿ
ಹನೂರು: ಪ್ರಧಾನಿಗಳ ಆಶಯದಂತೆ ದೇಶದ ಪ್ರತಿ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬದಲು ಅಧಿಕಾರಿಗಳು ಕೊಳಕು ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.
ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ ಗ್ರಾಮಸ್ಥರಾದ ರವಿಕುಮಾರ್ ಮಾತನಾಡಿ ತಾಲೂಕಿನ ಕಾಡಂಚಿನ ಪೊನ್ನಾಚಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಸ್ತೂರು ಗ್ರಾಮದಲ್ಲಿ 99 ಲಕ್ಷ ವೆಚ್ಚದಲ್ಲಿ ಪ್ರತಿಯೊಂದು ಮನೆಗೂ ನಲ್ಲಿ ಸಂಪರ್ಕ ನೀಡಿ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಬೇಕಿತ್ತು, ಆದರೆ ಬೋರ್ವೆಲ್ ಕೊರೆಸದೆ ಪುರಾತನ ತೆರೆದ ಬಾವಿಯಲ್ಲಿ ಸಂಗ್ರಹವಾಗಿರುವ ಕೊಳಚೆ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ದೂರನ್ನು ನೀಡಿದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ ಇದರಿಂದ ಬೇಸೆತ್ತ ನಮ್ಮ ಗ್ರಾಮಸ್ಥರು ಇಂದು ಪ್ರತಿಭಟನೆ ಮಾಡಿದ್ದೆವೆ. ಆದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಕೊಳಚೆ ನೀರು ಪೂರೈಕೆ ಮಾಡಿ ಅನಾರೋಗ್ಯಕ್ಕೆ ದಾರಿ ಮಾಡಿ ಕೊಡುತ್ತಿದ್ದಾರೆ. ಪೊನ್ನಾಚಿ ಹಾಗೂ ಮರೂರು ಗ್ರಾಮಗಳಲ್ಲಿ ಬೋರ್ವೆಲ್ ಕೊರೆಸಿ ಟ್ಯಾಂಕ್ ನಿರ್ಮಾಣ ಮಾಡಿ ಇದರಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ ಆದರೆ ಅಸ್ತೂರು ಗ್ರಾಮದಲ್ಲಿ ಕೊಳಕು ನೀರು ಪೂರೈಕೆ ಮಾಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು. ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವವರೆಗೂ ಹಾಗೂ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದ್ದೆವೆ ಇಂತಹ ಗಂಭೀರ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಸ್ಥಳಿಯ ಜನಪ್ರತಿನೀದಿಗಳು ಮೌನವಹಿಸಿರುವುದು ನಮಗೆ ನಾಚಿಕೆಗೆಡಿನ ಸಂಗಾತಿ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರಾದ ಎಸ್ ಕೋಟೆಬಸಪ್ಪ ಮಾತನಾಡಿ ನಮ್ಮ ಗ್ರಾಮದ ಬಾವಿಗೆ ಹಲವಾರು ವರ್ಷಗಳ ಇತಿಹಾಸವಿದೆ ಇದೇ ಸ್ಥಳದಲ್ಲಿ ಸಾವು ನೋವು ಸಹ ಸಂಭವಿಸಿದೆ ಅದು ಅಲ್ಲದೆ ಇದೇ ನೀರನ್ನು ಗ್ರಾಮಸ್ಥರು ಮಡಿವಂತಿಕೆಗೆ ಉಪಯೋಗಿಸುತ್ತಿದ್ದಾರೆ ,ಮತ್ತು ಮಾರಿ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಬಾವಿಯ ಒಳಗಡೆ ಮಾರಿ ಕಂಬವನ್ನು ಹಾಕಲು ತಲತಲಾಂತರದಿಂದ ಉಪಯೋಗ ಮಾಡುತ್ತಿದ್ದಾರೆ ಆದ್ದರಿಂದ ನಮಗೆ ಶುದ್ದ ಕುಡಿಯುವ ನೀರು ಬೇಕು ಎಂದರು .
ಇದೇ ಸಮಯದಲ್ಲಿ ಮುಖಂಡರಾದ ದಾಸಪ್ಪ ಹಾಗೂ ಊರು ಗೌಡರಾದ ರಂಗಮಾದಪ್ಪ ಮಾತನಾಡಿ ಪುರಾತನ ಬಾವಿಗೆ ಪೈಪು ಜೋಡಿಸಿ ಅದರ ಪಾವಿತ್ರ್ಯತೆಯನ್ನು ಹಾಳುಮಾಡಿರುವುದು ನಾಚಿಕೆಗೇಡಿನ ಕೆಲಸ ಬಾವಿಗೆ ನಾವು ಇಳಿಯಬೇಕಾದರೆ ಕಾಲಿನಲ್ಲಿ ಚಪ್ಪಲಿಯು ಸಹ ಇರುವುದಿಲ್ಲ ಇಂತಹ ಕೆಲಸ ಮಾಡಿರುವ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸ್ಥಳಿಯ ಗ್ರಾಮದೇವತೆ ದುರ್ಬುದ್ದಿ ನೀಡದಿರಲಿ ಎಂಬುದೆ ನಮ್ಮ ಆಶಯವೆಂದರು .
ಪ್ರತಿಭಟನೆ ವೇಳೆ ಕುಡಿಯಲು ಕೊಳಚೆ ನೀರು ಬೇಡ, ಮನೆ ಮನೆಗೆ ಕುಡಿಯಲು ಶುದ್ಧ ಕುಡಿಯುವ ನೀರು ಕೊಡಿ ಎಂದು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಮನವಿ ಸ್ವೀಕರಿಸಿದ ಗ್ರಾಪ ಅದ್ಯಕ್ಷರು ಗ್ರಾಮದ ಒಳಿತಿಗಾಗಿ ನಾವು ಸದಾ ಸಿದ್ದರಿದ್ದೆವೆ ಎಂದರು.
ಇದೇ ಸಂದರ್ಭದಲ್ಲಿ ಮನವಿ ಸ್ವಿಕರಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಮಾತನಾಡಿ ಈಗಾಗಲೇ ಜೆ ಜೆ ಎಮ್ ಅಧಿಕಾರಿಗಳು ಗ್ರಾಮಮಟ್ಟದಲ್ಲಿ ಒಂದು ಸಮಿತಿಯನ್ನು ಮಾಡಿದ್ದಾರೆ ಅದರಲ್ಲಿ ಅಯಾ ವಾರ್ಡಿನ ಸದಸ್ಯರು ಈ ಸಮಿತಿಯ ಅದ್ಯಕ್ಷರಾಗಿರುತ್ತಾರೆ ,ಇನ್ನೂಳಿದಂತೆ ಆಶಕಾರ್ಯಕರ್ತೆಯು ಸಹ ಸದಸ್ಯರಾಗಿರುತ್ತಾರೆ ಇವರ ತಿರ್ಮಾನದ ಆಧಾರದ ಮೇಲೆ ನಾವು ಶುದ್ದಜಲ ಕಾಮಗಾರಿ ಮಾಡುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉದ್ಯಮಿ ನಾಗೇಶ್ ಜಿ . ಉಪಾಧ್ಯಕ್ಷರಾದ ಭದ್ರೆಗೌಡ , ಗ್ರಾಮ ಪಂಚಾಯತಿ ಸದಸ್ಯೆ ಜಯಮ್ಮ. ಊರ ಗೌಡರುಗಳಾದ ರಂಗಮಾದಪ್ಪ.ಚಿಕ್ಕರಂಗೇಗೌಡ . ಮುನಿಬಸೆವೇಗೌಡ ,ಕೆಂಪರಾಜು,ಶಿವಣ್ಣ , ತಂಬಡಿ ಮಾದಯ್ಯ . ಅಸ್ತೂರು ಕಾಳಮ್ಮ .ಪ್ರಭು , ಪುಟ್ಟಮಾದಪ್ಪ ಗ್ರಾಮದ ಮುಖಂಡರುಗಳು ಹಾಜರಿದ್ದರು