Karnataka Provincial Farmers’ Association protests regarding guarantee scheme employment and payment of tractors given for construction of ponds

ಗಂಗಾವತಿ 30, ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕ ಸಮಿತಿ ನೇತೃತ್ವದಲ್ಲಿ ಸೋಮವಾರ ದ oದು ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಜoತಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಕಾರರಿಗೆ ಕೆಲಸ ನೀಡಬೇಕು ಹಾಗೂ ಕೆರೆಗಳ ನಿರ್ಮಾಣಕ್ಕೆ ಬಳಿಕ ಮಾಡಿದ ಟ್ಯಾಕ್ಟರ್ ಗಳ ಮಾಲೀಕರಿಗೆ ಬಿಲ್ ಪಾವತಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯತ್ ಆವರಣದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು, ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹೋಗಿ ಪ್ರತಿಭಟಿಸಿದ ಪ್ರತಿಭಟನೆಕಾರರು ಸಾಂಕೇತಿಕವಾಗಿ ಒಂದು ದಿನದ ಧರಣಿಯನ್ನು ನಡೆಸಿದ ರು, ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶಿವಣ್ಣ ಬೆಣ ಕಲ್ ಮಾತನಾಡಿ ಚಿಕ್ಕ ಜಂತಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗನಹಳ್ಳಿ ವಿನೋಬಾ ನಗರ ಅಯೋಧ್ಯ, ಹೊಸಳ್ಳಿ ಗ್ರಾಮದ ಕೂಲಿಕಾರ್ರಿಗೆ 14 ದಿನದ ಕೆಲಸವನ್ನು ತಕ್ಷಣ ನೀಡಬೇಕು, 2021,,,22 ನೇ ಸಾಲಿನ ಕೆರೆಗಳ ನಿರ್ಮಾಣಕ್ಕೆ ಕಳುಹಿಸಿದ ರೈತರ ಟ್ಯಾಕ್ಟರ್ ಹಣ ತಕ್ಷಣ ಪಾವತಿಸಬೇಕು ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಶುದ್ಧವಾದ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಕೂಲಿಕಾರರಿಗೆ ಟ್ಯಾಕರ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಪೇ ಟ್ಟಿಗೆ ಕಲ್ಪಿಸಬೇಕೆಂದು ಪ್ರಮುಖ ಎಂಟು ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಒಂದು ದಿನದ ಸಂಕೇತ ಧರಣಿ ನಡೆಸಲಾಗಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀನಿವಾಸ್, ಹೊಸಳ್ಳಿ, ಗಂಗಮ್ಮ ನಿಂಗಮ್ಮ ಈರಮ್ಮ ರಾಮಮ್ಮ ಈರಪ್ಪ ಹುಲಿಗಮ್ಮ ಪಂಪಾಪತಿ ಕನಕಪ್ಪ ದುರ್ಗಪ್ಪ ಚಂದ್ರಪ್ಪ ಯಮನಪ್ಪ ಸೇರಿದಂತೆ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು