Massive protest by the Hosalli struggle committee against the addition of Hosalli village to the municipal council
ಗಂಗಾವತಿ 30, ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊಸಳ್ಳಿ ಗ್ರಾಮವನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೆ ಮುಂದಾದ ಸರ್ಕಾರದ ಕ್ರಮವನ್ನು ಖಂಡಿಸಿ ಹೊಸಳ್ಳಿ ಹೋರಾಟ ಸಮಿತಿಯ ಸದಸ್ಯರು ಶನಿವಾರದಂದು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿ ಮನವಿ ಪತ್ರ ಸಲ್ಲಿಸಿದರು,ಈ ಸಂದರ್ಭದಲ್ಲಿ ಮುಖಂಡ ಬಸವರಾಜ್ ಮ್ಯಾ ಗಲಮನಿ ಮಾತನಾಡಿ ಕಡಿಮೆ ಜನಸಂಖ್ಯೆ ಹೊಂದಿದ ರೈತರು ಕೃಷಿ ಕೂಲಿ ಕಾರ್ಮಿಕರು ಆರ್ಥಿಕವಾಗಿ ಹಿಂದುಳಿದ ಹೊಸಳ್ಳಿ ಗ್ರಾಮವನ್ನು ಸೇರ್ಪಡೆ ಆಗೋದ್ರಿಂದ ಗ್ರಾಮಸ್ಥರು ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ ಉದ್ಯೋಗ ಖಾತ್ರಿ ಯೋಜನೆ ದೊರೆಯಬಹುದಾದ ಅನುದಾನ ಯೋಜನೆಗಳು ದೊರೆಯದೆ ನಿರುದ್ಯೋಗ ಸಮಸ್ಯೆ ಉಂಟಾಗಲಿ ಯಾವುದೇ ಕಾರಣಕ್ಕೂ ಹೊಸಳ್ಳಿ ಗ್ರಾಮವನ್ನು ಗಂಗಾವತಿ ನಗರಸಭೆ ವ್ಯಾಪ್ತಿಗೆ ಸೇರಿಸುವುದು ಸೂಕ್ತವಲ್ಲ ಎಂದು ತಿಳಿಸಿದರು , ಇನ್ನೋರ್ವ ಮುಖಂಡನಿರುಪಾದಿ ಬೆಣಕಲ್ ಮಾತನಾಡಿ ಹೊಸಳ್ಳಿ ಮತ್ತಿತರ ಭಾಗಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಹೊರಟಿರುವ ಸರ್ಕಾರದ ಕ್ರಮ ಆ ವೈಜ್ಞಾನಿಕ ಈ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ನಗರಸಭೆ ಸೇರ್ಪಡೆ ಉದ್ದೇಶವನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮುತ್ತಣ್ಣ ಕನಕರಾಯ ಚಂದ್ರಪ್ಪ ಹುಲಿಗೆಮ್ಮ ಹನುಮೇಶ ಸೇರಿದಂತೆ ಇತರರು ಹೊಸಳ್ಳಿಯಿಂದ ಹೊರಟ ಪ್ರತಿಭಟನೆ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಮಾರ್ಗವಾಗಿ ಶ್ರೀ ಕೃಷ್ಣ ದೇವರಾಯ ವೃತದಲ್ಲಿ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಪ್ರತಿಭಟಿಸಿದರು