Breaking News
ಹುಬ್ಬಳ್ಳಿ: ಕರ್ನಾಟಕ ಚೇಂಬರ್ ಅಧ್ಯಕ್ಷರಾಗಿ ಸಂಶಿಮಠ ಆಯ್ಕೆ

Teacher’s Day Celebration at Azzipur Government Senior Primary School,

ಹುಬ್ಬಳ್ಳಿ: ಇಲ್ಲಿನ ಕರ್ನಾಟಕ ಚೇಂಬರ್ ಆಫ಼್ ಕಾಮರ್ಸ್ & ಇಂಡಸ್ಟ್ರಿ ಅಧ್ಯಕ್ಷರಾಗಿ ಎಸ್.ಪಿ.ಸಂಶಿಮಠ ಆಯ್ಕೆಯಾಗಿದ್ದಾರೆ.ಪ್ರಸ್ತುತ ಇದೇ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಅವರು ಪ್ರತಿಸ್ಪರ್ಧಿ ಅಭ್ಯರ್ಥಿಗಿಂತ 58 ಮತಗಳ ಅಂತರ ಸಾಧಿಸಿ, ಚುನಾವಣೆಯ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮೂಲತಃ ಗದಗ ನಗರದ ಪ್ರಮುಖ ಚಹಾ ಪುಡಿ ವ್ಯಾಪಾರಿಗಳಾದ ಇವರು ಗದಗ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಮೂಲಕ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.

ಇವರ ಆಯ್ಕೆಯಿಂದ ಕೊಪ್ಪಳ ಜಿಲ್ಲೆಯ ವಿವಿಧ ಕಾರ್ಯಗಳನ್ನು ಪರಸ್ಪರ ಹೊಂದಾಣಿಕೆಯಿಂದ ಮಾಡಲು ಸಾಧ್ಯವಾಗಲಿದೆ ಎಂದು ಬೆಂಗಳೂರಿನ ಫ಼ೆಡರೇಶನ್ ಆಫ಼್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಕಾರ್ಯಕಾರಿ ಮಂಡಳಿಯ ನೂತನ ಸದಸ್ಯ ಮತ್ತು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷ ಸಂಶಿಮಠ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂದೀಪ್ ಬಿಡಸಾರಿಯಾ ಅವರಿಗೆ ಅಭಿಂದನೆಗಳನ್ನು ಹೇರೂರ ತಿಳಿಸಿದ್ದಾರೆ.

ಅಜ್ಜಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Teacher’s Day Celebration at Azzipur Government Senior Primary School,


ವರದಿ : ಬಂಗಾರಪ್ಪ ಸಿ
ಹನೂರು :ನಮ್ಮ ಶಾಲಾವರಣದಲ್ಲಿ ಶಿಕ್ಷಕರನ್ನು ಗೌರವಿಸುವ ಸಲುವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಮೇರಿ ತಿಳಿಸಿದರು. ಕಾರ್ಯಕ್ರಮದ ನಂತರ ಮಾತನಾಡಿದ ಅವರು ಭಾರತ ರತ್ನ ಪುರಸ್ಕೃತ, ಮೊದಲ ಉಪರಾಷ್ಟ್ರಪತಿ ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು ಎಂದರೆ ಅವನ ಹಿಂದೆ ಪ್ರಮುಖ ಪಾತ್ರ ವಹಿಸುವುದು ಒಬ್ಬ ಗುರು. ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಮುಖ್ಯವೋ, ಹಾಗೇಯೆ ಆ ಶಿಕ್ಷಣ ನೀಡುವ ಗುರುವು ಅಷ್ಟೇ ಮುಖ್ಯ. ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ. ಭರವಸೆಯನ್ನು ಹೆಚ್ಚಿಸುವ, ಕನಸನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟು ಹಾಕುವ ಸೂತ್ರಧಾರನೇ ಶಿಕ್ಷಕ ಎಂದರೆ ತಪ್ಪಾಗಲಾರದು. ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಮಯದಲ್ಲಿ ಸಹಶಿಕ್ಷಕರಾದ ಶ್ರೀ ವೆಂಕಟರಾಜುರವರು ಮಾತನಾಡಿ ಶಿಕ್ಷಕರ ದಿನಾಚರಣೆಯಲ್ಲಿ ಈ ಶಾಲೆಗೆ ವರ್ಗಾವಣೆಯಾಗಿ ಬಂದಿರುವ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಕುಳಂದೈರಾಜ್ ರವರು 35000/- ರೂ ಬೆಲೆಬಾಳುವ ಸೌಂಡ್ ಸಿಸ್ಟಮ್, ಮೈಕ್ ಸೆಟ್ ಹಾಗೂ ಅಹುಜಾ ಅಂಪ್ಲಿಪೈರ್ ನ್ನು ಶಾಲೆಗೆ ಕೊಡುಗೆಯಾಗಿ ನೀಡಿರುತ್ತಾರೆ. ಸೇವಾ ಮನೋಭಾವವುಳ್ಳ ಇಂತಹ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಮನರಂಜನೆ ಆಟಗಳನ್ನು ಆಡಿಸಿ ಬಹುಮಾನ ವಿತರಿಸಿ ಸಂತಸಪಟ್ಟರು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಶ್ರೀ ದೊರೆಸ್ವಾಮಿ, ಶ್ರೀಮತಿ ಕಲ್ಪನ, ಶ್ರೀ ಕುಳಂದೈ ರಾಜ್, ಶ್ರೀಮತಿ ಮಲೆಮಹಾದೇವಮ್ಮ, ಅತಿಥಿ ಶಿಕ್ಷಕರಾದ ಮೀನಾಕ್ಷಿಯವರು ಹಾಜರಿದ್ದರು.

ವಿಜಯ ವಿರಾಟ ಸೌಹಾರ್ದ ಸಹಕಾರಿ ನಿಯಮಿತ 6ನೇ ವಾರ್ಷಿಕ ಸಾಮಾನ್ಯ ಸಭೆ

Vijay Virata Souharda Sahakari Regular 6th Annual General Meeting

ಸಿಂಧನೂರು ನಗರದ ಸಂಗಮೇಶ್ವರ ಚಿತ್ರಮಂದಿರ ಹತ್ತಿರವಿರುವ ವಿಜಯ ವಿರಾಟ ಸೌಹಾರ್ದ ಸಹಕಾರಿ ಸಂಘದ ಕಛೇರಿಯ ಸಭಾಂಗಣದಲ್ಲಿ 6ನೇ ವಾರ್ಷಿಕ ಮಹಾಸಭೆ ನಡೆಯಿತು.

ವಿಜಯ ವಿರಾಟ ಸಹಕಾರಿ ಸಂಘ 8.31 ಲಕ್ಷ ನಿವ್ವಳ ಲಾಭ ಸದಸ್ಯರ ಪರಿಶ್ರಮದಿಂದ ವಿಜಯ ವಿರಾಟ ಸಹಕಾರಿಗೆ 6 ವರ್ಷಗಳ ಅವಧಿಯಲ್ಲಿ 8.31 ಲಕ್ಷ ರೂಪಾಯಿಗಳು ನಿವ್ವಳ ಲಾಭ ಪಡೆದಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷತೆಯನ್ನು ವಹಿಸಿದ್ದ ಟಿ.ಅಯ್ಯಪ್ಪ ಹೇಳಿದರು.

ಸಿಂಧನೂರು ಪಟ್ಟಣದ ವಿಜಯ ವಿರಾಟ ಸಹಕಾರಿ ಸಂಘದ ಕಛೇರಿಯ ಸಭಾಂಗಣದಲ್ಲಿ ಬುಧವಾರದಂದು ನಡೆದ 6ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಈ ಸಹಕಾರಿಯೂ ಒಟ್ಟು 1371 ಸದಸ್ಯರನ್ನು ಒಳಗೊಂಡಿದ್ದು, ಹಾಗೂ 18.66 ಲಕ್ಷ ರೂ. ಬಂಡವಾಳ ಹೊಂದಿದ್ದು, 3.17.ಕೋಟಿ ರೂ ಠೇವಣಿಗಳು,3.54 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು
ಹಾಗೂ ಸಾಲ ಮತ್ತು ಮುಂಗಡಗಳು 3.12 ಕೋಟಿ ರೂ ಸೇರಿದಂತೆ 8.31 ಲಕ್ಷ ರೂಪಾಯಿಗಳು ನಿವ್ವಳ ಲಾಭಗಳಿಸಿದ್ದು 98% ಸಾಲ ವಸೂಲತಿ ಮಾಡಿದೆ ಎಂದು ತಿಳಿಸಿದರು.ಸಹಕಾರಿಯ ಉಪಾಧ್ಯಕ್ಷರಾದ ಟಿ. ಅಯ್ಯಪ್ಪ ಇವರ ಅಧ್ಯಕ್ಷತೆ ಯನ್ನು ಮಾತನಾಡಿದರು. 2017 ರಲ್ಲಿ ಪ್ರಾರಂಭಗೊಂಡ ನಮ್ಮ ಸಹಕಾರಿ ಸಂಘವು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ದುರ್ಬಲ ವರ್ಗಗಳಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ರೈತರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಹಾರ್ದಿಕ ಪುನಶ್ಚೇತನ ಆದ್ಯತೆ ನೀಡಲಾಗಿದೆಯಂದರು,ವಿಜಯ ವಿರಾಟ ಸೌಹಾರ್ದ ಸಹಕಾರಿ ಸಂಘ ನಿ.,ಆಡಳಿತ ಸದಸ್ಯರ ಆಶಯದಂತೆ ಸಿಂಧನೂರು ಮತ್ತು ಕಾರಟಗಿ ನಗರದಲ್ಲಿ ಎರಡು ಶಾಖೆಗಳನ್ನಾಗಿ ವಿಸ್ತಾರಿಸಲಾಗಿದೆ.

ಸಹಕಾರಿಯ CEO ಮನೋಜ ಕುಮಾರ ಹಾಗೂ ವೀರೇಂದ್ರ ಬಡಿಗೇರ ವಾರ್ಷಿಕ ವರದಿಯನ್ನು ಮಂಡಿಸಿದರು.

ನಿರ್ದೇಶಕರಾದ ಬಿ.ಅಂಬಣ್ಣ ಗೊರೆಬಾಳ,ವೀರನಗೌಡ ನೆಲಗಲದಿನ್ನಿ,ಶೇಖರಪ್ಪ ತಾಳಿಕೋಟೆ, ಮೌನೇಶ ಲಿಂಗಸೂಗೂರು,ವೀರೇಶ ಗೊರೆಬಾಳ,ವಿನಯಕುಮಾರ ಬಡಿಗೇರ,ಪರಮೇಶಪ್ಪ ವಿ.ಬಿ, ಮೌನೇಶ ತಿಡಿಗೋಳ, ಬಸವರಾಜ ಅಲಬನೂರ, ಕಾನೂನು ಸಲಹೆಗಾರರಾದ ರವಿಕುಮಾರ ವಿ ಹಂಚಿನಾಳ, ವೀರೇಶ ಕೋಟೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಇತರರು ಇದ್ದರು.ನೂತನ ನಿರ್ದೇಶಕರನ್ನಾಗಿ ವೀರೇಶ ಕುಮಾರ,ವಿರುಪಣ್ಣ ಹೊಸೂರ,ಶ್ರೀಮತಿ ಸೌಮ್ಯ, ದೇವರಾಜ ಮಡಿವಾಳ ಅವರನ್ನು ಆಯ್ಕೆ ಮಾಡಲಾಯಿತು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಪರಿಸರ ಸ್ನೇಹಿ ಚಟುವಟಿಕೆ ಕೈಗೊಳ್ಳಲು ಸೂಚನೆ

World Tourism Day: Tips for eco-friendly activities

ಕೊಪ್ಪಳ ಸೆಪ್ಟೆಂಬರ್ 22 (ಕರ್ನಾಟಕ ವಾರ್ತೆ): ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲಾ ಹೋಟಲ್, ರೆಸಾರ್ಟ, ರೆಸ್ಟೋರೆಂಟ್ ಮತ್ತು ಹೋಮ್‌ಸ್ಟೇಗಳಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಕೊಪ್ಪಳ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸೆಪ್ಟೆಂಬರ್ 27ರಂದು ನಡೆಯುವ ಪ್ರಸಕ್ತ ಸಾಲಿನ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2023 ಅನ್ನು “ಟೂರಿಜಂ & ಗ್ರೀನ್ ಇನ್ವೆಸ್ಟ್ಮೆಂಟ್ (TOURISM & GREEN INVESTMENTS)” ಎಂಬ ಸಂದೇಶಯೊಂದಿಗೆ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹೋಟಲ್, ರೆಸಾರ್ಟ ಮತ್ತು ಹೋಮ್‌ಸ್ಟೇಗಳಿಗೆ ಕೆಲವು ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಲು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಸೂಚನೆ ನೀಡಿರುತ್ತಾರೆ.
ಅದರಂತೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಹೋಟಲ್, ರೆಸಾರ್ಟ ಮತ್ತು ಹೋಮ್‌ಸ್ಟೇಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಚ್ಛತೆ, ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ನೈರ್ಮಲ್ಯ ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ ವಿವಿಧ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತ ಪಡಿಸಲು ಎಲ್ಲಾ ಹೋಟಲ್, ರೆಸಾರ್ಟ ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ಬಾರಿಯ ವಿಶ್ವ ಪ್ರವಾಸೊದ್ಯಮ ದಿನಾಚರಣೆಯ ಥೀಮ್ ಅನ್ನು ಪರಿಸರ ಸ್ನೇಹಿ ಬಟ್ಟೆ (ಕ್ಲಾಥ್) ಬ್ಯಾನರ್‌ನಲ್ಲಿ ಮುದ್ರಿಸಿ ಪ್ರದರ್ಶಿಸಬೇಕು. ಸಾಂಪ್ರದಾಯಕ ಖ್ಯಾದಗಳನ್ನು ನೀಡುವುದು, ಪ್ರವಾಸಿ ತಾಣಗಳ ಕುರಿತು ವೀಡಿಯೋಗಳನ್ನು ಹೋಟಲ್‌ಗಳು ಹಾಗೂ ಕಚೇರಿಗಳಲ್ಲಿ ಪ್ರದರ್ಶಿಸಬೇಕು. ಸ್ವಚ್ಛತಾ ಅಭಿಯಾನ್ ಕೈಗೊಳ್ಳುವುದರೊಂದಿಗೆ ಸಸಿಗಳನ್ನು ನೆಡಸಬೇಕು. ವಿದ್ಯುತ್ ದಿಪಾಲಂಕಾರಗಳಿಂದ ಪ್ರದರ್ಶಿಸಬೇಕು. ಕೊಠಡಿಗಳ ದರಗಳಲ್ಲಿ ವಿಶೇಷ ರಿಯಾಯಿತಿಯನ್ನು ನೀಡುವುದು, ಹೋಟಲ್‌ಗಳಲ್ಲಿ ಛಾಯಾಚಿತ್ರಗಳನ್ನೊಳಗೊಂಡ ಸೆಲ್ಫಿ ಪಾಯಿಂಟಗಳನ್ನು ಅಳವಡಿಸುವುದು ಮತ್ತು ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಕೈಗೊಳ್ಳುವುದರೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಿ, ಯಶ್ವಸಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.