ವರದಿ : ಬಂಗಾರಪ್ಪ ಸಿ ಹನೂರು .
ಹನೂರು:ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 240 ಹೊರಗುತ್ತಿಗೆ ನೌಕರರಿಗೆ ಹೊಸ ಸಮವಸ್ತ್ರವನ್ನು ಪ್ರಾಧಿಕಾರದ ವತಿಯಿಂದ ವಿತರಿಸಲಾಯಿತು ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ತಿಳಿಸಿದರು .ದೇವಾಲಯದ ಕಛೇರಿಯಲ್ಲಿ
ಹೊರಗುತ್ತಿಗೆ ನೌಕರರ ಕುಂದು ಕೊರತೆ ಸಭೆ ನಡೆಸಿ
ಸಮಸ್ಯೆಗಳನ್ನು ಆಲಿಸಿ
ಅವಹಾಲು ಸ್ವೀಕರಿಸಿದ್ದರು. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ಸಿಬ್ಬಂದಿಗಳು ತಮಗೆ ನೀಡಿರುವ ಸಮವಸ್ತ್ರಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು
ಸೂಚನೆ ನೀಡಿದ್ದರು. ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೆಪ್ಟೆಂಬರ್ 27ರಂದು ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನೆಲೆ ಸೆಕ್ಯೂರಿಟಿ ಗಾರ್ಡ್, ದಾಸೋಹ ಸಿಬ್ಬಂದಿ, ಜಾಕ್ ವೆಲ್ ಸಿಬ್ಬಂದಿ ರೋಮ್ ಬಾಯ್ಸ್, ಸೇರಿದಂತೆ ಇನ್ನಿತರ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಸಮವಸ್ತ್ರ ವಿತರಿಸಲಾಗಿದೆ, ಇದಲ್ಲದೆ ಸಮವಸ್ತ್ರ ಸಿದ್ಧಪಡಿಸಿಕೊಳ್ಳಲು ಸಂಸ್ಥೆಯ ವತಿಯಿಂದ 500 ರೂ ನಗದು ಸಹ ನೀಡಲಾಗುತ್ತದೆ,
ಇದಲ್ಲದೆ ಮೊಟ್ಟಮೊದಲ ಬಾರಿಗೆ ಪ್ರಾಧಿಕಾರದ ವತಿಯಿಂದಲೂ ಒಂದು ಜೊತೆ ಸಮವಸ್ತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಹೊರಗುತ್ತಿಗೆ ಸಂಸ್ಥೆಯ ಎಲ್ಲಾ ನೌಕರರಿಗೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಸಮವಸ್ತ್ರ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸೇರಿದಂತೆ ಇನ್ನಿತರರು ಹಾಜರಿದ್ದರು.