Breaking News
ಭಾರತ್ ಜೋಡೊ ಯಾತ್ರೆಯವರ್ಷಾಚರಣೆಭಾರತವನ್ನುಒಗ್ಗೂಡಿಸುವ ನಿರಂತರ ಪ್ರಯತ್ನ ಕಾಂಗ್ರೆಸ್ ಮಾಡಲಿದೆ : ಹಿಟ್ನಾಳ

Anniversary of Bharat Jodo Yatra Congress will make continuous efforts to unite India: Hitna

ಕೊಪ್ಪಳ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು ೩೭೦೦ ಕಿಲೋ ಮೀಟರ್ ಭಾರತದ ಇತಿಹಾಸದಲ್ಲಿಯೇ ದೊಡ್ಡ ಪಾದಯಾತ್ರೆಯನ್ನು ಮಾಡಿದಂತ ರಾಹುಲ್ ಗಾಂಧಿ, ಭಾರತವನ್ನು ಒಗ್ಗೂಡಿಸುವಂತಹ ಕಾರ್ಯವನ್ನು ಕೈಗೊಂಡು ಯಶಸ್ವಿಯಾಗಿದ್ದಾರೆ, ಇದನ್ನು ಪಕ್ಷ ನಿರಂತರವಾಗಿ ಮಾಡಲಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜಶೇಖರ್ ಹಿಟ್ನಾಳ್ ಹೇಳಿದರು.
ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ನಡೆದಿದ್ದ ಭಾರತ್ ಜೋಡೊ ಯಾತ್ರೆಯ ಮೊದಲ ವರ್ಷದ ಸವಿ ನೆನಪಿಗಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ಐಕ್ಯತಾ ಪಾದಯಾತ್ರೆ’ಯನ್ನುದ್ದೇಶಿಸಿ ಮಾತನಾಡಿದರು.
ನಗರದ ಗಡಿಯಾರ ಕಂಬದಿAದ ಜವಾಹರ್ ರಸ್ತೆ ಮಾರ್ಗವಾಗಿ ಅಶೋಕ ವೃತ್ತದ ವರೆಗೆ ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಸಂಭ್ರಮಿಸಿದರು, ಅಶೋಕ ವೃತ್ತದಲ್ಲಿ ಮಾತನಾಡಿ, ಈ ಯಶಸ್ಸಿನಿಂದ ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸಲು ಸಹಾಯಕವಾಯಿತು, ಬಿಜೆಪಿಯು ದೇಶವನ್ನು ಒಡೆದಾಳುವ ನೀತಿಯಿಂದ ಆಡಳಿತ ಮಾಡಲು ಮುಂದಾಗಿದ್ದರು, ಆದರೆ ರಾಹುಲ್ ಗಾಂಧಿ ಭಾರತವನ್ನು ಕೂಡಿಸುವ ಕೆಲಸವನ್ನು ಮಾಡಿದ್ದಾರೆ ಇದರಿಂದ ರಾಹುಲ್ ಗಾಂಧಿ ವರ್ಚಸ್ ಜಾಸ್ತಿಯಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ಬಿ. ನಾಗರಹಳ್ಳಿ, ಶಾಂತಣ್ಣ ಮುದಗಲ್, ಕೃಷ್ಣಾ ಇಟ್ಟಂಗಿ, ಕೃಷ್ಣಾ ಗಲಿಬಿ, ಜಾಕಿರ್ ಹುಸೇನ್ ಕಿಲ್ಲೆದಾರ್, ಗೂಳಪ್ಪ ಹಲಗೇರಿ, ಪ್ರಸನ್ನ ಗಡಾದ್, ಭರಮಪ್ಪ ನಗರ, ಕಾಟನ್ ಪಾಶಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ಸಾವಿತ್ರಿ ಮುಜುಮದಾರ್, ರವಿ ಕುರಗೋಡ, ಮಂಜುನಾಥ ಜಿ. ಗೊಂಡಬಾಳ, ಗಾಳೆಪ್ಪ ಪೂಜಾರ್, ಗವಿಸಿದ್ದನಗೌಡ ಪಾಟೀಲ್, ಸಲೀಂ ಅಳವಂಡಿ, ಬಸಯ್ಯ ಹಿರೇಮಠ, ಅಕ್ಬರ್ ಪಾಶಾ, ಅಜೀಮ್ ಅತ್ತಾರ್, ವಿರುಪಾಕ್ಷಪ್ಪ ಮೋರನಾಳ, ಶಾಮೀದ ಮನಿಯಾರ್, ತೋಟಪ್ಪ ಕಾಮನೂರ, ಬಾಲಂದ್ರನ್ ಮುನಿರಾಬಾದ್, ರೇಶ್ಮಾ ಖಾಜಾವಲಿ, ಸವಿತಾ ಗೋರಂಟ್ಲಿ, ಮಾನವಿ ಪಾಶಾ, ಶಿವರಡ್ಡಿ ಭೂಮಕ್ಕನವರ, ವಿರುಪಾಕ್ಷಪ್ಪ ನವೋದಯ, ಸೌಭಾಗ್ಯ ಲಕ್ಷಿ÷್ಮ ಗೊರವರ್, ಸುಮಂಗಲಾ ನಾಯಕ್, ನಿಂಗರಾಜ ಕಾಳೆ, ಮಲ್ಲು ಪೂಜಾರ, ಗಂಗಮ್ಮ, ಮಂಜುಳಾ, ಶ್ರೀನಿವಾಸ ಪಂಡಿತ್, ಮೈನುದ್ದಿನ್ ಮುಲ್ಲಾ, ಅಂಬಿಕಾ ನಾಗರಾಳ, ರಿಯಾಜ್ ಮಂಗಳಾಪೂರ, ಅಶೋಕ ಗೋರಂಟ್ಲಿ, ಶಿಲ್ಪಾ ಭಾಗ್ಯನಗರ ಇತರರು ಇದ್ದರು.

ರಾಷ್ಟ್ರೀಯ ಸೀನಿಯರ್ ಲಗೋರಿಚಾಂಪಿಯನ್‌ಶಿಪ್‌ನಲ್ಲಿಭಾಗವಹಿಸಲಿರುವ ರಾಜ್ಯ ತಂಡಕ್ಕೆ ಶುಭ ಹಾರೈಕೆ.

Best wishes to the state team who will participate in the National Senior Lagori Championship

ಗಂಗಾವತಿ: ಇದೇ ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಯುವ ಕ್ರೀಡಾಪಟುಗಳು ದಿನಾಂಕ ೦೮.೦೯.೨೦೨೩ ರಿಂದ ೧೦.೦೯.೨೦೨೩ ರವರೆಗೆ ಹರಿಯಾಣ ರಾಜ್ಯದ ರೆವರಿ ನಗರದಲ್ಲಿ ನಡೆಯಲಿರುವ ೧೦ನೇ ರಾಷ್ಟಿçÃಯ ಸೀನಿಯರ್ ಲಗೋರಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ದಿನಾಂಕ ೦೬.೦೯.೨೦೨೩ ಬುಧವಾರದಂದು ನಗರದ ವಿವೇಕ ಭಾರತಿ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಲಗೊರಿ ಸಂಸ್ಥೆಯ ಪದಾಧಿಕಾರಿಗಳು ರಾಜ್ಯ ತಂಡಕ್ಕೆ ಶುಭಹಾರೈಸಿ ಬಿಳ್ಕೊಟ್ಟರು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಅಬ್ದುಲ್ ರಜಾಕ್ ಟೇಲರ್ ಹಾಗೂ ಕಾರ್ಯಾಧ್ಯಕ್ಷರಾದ ರಾಘವೇಂದ್ರ ಸಿರಿಗೇರಿಯವರು ಕ್ರೀಡಾಪಟುಗಳಿಗೆ ಸಿಹಿ ತಿನ್ನಿಸುವ ಮೂಲಕ ಶುಭಾಷಯ ವಿನಿಮಯ ಮಾಡಿದರು.
ರಾಜ್ಯ ಸಂಸ್ಥೆಯ ಕಾರ್ಯದರ್ಶಿ ಎನ್. ಭಾನುಪ್ರಸಾದ್, ಮುಖ್ಯ ತರಬೇತಿದಾರ ಮಹಮ್ಮದ್ ಅಜರುದ್ದೀನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ತಂಡದ ಮಾರ್ಗದರ್ಶಕರಾದ ಶ್ರೀನಿವಾಸ ದೂಳರವರು ಮಾತನಾಡಿ ನಮ್ಮ ಕ್ರೀಡಾಪಟುಗಳು ರಾಷ್ಟಿçÃಯ ಸೀನಿಯರ್ ಲಗೋರಿ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಗೆದ್ದು ಮುಂಬರುವ ೩೭ನೇ ನ್ಯಾಶನಲ್ ಗೇಮ್ಸ್ಗೆ ಆಯ್ಕೆ ಯಾಗಲಿ ಎಂದು ಹಾರೈಸಿದರು.

ಕೊಟ್ಟೂರೇಶ್ವರ ಆಂಗ್ಲ ಮಾದ್ಯಮ ವಿದ್ಯಾರ್ಥಿನಿ ಕೆ. ಸೃಜನಾ ಇವರು ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆ.

Kottureswar English medium student K. Srijana is selected for the state level chess competition.

ಗಂಗಾವತಿ: ಗಂಗಾವತಿ ಪ್ರತಿಷ್ಠಿತ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಶ್ರೀ ಕೊಟ್ಟೂರೇಶ್ವರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿಯಾದ ಕೆ. ಸೃಜನಾ ತಂದೆ ಕೆ. ಮಂಜುನಾಥ ಇವರು ದಿನಾಂಕ: ೦೭.೦೯.೨೦೨೩ ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಎಂದು ಮುಖ್ಯೋಪಾಧ್ಯಾಯರಾದ ಶ್ರೀಮತಿ ಅನಿತಾ ಇವರು ಪ್ರಕಟಣೆಯಲ್ಲಿ ತಿಳಿಸಿದರು. ಶಾಲೆಯ ಈ ವಿದ್ಯಾರ್ಥಿನಿಯ ಸಾಧನಗೆ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ. ಡಾ|| ಕೊಟ್ಟೂರು ಮಹಾಸ್ವಾಮಿಗಳು, ಕಾರ್ಯದರ್ಶಿಗಳಾದ ಶ್ರೀ ಶರಣೆಗೌಡ ಮಾಲಿಪಾಟೀಲ್, ಕೋಶಾಧ್ಯಕ್ಷರಾದ ಶ್ರೀ ಸುರೇಶ ಸಿಂಗನಾಳ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳು ಮತ್ತು ಮಾರ್ಗದರ್ಶಕರಾದ ದೈಹಿಕ ಶಿಕ್ಷಕರು ಹಾಗೂ ಎಲ್ಲಾ ಶಿಕ್ಷಕರು ಅಭಿನಂದನೆಗಳನ್ನು ತಿಳಿಸಿ ರಾಜ್ಯಮಟ್ಟದಲ್ಲಿ ಉನ್ನತ ಸಾಧನೆಮಾಡಿ ರಾಷ್ಟçಮಟ್ಟಕ್ಕೆ ಆಯ್ಕೆ ಆಗಲೆಂದು ಶುಭಕೋರಿದ್ದಾರೆ.

ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿರೈತಮೋರ್ಚಾದಿಂದ ಪ್ರತಿಭಟನೆ

Protest by BJP Raita Morcha against anti-farmer state government

ಗಂಗಾವತಿ,8, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದನ್ನು ಖಂಡಿಸಿ, ಬಿಜೆಪಿ ರೈತ ಮೋರ್ಚಾ ನೇತ್ರತ್ವದಲ್ಲಿ ಶುಕ್ರವಾರದಂದು ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು,, ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಈ ಹಿಂದೆ ಬಿಜೆಪಿ ನೇತೃತ್ವದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತರಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸಂಪೂರ್ಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆ ಹಿಡಿದಿರುವುದು ಖಂಡನೀಯವಾಗಿದೆ ಎಂದು ಸರ್ಕಾರದ ವಿರುದ್ಧ ಗುಡಿಗಿದರು, ಭಾರತೀಯ ಜನತಾ ಪಕ್ಷದ ಬಳ್ಳಾರಿ ಉಸ್ತುವಾರಿ ವಿರುಪಾಕ್ಷಪ್ಪ ಸಿಂಗರ್ ಮಾತನಾಡಿ, ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದೆ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು, ರೈತ ವಿರೋಧಿಯಾಗಿದೆ, ತಕ್ಷಣವೇ ಬರಗಾಲದ ಸಮಸ್ಯೆಯನ್ನು ರಾಜ್ಯ ಸರ್ಕಾರ ಯುದ್ಧೋಪ ಹಾದಿಯಲ್ಲಿ ಕ್ರಮಗಳನ್ನು ಅನುಸರಿಸಬೇಕು ಇಲ್ಲಿಯವರೆಗೆ ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರಿಗೆ ಅಗತ್ಯ ಇರುವ, ರಸಗೊಬ್ಬರ ವಿದ್ಯುತ್ ಸೌಲಭ್ಯ, ಸೇರಿದಂತೆ ರೈತರಿಗೆ ಧೈರ್ಯ ತುಂಬುವುದರ ಜೊತೆಗೆ ಆರ್ಥಿಕ ಸದೃಢತೆಗೆ ಮುಂದಾಗಬೇಕು, ಎಂದು ತಿಳಿಸಿದರು, ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಚೆನ್ನಪ್ಪ ಮಳೆಗಿ, ವೀರಭದ್ರಪ್ಪ ಹನುಮಂತಪ್ಪ ನಾಯಕ್, ಮಾಜಿ ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಕಾಶೀನಾಥ್, ವೆಂಕಟೇಶ್ ಅಮರ ಜ್ಯೋತಿ ಇತರರು ಪಾಲ್ಗೊಂಡಿದ್ದರು ಬಳಿಕ ತಹಸೀಲ್ದಾರರ ಮೂಲಕರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು