A fond farewell to a favorite Guru
ಸಾವಳಗಿ: ಸಮಾಜದಲ್ಲಿನ ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು. ಇಂತಹ ವೃತ್ತಿಯಲ್ಲಿ ಹೊಣೆಗಾರಿಕೆ ಮರೆತರೆ ವ್ಯವಸ್ಥೆ ಹಾಳಾಗುತ್ತದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷೇ ಜಿನ್ನುಮತಿ ಪಾರ್ಶ್ವನಾಥ ಉಪಾಧ್ಯ ಹೇಳಿದರು.
ಪಟ್ಟಣದ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಂಶುಪಾಲರಾದ ಡಾ|| ಮಂಜುನಾಥ ತ್ಯಾಳಗಡೆ, ವಾಣಿಜ್ಯ ವಿಭಾಗದ ಡಾ|| ಮಹೇಶ್ ಹಡಪದ, ಕನ್ನಡ ವಿಭಾಗದ ಪ್ರೊ ಖಾಸೀಂಸಾಬ ಕೂಲಾಲಿ ಅವರು ಬೇರೆ ಕಾಲೇಜಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಕಾಲೇಜು ಸಲಹಾ ಸಮಿತಿ ಹಾಗೂ ಊರಿನ ಹಿರಿಯರು ಸೇರಿ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿದರು.
ನಂತರ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯ ಸುಜೀತಗೌಡ ಪಾಟೀಲ ಅವರು ಸಮಾಜದಲ್ಲಿ ಇಂದಿಗೂ ಮೌಲ್ಯ ಉಳಿಸಿಕೊಂಡಿರುವ ಕ್ಷೇತ್ರ ಶಿಕ್ಷಣ. ಯಾವುದೇ ಫಲಾಪೇಕ್ಷೆಯಿಲ್ಲದೆ ಶಿಕ್ಷಕರು ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದುಕೊಡುತ್ತಿದ್ದಾರೆ. ಆ ಕಾರಣದಿಂದಲೇ ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಸಿಗುತ್ತಿದೆ, ವಿದ್ಯೆ ಕಲಿಸಿದ ಗುರುವನ್ನು ಎಂದೂ ಮರೆಯದೆ ಪೂಜ್ಯ ಸ್ಥಾನದಲ್ಲಿ ಗೌರವಿಸಬೇಕು ಎಂದು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅವರಿಗಾಗಿ ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭ ಏರ್ಪಸಿದ್ದರು. ಸಮಾರಂಭದ ನಂತರ ಶಾಲೆಯ ಆಟದ ಮೈದಾನದಲ್ಲಿ ಶಿಕ್ಷಕರನ್ನು ಬೀಳ್ಕೊಟ್ಟಾಗ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕಣ್ಣಂಚಿನಲ್ಲಿ ನೀರು ಬಂತು. ಈ ಭಾವುಕ ಕ್ಷಣವನ್ನು ನೋಡಿದ ಹಲವರ ಕಣ್ಣುಗಳು ಒದ್ದೆಯಾದವು.
ಇದೇ ಸಂದರ್ಭದಲ್ಲಿ ಚನ್ನಪಟ್ಟಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರಭಾರಿ ಪ್ರಾಂಶುಪಾಲ ಪ್ರೊ ಅಶೋಕ ಕನ್ನಾಳ, ಕಾಲೇಜು ಸಲಹಾ ಸಮಿತಿ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ಊರಿನ ಹಿರಿಯರು, ಕಾಲೇಜಿನ ಉಪನ್ಯಾಸಕ ಉಪನ್ಯಾಸಕಿಯರು, ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗುರುಗಳೇ ನಿಮ್ಮೊಂದಿಗೆ ಕಳೆದ ದಿನಗಳು, ಮರೆಯಾದ ನೆನಪುಗಳು, ತಪ್ಪು ಮಾಡಿದಾಗ ತಿದ್ದಿ ಹೇಳಿದವರು, ನಿಮ್ಮ ಈ ವರ್ಗಾವಣೆ ನಮಗೆಲ್ಲಾ ತುಂಬಾ ನೋವು ತಂದಿದೆ, ಕೂಡುವುದು ಸಹಜ ಅಗಲುವುದು ಅನಿವಾರ್ಯ ಎಂಬಂತೆ ನಿಮ್ಮ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.
ವಿದ್ಯಾರ್ಥಿಗಳು
ಚನ್ನಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾವಳಗಿನೆಚ್ಚಿನ ಗುರುಗಳಿಗೆ ಆತ್ಮೀಯ ಬೀಳ್ಕೊಡುಗೆ ನೀಡಿದ ವಿದ್ಯಾರ್ಥಿಗಳು ಸಚೀನ ಜಾಧವ ಸಾವಳಗಿ: ಸಮಾಜದಲ್ಲಿನ ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು. ಇಂತಹ ವೃತ್ತಿಯಲ್ಲಿ ಹೊಣೆಗಾರಿಕೆ ಮರೆತರೆ ವ್ಯವಸ್ಥೆ ಹಾಳಾಗುತ್ತದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷೇ ಜಿನ್ನುಮತಿ ಪಾರ್ಶ್ವನಾಥ ಉಪಾಧ್ಯ ಹೇಳಿದರು. ಪಟ್ಟಣದ ಚನ್ನಪ್ಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಂಶುಪಾಲರಾದ ಡಾ|| ಮಂಜುನಾಥ ತ್ಯಾಳಗಡೆ, ವಾಣಿಜ್ಯ ವಿಭಾಗದ ಡಾ|| ಮಹೇಶ್ ಹಡಪದ, ಕನ್ನಡ ವಿಭಾಗದ ಪ್ರೊ ಖಾಸೀಂಸಾಬ ಕೂಲಾಲಿ ಅವರು ಬೇರೆ ಕಾಲೇಜಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಕಾಲೇಜು ಸಲಹಾ ಸಮಿತಿ ಹಾಗೂ ಊರಿನ ಹಿರಿಯರು ಸೇರಿ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿದರು. ನಂತರ ಮಾತನಾಡಿದ ಗ್ರಾಮ ಪಂಚಾಯತ ಸದಸ್ಯ ಸುಜೀತಗೌಡ ಪಾಟೀಲ ಅವರು ಸಮಾಜದಲ್ಲಿ ಇಂದಿಗೂ ಮೌಲ್ಯ ಉಳಿಸಿಕೊಂಡಿರುವ ಕ್ಷೇತ್ರ ಶಿಕ್ಷಣ. ಯಾವುದೇ ಫಲಾಪೇಕ್ಷೆಯಿಲ್ಲದೆ ಶಿಕ್ಷಕರು ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದುಕೊಡುತ್ತಿದ್ದಾರೆ. ಆ ಕಾರಣದಿಂದಲೇ ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಸಿಗುತ್ತಿದೆ, ವಿದ್ಯೆ ಕಲಿಸಿದ ಗುರುವನ್ನು ಎಂದೂ ಮರೆಯದೆ ಪೂಜ್ಯ ಸ್ಥಾನದಲ್ಲಿ ಗೌರವಿಸಬೇಕು ಎಂದು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅವರಿಗಾಗಿ ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭ ಏರ್ಪಸಿದ್ದರು. ಸಮಾರಂಭದ ನಂತರ ಶಾಲೆಯ ಆಟದ ಮೈದಾನದಲ್ಲಿ ಶಿಕ್ಷಕರನ್ನು ಬೀಳ್ಕೊಟ್ಟಾಗ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕಣ್ಣಂಚಿನಲ್ಲಿ ನೀರು ಬಂತು. ಈ ಭಾವುಕ ಕ್ಷಣವನ್ನು ನೋಡಿದ ಹಲವರ ಕಣ್ಣುಗಳು ಒದ್ದೆಯಾದವು. ಇದೇ ಸಂದರ್ಭದಲ್ಲಿ ಚನ್ನಪಟ್ಟಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಪ್ರಭಾರಿ ಪ್ರಾಂಶುಪಾಲ ಪ್ರೊ ಅಶೋಕ ಕನ್ನಾಳ, ಕಾಲೇಜು ಸಲಹಾ ಸಮಿತಿ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ಊರಿನ ಹಿರಿಯರು, ಕಾಲೇಜಿನ ಉಪನ್ಯಾಸಕ ಉಪನ್ಯಾಸಕಿಯರು, ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗುರುಗಳೇ ನಿಮ್ಮೊಂದಿಗೆ ಕಳೆದ ದಿನಗಳು, ಮರೆಯಾದ ನೆನಪುಗಳು, ತಪ್ಪು ಮಾಡಿದಾಗ ತಿದ್ದಿ ಹೇಳಿದವರು, ನಿಮ್ಮ ಈ ವರ್ಗಾವಣೆ ನಮಗೆಲ್ಲಾ ತುಂಬಾ ನೋವು ತಂದಿದೆ, ಕೂಡುವುದು ಸಹಜ ಅಗಲುವುದು ಅನಿವಾರ್ಯ ಎಂಬಂತೆ ನಿಮ್ಮ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ. ವಿದ್ಯಾರ್ಥಿಗಳು ಚನ್ನಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾವಳಗಿ