Everyone should vote compulsorily, sector officials Prakash said
ಗಂಗಾವತಿ : ತಾಲೂಕಿನ ಸಂಗಾಪುರ ಹಾಗೂ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾ.ಪಂ. ವತಿಯಿಂದ ಮತದಾನ ಜಾಗೃತಿ ಹಾಗೂ ಇವಿಎಂ/ವಿವಿಪ್ಯಾಟ್ ಪ್ರಾತ್ಯಕ್ಷಿಕೆಯನ್ನು ಸೋಮವಾರ ನೀಡಲಾಯಿತು.
ಸೆಕ್ಟರ್ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಕೃಷಿ ಅಧಿಕಾರಿಗಳಾದ ಪ್ರಕಾಶ ಅವರು ಮಾತನಾಡಿ, 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾನದ ಹಕ್ಕನ್ನು ಎಲ್ಲರೂ ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು. ಶೇ.100 ರಷ್ಟು ಕಡ್ಡಾಯವಾಗಿ ಮತದಾನವಾದರೆ ಮಾತ್ರ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಯಾರೂ ಕೂಡ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದೇ ಹಕ್ಕು ಚಲಾಯಿಸಬೇಕು ಎಂದರು.
ಸಂಗಾಪುರ, ಗೂಗಿಬಂಡಿ, ಮಲ್ಲಾಪುರ, ರಾಂಪುರ ಗ್ರಾಮಗಳಲ್ಲಿ ಇವಿಎಂ/ ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಮಾಹಿತಿ ನೀಡಲಾಯಿತು. ನಂತರ ಮತದಾರರು ಅಣಕು ಮತದಾನ ಮಾಡಿ, ಮತದಾನದ ವಿಧಾನ ತಿಳಿದುಕೊಂಡರು.
ತಾಲೂಕು ಸ್ವೀಪ್ ಸಮಿತಿಯ ಸಂತೋಷ ಎಂ., ಪ್ರಶಾಂತ ಬಾನಾಪುರ, ಬಾಳಪ್ಪ ತಾಳಕೇರಿ, ಮಲ್ಲಾಪುರ ಹಾಗೂ ಸಂಗಾಪುರ ಗ್ರಾಪಂ ಸಿಬ್ಬಂದಿಗಳು ಇದ್ದರು.