Breaking News

ಸಹಾಯಕ ಆಯುಕ್ತರ ಕಚೇರಿ: ಅಶೋಕಸ್ವಾಮಿ ಹೇರೂರ ಸ್ವಾಗತ.

Office of the Assistant Commissioner: Welcome to Ashokaswamy Heroor.

ಜಾಹೀರಾತು

ಗಂಗಾವತಿ: ನಗರದಲ್ಲಿ ಸಹಾಯಕ ಆಯುಕ್ತರ ಕಚೇರಿ ಆರಂಭಿಸುತ್ತಿರುವುದನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಸ್ವಾಗತಿಸಿದ್ದಾರೆ.

ನೂತನವಾಗಿ ಕೊಪ್ಪಳ ಜಿಲ್ಲೆ ಆರಂಭವಾದಗಿನಿಂದಲೇ ಗಂಗಾವತಿ ನಗರದಲ್ಲಿ ಸಹಾಯಕ ಔಷಧ ನಿಯಂತ್ರಕರ ಕಚೇರಿ ಆರಂಭಿಸುವಂತೆ ಸಂಸ್ಥೆಯಿಂದ ನಿರಂತರವಾಗಿ ಪತ್ರ ವ್ಯವಹಾರ ನಡೆಸಲಾಗಿತ್ತು ಎಂದು ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕರರೂ ಆಗಿರುವ ಹೇರೂರ ತಿಳಿಸಿದ್ದಾರೆ.

ಕಾಂಗ್ರೆಸ್‌ ಧುರಿಣೆ ಶೈಲಜಾ ಹಿರೇಮಠ, ಡಾ.ಶಿವಕುಮಾರ ಪಾಟೀಲ್,ಗುಡ್ಲಾನೂರ ಮಂಜುನಾಥ ನೇತ್ರತ್ವದಲ್ಲಿ ಅಶೋಕಸ್ವಾಮಿ ಹೇರೂರ ಮತ್ತಿತರರು ಸಚಿವ ಶಿವರಾಜ ತಂಗಡಿಯವರಿಗೆ ಕಿಷ್ಕಿಂದಾ ಜಿಲ್ಲಾ ರಚನೆ, ಸಹಾಯಕ ಆಯುಕ್ತರ ಕಚೇರಿ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಅಸ್ತಿತ್ವಕ್ಕೆ ತರಲು ಒತ್ತಾಯಿಸಲಾಗಿತ್ತು.

ಇದರಂತೆ ಗಂಗಾವತಿ ಶಾಸಕರಾದ ಜನಾರ್ಧನ ರೆಡ್ಡಿಯವರಿಗೂ ಮನವಿ ಸಲ್ಲಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.

ಅಲ್ಲದೆ,ಕಿಷ್ಕಿಂದಾ ಜಿಲ್ಲಾ ಹೋರಾಟ ಸಮಿತಿ ಹಾಗೂ ಗಂಗಾವತಿ ವಕೀಲರ ಸಂಘ ಇವುಗಳ ಒತ್ತಾಸೆಯ ಮೇರೆಗೆ ಗಂಗಾವತಿ ನಗರದಲ್ಲಿ ಸಹಾಯಕ ಪ್ರಾದೇಶಿಕ ಕಚೇರಿ ಆರಂಭವಾಗಲು ಕಾರಣವಾಯಿತು ಎಂದು ಅಶೋಕಸ್ವಾಮಿ ಸಂತೋಷ ವ್ಯಕ್ತಪಡಿಸಿದ್ದಾರೆ.

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *