
Guarantee schemes bring peace of mind to the common man

ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ನೆಮ್ಮದಿ

ಕೊಪ್ಪಳ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ, ವಿಶೇಷವಾಗಿ ಮಹಿಳೆಯರ, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿವೆ, ಅದರಿಂದ ಜನಸಾಮಾನ್ಯರಿಗೆ ನೆಮ್ಮದಿ ದೊರಕಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಇತ್ತೀಚಿನ ಸಮೀಕ್ಷೆಗಳು ಮತ್ತು ಸರ್ಕಾರದ ಅಂಕಿ-ಅAಶಗಳ ಪ್ರಕಾರ, ಇದರಿಂದ ಜನರಿಗೆ ಆಗುತ್ತಿರುವ ಪ್ರಮುಖ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕುಟುಂಬಗಳ ಆರ್ಥಿಕ ಹೊರೆ ಇಳಿಕೆ (ಗೃಹ ಲಕ್ಷಿ÷್ಮ & ಗೃಹ ಜ್ಯೋತಿ) :
ಗೃಹ ಲಕ್ಷಿ÷್ಮ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಲಭಿಸುವ ೨,೦೦೦ ಹಣವು ಕುಟುಂಬದ ನಿರ್ವಹಣೆಗೆ ದೊಡ್ಡ ಆಸರೆಯಾಗಿದೆ. ಅನೇಕ ಮಹಿಳೆಯರು ಈ ಹಣವನ್ನು ಮಕ್ಕಳ ಶಿಕ್ಷಣ, ಸಣ್ಣಪುಟ್ಟ ಸಾಲ ತೀರಿಸಲು ಅಥವಾ ದೈನಂದಿನ ಅಗತ್ಯಗಳಿಗೆ ಬಳಸುತ್ತಿದ್ದಾರೆ. ನೇರ ಹಣದ ನೆರವು ಇದಾಗಿದ್ದು, ಫಲಾನುಭವಿಯ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹೋಗಿರುವದರಿಂದ ಮಧ್ಯವರ್ತಿ ಅಥವಾ ಸರಕಾರ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ, ಈ ಕುರಿತು ವಿರೋಧ ಪಕ್ಷಗಳು ಕೊಡುವ ಹೇಳಿಕೆಗಳು ಕೇವಲ ಸುಳ್ಳು ಮತ್ತು ರಾಜಕೀಯ ಪ್ರೇರಿತವಾಗಿವೆ. ಇಂತಹ ಹೇಳಿಕೆಗಳ ವಿರುದ್ಧ ಕಾನೂನು ಮೊರೆ ಹೋಗುವ ಕುರಿತು ಚಿಂತನೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಉಚಿತ ವಿದ್ಯುತ್: ಗೃಹ ಜ್ಯೋತಿ ಯೋಜನೆಯಡಿ ಗರಿಷ್ಠ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗುತ್ತಿರುವುದರಿಂದ ಮಧ್ಯಮ ಮತ್ತು ಬಡ ಕುಟುಂಬಗಳ ಮಾಸಿಕ ಕರೆಂಟ್ ಬಿಲ್‌ನ ಹಣ ಉಳಿತಾಯವಾಗುತ್ತಿದೆ.
ಮಹಿಳೆಯರ ಸ್ವಾವಲಂಬನೆ ಮತ್ತು ಸಂಚಾರ ಸ್ವಾತಂತ್ರ÷್ಯ (ಶಕ್ತಿ ಯೋಜನೆ) :
ಉಚಿತ ಬಸ್ ಪ್ರಯಾಣ: ಶಕ್ತಿ ಯೋಜನೆಯಡಿ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ಮಹಿಳೆಯರ ಓಡಾಟ ಸುಲಭವಾಗಿದೆ. ಮಹಿಳೆಯರು ತಾವು ಎಂದೂ ನೋಡಿರದ ಧಾರ್ಮಿಕ ಕ್ಷೇತ್ರಗಳನ್ನು ನೋಡಿದ್ದಾರೆ, ಇದು ಮಹಿಳೆಯರಿಗೆ ಕೊಟ್ಟ ಅತೀ ದೊಡ್ಡ ಸ್ವಾತಂತ್ರö್ಯವಾಗಿದೆ.
ಇದರಿAದಾಗಿ ಉದ್ಯೋಗಸ್ಥ ಮಹಿಳೆಯರು, ಸಣ್ಣ ವ್ಯಾಪಾರಿಗಳು, ಮತ್ತು ಕಾಲೇಜು ವಿದ್ಯಾರ್ಥಿನಿಯರ ಪ್ರಯಾಣದ ವೆಚ್ಚ ಸಂಪೂರ್ಣ ಉಳಿತಾಯವಾಗುತ್ತಿದ್ದು, ಅವರ ಆರ್ಥಿಕ ಸ್ವಾವಲಂಬನೆ ಹೆಚ್ಚಿದೆ. ಪ್ರವಾಸಿ ಸ್ಥಳಗಳಿಗೆ ಮಹಿಳೆಯರ ಭೇಟಿ ಗಣನೀಯವಾಗಿ ಹೆಚ್ಚಾಗಿದೆ.
ಆಹಾರ ಭದ್ರತೆ (ಅನ್ನ ಭಾಗ್ಯ) :
ಹಸಿವು ಮುಕ್ತ ಆಶಯ: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ಉಚಿತ ಅಕ್ಕಿ (ಅಥವಾ ಅಕ್ಕಿ ಬದಲಿಗೆ ನಗದು ಹಣ) ನೀಡುತ್ತಿರುವುದರಿಂದ ಬಡ ಕುಟುಂಬಗಳ ಆಹಾರದ ಭದ್ರತೆ ಹೆಚ್ಚಿದೆ. ಇದು ಜನರ ಪೌಷ್ಟಿಕಾಂಶದ ಮಟ್ಟ ಸುಧಾರಿಸಲು ಮತ್ತು ದಿನಸಿ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.
ನಿರುದ್ಯೋಗಿ ಯುವಕರಿಗೆ ಆಸರೆಯಾದ ಯುವನಿಧಿ :
ಉದ್ಯೋಗ ಸಿಗದ ಪದವೀಧರರಿಗೆ (ರೂ.೩,೦೦೦) ಮತ್ತು ಡಿಪ್ಲೊಮಾ ಹೊಂದಿದ ಯುವಕರಿಗೆ (ರೂ.೧,೫೦೦) ಮಾಸಿಕ ಭತ್ಯೆ ನೀಡುವ ಮೂಲಕ ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯಲು ನೆರವಾಗುತ್ತಿದೆ. ಇದರೊಟ್ಟಿಗೆ ಈಗ ಯುವನಿಧಿ ಪ್ಲಸ್ ಮೂಲಕ ಕೌಶಾಲ್ಯಾಭಿವೃದ್ಧಿಯಲ್ಲಿ ಉಚಿತ ತರಬೇತಿ ನೀಡಲಾಗುತ್ತಿದೆ.
ಒಟ್ಟಾರೆಯಾಗಿ ವಿವಿಧ ಆರ್ಥಿಕ ವಿಶ್ಲೇಷಣೆಗಳ ಪ್ರಕಾರ, ಐದೂ ಗ್ಯಾರಂಟಿಗಳನ್ನು ಸಮರ್ಪಕವಾಗಿ ಪಡೆಯುತ್ತಿರುವ ಒಂದು ಬಡ ಕುಟುಂಬಕ್ಕೆ ವರ್ಷಕ್ಕೆ ಅಂದಾಜು ೪೦,೦೦೦ ದಿಂದ ೬೦,೦೦೦ ದವರೆಗೆ ನೇರ ಅಥವಾ ಪರೋಕ್ಷ ಆರ್ಥಿಕ ಲಾಭವಾಗುತ್ತಿದೆ. ಇದು ಮಾರುಕಟ್ಟೆಯಲ್ಲಿ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಗ್ರಾಮೀಣ ಆರ್ಥಿಕತೆಗೆ ಚಲನಶೀಲತೆ ತಂದಿದೆ.
ಆದರೆ ಪ್ರಸ್ತುತ ೨೦೨೬ ರಲ್ಲಿ, ಸರ್ಕಾರವು ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆ ತಲುಪಿಸಲು ಮತ್ತು ದುರುಪಯೋಗ ತಡೆಯಲು ತಾಂತ್ರಿಕ ಪರಿಷ್ಕರಣೆ ಹಾಗೂ ಮನೆ-ಮನೆ ಸಮೀಕ್ಷೆಯ ಪ್ರಕ್ರಿಯೆಗಳನ್ನು ನಡೆಸುತ್ತಿದೆ. ಇದು ಕೇವಲ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ ಹೊರತು ಯೋಜನೆ ನಿಲ್ಲಿಸುವ ಉದ್ದೇಶ ಇಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೇ ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್ ಸರಕಾರ ಯಾವತ್ತೂ ಬಡವರ ಪರವಾಗಿ ಇದ್ದು, ಉಚಿತ ಕೊಡುಗೆಗಳು ಎಲ್ಲಾ ವರ್ಗದ ಅರ್ಹರಿಗೆ ತಲುಪಿಸುವ ಕೆಲಸ ಮಾಡುತ್ತದೆ, ಅಲ್ಲದೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಕಾರ್ಯವನ್ನು ವಿಸ್ತಿರಿಸಿ ಜನರು ಉತ್ತಮ ಜೀವನ ನಡೆಸಲು ಸಹಾಯ ಮಡುತ್ತದೆ ಎಂದು ತಿಳಿಸಿದ್ದಾರೆ.
