Breaking News

ಅ.15 ರಿಂದ 23 ರವರೆಗೆ ಹುಲಿಗೆಮ್ಮ ದೇವಿ ದಸರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು

Various programs as part of Huligemma Devi Dasara Mahotsav from 15th to 23rd

ಜಾಹೀರಾತು

ಕೊಪ್ಪಳ ಅಕ್ಟೋಬರ್ 13 (ಕರ್ನಾಟಕ ವಾರ್ತೆ): ಧಾರ್ಮಿಕ ದತ್ತಿ ಇಲಾಖೆಯ ಹುಲಿಗೆಮ್ಮ ದೇವಿ ದೇವಸ್ಥಾನದ ವತಿಯಿಂದ ಅಕ್ಟೋಬರ್ 15 ರಿಂದ 23 ರವರೆಗೆ ದಸರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 15 ರಂದು ಸಾಯಂಕಾಲ 06.30 ಗಂಟೆಗೆ ಘಟಸ್ಥಾಪನೆ ಅಂಗವಾಗಿ ದೇವಸ್ಥಾನದ ಭಜಂತ್ರಿಯವರಿAದ ಮಂಗಲವಾದ್ಯ ಕಾರ್ಯಕ್ರಮ, ಅ.16 ರಂದು ಸಂಜೆ 06.30 ಗಂಟೆಗೆ ಹುಲಿಗಿಯ ನಾಟ್ಯನಾದ ಕಲಾ ಕೇಂದ್ರದ ಶಾಲಿನಿ ಹೆಬ್ಬಾರ್, ನಾಟ್ಯ ಕಲಾ ತಂಡ್ದ ರಮ್ಯ ಹಾಗೂ ಗೀತಪ್ರಿಯಾ ಅವರಿಂದ ಭರತನಾಟ್ಯ ಕಾರ್ಯಕ್ರಮ, ಅ.17 ರಂದು ಸಂಜೆ 06.30 ಗಂಟೆಗೆ ಪರಮಪದ ತಂಡದ ರಾಮಚಂದ್ರ ಹಡಪದ ಅವರಿಂದ ಮಿಶ್ರಮಾಧುರ್ಯ ಕಾರ್ಯಕ್ರಮ, ಅ.18 ರಂದು ಸಂಜೆ 06.30 ಗಂಟೆಗೆ ಶ್ರೀ ಅಂಜಲಿ ಭರತನಾಟ್ಯ ಕಲಾಕೇಂದ್ರ ಹೊಸಪೇಟೆ(ರಿ) ಇವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಸ್ಥಳೀಯ ಕಲಾವಿದರಿಂದ ಹಾಗು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳ್ಳಿಮಂಟಪದಲ್ಲಿ ಶ್ರೀ ದೇವಿಯವರಿಗೆ ಶಾರ್ದೂಲ ಪೂಜೆ ನಡೆಯಲಿದೆ.
ಅ.19 ರಂದು ಸಂಜೆ 06.30 ಗಂಟೆಗೆ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹೊಸಪೇಟೆಯ ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಮುಪಪಿನ ಬಸವಲಿಂಗ ಮಹಾಸ್ವಾಮಿಗಳು, ಹಿರೇಮಠ ಮೈನಳ್ಳಿ-ಬಿಕನಳ್ಳಿಯ ಶ್ರೀ ಷಟಸ್ಥಲ ಬ್ರಹ್ಮ 108 ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಗಜೇಂಧ್ರಗಡದ ತಳ್ಳಿಹಾಳ ಕಾಲಜ್ಞಾನ ಮಠದ ಡಾ.ಕಾಲಜ್ಞಾನ ಬ್ರಹ್ಮಸದ್ಗುರು ವಿಶ್ವಕಾಲ ಜ್ಞಾನ ಶಿವಯೋಗಿ ಶ್ರೀ ಶರಣ ಬಸವ ಮಹಾಸ್ವಾಮಿಗಳು, ನಗರಗಡ್ಡಿ ಮಠದ ಶ್ರೀ ಶಾಂತಲಿAಗೇಶ್ವರ ಮಹಾಸ್ವಾಮಿಗಳು, ಲೆಬಗೇರಿಯ ಶ್ರೀ ಲಕ್ಷೆö್ಮÃಂದ್ರ ಮಹಾಸ್ವಾಮಿಗಳವರ ಮಠದ ಶ್ರೀ ಮದಾನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಶ್ರೀ ನಾಗಮೂರ್ತೇಂದ್ರ ಮಹಾಸ್ವಾಮಿಗಳಿಂದ ಧಾರ್ಮಿಕ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಸಿಂಹ ವಾಹನ ಪೂಜೆ ನಡೆಯಲಿದೆ.
ಅ.20 ರಂದು ಸಂಜೆ 06.30 ಗಂಟೆಗೆ ಹೊಸಪೇಟೆಯ ಕು.ಭೂಮಿಕಾ ಹಾಗೂ ಜ್ಞಾನೇಶ್ ಧಾರವಾಡ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಮಯೂರ ವಾಹನ ಪೂಜೆ ನಡೆಯಲಿದೆ. ಅ.21 ರಂದು ಸಂಜೆ 06.30 ಗಂಟೆಗೆ ಬೆಂಗಳೂರಿನ ಭೂಮ್ತಾಯಿ ಬಳಗದ ಡಿ.ಆರ್.ನಿರ್ಮಲಾ ಅವರಿಂದ ಜಾನಪದ ಜಾತ್ರೆ ಕಾರ್ಯಕ್ರಮ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಅಶ್ವ ವಾಹನ ಪೂಜೆ ನಡೆಯಲಿದ. ಅ.22 ರಂದು ಸಂಜೆ 06.30 ಗಂಟೆಗೆ ಸಿರಗುಪ್ಪಾದ ಅಚ್ಚೊಳ್ಳಿಯ ಕವಿಯ ಕಲಾಸಂಘದ ವತಿಯಿಂದ ಉಧೋ ಉಧೋ ಶ್ರೀ ಹುಲಿಗೆಮ್ಮ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಬೆಳ್ಳಿ ಮಂಟಪದಲ್ಲಿ ಶ್ರೀ ದೇವಿಯವರಿಗೆ ಗಜವಾಹನ ಪೂಜೆ ನಡೆಯಲಿದೆ.
ಅ.23 ರಂದು ವಿಜಯದಶಮಿಯ ಪ್ರಯುಕ್ತ ಮಧ್ಯಾಹ್ನ 03.00 ಗಂಟೆಯಿAದ ಶ್ರೀ ದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳಿ, ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಲಾಗುವುದು. ನಂತರ ದೇವಸ್ಥಾನದಲ್ಲಿ ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರ ಪುಷ್ಪದೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳುವವು. ಹಾಗೂ ಅ.20 ರಿಂದ 23 ರವರೆಗೆ ಹುಲಿಗಿಯ ಹಳೇ ತುಂಗಭದ್ರಾ ಪ್ರೌಢಶಾಲೆಯಲ್ಲಿ ಪುರುಷರ ಹಾಗೂ ಮಹಿಳೆಯರ ರಾಜ್ಯಮಟ್ಟದ ಮುಕ್ತ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.